ಆರು ತಿಂಗಳ ಮೋದಿ ಸರಕಾರ

ಆರು ತಿಂಗಳ ಮೋದಿ ಸರಕಾರ

ಮೋದಿ ಸರಕಾರಕ್ಕೆ
ತುಂಬಿತು ಆರು ತಿಂಗಳುಗಳು
ಜಾರಿಗೆ ಬಂದವು
ಹತ್ತು ಹಲವು ಯೋಜನೆಗಳು
ಜನಧನ ಯೋಜನೆ ತರೆಸಿತು
ಏಳುಕೋಟಿ ಬ್ಯಾಂಕ್ ಖಾತೆಗಳು
ತಲೆಯೆತ್ತಲಿವೆ ಭವಿಷ್ಯದಲ್ಲಿ
ಸಂಸದರ ಆದರ್ಶ ಗ್ರಾಮಗಳು
ದೇಶಿ ಉತ್ಪಾದನೆ ಹೆಚ್ಚಳಕ್ಕೆ
ಮೇಕ್ ಇನ್ ಇಂಡಿಯ ಘೋಪಣೆಗಳು
ಕಾರ್ಮಿಕ ಕಲ್ಯಾಣಕ್ಕೆ
ಶ್ರಮೇವ ಜಯತೆ ಕಾರ್ಯಕ್ರಮಗಳು
ಕಾರ್ಯಗತವಾಗುತ್ತಿದೆ
ಡಿಜಿಟಲ್ ಇಂಡಿಯಾದ ಕನಸುಗಳು
ಆರಂಭಗೊಂಡಿತು ಕಪ್ಪುಹಣವನ್ನು
ಬಿಳಿಗೊಳಿಸುವ ಪ್ರಕ್ರಿಯೆಗಳು
ಭರದಿಂದ ಸಾಗುತಿವೆ
ಸ್ವಚ್ಛ ಭಾರತ ಅಭಿಯಾನಗಳು
ಇಳಿಮುಖವಾಗುತ್ತಿವೆ
ಆಹಾರೋತ್ಪನ್ನದ ಬೆಲೆಗಳು
ಏರುಗತಿಯಲ್ಲಿದೆ
ದೇಶೀಯ ಉತ್ಪನ್ನದ ದರಗಳು
ನೀಗುತ್ತಿವೆ ಹಣದುಬ್ಬರ
ಚಾಲ್ತಿ ಕೊರತೆಯ ಸಮಸ್ಯೆಗಳು
ಕತ್ತರಿ ಹಾಕಿಸಿಕೊಂಡಿವೆ
ಅನಗತ್ಯ ಸರಕಾರಿ ಖರ್ಚುಗಳು
ಆಡಳಿತಯಂತ್ರ ಕಾರ್ಯವಹಿಸುತ್ತಿವೆ
ವಾರದ ಆರು ದಿನಗಳು
ಅಡಗಿಕುಳಿತರು ದಾವುದ್ ಹಫೀಜ್
ನಂತಹ ಭಯೋತ್ಪಾದಕರುಗಳು
ಶರಣಾಯಿತು ಹಲವು
ನಕ್ಸಲ್ ಸಂಘಟನೆಗಳು
ಭಾರತಕ್ಕೆ ಕಿವಿಯಾಗುತ್ತಿವೆ
ಹಲವು ಪ್ರಬಲ ರಾಷ್ಟ್ರಗಳು
ವಿಚಲಿತಗೊಂಡಿವೆ
ಗಡಿಭಾಗದ ದೇಶಗಳು
ಭ್ರಷ್ಟಾಚಾರ ತಡೆಯಲು
ಬಂದವು ಇ-ಗವರ್ನೆನ್ಸ್ಗಳು
ಜಾಗತಿಕ ಮಟ್ಟದಲ್ಲಿ ಸಿಗುತ್ತಿವೆ
ಭಾರತದ ಮಾತಿಗೆ ಮನ್ನಣೆಗಳು
ಇಪ್ಟಾದರೂ ವಿರೋಧಿಗಳು
ಕೇಳುತಿಹರು
ಎಲ್ಲಿವೆ ಅಚ್ಛೆದಿನಗಳು....?

