ನೆನಪು

ನೆನಪು

ಪದೇ ಪದೇ ಉರಿಸಿದ‌ ಕಿಚ್ಚಿಗೆ ಕರ್ರಗಾದ‌ ಆ ಪಾತ್ರೆಯ‌ ನೆನಪು ಸದಾ ನನ್ನ‌ ಮನದಲ್ಲಿರುತ್ತದೆ,ಉಜ್ಜಿದರೂ ಕಪ್ಪು ವರ್ಣ‌ ಸಂಪೂರ್ಣವಾಗಿ ಹೋಗುವುದು ಕಷ್ಟ‌,ಅಮ್ಮ‌ ಕೂಲಿ ನಾಲಿ ಮಾಡಿ ತಂದ‌ ಆ ಪಾತ್ರೆ ಮಿಣ‌ ಮಿಣ‌ ಮಿಂಚಿ ಐದಾರು ವರ್ಷಗಳೇ ಕಳೆದುಹೋದವು,ಆದರೆ ಸುಟ್ಟು ಬೂದಿಯಾದ‌ ಕಟ್ಟಿಗೆಗಳ‌ ಗುಂಪಿಗೆ ಸರಿಸಾಟಿ ಯಾರು,ಅದೇ ರೀತಿ ಅವನ‌ (ನನ್ನ‌) ಜೀವನ‌,ಯಾರವನು..!ನೀವೂ ಆಗಿರಬಹುದು..! ಪದೇ ಪದೇ ಅವಮಾನಗಳ‌ ಕೂಗಿಗೆ ಮರುಳಾದ‌ ಆ ಪಾತ್ರದ‌ ನೆನಪು ಸದಾ ನನ್ನ‌ ಕಾಡುತ್ತಿರುತ್ತದೆ,ಮರೆತರೂ ಸಂಪೂರ್ಣವಾಗಿ ಮರೆಯದೆ ಇರುವುದು ಕಷ್ಟ‌,ಇಷ್ಟು ದಿನ‌ ಸುತ್ತಲಿನ‌ ಜಗತ್ತಿನ‌ ಮಾತುಗಳಿಗೆ ಬಲಿಯಾಗಬಾರದೆಂಬ ಆಕಾಂಕ್ಷೆಯಿಂದ‌  ಬೆಳೆದು ನಿಂತ‌ ನನ್ನ‌ ವಿಶ್ರಾಂತ‌ ಮನ ಕಳೆದುಹೋಗಿ ಅದೆಷ್ಟೋ ದಿನಗಳಾದವು,ಇನ್ನೊಬ್ಬರ‌ ಹಂಗಿಗೆ ಬೆಂದು ಹೋದ‌ ನಾನು ಅವಶ್ಯಕತೆಗಳ‌ ಸೋಗಿಗೆ ಬಲಿಯಾದೆ,ಬಲಿ ತೆಗೆದುಕೊಂಡವರ‌ ಗುಂಪಿಗೆ ಸರಿಸಾಟಿ ಯಾರು.............?