ಒಂದಿಷ್ಟು ಹನಿಗಳು
ಕನ್ನಡ ಭಾಷಾ ಮಹಿಮೆ!
- Read more about ಒಂದಿಷ್ಟು ಹನಿಗಳು
- Log in or register to post comments
ಕನ್ನಡ ಭಾಷಾ ಮಹಿಮೆ!
ಅಡಿಕೆ ಬೆಳೆಯಲ್ಲಿ ಗಣನೀಯವಾಗಿ ಬೆಳೆ ನಷ್ಟ ಮಾಡುವ ಕೀಟಗಳಲ್ಲಿ ಒಂದು ಮುಖ್ಯ ಕೀಟ ಸಿಂಗಾರ ಭಕ್ಷಿಸುವ ಹುಳು. ಇದು ಆ ಸಿಂಗಾರವನ್ನೇ ಹಾಳು ಮಾಡುತ್ತದೆ. ಒಂದು ಮುಗಿದ ನಂತರ ಮತ್ತೊಂದು ಸಿಂಗಾರಕ್ಕೆ ದಾಳಿ ಮಾಡುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಅಡಿಕೆ ಬೆಳೆಗಾರರು ನಮ್ಮ ಅಡಿಕೆ ಮರದಲ್ಲಿ ಸಿಂಗಾರ ಒಣಗಿ ಹೋಗುತ್ತಿದೆ ಎನ್ನುತ್ತಾರೆ. ಕೆಲವರು ಅಡಿಕೆ ಮಿಳ್ಳೆ ಉದುರುತ್ತದೆ ಎನ್ನುತ್ತಾರೆ.
ದೇಶದ್ಯಂತ ಕೆಲವು ವಾರಗಳಿಂದ ಹುಸಿ ಬಾಂಬ್ ಬೆದರಿಕೆ ಕರೆಗಳ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದ ಪ್ರಕರಣವನ್ನು ಪೋಲೀಸರು ಮತ್ತು ತನಿಖಾ ಸಂಸ್ಥೆಗಳು ಕೊನೆಗೂ ಬೇಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಯುವ ಲೇಖಕ ಜಗದೀಶ್ ಉಯಿಕೆ ಎಂಬಾತ ಈ ಕೃತ್ಯಗಳನ್ನು ಎಸಗಿರುವುದು ಪತ್ತೆಯಾಗಿದ್ದು, ಆತ ಪೋಲೀಸರ ಅತಿಥಿಯಾಗಿದ್ದಾನೆ.
ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು ನೋಡುತ್ತೇವೆ.
ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ ಚಿತ್ರ ನಿಜವೋ ಸುಳ್ಳೋ ಅನ್ನುವುದು ಅರ್ಥವಾಗದೆ ಹಾಗೆ ಬದುಕ್ತಾನೂ ಇರುತ್ತೇವೆ.
ಇದುವರೆಗೂ ಯಮ ಮತ್ತು ನಿಯಮದ ಉಪ ಅಂಗಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಅನುಷ್ಠಾನದಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಈ ದಿನ ಯಮದ ಉಪಾಂಗಗಳ ಅನುಷ್ಠಾನದಿಂದ ಆಗುವ ಅಹಿಂಸೆ, ಸತ್ಯ ಮತ್ತು ಅಸ್ತೇಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಮೌನ
"ಬಸವಣ್ಣನವರಿಗೂ ಪುರುಷ ಅಹಂಕಾರ ಮೀರಲು ಸಾಧ್ಯವಾಗಲಿಲ್ಲ ..." ಎಂಬ ಲೇಖಕಿಯೊಬ್ಬರ ಭಾಷಣದ ಮಾತುಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವ್ಯಕ್ತಿಯೂ ಪರಿಪೂರ್ಣರಲ್ಲ, ಯಾವುದೇ ಸಿದ್ಧಾಂತವೂ ಪರಿಪೂರ್ಣವಲ್ಲ. ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ, ವಿಮರ್ಶೆ, ವ್ಯಾಖ್ಯಾನಗಳು ನಡೆಯುತ್ತಲೇ ಇರುತ್ತದೆ. ಹಾಗೆ ಹೇಳಲು ಅವರಿಗೂ ಅಧಿಕಾರ ಮತ್ತು ಸ್ವಾತಂತ್ರ್ಯವಿದೆ.
ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪ ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸಾಸಿವೆ ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಿಸಿ. ಹುಳಿಯಾಗದಿದ್ದಲ್ಲಿ ಮೊಸರು ಸ್ವಲ್ಪ ಸೇರಿಸಬಹುದು.
ಟೊಮೇಟೋ ೫-೬, ಕಾಯಿತುರಿ ೧/೨ ಲೋಟ, ಒಣ ಮೆಣಸು ೫-೬ ( ಸೂಜಿ ಮೆಣಸನ್ನೂ ಬಳಸಬಹುದು) ಖಾರವಿದ್ದರೆ ಒಳ್ಳೆಯದು. ಎಣ್ಣೆ ೪-೫, ಚಮಚ, ಉದ್ದಿನ ಬೇಳೆ ೨ ಚಮಚ, ಎಳ್ಳು ೨ ಚಮಚ, ಸಾಸಿವೆ ೧ ಚಮಚ, ಒಗ್ಗರಣೆಗೆ ಬೆಳ್ಳುಳ್ಳಿ ೭-೮, ಕರಿಬೇವು ರುಚಿಗೆ ಉಪ್ಪು.
ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸದ ಗಳಿಗೆ ಕೂಡಿ ಬಂತು. ಹೊರಬಂದು ಸ್ವಚ್ಛದಿಂದ ಓರಣಗೊಂಡು ಮನೆಯ ಮುಂದೆಲ್ಲಾ ಅಲಂಕರಿಸಿಕೊಂಡು ಸಂಭ್ರಮದಿಂದ ನಿಂತವು.