March 2013

  • March 07, 2013
    ಬರಹ: hariharapurasridhar
      ಮಾಘ ಬಹುಳ ಏಕಾದಶಿ.ಶ್ರೀ ಗುರೂಜಿ ಗೊಲ್ವಾಲ್ಕರ್ ಅವರ ಜನ್ಮದಿನ. ಸ್ವಾಮಿ ವಿವೇಕಾನಂದರ ನಂತರ ಅವರ  ಇಚ್ಛೆಯಂತೆ  ದೇಶವನ್ನು ಪ್ರೀತಿಸುವ ಲಕ್ಷಲಕ್ಷ   ಯುವಕರನ್ನು ದೇಶಕ್ಕೆ ಕೊಟ್ಟ ಕೀರ್ತಿ ಶ್ರೀ ಗುರೂಜಿ ಗೋಲ್ವಾಲ್ಕರ್ ಅವರಿಗೆ ಸಲ್ಲುತ್ತದೆ.…
  • March 07, 2013
    ಬರಹ: nageshamysore
      ಸಿಗಬೇಕು ಮಾತಿಗೊಬ್ಬರ ಸಿಕ್ಕು ಮಾತೆ ಗೊಬ್ಬರ ಇರದೆ ಬರಿ ಮಾತಿನಬ್ಬರ ಸೊಗಸಾದ ಮಾತಿನ ಸರ!   ಮಾತೆ ಜನ್ಮ ಚೇತೋಹಾರಿ  ಮಾತೆ ತಾನೆ ರಹದಾರಿ ಮಾತಲೆ ಮನೆ ಮಾತಾಗಿರಿ ಮಾತೆ ತಾನೆ ಮೌನದ ಗುರಿ!   ಸುಲಲಿತಪ್ರಸವ ಮಾತಡಿಕೆ  ಮಾತಣಿಸುವ ನೀರಡಿಕೆ…
  • March 07, 2013
    ಬರಹ: ಗಣೇಶ
    ಪಿ ಯು ಸಿ ನಂತರ ಇಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗೆ ಸೇರಲು ಸಿ ಇ ಟಿ ಪರೀಕ್ಷೆ ಇದ್ದ ಹಾಗೇ, MBBS ನಂತರ PGಗೆ ಸೇರಲು ಆಲ್ ಇಂಡಿಯಾ ಲೆವೆಲ್‌ನಲ್ಲಿ NEET exam ಈ ಬಾರಿ ಹೊಸದಾಗಿ ಪ್ರಾರಂಭಿಸಿದ್ದಾರೆ. ಆದರೆ ಪ್ರೈವೇಟ್ ಕಾಲೇಜಿನವರು ಕೋರ್ಟ್…
  • March 06, 2013
    ಬರಹ: gangadhar.divatar
      ಎನ್ನ ಸುತ್ತ ಸುಳಿಯುವ ಗಾಳಿಯೂ ಎನ್ನ ಸಖಿಯ ಮುಂಗುರುಳ ನೇವರಿಸಿ ಅವಳು ಮುಡಿದ ಮಲ್ಲಿಗೆಯ ಕಂಪನು ಹೊತ್ತು ತಂದು ಮೈಸೋಕಿ ಬಂದಿರುವ ಸಂಗತಿಯ ಪಿಸುಮಾತಿನಲಿ ಉಲಿಯುತಿದೆ...   ಅವಳ ಸವಿ ನೆನಪಿನಲ್ಲಿಯೇ ಪುಳಕಗೊಂಡಿರುವ ಮೈ-ಮನಗಳು ದೂರದಿಂದಲೇ…
  • March 06, 2013
    ಬರಹ: gangadhar.divatar
    ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದುಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವರೂ ಇದ್ದರುಇದ್ಯಾವುದರ…
  • March 06, 2013
    ಬರಹ: Seema.v.Joshi
      ಎಲ್ಲಿದ್ದಾನೆ ದೇವರು? ಅಗೋ ಅಲ್ಲಿ, ಮಂದಿರಗಳ ಪೂಜೆಯಲ್ಲಿ, ಚರ್ಚಿನ ಪ್ರಾರ್ಥನೆಯಲ್ಲಿ, ಮಸೀದಿಯ ನಮಾಜಿನಲ್ಲಿ.   ಅಯ್ಯೋ ಅವನಿರುವುದು, ಅಪ್ಪ ಅಮ್ಮನ ಆಶೀರ್ವಾದದಲ್ಲಿ, ಹೆಂಡತಿಯ ಪ್ರೀತಿಯಲ್ಲಿ, ಮಗನ ಮುದ್ದು ನಗುವಿನಲ್ಲಿ.   ಅದು ಹೇಗೆ ಸಾಧ್ಯ…
