ವಿಧ: ಚರ್ಚೆಯ ವಿಷಯ
September 05, 2007
http://nisarga.maasika.googlepages.com/
ಒದಿ ಪ್ರೋತ್ಸಹಿಸಿ
ವಿಧ: ಬ್ಲಾಗ್ ಬರಹ
September 05, 2007
ಈವತ್ತಿಂದ ನಾನು ಬರೀಬೇಕು ಅಂದುಕೊಡಿದೀನಿ. ಅದೂ ಕನ್ನಡದಲ್ಲಿ. ಅದೂ.......ಸಂಪದದಲ್ಲಿ.
ಕನ್ನಡದ ಬಗ್ಗೆ ನನ್ನ ಓದು ತುಂಬಾ ಮುಂಚೆನೇ ನಿಂತು ಹೋಗಿತ್ತು. ಈಗ ಮತ್ತೆ ಆಸಕ್ತಿ ಬಂದಿದೆ.. ಸಂಪದದ ಕಾರಣ! ಸಂಪದ ಕ್ಕೆ ಒಂದು ದೊಡ್ಡ ಜೈ!
ಇಷ್ಟೊಂದು ಒಳ್ಳಯ ಅಭಿರುಚಿ ಇರುವ ಇಷ್ಟೊಂದು ಜನರನ್ನು ಒಂದು ಕಡೆ ಸೇರಿಸಿ , ನಮಗೆಲ್ಲ ಅವರ ತಿಳಿವನ್ನು ತಿಳಿದುಕೊಳ್ಳುವಂತೆ ಮಾಡ್ತಾ ಇರೋದಕ್ಕೆ ಸಂಪದ ಕ್ಕೆ ಮತ್ತೊಮ್ಮೆ ಜೈ!
ಸ್ವದೇಶಿ ಚಿಂತನೆಗಳು ನನ್ನ ಗಮನವನ್ನು ತನ್ನೆಡೆಗೆ ಸೆಳೆಯುತ್ತವೆ.
Modern…
ವಿಧ: ಬ್ಲಾಗ್ ಬರಹ
September 05, 2007
"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..
ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ..
ಹೇಳುವುದು ಏನೋ ಉಳಿದು ಹೋಗಿದೆ..
ಹೇಳಲಿ ಹೇಗೆ ತಿಳಿಯದಾಗಿದೆ.."
ಈ ಸಾಲುಗಳನ್ನ ಕೇಳ್ತಾ ಇದ್ದ್ರೆ ..ಜೀವನದಲ್ಲಿ ನಾವು ಇನ್ಥ ಪರಿಸ್ಥಿತಿನಲ್ಲಿ ಎಷ್ಟು ಸಲ ಇದ್ದ್ವಿ ಅಂಥ ಅನ್ಸುತ್ತೆ ಅಲ್ವ?..ಯಾರಿಗೋ ಈ ವಿಷಯನ ಹೇಳ್ಬೇಕು ಅಂಥ ಅನ್ಕೋನ್ಡಿರ್ತಿವಿ..ಆದ್ದ್ರೆ ಆಮೇಲೆ ಅವ್ರು ಇರಲ್ಲ ಇಲ್ಲ ಯಾರಿಗೂ ಕಾಯ್ದೆ ಇರೋ ಸಮಯ ತುಂಬ ದೂರ ಹೊಗ್ಬಿಟ್ಟುರುತ್ತೆ..ಆ ಪದಗಳು ಅರ್ಥ ಕಳೆದುಕೊಂಡಿರುತ್ತವೆ.
ಮುಂದೆ…
ವಿಧ: ಚರ್ಚೆಯ ವಿಷಯ
September 05, 2007
"ವಿಚಿತ್ರಾನ್ನ" ಅಂಕಣ..ಶ್ರೀವತ್ಸ ಜೋಷಿ----ಓದಿ------>
'ಹೇಗಿದೆ ನಮ್‌ದೇಶ ಹೇಗಿದೆ ನಮ್‌ಭಾಷೆ... ಹೇಗಿದೆ ಕನ್ನಡ, ಹೇಗಿದೆ ಕರ್ನಾಟಕ... ಈಗ ಹೇಗಿದ್ದಾರೆ, ನಮ್ ಕನ್ನಡಜನ?'ಪ್ರಶ್ನೆಗೆ ಉತ್ತರ; ಈ ವಾರದ ವಿಚಿತ್ರಾನ್ನ.
ವಿಧ: ಬ್ಲಾಗ್ ಬರಹ
September 05, 2007
ಡಾ|| ಹೆಚ್. ನರಸಿಂಹಯ್ಯನವರು ಒಬ್ಬ ವ್ಯಕ್ತಿ , ಶಕ್ತಿ !!! . ನಮಗೆಲ್ಲ ವೈಜ್ನಾನಿಕವಾಗಿ ಚಿಂತನೆಯನ್ನು ಮಾಡುವುದರ ಬಗ್ಗೆ ಹೇಳಿಕೊಟ್ಟವರು.
