ವಿಧ: ಚರ್ಚೆಯ ವಿಷಯ
June 10, 2007
"ಮುಂಗಾರುಮಳೆ" ಚಲನಚಿತ್ರವನ್ನು ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಪ್ರಯೋಗ ಇಂದು ಉಡುಪಿಯಲ್ಲಿ ನಡೆಯಲಿದೆ. ಚಲನಚಿತ್ರದ ಪದ್ಯಗಳ ಜತೆ ಬೇಂದ್ರೆಯವರ ಕವನವೂ ಬಳಕೆಯಗಲಿದೆ.
ವಿವರಗಳಿಗೆ ವಿಕಾಸ ನೇಗಿಲೋಣಿಯವರ ಲೇಖನ "ಉದಯವಾಣಿ"ಯಲ್ಲಿ:
http://68.178.224.54/udayavani/special.asp?first=y&contentid=423246&lang=2
ವಿಧ: Basic page
June 10, 2007
ನಿನ್ನ ಕುರುಡಿಗೆನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳುಇವುಗಳದೇ ಸಂಭ್ರಮ
ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನಮತ್ತು ಗಟ್ಟಿ ದನಿಯಾಳದ ನಡುಕನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆಮೌನವಾಗಿ.
ವಿಧ: ಚರ್ಚೆಯ ವಿಷಯ
June 09, 2007
ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವಮಾನದಿಂದ ಉಗ್ಗುವಿಕೆ ಶುರುವಾಯಿತು. ಯಾರು ಆ ಹುಡುಗ? ಈಗ ಏನಾಗಿದ್ದಾನೆ?
http://vijaykarnatakaepaper.com/pdf/2007/06/08/20070608a_006101002.jpg
ವಿಧ: ಬ್ಲಾಗ್ ಬರಹ
June 09, 2007
ಎಲ್ಲಿದೆ ಮುಕ್ತಿ
ಬೆಟ್ಟದ ತಪ್ಪಲಲ್ಲೋ,
ಹೆಣ್ಣಿನ ನಿತಂಬಗಳಲ್ಲೋ?
ಯವ್ವನ ಪೂರ್ತಿ ಇದನ್ನೇ ಕೇಳುತ್ತದೆ!
(ಮುಪ್ಪಿಗೆ ಉತ್ತರಿಸುವ ಶಕ್ತಿಯೇ ಇಲ್ಲ!!)
ಬೆಟ್ಟವಲೆದರೂ, ಕಾಡು-ಮೇಡು
ಸುತ್ತಿದರೂ ಭಗವಂತನ ಪತ್ತೆಯಿಲ್ಲ.
ಜೀವ ಕೇಳುವುದಿಲ್ಲ,
ಹುಲ್ಲುಕಡ್ಡಿ ಜೀವ ತಳೆದು ಹೆಣ್ಣಾಗುವುದಾದರೆ
ಈ ಹುಲ್ಲು ಕಡ್ಡಿಯ ಮೇಲಿನ ಪ್ರೇಮ
ಅದೆಂತು ಆಗಸಕ್ಕೇರಬಹುದು!
ನಿರ್ಧಾರಗಳು ಎಷ್ಟೇ ಕಠಿಣವಿರಲಿ,
ಕಾಲ ಹೇಗೇ ಹರಿಯುತಿರಲಿ
ನವಿಲಗರಿಗೆ, ಕೊಳಲದನಿಗೆ
ಕೊರಗುವ ಜೀವ ಬೇಸರಗೊಳ್ಳುತ್ತದೆ,
ಕಾಡು ಮರಗಳ ನಡುವೆ…
ವಿಧ: ಚರ್ಚೆಯ ವಿಷಯ
June 09, 2007
ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ?
ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ.
ಈ ವರ್ಷದ ಪತ್ತನಾಜೆ ಕಳೆದು ಹೋಯಿತು.
ವಿಧ: ಚರ್ಚೆಯ ವಿಷಯ
June 09, 2007
ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ.
