'ಅಮರಾವತಿ ಮಾದರಿ' ಎಲ್ಲೆಡೆ ಅನುಸರಣೆಯಾಗಲಿ

ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ನವೀಕರಿಸಬಹುದಾದ ಮೂಲಗಳಿಂದಲೇ ಶಕ್ತಿಯನ್ನು ಉತ್ಪಾದಿಸಿ ಬಳಸುವ ವಿಶ್ವದ ಮೊತ್ತಮೊದಲ ನಗರವಾಗಿ ರೂಪಿಸಲು ನಿರ್ಧರಿಸಿರುವುದು ಬಹಳ ಉತ್ತಮವಾದ ವಿಷಯ. ಪರಿಸರ ನಾಶ, ಇಂಗಾಲಾಮ್ಲ ಹೊರಸೂಸುವಿಕೆಯೇ ಮೊದಲಾದ ಕಾರಣಗಳಿಂದ ಭೂಮಿ ಅತೀ ವೇಗವಾಗಿ ಬಿಸಿಯೇರುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಜಗತ್ತಿಗೆ ಮಾದರಿಯಾಗಿ ಅಮರಾವತಿಯನ್ನು ನಿರ್ಮಿಸ ಹೊರಟಿರುವುದು ಶ್ಲಾಘನಾರ್ಹ.

Image

ದೇಹ ಬೆತ್ತಲು - ಭಾವ ಬೆತ್ತಲು...

"ಅರಿವೆಂಬುದು ಬಿಡುಗಡೆ " ಎಂಬ ಆಶಯದೊಂದಿಗೆ ಕರ್ನಾಟಕ ಲೇಖಕಿಯರ ಸಂಘ  ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಕೆಲವು ಕವಿಯತ್ರಿಗಳ ಕವನದ ಸಾಲುಗಳು ಒಂದಷ್ಟು ಸಾಮಾಜಿಕ ಜಾಲತಾಣಗಳ ಟ್ರೋಲ್ ಎಂಬ ಸಾಂಕ್ರಾಮಿಕ ಖಾಯಿಲೆಯ ಚರ್ಚಾ ವಸ್ತುವಾದ ಕಾರಣ ಆ ರೋಗಕ್ಕೆ ತುತ್ತಾದ ನನ್ನದೂ ಒಂದು ಅನಿಸಿಕೆ.

Image

ಸ್ಟೇಟಸ್ ಕತೆಗಳು (ಭಾಗ ೧೨೯೯) - ಚಳಿ

ಒಂದಷ್ಟು ಜನ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಬದುಕಬೇಕಾಗಿದೆ ಹಾಗಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಬೆಂಕಿಯನ್ನು ಅವರಾಗಿಯೇ ಹಚ್ಚಿಕೊಂಡಿಲ್ಲ. ಸುತ್ತ ಸೇರಿದವರೆಲ್ಲರನ್ನು ಸುಟ್ಟು ತಾವು ಚಳಿ ಕಾಯಿಸಿ ಕೊಳ್ಳುತ್ತಿದ್ದಾರೆ. ಆ ಸುತ್ತ ಸುಡುತ್ತಾ ಇರುವರಲ್ಲಿ ನೀನು ಇರಬಹುದೇನೋ?

Image

ಭವಿಷ್ಯದ ಹಾರುವ ಕಾರುಗಳು!

ಈ ಭವಿಷ್ಯದ ಕಾರುಗಳನ್ನು ನೀವೇ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ಹಾರುವ ಕಾರುಗಳು, ಅಲ್ಲಿ ಟ್ರಾಫಿಕ್ ಜಾಮ್‌ನ ತಲೆ ನೋವುಗಳಿಲ್ಲ. ಈ ಕಾರುಗಳ ಪ್ರಯಾಣ ಫೈಟ್‌ಗಳಲ್ಲಿ ಚಲಿಸಿದಂತೆ ಸ್ಮೂತ್ ಹಾರಾಟ ಕುಲುಕಾಟ-ಬಳುಕಾಟಗಳಿಲ್ಲ. ಇದೊಂದು ಘರ್ಷಾಣಾ ರಹಿತ ಚಾಲನೆ. ಬೇಕೆಂದಾಗ ಭೂಮಿಯ ಮೇಲೂ ಚಲಿಸಬಹುದು. ಅಬ್ಬಾ ಎಷ್ಟೊಂದು ವಿಸ್ಮಯದ ಹಾರಾಟ!

