March 2015

  • March 15, 2015
    ಬರಹ: partha1059
    ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ) ಇಲ್ಲಿಯವರೆಗೂ… ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ. ’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ ಕಾಣಿಸುತ್ತಿದೆಯ ?" ನನ್ನಗೆ ಬೆನ್ನಲ್ಲಿ…
  • March 15, 2015
    ಬರಹ: nageshamysore
    ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ ಕಟ್ಟಿ ಹಾಕಿದ್ದ…
  • March 13, 2015
    ಬರಹ: nageshamysore
    ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವಿಸ್ತಾರಕ್ಕೆ…
  • March 11, 2015
    ಬರಹ: partha1059
    ಕತೆ : ಕಂಡವರು ಕಣ್ಣಲ್ಲಿ ಕಂಡಂತೆ   ”ನಿಜಕ್ಕೂ ಪ್ರಕೃತಿ ಮನಮೋಹಕ ಹಸಿರಿನ ಗಿಡಮರಗಳು ಬಣ್ಣ ಬಣ್ಣದ ಹೂಗಳು ಮೇಲಿನ ನೀಲಿಯ ಆಕಾಶ , ಹಸಿರನ್ನು ಹೊದ್ದ ನೆಲ ಬೆಟ್ಟಗುಡ್ಡಗಳು ಎಲ್ಲವೂ  ಇಲ್ಲಿ ಬರುವರನ್ನು ಮರುಳು ಮಾಡುತ್ತವೆ"   ನನಗೆ ನಾನೇ ಎಂಬಂತೆ…
  • March 08, 2015
    ಬರಹ: kavinagaraj
     ೧.ಭೂಮಿ      ಒಂದು ಸಂಗತಿ ಹಿರಿದೆಂದುಕೊಂಡರೆ ಅದಕ್ಕಿಂತ ಹಿರಿದಾದುದು ಗೋಚರಿಸುತ್ತಾಹೋಗುತ್ತದೆ. ವಿವೇಚನಾಶಕ್ತಿ ಇರುವ ಮಾನವನಿಗೆ ಜ್ಞಾನ ದೊಡ್ಡದು. ಈ ಜ್ಞಾನಕ್ಕೆ ಮೂಲವಾದ ವಾಕ್ಕು ಜ್ಞಾನಕ್ಕಿಂತ ಹಿರಿದು. ವಾಕ್ಕಿಗಿಂತ ಮನಸ್ಸು, ಮನಸ್ಸಿಗಿಂತ…
  • March 08, 2015
    ಬರಹ: nageshamysore
    ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್ರಾಹಕನನ್ನು ಮೆಚ್ಚಿಸಿ…
  • March 07, 2015
    ಬರಹ: keshavmysore
    ~"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದು ನಮ್ಮ ದೇಶದಲ್ಲಿ ಹೆಣ್ಣಿಗೆ ನಾವು ಕಲ್ಪಿಸಿರುವ ಸ್ಥಾನದ ಬಗ್ಗೆ ಬೀಗುತ್ತೇವಲ್ಲವೆ? ಅಥವಾ ಹೆಣ್ಣು ಬಾಲ್ಯದಲ್ಲಿ ತಂದೆಯಿಂದಲೂ, ವಿವಾಹದ ನಂತರದಲ್ಲಿ ಪತಿಯಿಂದಲೂ, ವೃದ್ಧಾಪ್ಯದಲ್ಲಿ…
  • March 07, 2015
    ಬರಹ: sktotnalli
    19ನೇಯ ಶತಮಾನದದಲ್ಲಿ ಆಗಿ ಹೋದಅನುಭಾವಿ ಕವಿಗಳಾದ ಸಂತ ಶಿಶುನಾಳ ಷರೀಫ್ ಸಾಹೇಬ ಎಂದು ಹೆಸರುವಾಸಿಯಾದ ಧಾರವಾಡಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸಣ್ಣಗ್ರಾಮ ಶಿಶುನಾಳದಲ್ಲಿ ಕ್ರಿ.ಶ.1819 ಮಾರ್ಚ 7ರಂದು ಇವರ ಜನನ. ತಂದೆ ಹಜರತ್‍ ಇಮಾಮಸಾಹೇಬ, ತಾಯಿ…
  • March 06, 2015
    ಬರಹ: nageshamysore
    ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು.. ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ... ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರಾಯದ ಹುಡುಗರು…
  • March 06, 2015
    ಬರಹ: lpitnal
    ಹೋಳಿ ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ, ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ ಹೂಗಿಡಗಳಲ್ಲಿ ತರಹೇವಾರು ಬಣ್ಣ ಬಣ್ಣವಿಲ್ಲದ ಬದುಕು…
  • March 06, 2015
    ಬರಹ: naveengkn
    ಇದೇ ಭಾನುವಾರ, ಮಾರ್ಚ್ ಎಂಟನೇ ತಾರೀಕು (08-March-2015) "ನವಕರ್ನಾಟಕ ಪ್ರಕಾಶನ"ದಿಂದ "ವಿಶ್ವಮಾನ್ಯರು" ಎಂಬ ಮಾಲಿಕೆಯ ಅಡಿಯಲ್ಲಿ, ನೂರು ಕೃತಿಗಳ ಲೋಕಾರ್ಪಣ ಸಮಾರಂಭವಿದೆ, ಇದೇ ಶುಭ ಸಂದರ್ಭದಲ್ಲಿ ನಾನು ಬರೆದ ಎರಡು ಚೊಚ್ಚಲ ಕೃತಿಗಳು…
  • March 05, 2015
    ಬರಹ: raveeshkumarb
    ’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ  ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ…
  • March 04, 2015
    ಬರಹ: naveengkn
    ನಡು ರಾತ್ರಿಯಲಿ ತಟ್ಟೆಂದು ಕಿಟಾರನೆ ಕಿರುಚಿದ ನನ್ನಾತ್ಮ ನಿಧಾನವಾಗಿ ಸಾವಿನ ಮನೆಯ ಬಾಗಿಲಿನಲ್ಲಿ  ಇಣುಕಿ ನೋಡಿ ಮುಗುಳ್ನಗುತ್ತಿತ್ತು,,, ಕಿಟಕಿ ಬಾಗಿಲುಗಳಿಲ್ಲದ  ಸಾವಿನ ಮನೆಯ ಒಳಗೆ  ಮಂದ ಬೆಳಕು ನವಿರಾಗಿ ಪಸರಿಸಿತ್ತು  ದೇಹವಿಲ್ಲದ ಅನೇಕ…
  • March 04, 2015
    ಬರಹ: bhalle
    ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ... "ಎಲ್ಲಿ ಹೊರಟು ಹೋಗಿದ್ಯಮ್ಮಾ? ಆಗ್ಲಿಂದ ನಾನು…
  • March 03, 2015
    ಬರಹ: Jayanth Ramachar
    ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ. ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊದಲಿಯಾರ್? ಇದಕ್ಕೂ…
  • March 03, 2015
    ಬರಹ: Jayanth Ramachar
    ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾರಾಂತ್ಯವೂ ಸೇರಿ ಐದು…
  • March 03, 2015
    ಬರಹ: Jayanth Ramachar
    ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ  ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈಗ ಅವರು ಎಲ್ಲಿದ್ದಾರೋ…
  • March 02, 2015
    ಬರಹ: kavinagaraj
         'ಸಂಸ್ಕೃತ ಕೇವಲ ಒಂದು ವರ್ಗಕ್ಕೆ ಅಥವ ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎನ್ನಿಸಿಕೊಳ್ಳಬೇಕಾದರೆ, ಏಕತೆ ಬಯಸುವುದಾದರೆ ಸಂಸ್ಕೃತ ಬಳಕೆ ಆಗಲೇಬೇಕು'- ಇದು ವೇದಭಾರತೀ ಮತ್ತು ಸಂಸ್ಕೃತಭಾರತಿ ಆಶ್ರಯದಲ್ಲಿ ದಿನಾಂಕ ೨೪.೨.…
  • March 01, 2015
    ಬರಹ: nageshamysore
    ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟಿ ಹೋದ ಮನಸ್ಥಿತಿಗೆ,…