ಶಂಕರಲಿಂಗ ಸ್ತೋತ್ರಂ

ಶಂಕರಲಿಂಗ ಸ್ತೋತ್ರಂ

ಶಂಕರಲಿಂಗಾ ಸದ್ಗುರು ತಂದೆ ನಾ ನಿಮ್ಮ ಪಾದವ ನಂಬಿ ಬಂದೇ [ಪ]
ಶಂಕೆಯ ಹರಿಸೊ ಸಂಕಟ ಬಿಡಿಸೋ ಕಿಂಕರನಾದೆನು ಭುವಿಯೊಳಗೇ [ಅ.ಪ]
ಆತ್ಮ ವಿಚಾರವ ನಿತ್ಯವು ಬೊಧಿಪ ಪ್ರತ್ಯಗಾತ್ಮನೂ ನೀ ಎನಗೇ
ಭಕ್ತಿಯಿಂದಲೀ ಬೇಡಿಕೊಂಬೆನೂ ಕೃಪೆಮಾಡೊ ಸದ್ಗುರು ತಂದೇ [೧]
ಅಂಗಅಂಗದಾ ಸಮರಸವನ್ನೂ ಹಿಂಗದೆ ಪೇಳೈ ನೀ ಎನಗೇ
ಸಂಗರಹಿತನಾಗಿ ಮಾಡೆನ್ನ ಬಳಲುತಿರುವೆನೋ ಭುವಿಯೊಳಗೇ [೨]
ಜನನಿಯು ನೀನೇ ಜನಕನು ನೀನೇ ತನುಮನ ಧನಗಳು ನಿನದಯ್ಯಾ
ನಿನಗೊಪ್ಪಿಸಿಹೆನು ಕಾಯೋ ಎನ್ನನು ಕರುಣದಿ ನೋಡೋ ಗುರುತಂದೆ. [೩]
ಧರೆಯೊಳಧಿಕವಾದ ಹೆಳವನ ಗಿರಿಯೊಳು ಪರಿಪರಿ ಲೀಲೆಯ ತೋರುತಲೀ
ಶರಣಾಗತರಾಗಿಹ ಭಕ್ತರನು ಪರಿಪಾಲಿಸೋ ನೀ ಗುರು ತಂದೇ [೪]