  • March 06, 2013
    ಬರಹ: ನಿರ್ವಹಣೆ
    ಅಡ್ಡೂರು ಕೃಷ್ಣ ರಾವ್ ಅವರ ಉದಯವಾಣಿ ಬೆಂಗಳೂರು ‍ಆವೃತ್ತಿಯ "‍ಬಹುಧಾನ್ಯ" ಅಂಕಣದಲ್ಲಿ  ಮಾರ್ಚ್ ‍೪, ೨೦೧೩ ರಂದು ಪ್ರಕಟವಾದ, ಅಡ್ಡೂರು ಶಿವಶಂಕರ ರಾಯರ ಬಗೆಗಿನ ಲೇಖನವನ್ನು, ಅವರಿಂದ ಪಡೆದು ಸಂಪದದಲ್ಲಿ ಪ್ರಕಟಿಸುತ್ತಿದ್ದೇವೆ. - ನಿರ್ವಹಣೆ…
  • March 05, 2013
    ಬರಹ: makara
    ನಮ್ಮ ಗುಂಡನಿಗೆ ಇಂಗ್ಲೀಷ್ ಕಲಿತು ಇಂಗ್ಲೀಷ್ನಲ್ಲೇ ಮಾತಾಡಬೇಕೆಂಬ ವ್ಯಾಮೋಹ. ಸರಿ ಕಾನ್ವೆಂಟ್ ಹುಡುಗರ ಹತ್ತಿರ ಹೋಗಿ ತನಗೂ ಇಂಗ್ಲೀಷ್ ಕಲಿಸಿಕೊಡಿರೆಂದು ಅಲವತ್ತುಕೊಂಡ. ಆ ಹುಡುಗರು ಇವನ ಆತುರತೆಯನ್ನು ನೋಡಿ ಮೂರು ಶಬ್ದಗಳನ್ನು ಹೇಳಿಕೊಟ್ಟರು…
  • March 05, 2013
    ಬರಹ: kavinagaraj
         ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ ಮತ್ತು ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ…
  • March 05, 2013
    ಬರಹ: hariharapurasridhar
    ನಾನು ಸಾಯುವುದಿಲ್ಲ-ನಾನು ಸಾಯಬೇಕು” ನಾನು ಸಾಯುವುದಿಲ್ಲ ಎಂದವನೊಬ್ಬ.ನಾನು ಸಾಯಬೇಕು ಅಂದವನೊಬ್ಬ.ಇಬ್ಬರೂ ಮಹಾತ್ಮರೇ ಈಗ ಮೊದಲನೆಯವನ ಬಗ್ಗೆ ನಾಲ್ಕು ಮಾತು.... ಸದಾಶಿವರಾಯರಿಗೆ ಎಂಟುಮಕ್ಕಳಾದರೂ ಯಾರೂ ಪ್ರಪಂಚವನ್ನು ನೋಡಲೇ ಇಲ್ಲ. ಕಡೆಯಲ್ಲಿ…
  • March 05, 2013
    ಬರಹ: jayaprakash M.G
      ಅಡಿಗಡಿಗಡರುವಕಡುಬಿಸಿಲಸುಡುತಾಪವನಡಗಿಸುತಲುಡುಗಿಸುವಧುಡುಧುಡುಧುಮ್ಮಿಡುವಭಂಡನರಸಿಯಭಂಗದಲಿಬೇಡುತಲಿನಿಡುಜಡೆಯಫಡಫಡನೊಡೆಯುತಲಿಗಂಗೆಯೊಡಲಲಿಮಿಂದುನಲಿಯುತಲಿಹನೀನಾಗಾನಂದಂ   ಚಿತ್ರ ಕೃಪೆ ಪದ್ಯಪಾನ
  • March 05, 2013
    ಬರಹ: sathishnasa
    ಪುಣ್ಯದ ಕರ್ಮಗಳನಾರು  ಮಾಡಲಿಚ್ಚಿಸರು ಅದರ ಫಲಗಳನು ಮಾತ್ರವೆ ಬಯಸುವರು ಪಾಪ ಕರ್ಮಗಳಲೆ ಮನಸು ಮುಳುಗಿಹುದು ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು   ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು ಪಾಪ ಕರ್ಮಗಳ ಜೀವನದಿ ಸುಖವಿರದೆಂದು ಪಾಪ ಕರ್ಮಗಳಲಿ…
  • March 04, 2013
    ಬರಹ: Maalu