-@ಯೆಸ್ಕೆ

Comments

Submitted by ಗಣೇಶ Wed, 11/26/2014 - 23:48

>>ಇಪ್ಟಾದರೂ ವಿರೋಧಿಗಳು ಕೇಳುತಿಹರು ಎಲ್ಲಿವೆ ಅಚ್ಛೆದಿನಗಳು....?
-ವಿರೋಧಿಗಳಲ್ವಾ? ಅವರಿಗೆ ಬೂರೆ ದಿನಗಳೇ ಅಚ್ಚೇ ದಿನ್.

Submitted by anand33 Thu, 11/27/2014 - 09:19

In reply to by ಗಣೇಶ

ಆರು ತಿಂಗಳ ಮೋದಿ ಸರಕಾರದಲ್ಲಿ ನನಗೆ ಹೆಚ್ಚಿನ ಯಾವುದೇ ಬದಲಾವಣೆ ಕಾಣಲಿಲ್ಲ. ಉದಾಹರಣೆಗೆ ಮೋದಿ ಸರಕಾರ ಬರುವುದಕ್ಕಿಂತ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಆಗಾಗ ಹಾಳಾಗುವುದು ಇತ್ತು. ಮೋದಿ ಸರಕಾರ ಬಂದ ನಂತರ ಇದು ಹಾಳಾಗುವುದು ಮತ್ತಷ್ಟು ಹೆಚ್ಚಾಗಿದೆ. ಅಚ್ಛೆ ದಿನ್ ಎಂದಾದರೆ ಮೊದಲಿಗಿಂಥ ಪರಿಸ್ಥಿತಿ ಉತ್ತಮವಾಗಬೇಕಾಗಿತ್ತು. ಉತ್ತಮ ಮೊಬೈಲ್ (೩ಜಿ ಅಥವಾ ೪ಜಿ) ಬ್ರಾಡ್ಬ್ಯಾಂಡ್ ಸೌಲಭ್ಯ ಇಲ್ಲದೆ ಡಿಜಿಟಲ್ ಇಂಡಿಯ ಎಂಬುದು ಕನಸಿನ ಮಾತು. ತಾಲೂಕು ಕೇಂದ್ರ ಬಿಟ್ಟು ೩ಜಿ ಇಂಟರ್ನೆಟ್ ಸೌಲಭ್ಯ ಗ್ರಾಮೀಣ ಪ್ರದೇಶಗಳಿಗೆ ಕಾಲಿರಿಸಿಲ್ಲ. ಮೋದಿ ಬಂದ ನಂತರವೂ ಭಾರತ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಯೋಜನೆಯಲ್ಲಿ ಯಾವುದೇ ಚುರುಕುತನ ಗೋಚರಿಸಿಲ್ಲ ಅರ್ಥಾತ್ ಯಾವುದೇ ಕೆಲಸವೂ ಆರಂಭವಾಗಿಲ್ಲ. ಓರ್ವ ಉತ್ತಮ ನೇತಾರ ಮಾತಿನಲ್ಲಿಯೇ ಮಂಟಪ ಕಟ್ಟುವುದಿಲ್ಲ, ಕೃತಿಯಲ್ಲಿ ಮಾಡಿ ತೋರಿಸುತ್ತಾನೆ. ಮೋದಿ ಮಾತಿನ ಮಂಟಪ ಕಟ್ಟುವುದರಲ್ಲಿಯೇ ತೊಡಗಿದ್ದಾರೆಯೇ ಹೊರತು ಕೃತಿಯಲ್ಲಿ ಏನೂ ಸಾಧನೆ ಕಂಡುಬರುವುದಿಲ್ಲ.

