ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು

ಡಿ ಎಸ್ ನಾಗಭೂಷಣ್ ರವರ ಲೇಖನ (ಪ್ರ ವಾ ಜುಲೈ16) ತುಂಬಾ ಸಮಯೋಚಿತ ಮತ್ತು ಸೂಕ್ತ ವಾಗಿದೆ. ಲೇಖಕರು ತಿಳಿಸಿದಂತೆ ಬಿ ಎಸ್ ಆರ್ ಬಿ ಮೂಲಕ 1980 ರಲ್ಲಿ ಸುಮಾರು 250 ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ ನೇಮಕಗೊಂಡಿದ್ದೆವು.

ಸ್ವಲ್ಪ ಈ ವಿಷಯ ಕುರಿತು ಯೋಚಿಸಿ...

ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ - ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರು, ಯಾರು ಬೇಕಾದರೂ ಹಣ ಖರ್ಚು ಮಾಡಬಹುದು. ನಮಗೆ ಬೇಕಾದ ವಸ್ತುಗಳನ್ನು, ಹೂಡಿಕೆಯನ್ನು, ಪಾವತಿಗಳನ್ನು, ವರ್ಗಾವಣೆಯನ್ನು ಮಾಡಬಹುದು ಮತ್ತು ಕೊಳ್ಳಬಹುದು.

Image

ಸ್ಟೇಟಸ್ ಕತೆಗಳು (ಭಾಗ ೯೫೭)- ಸರಿ ತಪ್ಪು

ಇಷ್ಟೊಂದು ತಪ್ಪುಗಳು ನನ್ನಿಂದ ಆಗ್ತಾ ಇದೆ. ಇದನ್ನೆಲ್ಲ ಸರಿ ಮಾಡೋದು ಯಾವಾಗ? ಹೀಗೆ ತಪ್ಪು ಮಾಡ್ತಾ ಹೋಗ್ತಾನೆ ಇದ್ರೆ ನನಗೆ ಮುಂದೆ ತುಂಬಾ ಕಷ್ಟ ಇದೆ ಅಲ್ವಾ? ಹೀಗೆ ಅವನ ಯೋಚನೆಗಳು ಸಾಗ್ತಾ ಇತ್ತು. ಅವನಿನ್ನು ಶಾಲೆ ಮೆಟ್ಟಿಲು ದಾಟಿ ಕಾಲೇಜು ಮೆಟ್ಟಿಲನ್ನ ಹತ್ತಬೇಕು ಅಷ್ಟೇ. ಈಗಲೇ ಪ್ರಶ್ನೆಗಳ ರಾಶಿಗಳನ್ನು ತಲೆಯ ಮೇಲೆ ಹೊತ್ತು ಸುಮ್ಮನೆ ಯೋಚಿಸುತ್ತಿದ್ದಾನೆ.

Image

ಮನುಕುಲ ನಾಶ ಸನ್ನಿಹಿತವಾಗಿದೆಯೇ?

ಇದೆಂತಹ ಬಿಸಿಲು, ಸೆಕೆ ತಡೆಯಲಾಗುತ್ತಿಲ್ಲ. ಹೊರಗಡೆ ಹೆಜ್ಜೆ ಹಾಕುವುದೇ ಅಸಾಧ್ಯ. ಇಂತಹ ಉರಿ ನನ್ನ ಅನುಭವದಲ್ಲಿ ಈ ವರೆಗೆ ಕಂಡಿಲ್ಲ" ಇದು ಇತ್ತೀಚೆಗೆ ಪ್ರತಿಯೊಬ್ಬರ ಬಾಯಿಂದ ಹೊರಡುವ ವಾಕ್ಯಗಳು. ಮದುವೆ, ಮದರಂಗಿ ಕಾರ್ಯಕ್ರಮಗಳಲ್ಲಿ ಒಂದತ್ತು ನಿಮಿಷ ನಿಲ್ಲಲಾಗುತ್ತಿಲ್ಲ. ಸಂತೆಗಳು ಹಾಗೂ ಬೀದಿಬದಿ ವ್ಯಾಪಾರ ಅಸಾಧ್ಯವಾಗುತ್ತಿದೆ. ಕಾರ್ಮಿಕರು ಕೆಲಸ ಮಾಡುವುದು ದುಸ್ತರವಾಗಿದೆ.