ನೀವು ನ್ಯಾಷನಲ್ ಕಾಲೇಜ್ ನಲ್ಲಿ ಇರುವ ಡಾ|| ಹೆಚ್ ಎನ್ ಸಭಾಂಗಣಕ್ಕೆ ಹೋದರೆ , ಅಲ್ಲಿ ಚಿಕ್ಕದಾದ ಒಂದು ಪಲಕ ಇದೆ , ಅದರ ಮೇಲೆ "ಪ್ರಶ್ನಿಸದೆ ಒಪ್ಪದಿರು" ಎಂದು ಬರೆದಿದೆ... ನಮ್ಮೆಲ್ಲರನ್ನು ಈ ಹಂತಕ್ಕೆ ತರಲು ಈ ಚಿಕ್ಕ ಚಿಕ್ಕ ಪಲಕಗಳು, ಮಾಡುವ ಪರಿಣಾಮ ದೊಡ್ಡದು ಅಲ್ಲವೇ !!!
ಡಾ|| ಹೆಚ್ ಎನ್ ಅವರ ವೈಶಿಷ್ಟ್ಯ ಸರಳತೆ, ಉಡುಗೆ , ತೊಡುಗೆ,…
ವಿಧ: Basic page
September 05, 2007
ಅಂತರಾಳದ ಮಾತು.....
ನೀ ನುಡಿವ ಒಂದೊಂದು ಮಾತು
ಅಚ್ಚಾಗಿಹುದು ಮನದಲ್ಲಿ
ಬುದ್ಧಿಯ ಕೈಗೆ ಸಿಲುಕಿ
ಕೆಣಕುವುದು ನೂರಾಗಿ....
ನೀ ನಗುವ ವೈಖರಿಗೆ
ಹೃದಯ ಮಿಡಿಯುತಿಹುದು
ತಿಳಿನೀರಲಿ ಬಿದ್ದ ಎಲೆಯೊಂದು
ಮೂಡಿಸುವ ಮಧುರ ಅಲೆಗಳ ಹಾಗೆ...
ಮನಸು ಅರಿತದ್ದು ಬುದ್ಧಿ ಅರಿಯಲಾರದು
ಮೌನವೆ ತುಂಬಿಹುದು ಅಂತರಾಳದಲಿ
ನಿನ್ನ ಈ ಸವಿ ಭಾವಕೆ ಸರಿಸಾಟಿಯಾಗಿ.....
ಪೂರ್ಣಿಮಾ ಹೆಬ್ಬಾರ್.
ವಿಧ: ಬ್ಲಾಗ್ ಬರಹ
September 05, 2007
ಮಲೇಶಿಯಾದಲ್ಲಿ 49,000 ಮತ್ತು ಸಿಂಗಾಪುರದಲ್ಲಿ 18,000 ಕನ್ನಡಿಗರು ಇದ್ದಾರೆ ಎಂದು ಈ ಕೆಳಗಿನ ಕೊಂಡಿ ಹೇಳುತ್ತದೆ.
ಈ ಅಂಕಿ-ಅಂಸಗಳನ್ನು ಇವರು ಕಲೆ ಹಾಕಿದ್ದಾರೆ.Joshua ProjectA ministry of the U.S. Center for World Missionhttp://www.joshuaproject.net/peoples.php?rop3=104555
http://www.joshuaproject.net/peopctry.php?rog3=MY&rop3=104555
ವಿಧ: ಬ್ಲಾಗ್ ಬರಹ
September 05, 2007
ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ…
ವಿಧ: ಬ್ಲಾಗ್ ಬರಹ
September 05, 2007
ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.
ಇನ್ನು ಕೆಲವು ಕಥೆಗಳಿರುತ್ತವೆ. ಒಮ್ಮೆ ಓದಿದ ನಂತರ ಎಷ್ಟೋ ವರ್ಷಗಳವರೆಗೆ, ಮತ್ತೆ ಓದದೆಯೂ, ಕೇಳದೆಯೂ ನೆನಪಿನಲ್ಲಿ ಉಳಿಯುವಂತಹವು ಆ…
ವಿಧ: ಬ್ಲಾಗ್ ಬರಹ
September 04, 2007
ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು
ರಾಜ್ಯದ ಅಧಿಕಾರ ಹಸ್ತಾಂತರ ರಾಜಕಾರಣ ತಾರಕಕ್ಕೇರಿದೆ. ಅಧಿಕಾರಕ್ಕೇರುವಾಗ, ಇಪ್ಪತ್ತು ತಿಂಗಳು ನಾನು; ಇನ್ನಿಪ್ಪತ್ತು ತಿಂಗಳು ನೀವು ಮುಖ್ಯಮಂತ್ರಿ ಎಂದು ಸರಳ ಲೆಕ್ಕಾಚಾರದ ರೂಪದಲ್ಲಿದ್ದ ಒಪ್ಪಂದ, ಅದು ಅಧಿಕಾರಕ್ಕೆ ಸಂಬಂಧಿಸಿದ ಒಪ್ಪಂದ ಎಂಬ ಕಾರಣದಿಂದಾಗಿಯೇ, ಅಧಿಕಾರ ಹಸ್ತಾಂತರದ ದಿನ ಹತ್ತಿರವಾಗುತ್ತಿದ್ದಂತೆಯೇ ಒಪ್ಪಂದದ ಎಲ್ಲ ಪಾವಿತ್ರ್ಯವನ್ನೂ ಕಳೆದುಕೊಳ್ಳುತ್ತಿದೆ! ಈ ಒಪ್ಪಂದದ ಬೆಲೆ ಕಳೆಯಲು ನಾಲ್ಕಾರು ತಿಂಗಳುಗಳ ಹಿಂದೆಯೇ…