"ಪ್ರಜಾವಾಣಿ" ಲೇಖನ ಇಲ್ಲಿದೆ:
http://prajavani.net/Content/Jun92007/health2007060831916.asp
ವಿಧ: ಬ್ಲಾಗ್ ಬರಹ
June 09, 2007
ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನು ಕನ್ವೇ ಮಾಡಬಹುದಲ್ಲ ಎಂದು ನನಗೆ ಆಶ್ಚರ್ಯವಾಯಿತು. ನಾನೂ ಒಳ್ಳೊಳ್ಳೆ ಐಕಾನ್ ಗಳನ್ನು ಮಾಡಿ ಗೂಗಲ್ ನಲ್ಲಿ (ನನ್ನ ಫೊಟೊದ ಬದಲಿಗೆ) ಹಾಕಿದರೆ ಹೇಗೆ ಎಂದುಕೊಂಡೆ.
ಕಾರಿನ ಚಿತ್ರ ಬರೆಯಬೇಕೆಂದರೆ ಮಕ್ಕಳೆಲ್ಲ ಮುಂದೆ ಒಂದು, ಹಿಂದೆ ಒಂದು ಮೂತಿಯಿರುವ ಬಾಕ್ಸ್ ಮಾಡಿದಂತೆ (…
ವಿಧ: ಚರ್ಚೆಯ ವಿಷಯ
June 09, 2007
ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದಿತ್ತು, ಜಾಸ್ತಿಯಾಯಿತು ಎಂದು ಅನಿಸಿದರೂ ಬರೆದದ್ದು ಸರಿಯಾಗಿಯೇ ಇದೇ ಎಂದೂ ಕಾಣುತ್ತದೆ. ನೀವೇನಂತೀರ?
ವಿಧ: ಬ್ಲಾಗ್ ಬರಹ
June 08, 2007
ಧರೆಗೆ ಮೆರಗು ತರುವ ಚೈತ್ರದಂತೆ,ಬಾನಲಿ ಮೂಡಿದ ಕಾಮನಬಿಲ್ಲಿನಂತೆ,ಬದುಕ ಇರುಳಿಗೆ ಹುಣ್ಣಿಮೆಯಂತೆ,ಬಾಳ ಬೇಸರ ಧಗೆ ತಣಿಸುವ ಪನ್ನೀರ ಮಳೆಯಂತೆ,ಕರುಳ ಕುಡಿಯ ಆಗಮನ,ಸಾರ್ಥಕ ಭಾವ ಮೊಗದಲಿ,ಮಮತೆಯ ಸಾಗರ ಹೃದಯದಲಿ,ಎಷ್ಟೊಂದು ಚಂದಾನೆತಾಯ್ತನ ಹೆಣ್ಣಿಗೆ!---ಅಮರ್
ವಿಧ: ಬ್ಲಾಗ್ ಬರಹ
June 08, 2007
ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು. ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎತ್ತರದ ಗುಡ್ಡದ ಸರಹದ್ದು. ಹಾಗಾಗಿ ದಿನಾ ಆರೂವರೆಗೆ ಮನೆಗೆ ನಡೆದುಹೋಗುವಾಗ ಅಲ್ಲಿ ಪಶ್ಚಿಮದಂಚಲ್ಲಿ ಅಡಗುತ್ತಿರುವ ಕುಂಚಕೋವಿದ ಬೆಳಕಿನ ಶೂರ ಸೂರ್ಯ ಮಾಮಾ ಟಾಟಾ ಮಾಡುತ್ತಿರುತ್ತಾನೆ. ಅವನು ಆಗಷ್ಟೇ ನೀಡಿ ಹೋದ ಬೆಚ್ಚನೆ ಅಪ್ಪುಗೆಯಿಂದ ಬಾನ್ದೇವಿಯ ಪಡುವಣ ಕೆನ್ನೆ ಕೆಂಪಗೆ…