ನುಡಿಮುತ್ತುಗಳು

ನುಡಿಮುತ್ತುಗಳು

1. ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
2. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
4. ದನ್ಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗನ್ಟೆಗೆ
ಹೆದರುತ್ತೀನೇನೋ, ದಾಸಯ್ಯ ?
5. ಶುಭ ನುಡಿಯೋ ಸೋಮ ಅನ್ದರೆ ಗೂಬೆ ಕಾಣ್ತಲ್ಲೋ ಮಾಮ ಅನ್ದ ಹಾಗೆ.
6. ಹಲವು ಸಲ ಸಾಯುವನು ಹೇಡಿ ವೀರಯೋಹನಿಗೊನ್ದೆ ಸಲ ಸಾವು
7. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
8. ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
9. ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ
10. ಮಾಡೋರನ್ನು ಕನ್ಡರೆ ನೋಡು ನನ್ನ ಸಿರೀನ
11. ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯನ್ತೆ
12. ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
13. ಅನ್ಗೈಯಲ್ಲಿ ಬೆಣ್ಣೆ ಇಟ್ಟುಕೊನ್ಡು, ತುಪ್ಪಕ್ಕೆ ಊರೆಲ್ಲಾ ಅಲೆದರನ್ತೆ
14. ಹುಟ್ತಾ ಹುಟ್ತಾ ಅಣ್ಣ ತಮ್ಮನ್ದಿರು; ಬೆಳೀತಾ ಬೆಳೀತಾ ದಾಯಾದಿಗಳು
15. ಮಗೂನ ಚಿವುಟಿ ತೊಟ್ಟಿಲು ತೂಗಿದರು
16. ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
17. ವೈದ್ಯರ ಹತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
18. ಗೆದ್ದೆತ್ತಿನ ಬಾಲ ಹಿಡಿದ ಹಾಗೆ
19. ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
20. ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ.