ಕೆಲವು ಸತ್ಯಗಳು

ಕೆಲವು ಸತ್ಯಗಳು

ಸಮಸ್ಯೆ  

ಜನರು ತಮ್ಮ ಮನೆಯಲ್ಲೇ ಚಿಂತಿಸಬೇಕಾದ  ನೂರಾರು ಸಮಸ್ಯೆಗಳಿದ್ದರೂ
ಪಕ್ಕದ ಮನೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಏಕೆ ಸಮಯ ವ್ಯಯಿಸುತ್ತಾರೆ.
 
ಮಾಡ್ರನ್ ಪ್ರೀತಿ
ಇಂದು ತನ್ನನ್ನು ಪ್ರೀತಿಸುವ ಹುಡುಗ/ಹುಡುಗಿ
ನಾಳೆ ಇನ್ನೊಬ್ಬರ ಗಂಡ/ಮಡದಿ
 
ಅತಿಥಿ
ಯಾವುದೇ ಕಾರ್ಯಕ್ರಮಕ್ಕೆ ನೀವು ಮಾಡಿದರೆ ಹೆಚ್ಚಾಗಿ ಹಣ ಪಾವತಿ
ಯೋಗ್ಯತೆ ಇಲ್ಲದಿದ್ದರೂ ನೀವೇ ಆ ಕಾರ್ಯಕ್ರಮದ ಮುಖ್ಯ ಅತಿಥಿ.
 
ಭಾಷಣ
ಒಬ್ಬ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ವಿರುದ್ದ ಮಾಡಿದ ಗಂಟೆಗಟ್ಟಲೆ ಭಾಷಣ
ಮರುದಿನ ಆಫೀಸಿನಲ್ಲಿ ಕಡತಕ್ಕೆ ಸಹಿ ಹಾಕಲು ಪಡೆಯುತ್ತಿದ್ದ ಲಂಚದ ಹಣ.
 
 ಉಪದೇಶ
ತಪ್ಪು ಮಾಡಿದವನಿಗೆ ಎಲ್ಲರೂ ಕೊಡುವವರೆ ವಿವಿಧ ಉಪದೇಶ

ಅದನ್ನು ಸರಿಪಡಿಸಲು ಯಾರು ಯೋಚಿಸುವುದಿಲ್ಲವೇಕೆ ಒಂದು ನಿಮಿಷ.