Image

ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳು (ಭಾಗ 2)

ಸಾಮಾನ್ಯವಾಗಿ ಸಾಮಾಜಿಕವಾಗಿ ತೆರೆದುಕೊಳ್ಳುವುದು ಹಾಗೂ ಅಧ್ಯಾತ್ಮಿಕವಾಗಿ ಆಂತರ್ಯಕ್ಕಿಳಿಯುವುದು ಎರಡು ವಿಭಿನ್ನ ನೆಲೆಯವು ಎಂದು ಭಾವಿಸುವುದನ್ನು ಕಾಣುತ್ತೇವೆ. ಭೌತಿಕ ದೃಷ್ಟಿಕೋನವನ್ನೇ ಒಟ್ಟು ಸೃಷ್ಟಿಯ ಮೂಲದಲ್ಲಿ ನೋಡುವವರಿಗೆ ಇದು ಕಾಣಬಹುದು. ಆದರೆ ಆಂತರ್ಯದ ಸತ್ಯವನ್ನು ನೆಚ್ಚಿಕೊಂಡವರು ಈ ಹೊರಗನ್ನೂ ಒಳಗನ್ನೂ ಸಮನ್ವಯಿಸಿಕೊಂಡು ಹೋಗುವ ದಾರಿ ಕಂಡುಕೊಳ್ಳುತ್ತಾರೆ.

Image

ಮುಂಬರುವ ದಿನಗಳ ದಿಕ್ಸೂಚಿ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮ ದುಡಿಮೆಯ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಶಾಲೆಯ ಸರ್ವತೋ ಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ.              (ಪ್ರ. ವಾ.21/12/2021)
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಜನರು ಸರ್ಕಾರಿ ಕಿರಿಯ ಶಾಲೆಗಳ ಅಭಿವೃದ್ಧಿಗಾಗಿ ಒಂದೇ  ದಿನ ಒಂದು ಕೋಟಿ ರೂಪಾಯಿ  ದೇಣಿಗೆ ಸಂಗ್ರಹಿಸಿದ್ದಾರೆ.
ಇಂತಹ ಸುದ್ದಿಗಳು ಇತ್ತೀಚೆಗೆ ಬರುತ್ತಿರುವುದನ್ನು ನೋಡಿ , ಇಂದಿನ ಯುವಕರ, ಜನ ಸಾಮಾನ್ಯರ, ಸಾಮಾಜಿಕ ಕಳಕಳಿಯ ಬಗ್ಗೆ ಹೆಮ್ಮೆ ಎನಿಸಿದರೂ, ಇದೆಲ್ಲದರ ಜವಾಬ್ದಾರಿ ಹೊರಬೇಕಾದ ಸರ್ಕಾರಗಳ ದಿವ್ಯ ನಿರ್ಲಕ್ಷತೆಗೆ ಮರುಕವುಂಟಾಗುತ್ತದೆ.

ಗರಿಗರಿ ಕೋಡುಬಳೆ

Image

ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಕೋಡುಬಳೆ ಆಕಾರದಲ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು - ೨ ಕಪ್, ತೆಂಗಿನಕಾಯಿ ತುರಿ - ೧ ಕಪ್, ಮೈದಾ ಹಿಟ್ಟು - ೨ ಚಮಚ, ಕೆಂಪು ಮೆಣಸಿನ ಕಾಯಿ - ೩ ಚಮಚ, ಇಂಗು - ಅರ್ಧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಸರ್ಕಾರಿ ಕೆಲಸ ಮತ್ತು ಅಧಿಕಾರಿಗಳು...

ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ, (ಕೇಂದ್ರ ಮತ್ತು ರಾಜ್ಯ ಸೇರಿ) ಐಎಎಸ್ ಅಧಿಕಾರಿಗಳಿಂದ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೫೬)- ಶಿವ

ಬೆಳಗೆದ್ದ ಕೂಡಲೇ ತನ್ನ ಪಕ್ಕದಲ್ಲಿ ಮಲಗಿರುವ ಪುಟ್ಟ ಶಿವನ ಪ್ರತಿರೂಪವನ್ನು ನೋಡುತ್ತಾ ಒಂದು ಸಲ ಕಣ್ಮುಚ್ಚಿ ಆ ಭಗವಂತನನ್ನ ಧ್ಯಾನಿಸಿ ತನ್ನ ಕೆಲಸದ ಕಡೆಗೆ ಹೊರಡುವುದು ಅವಳ ವಾಡಿಕೆ. ಆಕೆಯ ದಿನಚರಿಯಲ್ಲಿ ಪುಟ್ಟ ಶಿವ ಅವಳ ಜೀವನದ ಭಾಗವಾಗಿರುವ ಗಳಿಗೆ ಇದೆಯಲ್ಲ ಅದು ಅವರು ಯಾವತ್ತೂ ಮರೆಯದ ಅದ್ಭುತ ಕ್ಷಣಗಳಲ್ಲಿ ಒಂದು.

Image