Submitted by anand33 Thu, 11/27/2014 - 12:47

In reply to by anand33

ಮೋದಿಯವರ ಸ್ವಚ್ಛ ಭಾರತ ಅಭಿಯಾನ ಎಂಬುದು ಒಂದು ದಿನದ ಪ್ರದರ್ಶನ ಎಂಬಂತೆ ಆಗಿದೆ. ಪೊರಕೆ ತೆಗೆದುಕೊಂಡು ಕೆಲವು ಕಾರ್ಯಕರ್ತರು ಫೋಟೋಗೆ, ಟಿವಿ ವಾಹಿನಿಗಳಿಗೆ ಫೋಸ್ ನೀಡುತ್ತಾ ಗುಡಿಸುವುದು, ಮಾರನೇ ದಿನದಿಂದ ಯಥಾಪ್ರಕಾರ ಕಸ, ಗಲೀಜು. ಕೆಲದಿನಗಳ ಹಿಂದೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸನಿಹ ಇರುವ ಬಸ್ಸು ನಿಲ್ದಾಣಕ್ಕೆ ಹೋಗಿದ್ದೆ. ಅಲ್ಲಿ ಬಸ್ಸು ನಿಲ್ದಾಣದ ಒಂದು ಬದಿಯ ಉದ್ದಕ್ಕೂ ಮೂತ್ರ ಮಾಡಿದ ಗಬ್ಬು ವಾಸನೆಯಲ್ಲಿ ಅಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕಾಯಿತು. ಜನ ಎಗ್ಗಿಲ್ಲದೆ ಅಲ್ಲೇ ಮೂತ್ರ ಮಾಡುತ್ತಾ ಇದ್ದರು. ಹಾಗೆಂದು ಅಲ್ಲಿ ಶೌಚಾಲಯ ಇಲ್ಲವೇ ಎಂದರೆ ಇದೆ. ಅಲ್ಲಿ ಮೂತ್ರ ಮಾಡಲು ಗಂಡಸರಿಗೆ ೨ ರೂ, ಹೆಂಗಸರಿಗೆ ೩ ರೂಪಾಯಿ ಸುಲಿಯುತ್ತಿದ್ದರು. ಹೀಗಾಗಿ ಗಂಡಸರು ಬಸ್ಸು ನಿಲ್ದಾಣದ ಒಂದು ಬದಿಯಲ್ಲಿಯೇ ಮೂತ್ರ ಮಾಡುತ್ತಿದ್ದರು. ಹೆಂಗಸರಿಗೆ ಹಾಗೆ ಮಾಡಲು ಸಾಧ್ಯವಿಲ್ಲದ ಕಾರಣ ೩ ರೂ ಕಕ್ಕಿ ಶೌಚಾಲಯಕ್ಕೆ ಹೋಗುತ್ತಿದ್ದರು. ಕನಿಷ್ಠ ಬಸ್ಸು ನಿಲ್ದಾಣದಲ್ಲಿಯಾದರೂ ಉಚಿತವಾಗಿ ಮೂತ್ರ ಮಾಡುವ ವ್ಯವಸ್ಥೆ ಕಲ್ಪಿಸಿದ್ದಿದ್ದರೆ ಇಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಇದು ಸ್ಥಳೀಯ ಆಡಳಿತ ಹಾಗೂ ಬಸ್ಸು ನಿಲ್ದಾಣದ ಜವಾಬ್ದಾರಿ ಇರುವವರ ಕರ್ತವ್ಯವಾಗಬೇಕಾಗಿತ್ತು. ಬೆಂಗಳೂರಿನ ಬಸ್ಸು ನಿಲ್ದಾಣದ ಶೌಚಾಲಯದಲ್ಲಿ ಉಚಿತ ಮೂತ್ರ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಹೀಗಾಗಿ ಅಲ್ಲಿ ಬಸ್ಸು ನಿಲ್ದಾಣದ ಬದಿಯಲ್ಲಿ ಮೂತ್ರ ಮಾಡುವವರು ಕಂಡುಬರುವುದಿಲ್ಲ.