ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಚಿಕೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ.
ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ.
ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು.
ಸ್ವಲ್ಪ ಸಮಯದ ಬಳಿಕ ಒಳಗಡೆಯಿಂದ ಅವರ ಮನೆಯವರು ದೊಡ್ಡ ಗ್ಲಾಸಿನಲ್ಲಿ ಏನೋ ಹಿಡಿದು ತಂದು ನನಗೆ ಕೊಡುವುದಕ್ಕೆ ಮುಂದಾದರು.

ನಿರಾಸಕ್ತಿ ಯೋಗದಿಂದ ಒದಗಿ ಬಂದ ಗದ್ದುಗೆ

'ನಿರಾಸಕ್ತಿ ಯೋಗ'ದಿಂದ ಒದಗಿ ಬಂದ 'ಗದ್ದುಗೆ' :

ಮನಮೋಹನ ಸಿಂಗ್ ಹಾಗು ಸೋನಿಯಾ ಗಾಂಧಿ ಒಟ್ಟಿಗೆ ಜನರತ್ತ ಕೈಬೀಸುವ ಚಿತ್ರ ಅವರ ಚುನಾವಣಾ ಜಾಹಿರಾತಿನದಾಗಿದ್ದರೂ ಇದು ಒಳ್ಳೆಯ ಚಿತ್ರ. ಮನಸ್ಸಿನಲ್ಲಿ ಮಾತಾಡತ್ತೆ. ಸದ್ಭಾವನೆ-ಭರವಸೆ ಮೂಡಿಸತ್ತೆ. ಅವರು ಒಟ್ಟಾಗಿ ನಿಂತು ನಮ್ಮನ್ನು ಹುರುದುಂಬಿಸುವಂತೆ, ಧೈರ್ಯ ಹೇಳುವಂತೆ ಕಾಣ್ತಾರೆ.

ನಮ್ಮ ರಾಜ್ಯದ ಶಿಕ್ಷಣ ಇಲಾಖೆಗೆ ಶಿಕ್ಷಣ ಕೊಡಿಸುವ ಸ್ಥಿತಿ ಬಂತೆ..?!

ಮೇ ೨೯, ರಾಜ್ಯದ ಎಲ್ಲ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಆರಂಭ ಮಾಡಲಿವೆ. ಈಗಾಗಲೇ ನೀವೆಲ್ಲ ಬಹುತೇಕ ದಿನ ಪತ್ರಿಕೆಗಳ ಮುಖಪುಟದಲ್ಲಿ ಈ ಕುರಿತ ಜಾಹಿರಾತು ನೋಡಿರುತ್ತೀರಿ.

ಭಾನುವಾರ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ

ಈ ಭಾನುವಾರ ಕೋಲಾರದ ಪತ್ರಕರ್ತರ ಭವನದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮದ ಮತ್ತೊಂದು ಆವೃತ್ತಿ!

ಎಂದಿನಂತೆ,

ಅವಧಿ ೧: ಸ್ಥಳೀಯ ಸಮುದಾಯದ ಪರಿಚಯ

ಅವಧಿ ೨: ನೀರ ಕುರಿತು ಅರಿವು ಮೂಡಿಸಲು ತಂತ್ರಜ್ಞಾನ, ಇಂಟರ್ನೆಟ್ ಬಳಕೆ - ಹೇಗೆ?

ಅವಧಿ ೩: ಡಾಕ್ಯುಮೆಂಟರಿ

ಕೋಲಾರದ ಕನ್ನಡಿಗರೆಲ್ಲ, ಆಸಕ್ತರೆಲ್ಲ ಒಟ್ಟಾಗಿ ಬರ್ತೀರಲ್ವ?

ಬಾಳಿನ ಪಾಠ

ನಗುತಿಹುದು ಹೂವು ನನ್ನ ಕಂಡು
ಮುರ್ಖನಾಗಿಯಲ್ಲೋ ಎಂದು
ನೋಡಿಕಲಿ ನನ್ನನ್ನೊಮ್ಮೆ ಜೀವನದ ಪಾಠವ
ಮಳೆ ಬರಲಿ , ಬಿಸಿಲೆರಲಿ
ಬರಸಿಡಿಲೆ ಬಂದೆರಗಲಿ ತಲೆಯೆತ್ತಿ
ನಿಲ್ಲು ಕೊನೆಯವರೆಗೂ

ಬಾಳ ಹಾದಿಯಲಿ ಚಿವುಟುವರು
ಅದೆಷ್ಟೋ ,ಹೊಸಕುವವರು
ಅದೆಷ್ಟೋ ,ಅಂಜದಿರು ನೀ ಅದಕ್ಕೆಲ್ಲ
ಮಾಡುತಿರು ಯತ್ನವ ಮರಳಿ ಮರಳಿ
ಎಂದಾದರೊಂದು ದಿನ ಆರಳುವುದು
ನಗುವೂ ನಿನ್ನ ಮೊಗದಲಿ

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...

ಏನು ನಿನಗೆ ಮಾತು ಬರಲ್ವಾ?... ಹುಡುಗಿಯೊಬ್ಬಳು ತುಂಬಿದ ಕ್ಲಾಸಲ್ಲಿ ಹೀಗೆ ಅವಾಜ್ ಹಾಕಿದರೆ ಹೇಗಿರಬಹುದು. ನನ್ನ ಎಂ ಎ ಮೊದಲ ತರಗತಿಯಲ್ಲಿ ಆದದ್ದು ಇದೇ. ನನಗೆ ಮಂಗಳೂರೇ ಹೊಸತು. ಇಲ್ಲಿಯ ಎಲ್ಲವೂ ಯಾವುದೋ ಬೇರೆ ಲೋಕದ ವ್ಯವಹಾರಗಳಂತೆ ಭಾಸವಾಗುತ್ತಿದ್ದವು. ಈ ಗಾಬರಿಯಲ್ಲಿ ನನಗೆ ಮಾತೆ ಹೊರಡುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ೨೧ ಹುಡುಗಿಯರು ೬ ಹುಡುಗರು!!!

ಮುಕ್ತಿ ನನ್ನಾಯ್ಕೆ

ಎಲ್ಲ ಚೆಲುವಿಯರ ನಡುವೆ "ಮುಕ್ತಿ" ನನ್ನಾಯ್ಕೆ
'ಮುಕ್ತಿ' ನನ್ನದೆಯ ಗೆದ್ದ ಚಲುವೆ.
'ಮುಕ್ತಿ' ಬಳಿಯಲ್ಲಿ ನಾನು ಓಡಾಡುವೆನು
ಅವಳ ಚೆಲುವಿಗೆ ಮೆಚ್ಚಿ ಮರುಳಾಗಿಹೆನು.

ಬೆಳಗಾಗಿ ಮುಗುಳು ನಗೆ ನನ್ನ ಸ್ವಾಗತಿಸುವುದು
ಮಧ್ಯಾನ್ಹದಲಿ ಊಟವಾಯಿತೇ ? ಎಂಬ ಚಿಕ್ಕ ಸನ್ನೆ
ಸಂಜೆಯಲಿ ಸೋಲಿಲಿಲ್ಲದ ಸೋಬಗ ಸುರಿಸುವ ಚಲುವೆ,
ಕಾಡುವಳು ಕನಸಾಗಿ ರಾತ್ರಿಯಲಿ.