ಎಲ್ಲ ಪುಟಗಳು

ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
ಅಧ್ಯಾಯ ಇಪ್ಪತ್ತೈದು ಕಂಡಕ್ಟರು ಬಂದ. ನಮ್ಮ ಮೇಣದ ಬತ್ತಿ ಉರಿದು ಚಿಕ್ಕದಾಗಿರುವುದನ್ನು ಕಂಡು ಆರಿಸಿದ. ಹೊಸ ಮೇಣದ ಬತ್ತಿ ಕೊಡಲಿಲ್ಲ. ಬೆಳಕು ಹರಿಯುತ್ತಿತ್ತು. ಅವನು ನಮ್ಮ ಬೋಗಿಯಲ್ಲಿರುವಷ್ಟು ಹೊತ್ತು ಪಾಸ್‌ಡ್ನಿಶೆವ್ ಸುಮ್ಮನೆ ಕೂತಿದ್ದ. ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದ. ಅವನು ಹೋದಮೇಲೆ ಕಥೆ ಮತ್ತೆ ಮುಂದುವರೆಸಿದ. ಅರೆಗತ್ತಲು ಅರೆಬೆಳಕಿನಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಕಿಟಕಿಗಳ ಕಟಕಟ ಸದ್ದು, ರೈಲಿನ ಲಯಬದ್ದ ಓಲಾಟ, ಮಲಗಿದ್ದ ಕ್ಲಾರ್ಕಿನ ಗೊರಕೆ ಇವು ಮಾತ್ರ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ಎರಡು ದಿನಗಳ ನಂತರ ಮೀಟಿಂಗಿಗೆ ಹೊರಟೆ. ಹೋಗಿಬರುತ್ತೇನೆಂದು ಹೆಂಡತಿಗೆ ಹೇಳಿದಾಗ ಮನಸ್ಸು ಲಘವಾಗಿತ್ತು, ಸಮಾಧಾನವಾಗಿತ್ತು. “ಜಿಲ್ಲಾ ಕೇಂದ್ರಗಳ ಲೋಕವೇ ಬೇರೆ. ಮಾಡಲು ಬೇಕಾದಷ್ಟು ಕೆಲಸಗಳಿರುತ್ತವೆ. ಕೌನ್ಸಿಲ್ಲು ಮೀಟಿಂಗು ದಿನಕ್ಕೆ ಹತ್ತು ಹತ್ತು ಗಂಟೆಗಳಂತೆ ಎರಡು ದಿನ ನಡೆಯಿತು. ಎರಡನೆಯ ದಿನ ಸಭೆಯಲ್ಲಿದ್ದಾಗ ನನ್ನ ಹೆಂಡತಿಯ ಪತ್ರ ಬಂತು. ಅಲ್ಲೇ ಆಗಲೇ ಓದಿದೆ. ಮಕ್ಕಳು, ಚಿಕ್ಕಪ್ಪ, ಆಯಾ, ಶಾಪಿಂಗು, ಇತ್ಯಾದಿಗಳನ್ನೆಲ್ಲ ಬರೆದಿದ್ದಳು. ಆಮೇಲೆ ನಡುವೆ ಎಲ್ಲೋ, ತೀರ ಸಾಮಾನ್ಯ ಸಂಗತಿ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ನನಗೆ ಒಣ ಜಂಬ. ಹಾಗೆ ಜಂಬ ಇಲ್ಲದಿದ್ದರೆ ನಮ್ಮ ಸಮಾಜದಲ್ಲಿ ಮಾಮೂಲಾಗಿ ಬದುಕುವುದಕ್ಕೆ ಕಾರಣ ಏನೇನೂ ಇಲ್ಲ. ಭಾನುವಾರ ಬಂತು. ಡಿನ್ನರಿಗೆ, ಸಂಗೀತ ಸಂಜೆಗೆ ಎಲ್ಲ ಏರ್ಪಾಡು ನಾನೇ ಮಾಡಿದೆ. ಗೆಸ್ಟುಗಳನ್ನು ನಾನೇ ಸ್ವಾಗತಿಸಿದೆ. “ಆರು ಗಂಟೆಯ ಹೊತ್ತಿಗೆ ಎಲ್ಲರೂ ಬಂದರು. ಅವನು ಈವನಿಂಗ್ ಡ್ರೆಸ್ಸು ಹಾಕಿಕೊಂಡಿದ್ದ. ಅದಕ್ಕೆ ವಜ್ರದ ಗುಂಡಿಗಳಿದ್ದವು. ಅವನ ಕೀಳು ಅಭಿರುಚಿ ಎದ್ದು ಕಾಣುತಿತ್ತು. ತಾನು ಎಲ್ಲರಿಗಿಂತ ಮೇಲು ಅನ್ನುವಹಾಗೆ, ಮುಗುಳ್ನಕ್ಕು ಏನೋ ಉಪಕಾರ ಮಾಡುತ್ತಿರುವವನ ಹಾಗೆ, ಯಾರು…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ಅವತ್ತೆಲ್ಲ ಅವಳ ಜೊತೆ ಮಾತಾಡಲಿಲ್ಲ. ಮಾತಾಡಬೇಕು ಅನ್ನಿಸಲಿಲ್ಲ. ಮುಖ ಕಂಡರೆ ಸಾಕು, ಮನಸ್ಸಿನಲ್ಲಿ ದ್ವೇಷ ಭುಗಿಲ್ ಅಂತ ಎದ್ದು ಏನು ಮಾಡಿಬಿಡುತ್ತೋ ಏನೋ ಅಂತ ಭಯವಾಗುತ್ತಿತ್ತು. ರಾತ್ರಿ ಊಟಕ್ಕೆ ಕೂತಿದ್ದಾಗ ಮಕ್ಕಳ ಎದುರಿಗೇನೆ ‘ನೀವು ಯಾವತ್ತು ಹೋಗುವುದು ಊರಿಗೆ?’ ಅಂತ ಕೇಳಿದಳು. ಝೆಮಸ್ಟ್‌ವೊದಲ್ಲಿ ಜಿಲ್ಲಾ ಸಭೆಗೆ ಹೋಗಬೇಕಾಗಿತ್ತು. ಯಾವತ್ತು ಹೋಗುತ್ತೇನೆ ಅಂತ ಹೇಳಿದೆ. ‘ಊರಿಗೆ ಹೋಗುವುದಕ್ಕೆ ಏನಾದರೂ ರೆಡಿ ಮಾಡಿಕೊಡಬೇಕಾದದ್ದು ಇದೆಯಾ’ ಅಂತ ಕೇಳಿದಳು. ನಾನು ಮಾತಾಡಲಿಲ್ಲ. ಊಟ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ನನ್ನ ಅವಳ ಸಂಬಂಧ ಹೀಗಿತ್ತು--ಅವನು ನಮ್ಮ ಮನೆಗೆ ಬಂದಾಗ. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನು. ಆ ಹಳೆಯ ಸ್ನೇಹ ಮಾತಿನಲ್ಲೂ ತೋರಿಸಲು ಬಂದ. ನನಗೆ ಇಷ್ಟವಾಗಲಿಲ್ಲ. ಹೊಸಬರನ್ನು ಮಾತಾಡಿಸುವ ಹಾಗೆ ಮಾತಿನಲ್ಲಿ ಸ್ವಲ್ಪ ದೂರ ಇಟ್ಟುಕೊಂಡೇ ಆಡಿದೆ. ಅವನೂ ಮಾತನ್ನ ಹಾಗೇ ಬದಲಾಯಿಸಿಕೊಂಡ. ನೋಡಿದ ತಕ್ಷಣ ಯಾಕೋ ಇಷ್ಟ ಆಗಲಿಲ್ಲ. ಆದರೂ ಯಾವುದೋ ಶಕ್ತಿ ಅವನನ್ನ ದೂರಮಾಡದ ಹಾಗೆ…
ಲೇಖಕರು: anivaasi
ವಿಧ: Basic page
June 07, 2007
ಮಳೆಗೆ ಹಿಡಿದ ಕೊಡೆಯ ನೆರಳುಶಲ್ಯವಿಳಿದ ನರಿಯ ಹೆಗಲುಗೆಜ್ಜೆತೊಟ್ಟ ಕಾಗೆ ಕಾಲುಹೊಳೆವ ಹನಿಯ ತೋರಣದುಗುಡ ಕೇಕೆ ದಿಬ್ಬಣ
ಲೇಖಕರು: sindhu
ವಿಧ: ಬ್ಲಾಗ್ ಬರಹ
June 07, 2007
