ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಗು ಎಂದರೆ…

‘ಮಗು ಎಂದರೆ ಮನುಕುಲದ ತಂದೆ' ಎಂಬ ನಾಣ್ಣುಡಿ ಭುವಿಯಲ್ಲಿ ಒಂದಿದೆ ಆಂಗ್ಲಭಾಷೆಯಲ್ಲಿ, ಮಗುವಿನ ಅವತರಣಕ್ಕೆ ಕಾರಣವಾದ ತಂದೆಯನ್ನು ಮಗು ಬಾಯಿ ಬಂದೊಡನೆ "ಯಾಕೆ ತಂದೆ?" "ಏನು ತಂದೆ?" ಎಂದು ತನ್ನ ಪ್ರಶ್ನಾವಳಿಯೊಂದಿಗೆ ಹೈರಾಣ್ ಮಾಡ್ತದೆ. ಮಗುವಿಗೆ ಯಾವತ್ತಿಗೂ ಎಲ್ಲಿಲ್ಲದ ಜಿಜ್ಞಾಸೆ. ಅದು ಪ್ರತಿಯೊಂದಕ್ಕೂ ಯಾಕೆ, ಏನು, ಎತ್ತ? ಎಂಬಿತ್ಯಾದಿಯಾಗಿ ಪ್ರಶ್ನೆಗಳನ್ನು ಕೇಳುತ್ತದೆ.

Image

ಬದುಕು ಸುಂದರ

ಇಂದು ಹೇಗೆ ಬದುಕನ್ನು ಸುಂದರಗೊಳಿಸುವುದು ಎನ್ನುವುದರ ಬಗ್ಗೆ ನೋಡೋಣ. ಬದುಕು ಎಂದರೇನು?. ನಾವೆಲ್ಲ ತಿಳಿದಿರುವಂತೆ ಗಳಿಸುವುದು, ದೊಡ್ಡಮನೆ ಕಟ್ಟುವುದು... ಬದುಕಲ್ಲ! ಹಣ ಸಂಪಾದಿಸುವುದು.. ಬದುಕಲ್ಲ! ವಸ್ತುಗಳನ್ನು ಸಂಗ್ರಹಿಸುವುದು ಬದುಕಲ್ಲ! ಹಾಗಾದರೆ ಬದುಕು ಎಂದರೇನು?.

Image

ದಲೈಲಾಮಾ ಉತ್ತರಾಧಿಕಾರಿಯ ಹುಡುಕಾಟದಲ್ಲಿ ಮೌಢ್ಯ

ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ  ಗೌತಮ ಬುದ್ಧರು ಒಬ್ಬರು.

Image

ಸ್ಟೇಟಸ್ ಕತೆಗಳು (ಭಾಗ ೧೩೮೧) - ಬೇಸರವಿಲ್ಲ

ನಿಜವಾಗಿಯೂ ನಾನಾಗಿದ್ದರೆ ಖಂಡಿತಾ ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಅವನು ಹಾಗಲ್ಲ. ಆ ದಿನ ಸಂಜೆ ಅಂಗಡಿಯ ಜಗಲಿಯೊಂದರಲ್ಲಿ ಕುಳಿತಿದ್ದ. ನವರತ್ನ ಎಣ್ಣೆಯನ್ನು ಕಯಲ್ಲಿ ಹಿಡಿದು, ಕಾಲಿನ ಪಾದವ ಉಜ್ಜುತ್ತಿದ್ದ. ಗಾರೆ ಕೆಲಸದ ದುಡಿತಕ್ಕೆ ಪಾದಗಳು ಇಡೆದು ಒಳಗಿನ ಚರ್ಮ ನೆಲವನ್ನು ನೋಡುತ್ತಿವೆ. ನೋವಿನ ಪರಿಹಾರಕ್ಕೆ ಕಾಲಿಗೆ ನೋವಿನ ಮುಲಾಮು ಅಂಟಿಕೊಂಡಿದೆ. ಪಕ್ಕದಲ್ಲೇ ನಿಂತಿದೆ ಕಾರು.

Image

ಯಾರ ಸರದಿ ಯಾವಾಗೋ ?!

S S L C ವರೆಗೆ ಒಟ್ಟಿಗೆ ಓದಿದ ನಾಲ್ವರು ಸ್ನೇಹಿತರು ಅಂತಿಮ ಪರೀಕ್ಷೆಗಳ ನಂತರ ಹೋಟೆಲ್‌ಗೆ ಹೋಗಿ ಉಪಹಾರ ಸೇವಿಸಲು ನಿರ್ಧರಿಸಿದರು. ಅವರು ತಮ್ಮ ಸೈಕಲ್‌ಗಳಲ್ಲಿ ಹೋಟೆಲ್ ತಲುಪಿದರು. ದಿನೇಶ್, ಸಂತೋಷ್, ಮನೀಷ್, ಪ್ರವೀಣ್ ಚಹಾ ತಿಂಡಿ ತಿಂದು ಮಾತನಾಡತೊಡಗಿದರು.

Image

ಬಂಗಾರದ ತೋಳಿನ ತಾತನ ಕತೆ

ಆಸ್ಟ್ರೇಲಿಯಾದ ಕಡಲತೀರದ ಜೂನಿ ಎಂಬ ಸಣ್ಣ ಪಟ್ಟಣದಲ್ಲಿ ಜೇಮ್ಸ್ ಹ್ಯಾರಿಸನ್ ಎಂಬ ವ್ಯಕ್ತಿ ಜೀವನ ಸಾಗಿಸಿದ್ದರು. ಮೇಲ್ನೋಟಕ್ಕೆ ಸಾಮಾನ್ಯರಂತೆ ಕಾಣುವ ಇವರು, ಮೊಮ್ಮಕ್ಕಳೊಡನೆ ಆಟವಾಡುವುದು, ಸಂಜೆಯ ಹೊತ್ತು ಸಮುದ್ರ ತೀರದ ಉದ್ದಕ್ಕೂ ವಾಕಿಂಗ್‌ ಮಾಡುವುದು, ಅಂಚೆ ಚೀಟಿಗಳ ಸಂಗ್ರಹ, ತೋಟದಲ್ಲಿ ಕಾಲ ಕಳೆಯುವುದು—ಇಂತಹ ಸರಳ ಸಂತೋಷಗಳಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿದ್ದರು.

Image

ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ

ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ನಿಖರ ಕಾರಣವನ್ನು ಕಂಡುಕೊಳ್ಳಲೆಂದು ಆರೋಗ್ಯ ಇಲಾಖೆಯು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದ್ದು ಗೊತ್ತಿರುವ ಸಂಗತಿಯೇ. ಈ ಸಮಿತಿಯು ನೀಡಿರುವ ವರದಿ ಯಲ್ಲಿ, 'ಆಟೋ ಮತ್ತು ಕ್ಯಾಬ್ ಚಾಲಕರಲ್ಲೇ ಹೆಚ್ಚಾಗಿ ಹೃದಯಾಘಾತವಾಗಿದೆ.

Image