Image

ಸಂಗೀತದ ಸಾಂತ್ವನ

ಮನ ಬೇಗುದಿಯಲ್ಲಿ ಮೀಯುತ್ತಿರುವಾಗ ಸಾಂತ್ವನಕ್ಕಾಗಿ ಹಾತೊರೆಯುತ್ತದೆ. ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಕಾಡುತ್ತದೆ. ಮಾನವ ಸಂಬಂಧಗಳ ಇತಿ ಮಿತಿಯಲ್ಲಿ ಆಸರೆ ಸಿಕ್ಕುತ್ತದಾದರೂ ಅಲ್ಲಿ ಏನೋ ಒಂದು ಕೊರತೆ ಕಾಡುತ್ತದೆ. ಹೃದಯಕ್ಕೆ ಆಗ ಜತೆಯಾಗುವುದು ಸಂಗೀತವೇ. ಇಂಪಾದ, ಅರ್ಥಗರ್ಭಿತ ಹಾಡು ಮನಕ್ಕೆ ತಂಪೆರೆಯುತ್ತದೆ.

Image

ಕುರು ದ್ವೀಪ

ಪುಸ್ತಕದ ಲೇಖಕ/ಕವಿಯ ಹೆಸರು
ವೀಣಾ ರಾವ್
ಪ್ರಕಾಶಕರು
ಗೋಮಿನಿ ಪ್ರಕಾಶನ, ಶಾಂತಿನಗರ, ತುಮಕೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೪

`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ.

ಜೀವಪರ ನಿಲುವೇ ಅತ್ಯಂತ ಮಹತ್ವವಾದದ್ದು…

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅತ್ಯಂತ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದೂ ಮುಸ್ಲಿಂ, ಪಾಕಿಸ್ತಾನ ಮತ್ತು ಭಾರತದ ನಡುವೆ ತುಂಬಾ ದ್ವೇಷ ಮತ್ತು ಅಸೂಯೆ ಬರುವ ರೀತಿಯಲ್ಲಿ ಉದ್ರೇಕಿಸಿ ಮಾತನಾಡಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೨೯೮) - ಕೇಳಿಬಿಡು

ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂಡಾಗ, ನೋವಿನಿಂದ ಮೌನವಾದಾಗ, ಅವರು ನನ್ನ ಹತ್ತಿರ ಬಂದು ಮಾತನಾಡಿ ಸಮಾಧಾನ ಹೇಳಿ ಹೋಗ್ತಾ ಇದ್ರು.

Image

ಕೆಟ್ಟದ್ದನ್ನು ಮರೆಯುವುದು

ಇಂದು ರಾಮಾಯಣದ ಘಟನೆ ಹೇಳುತ್ತೇನೆ. ರಾಮ, ಸೀತೆಯನ್ನು ವಿವಾಹವಾಗುತ್ತಾನೆ. ಜನಕ ಮಹಾರಾಜನಿಗೆ, ಸೀತೆ ಅಂದರೆ ಅಷ್ಟೊಂದು ಇಷ್ಟ. ಅವಳಿಗೆ ಯಾವ ರೀತಿ ನೋವು ಆಗದಂತೆ ನೋಡಿಕೊಂಡಿದ್ದನು. ಆಕೆಗೆ ಕಷ್ಟ, ನೋವು ಅನ್ನುವುದು ಗೊತ್ತಿರಲಿಲ್ಲ. ರಾಮನನ್ನು ವಿವಾಹವಾದಾಗ ಅಯೋಧ್ಯೆಯ ರಾಣಿ ಆಗುತ್ತೇನೆ ಎನ್ನುವ ಕನಸನ್ನು ಕಂಡಿದ್ದಳು. ಕೈಕೇಯಿ ಮತ್ತು ಮಂಥರೆಯ ಕುತಂತ್ರದಿಂದ ಕಾಡಿಗೆ ಹೋಗಬೇಕಾಗುತ್ತದೆ.

Image