      ಕಾಯಿ...    "ನಿನಗೂ ಒಬ್ಬ ಹುಡುಗ ಬರುತ್ತಾನೆ, ಕಾಯಿ" ಎಂದಳು ತಾಯಿ; ಬರಲಿಲ್ಲ ಅವನು... ಹಣ್ಣಾದರೂ ಇಲ್ಲಿದ್ದ  ಒಗರಾದ  ಮಿಡಿ ಮಾವಿನ ಕಾಯಿ... -ಮಾಲು 
  • March 04, 2013
    ಬರಹ: prashasti.p
    ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨…
  • March 04, 2013
    ಬರಹ: venkatb83
    ದಿ ಅಟ್ಯಾಕ್ಸ್  ಆಫ್ ೨೬/೧೧-ಮುಂಬೈ   ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಹಲವು ಹಿಟ್ ಫ್ಲಾಪ್ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದವರು. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ (ಆರ್ ಜಿ ವಿ ಫ್ಯಾಕ್ಟರಿ..!)ಮೂಲಕ ಹಲವು ನವ…
  • March 04, 2013
    ಬರಹ: jayu_pu
    ‘ಋಷಿ ಮೂಲ ಕೆದಕಬಾರದು’ ಎಂಬುದು ಹಳೆಯ ಗಾದೆ. ಪಾಶ್ಚಾತ್ಯ ಪರಿಭಾಷೆಯ ವೇದ ಪುರಾಣ ನಿರೂಪಣಾ ಭಾಷ್ಯಗಳಲ್ಲಿ ಋಷಿಗಳನ್ನು ಕವಿಗಳೆಂದು, ಲೇಖಕರೆಂದು, ಜೀವನದಲ್ಲಿ ಜಿಗುಪ್ಸೆಗೊಂಡು ಹೊರಟ, ಪರಿಸ್ಥಿತಿಯ ಹೊಡೆತಕ್ಕೆ ಪರಿವರ್ತಿತರಾದ ವಿರಾಗಿಗಳೆಂದು,…
  • March 04, 2013
    ಬರಹ: ಕಾರ್ಯಕ್ರಮಗಳು
    ಛಂದ ಪುಸ್ತಕ ಫಲಿತಾಂಶ: ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಮೌನೇಶ್ ಎಲ್.ಬಡಿಗೇರ್ ರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೌನೇಶ್ ಸದ್ಯ ಬೆಂಗಳೂರಿನಲ್ಲಿ…
  • March 04, 2013
    ಬರಹ: Channakeshava.C
    ತುಂಬಾ ದಿನಗಳ ನಂತರ , ನಮ್ಮ ಸಂಪದದಲ್ಲಿ ಬರೆಯುವಾಸೆ, ಯಾವುದರ ಬಗ್ಗೆ ಬರೆಯಲಿ ಎಂದು ಯೋಚಿಸಿದ ನನಗೆ ನಮ್ಮ ಊರಿನ ವಾಹನಗಳ, ವಾಹನ ಸವಾರರ ಬಗ್ಗೆ ಬರೆಯೋಣವೆನಿಸಿತು.  *ನಮ್ಮ ಬೆಂಗಳೂರಿನಲ್ಲಿ ಓಡಾಡುವ ವಾಹನಗಳು ದಿನೇ ದಿನೇ ಹೆಚ್ಚಾಗುತ್ತಿವೆ…
  • March 04, 2013
    ಬರಹ: lpitnal@gmail.com
     ಪ್ರಿಯರೇ, ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ), ಬೆಂಗಳೂರು ಮತ್ತು ಧಾರವಾಡ ಜಿಲ್ಲಾಡಳಿತದ ವತಿಯಿಂದ ಧಾರವಾಡದಲ್ಲಿ ಫೆಬ್ರವರಿ 2 ಮತ್ತು 3 ರಂದು ‘ಗೀತೋತ್ಸವ – 2013’ ಇಲ್ಲಿನ ಸೃಜನಾ ಕಲಾಮಂದಿರ ಮತ್ತು ಕರ್ನಾಟಕ ಕಾಲೇಜು ಮೈದಾನ,…