ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವೈಶಾಖದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುಮತಿ ಕೃಷ್ಣಮೂರ್ತಿ
ಪ್ರಕಾಶಕರು
ಹರಿವು ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೪

ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...

ಸಂಭ್ರಮ - ವಿಷಾದ...

ಇದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸಮಯವೂ ಹೌದು. 1947 - 2024 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ್ನು ಅತ್ಯಂತ ನೋವು, ವಿಷಾದ, ಖಿನ್ನತೆಗೆ ದೂಡಿದ್ದಾರೆ. ಈ ದೇಶದ ವ್ಯವಸ್ಥೆಯಲ್ಲಿ ಈ ಮುಖವೂ ಇದೆ.

Image

ಮುನಿಯಾ ಎಂಬ ಪುಟ್ಟ ಹಕ್ಕಿಗಳ ಕಲರವ...

ದೀಪಾವಳಿಯ ರಜಾದಿನಗಳಲ್ಲಿ ನಮ್ಮ ಮನೆಯ ಹತ್ತಿರದ ಗದ್ದೆಗಳ ಬಳಿ ಸುತ್ತಾಡಿಕೊಂಡು ಬರಲು ಹೋಗಿದ್ದೆ. ಅಲ್ಲೊಂದಿಷ್ಟು ಪುಟಾಣಿ ಹಕ್ಕಿಗಳು ಬೇಲಿಯ ಮೇಲೆ ಕುಳಿತುಕೊಂಡಿದ್ದವು. ಒಂದಲ್ಲ ಎರಡಲ್ಲ ನೂರಾರು.. ಯಾವುದೂ ಕೂತಲ್ಲಿ ಕೂರುತ್ತಿರಲಿಲ್ಲ. ಒಮ್ಮೆ ಆ ಕಡೆ ಗದ್ದೆಗೆ ಹಾರಿ ಹೋಗುತ್ತಿದ್ದವು. ಅಲ್ಲೇ ಬೆಳೆದಿದ್ದ ಜೊಂಡು ಹುಲ್ಲಿನ ಬೀಜವನ್ನು ಬಾಯಿತುಂಬಾ ತಿಂದುಕೊಂಡು ಮತ್ತೆ ಬೇಲಿಯ ಮೇಲೆ ಬಂದು ಕೂರುತ್ತಿದ್ದವು.

Image

ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ ಕ್ರೀಡಾಪಟುಗಳ ದರ್ಬಾರ್ !

ಕಳೆದ ಕೆಲವು ದಿನಗಳ ಹಿಂದೆ ಹಂಗೇರಿ ದೇಶದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿತ್ತು; ಆ ಕ್ರೀಡಾಕೊಟ ಮುಕ್ತಾಯಗೊಂಡಿತು. ಈ ಒಲಿಂಪಿಯಾಡ್ ನಲ್ಲಿ ನಮ್ಮ ದೇಶದ ಉದಯೋನ್ಮುಖ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Image

ಟೀಕೆಗಳನ್ನು ಸ್ವಾಗತಿಸಿ…

ಟೀಕಿಸುವವರು ಒಂದು ರೀತಿಯಲ್ಲಿ ನಮ್ಮ ಮಾರ್ಗದರ್ಶಕರು ಇದ್ದಹಾಗೆ. ನಾವು ಮಾಡಿದ ತಪ್ಪು ಒಪ್ಪುಗಳನ್ನು ಟೀಕಿಸದೇ ಹೋದರೆ ನಮ್ಮ ತಪ್ಪುಗಳ ಅರಿವಾಗುವುದಾದರೂ ಹೇಗೆ? ಅದಕ್ಕಾಗಿ ಎಂತಹದ್ದೇ ಟೀಕೆ ಇರಲಿ, ಅದರಲ್ಲಿರುವ ತಿರುಳನ್ನು ನಾವು ಗುರುತಿಸಬೇಕು ; ಆ ನಂತರ ಅವುಗಳಿಂದ ಮಾರ್ಗದರ್ಶನ ಪಡೆಯಬೇಕು. ಟೀಕೆಗಳಿಂದ ಹೊರತಾದವರು ಯಾರೂ ಇಲ್ಲ. ಭಗವಾನ್ ಬುದ್ಧನ ಜೀವನದ ಒಂದು ಪುಟ್ಟ ಕಥೆ ಇಲ್ಲಿದೆ.

Image

ಜನಪ್ರಿಯ ಔಷಧಿಗಳೇ ಕಳಪೆ : ಆಘಾತಕಾರಿ ವರದಿ

ಜ್ವರಕ್ಕೆ ಬಳಸುವ ಪ್ಯಾರಸಿಟೆಮಾಲ್ ಸೇರಿದಂತೆ ದೇಶದಲ್ಲಿ ಮಾರಾಟವಾಗುತ್ತಿರುವ ೫೩ ಜನಪ್ರಿಯ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವರದಿ ಹೇಳಿರುವುದು ಆಘಾತಕಾರಿಯಾಗಿದೆ. ಕಳಪೆ ಔಷಧ ಪಟ್ಟಿಯಲ್ಲಿ ಮಧುಮೇಹ, ರಕ್ತದೊತ್ತಡ, ವಿಟಮಿನ್ ಮಾತ್ರೆಗಳು, ಕ್ಯಾಲ್ಸಿಯಂ, ಅಸಿಡಿಟಿ ಮಾತ್ರೆಗಳೂ ಸೇರಿವೆ.

Image

ತಿರುಪತಿಯ ಕಲಬೆರಕೆ ಲಡ್ಡು !

ತಿರುಪತಿ -  ತಿರುಮಲ ವೆಂಕಟೇಶ್ವರ ಸ್ವಾಮಿಯ ಪ್ರಾಣಿ ಕೊಬ್ಬಿನ ಲಡ್ಡು ಅಥವಾ ಲಡ್ಡು ಒಳಗಿನ ಕೊಬ್ಬು. ಈ ರೀತಿಯ ಒಂದು ಭಾವನಾತ್ಮಕ, ವಿವಾದಾತ್ಮಕ, ದೇಶದಾದ್ಯಂತ ಸುದ್ದಿ ಮಾಡುತ್ತಿರುವ ವಿಷಯವನ್ನು ಹೇಗೆ ಗ್ರಹಿಸಬೇಕು ಎನ್ನುವ ಸವಾಲು ಸಾಮಾನ್ಯ ವ್ಯಕ್ತಿಗಳಾದ ನಮ್ಮೆಲ್ಲರನ್ನು  ಕಾಡುತ್ತಿದೆ.

Image