ಅಮ್ಮ

ಅಮ್ಮ

ನಿನ್ನಯಾ ಗರ್ಭದಿ ಸಂಜಾತಶಿಶುವು ನಾನು
ನವಮಾಸಗಳ ಹೊತ್ತೆನ್ನ ಬೆಳೆಸಿದೆ  ನೀನು  
ನಿನ್ನುಸಿರಲಿ ಭಾಗವ ಪಡೆದುಸಿರಿಸಿದೆ ನಾನು   
ನಾನತ್ತ ಮೊದಲದಿನದಿ ಬರದಪ್ಪಿನಕ್ಕೆ ನೀನು  ||1||

ನಿನ್ನಕ್ಕರೆಯ ಅಮೃತದ ಸವಿಯನುಂಡೆ ನಾನು
ಅಮೃತದಾ ಕಳಸವ ಸದಾತುಂಬಿರಿಸಿದೆ ನೀನು
'ಅಮ್ಮ'ಯೆಂದೊಡೆ ಸ್ವರ್ಗಾದಪೀಗರೀಯಸಿಯ ಕಂಡೆ ನಾನು
ಸುವಿಶಾಲತೆಯ ಆಳವರಿಯದ  ಮಮತಾಸಾಗರವು ನೀನು ||2||
  
ರಂಕನಾದರೂ   ರಾಜನಾದರೂ  ನಿನ್ನಮಗನೇ  ನಾನು
ಸದಾ ಮಾತೃಛಾಯೆಯೊಂದ ನನಗೀಯುತಿರು ನೀನು
ದೈವಕೃಪದಿ ನನ್ನೀಜನ್ಮದಿ ನಿನ್ನಮಗುವಾಗಿಹೆ ನಾನು
ನೂರೂಜನ್ಮಕೂ ನನ್ನಮ್ಮನಾಗಿ ಧರೆಗಿಳಿಯಮ್ಮ ನೀನು ||3||

© ರಾಘವ ಹರಿವಾಣಂ

Comments

Submitted by ರಾಘವ ಹರಿವಾಣಂ Sun, 07/26/2015 - 09:41

In reply to by kavinagaraj

@kavinagaraj, ನಿಮ್ಮ smileyಯ ಒಳಾರ್ಥ ತಿಳಿಸಿ please.

Submitted by kavinagaraj Sun, 07/26/2015 - 11:45

In reply to by ರಾಘವ ಹರಿವಾಣಂ

ಅಮ್ಮ ಅಮ್ಮನೇ! ಅಮ್ಮನನ್ನು ನೆನೆದರೆ ಸಂತೋಷವಾಗದೇ ಇದ್ದೀತೇ?