ಬೆಳದಿಂಗಳ ಹಂಬಲದ ನಾನು,ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ? ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ ಬಾನ ಚಂದಿರನಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ? ನಾನಿಲ್ಲಿ ಬಂಜರು ಕಣಿವೆಯಲ್ಲಿ ನಿಂತು ಬೆಟ್ಟದ ತುದಿಯ ಹಸಿರ ಹಂಬಲದಿಂದ ದಿಟ್ಟಿ ಮೇಲಕ್ಕೆತ್ತಿದೇನೆ,ಕಾಲಡಿಯ ನೆಲವೇ ಕುಸಿವಂತ ವೀರಗಾಸೆಯಾಡುತೀ ಯಾಕೆ ಬದುಕೇ? ಇಂಪಾದ ರಾಗಗಳನ್ಯಾರೋ ದೂರದಲ್ಲಿ ಉಲಿಯುತ್ತಿದಾರೆ,…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 07, 2007
ಮಂಗಳೂರಲ್ಲಿ ಕಾಟು ಎನ್ನುವ ಪದ ಬಳಕೆಯಲ್ಲಿದೆ. ಗಿಡಗಳಿಗೆ, ಪ್ರಾಣಿಗಳಿಗೆ ಅನ್ವಯಿಸಿ ಕಾಟು ಎಂದರೆ ಕಸಿಯಲ್ಲದ ತಳಿ ಎಂದರ್ಥ. ಉಪ್ಪಿನಕಾಯಿಗೆ ಉಪಯೋಗಿಸುವ ಮಾವು ಕಾಟು ಮಾವಿನ ಮರದ್ದೇ ಆಗಬೇಕು. ನಾಯಿಗಳು, ದನಗಳ ಊರ ತಳಿಗಳು ಕಾಟು ತಳಿ. ಸಾಮಾನ್ಯವಾಗಿ ಈ ಶಬ್ದ ಬಯ್ಗಳ ಪದವಾಗಿ ಬಳಕೆಯಲ್ಲಿದೆ. ಶಬ್ದವನ್ನು ನಿಕೃಷ್ಟ ಭಾವನೆಯಿಂದ ಬಳಸುವುದು ರೂಢಿ.
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 07, 2007
ದೇವೇಗೌಡರು ಮತ್ತು ಕುಮಾರಸ್ವಾಮಿಗಳಿಗೆ ಕರಾವಳಿ ಅದೃಷ್ಟ ತಂದಿದೆಯೇ ಅಲ್ಲ ದುರದೃಷ್ಟವನ್ನೇ? ಪಿ.ಮಹಮ್ಮದ್ "ಪ್ರಜಾವಾಣಿ"ಯಲ್ಲಿ ಕಾರ್ಟೂನ್ ಮೂಲಕ ತೋರಿಸಿದ್ದಾರೆ. ನೋಡಿಬಿಡಿ: http://prajavani.net/UserFiles/Image/Jun72007/CartoonLarge.jpg
ಲೇಖಕರು: kuchela
ವಿಧ: Basic page
June 07, 2007
ಮಾಧವ ನೆಲೆ. ಇದು ಮಾಧವನ ನೆಲೆಯೇ. ಶಿವಮೊಗ್ಗದ ಸೋಮಯ್ಯ ಬಂಗ್ಲೆಯಲ್ಲಿರುವ ಈ ‘ನೆಲೆ’ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ. ಈಗ ಇದಕ್ಕೆ ಒಂದು ವರ್ಷದ ಸಂಭ್ರಮ. ಚಿಂದಿ ಆಯುತ್ತಾ ಮಕ್ಕಳು ಕ್ರಮೇಣ ದುಶ್ಚಟಗಳ ದಾಸರಾಗಿ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಕಂಟಕರಾಗಿ ಬೆಳೆಯುವ ಸಂಭವವೇ ಹೆಚ್ಚು. ಇದು ಚಿಂತಾಜನಕ ಸಂಗತಿ. ಇದಲ್ಲದೇ ಅನಾಥ ಮಕ್ಕಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಮಾದರಿಯಾಗಿ ಹಿಂದುಸೇವಾ…