ಅಮ್ಮ
ನಿನ್ನಯಾ ಗರ್ಭದಿ ಸಂಜಾತಶಿಶುವು ನಾನು
ನವಮಾಸಗಳ ಹೊತ್ತೆನ್ನ ಬೆಳೆಸಿದೆ ನೀನು
ನಿನ್ನುಸಿರಲಿ ಭಾಗವ ಪಡೆದುಸಿರಿಸಿದೆ ನಾನು
ನಾನತ್ತ ಮೊದಲದಿನದಿ ಬರದಪ್ಪಿನಕ್ಕೆ ನೀನು ||1||
ನಿನ್ನಕ್ಕರೆಯ ಅಮೃತದ ಸವಿಯನುಂಡೆ ನಾನು
ಅಮೃತದಾ ಕಳಸವ ಸದಾತುಂಬಿರಿಸಿದೆ ನೀನು
'ಅಮ್ಮ'ಯೆಂದೊಡೆ ಸ್ವರ್ಗಾದಪೀಗರೀಯಸಿಯ ಕಂಡೆ ನಾನು
ಸುವಿಶಾಲತೆಯ ಆಳವರಿಯದ ಮಮತಾಸಾಗರವು ನೀನು ||2||
ರಂಕನಾದರೂ ರಾಜನಾದರೂ ನಿನ್ನಮಗನೇ ನಾನು
ಸದಾ ಮಾತೃಛಾಯೆಯೊಂದ ನನಗೀಯುತಿರು ನೀನು
ದೈವಕೃಪದಿ ನನ್ನೀಜನ್ಮದಿ ನಿನ್ನಮಗುವಾಗಿಹೆ ನಾನು
ನೂರೂಜನ್ಮಕೂ ನನ್ನಮ್ಮನಾಗಿ ಧರೆಗಿಳಿಯಮ್ಮ ನೀನು ||3||
© ರಾಘವ ಹರಿವಾಣಂ
Comments
ಉ: ಅಮ್ಮ
:)
In reply to ಉ: ಅಮ್ಮ by kavinagaraj
ಉ: ಅಮ್ಮ
@kavinagaraj, ನಿಮ್ಮ smileyಯ ಒಳಾರ್ಥ ತಿಳಿಸಿ please.
In reply to ಉ: ಅಮ್ಮ by ರಾಘವ ಹರಿವಾಣಂ
ಉ: ಅಮ್ಮ
ಅಮ್ಮ ಅಮ್ಮನೇ! ಅಮ್ಮನನ್ನು ನೆನೆದರೆ ಸಂತೋಷವಾಗದೇ ಇದ್ದೀತೇ?
In reply to ಉ: ಅಮ್ಮ by kavinagaraj
ಉ: ಅಮ್ಮ
ತುಂಬ ಸಂತೋಷ...