ಸ್ಟೇಟಸ್ ಕತೆಗಳು (ಭಾಗ ೧೩೦೪) - ಬೆಕ್ಕಿನ ಪಾಠ

ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು ದೂಡುತ್ತಿದೆ. ಅದರ ಜೊತೆಗೆ ಬದುಕುತ್ತಿರುವ ಇನ್ನೊಂದು ಬೆಕ್ಕು ಪ್ರತಿದಿನದ ದಿನಚರಿಯ ಜೊತೆಗೆ ಹೊಸತನ್ನು ಹುಡುಕುತ್ತಿದೆ.

Image

ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ಹೆಚ್ಚು ಹೆಚ್ಚು ನಡೆಯಲಿ

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಿ, ಆ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಿರುವುದು, ಒಟ್ಟಾರೆ ಮೈಸೂರು ವಿಭಾಗಕ್ಕೆ ೩೬೪೭ಕೋಟಿ ರೂ. ವೆಚ್ಚದ ೭೮ ಯೋಜನೆಗಳನ್ನು ಘೋಷಿಸಿರುವುದು ಉತ್ತಮವಾದ ಹೆಜ್ಜೆ.

Image

ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು…(ಭಾಗ 1)

ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು..." ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು " ಮಹಾತ್ಮ ಗಾಂಧಿ. ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು ಒಂದು ಸುಂದರ ಪ್ರದೇಶ ಪೆಹಲ್ಗಾವ್ ಎಂಬಲ್ಲಿ ರಕ್ತ ದೋಕುಳಿಯಾಟ ನಡೆದಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ ಮಾತುಗಳೆಲ್ಲವೂ ಸುಳ್ಳಾಗಿದೆ. ಮತ್ತೆ ಮತ್ತೆ ವ್ಯಥೆ ಪಡುತ್ತಾ ಸುಮ್ಮನಾಗಿದ್ದಾನೆ.

Image

ಬ್ರೆಡ್ ಪುಡ್ಡಿಂಗ್

Image

ಒಂದು ಬೋಗುಣಿಯಲ್ಲಿ ಕಸ್ಟರ್ಡ್ ಹುಡಿ ಮತ್ತು ಹಾಲು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಬೆರೆಸಿ. ಇನ್ನೊಂದು ಬೋಗುಣಿ (ಬೌಲ್)ಯಲ್ಲಿ ಬೆಣ್ಣೆ, ಮೊಟ್ಟೆ, ದಾಲ್ಚಿನ್ನಿ ಹುಡಿ, ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೆರೆಸಿ. ಕಸ್ಟರ್ಡ್ ಹುಡಿ ಬೆರೆಸಿದ ಹಾಲನ್ನೂ ಈ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಬೆರಸಿ. ಓವನ್ ನಲ್ಲಿ ಇಡುವಂತಹ ಬೋಗುಣಿಯಲ್ಲಿ ಬ್ರೆಡ್ ಹಾಳೆಗಳನ್ನು ಜೋಡಿಸಿರಿ.

ಬೇಕಿರುವ ಸಾಮಗ್ರಿ

ಸಣ್ಣ ಚೌಕಾಕಾರದ ತುಂಡುಗಳನ್ನಾಗಿ ಮಾಡಿದ ಬ್ರೆಡ್ ಹಾಳೆಗಳು ೩, ಬೆಣ್ಣೆ ೪ ಚಮಚ, ದಾಲ್ಚಿನ್ನಿ ಹುಡಿ ೧ ಚಿಟಿಕೆ, ವೆನಿಲ್ಲಾ ಕಸ್ಟರ್ಡ್ ಹುಡಿ ೨ ಚಮಚ, ಮೊಟ್ಟೆ ೩, ಹಾಲು ೨ ಕಪ್, ವೆನಿಲ್ಲಾ ಎಸೆನ್ಸ್ ೨ ಹನಿ, ಸ್ವಲ್ಪ ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಸಕ್ಕರೆ