ಎಲ್ಲ ಪುಟಗಳು

ಲೇಖಕರು: betala
ವಿಧ: ಬ್ಲಾಗ್ ಬರಹ
June 06, 2007
ಬಾಳಿಗೊಂದು ನಂಬಿಕೆ ಇದು ಡಾ|| ಡಿ ವಿ ಜಿ ಅವರ ಲೇಖನಗಳ ಸಂಗ್ರಹ. ಇದು ಅವರು ನೀಡಿದ ಭಾಷಣಗಳು, ಚರ್ಚೆಗಳು ಇದರಲ್ಲಿ ಇವೆ. ಬಹುಶಃ ಇದು ಅವರು ಕಗ್ಗ ಬರೆಯುದಕ್ಕಿಂತ ಮುಂಚೆ ಬರೆದಂತ ಕೃತಿ ಇರಬೇಕು.   ಸಾದ್ಯವಾದರೆ ಈ ಪುಸ್ತಕ ಕೊಂಡು ಓದಿ.  
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 05, 2007
ಜೂನ್ ಐದು ಆದರೂ ಕರಾವಳಿಗೆ ಮುಂಗಾರುಮಳೆ ಕಾಲಿಟ್ಟಿಲ್ಲ. ಏನಿದ್ದರೂ "ಮುಂಗಾರುಮಳೆ" ಥೇಟರಲ್ಲೇ ಬಾಕಿಯಾಗಿದೆ. ಇದೆಲ್ಲಾ ನಮ್ಮ ಪರಿಸರಕ್ಕಾಗುತ್ತಿರುವ ಹಾನಿಯಿಂದ ಇರಬಹುದು. ಇದರ ನಡುವೆಯೇ ಸೂರ್ಯ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿದ್ದಾನೆಯೇ? ಯಾಕೆ? ಹೇಗೆ? ಶ್ರೀವತ್ಸ ಜೋಷಿ ತಮ್ಮ ಎಂದಿನ ಕುತೂಹಲಕರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಓದಿ: http://thatskannada.oneindia.in/column/vichitranna/050607global_dimming1.html
ಲೇಖಕರು: rajapriyadarshini
ವಿಧ: ಬ್ಲಾಗ್ ಬರಹ
June 05, 2007
naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
“ಅವನು ನಮ್ಮ ಮನೆಗೆ ಬಂದಾಗ ನನ್ನ ಅವಳ ಸಂಬಂಧ ಹೀಗಿತ್ತು. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ ಹೊತ್ತು. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನು. ಆ ಹಳೆಯ ಸ್ನೇಹವನ್ನು ಮಾತಿನಲ್ಲೂ ತೋರಿಸಲು ಬಂದ. ನನಗೆ ಇಷ್ಟವಾಗಲಿಲ್ಲ. ಹೊಸಬರನ್ನು ಮಾತಾಡಿಸುವ ಹಾಗೆ ಮಾತಿನಲ್ಲಿ ಸ್ವಲ್ಪ ದೂರ ಇಟ್ಟುಕೊಂಡೇ ಆಡಿದೆ. ಅವನೂ ಮಾತನ್ನ ಹಾಗೇ ಬದಲಾಯಿಸಿಕೊಂಡ. ನೋಡಿದ ತಕ್ಷಣ ಯಾಕೋ ಇಷ್ಟ ಆಗಲಿಲ್ಲ. ಆದರೂ ಯಾವುದೋ ಶಕ್ತಿ ಅವನನ್ನ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
“ಅವಳನ್ನ ಕೊಲ್ಲುವುದಕ್ಕೆ ಮೊದಲು ಪರಿಸ್ಥಿತಿ ಹಾಗಿತ್ತು. ಒಂದು ಥರ ಸ್ವಲ್ಪ ಕಾಲದ ಕದನವಿರಾಮ. ಉಲ್ಲಂಘಿಸುವ ಕಾರಣವೇ ಇರಲಿಲ್ಲ. ಒಂದು ದಿನ ಯಾವುದೋ ನಾಯಿಗೆ ಡಾಗ್‌ ಶೋನಲ್ಲಿ ಮೆಡಲು ಬಂತು ಅಂದೆ. ‘ಮೆಡಲಲ್ಲ, ಸರ್ಟಿಫಿಕೇಟು’ ಅಂದಳು. ಜಗಳ ಶುರುವಾಯಿತು. ಮಾತು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹರಿಯಿತು. ವಾದ, ವಾದ, ವಾದ. ‘ಕಂಡಿದ್ದೀನಿ, ಇದೇನು ಹೊಸದಲ್ಲ...’, ‘ನೀನು ಅನ್ನಲಿಲ್ಲವಾ...’ ‘ಹಾಗೆ ಅನ್ನಲೇ ಇಲ್ಲ...’ ‘ಹಾಗಾದರೆ ಸುಳ್ಳು ಹೇಳುತ್ತಿದೀನಾ?’ ಸತ್ತು ಹೋಗಬೇಕು ಅಥವ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
ಇದ್ದಕ್ಕಿದ್ದ ಹಾಗೆ ಎದ್ದು ಕಿಟಕಿಯ ಬಳಿಗೆ ಹೋಗಿ ಕೂತ. “ಸಾರಿ” ಎಂದು ಮೆಲ್ಲಗೆ ಹೇಳಿ, ಕಿಟಕಿಯಾಚೆಗೆ ನೋಡುತ್ತ ಒಂದೈದು ನಿಮಿಷ ಸುಮ್ಮನೆ ಇದ್ದ. ಉದ್ದವಾಗಿ ಉಸಿರುಗರೆದ. ಮತ್ತೆ ಎದ್ದು ಬಂದು ನನ್ನೆದುರಿನ ಸೀಟಿನಲ್ಲಿ ಕೂತ. ಅವನ ಮುಖ ಚೇಂಜಾಗಿತ್ತು. ಕಣ್ಣು ನೋಡಿದರೆ ಅಯ್ಯೋ ಅನ್ನಿಸುವಹಾಗೆ ಇತ್ತು. ತುಟಿ ಇಷ್ಟಿಷ್ಟೆ ನಡುಗುತ್ತಾ ನಗುವುದಕ್ಕೆ ಪ್ರಯತ್ನಪಡುತ್ತಿದ್ದವು. “ಸಾಕಾಗಿದೆ. ಆದರೂ ಹೇಳ್ತೀನಿ. ಇನ್ನೂ ಟೈಮಿದೆ. ಬೆಳಗಾಗಿಲ್ಲ..” ಅನ್ನುತ್ತಾ ಸಿಗರೇಟು ಹಚ್ಚಿಕೊಂಡು ಶುರುಮಾಡಿದ. “…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
“ನೇರವಾಗಿ ಕಥೆ ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ. ಸಮಾಧಾನವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ. ನನಗೆ ಎಲ್ಲವೂ ಬೇರೆ ಥರ ಕಾಣುತ್ತವೆ. ನನಗೆ ಕಂಡದ್ದನ್ನು ಹೇಳದೆ ಇರಲಾರೆ. “ಇರಲಿ. ಸಿಟಿಗೆ ಹೋದೆವು. ದುಃಖ ತುಂಬಿಕೊಂಡಿರುವವರು ಸಿಟಿಗಳಲ್ಲಿ ಬದುಕುವುದು ಸುಲಭ. ಸತ್ತು ಕೊಳೆತು ಹೋಗಿದ್ದೇವೆ ಅನ್ನುವುದೇ ಗೊತ್ತಿಲ್ಲದಂತೆ ನೂರು ವರ್ಷ ಬೇಕಾದರೂ ಬದುಕಿಬಿಡಬಹುದು ಸಿಟಿಗಳಲ್ಲಿ. ಎಲ್ಲರೂ ಬ್ಯುಸಿ. ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
ಅಧ್ಯಾಯ ಹದಿನಾರು “ಬೇಗ ಬೇಗ ಮಕ್ಕಳಾದರು. ನಮ್ಮ ಸಮಾಜದಲ್ಲಿ ಮಕ್ಕಳಿಂದ ಏನಾಗಬೇಕೋ ಅದೇ ಆಯಿತು. ಮಕ್ಕಳನ್ನು ದೇವರು ಕೊಡುವ ವರ, ತಾಯ್ತದನ ಆನಂದ ಎಂದೆಲ್ಲ ಹೇಳುತ್ತಾರೆ. ಬರೀ ಸುಳ್ಳು. ಒಂದು ಕಾಲದಲ್ಲಿ ಹಾಗಿದ್ದಿರಬಹುದು, ಈಗಿಲ್ಲ. ನಮ್ಮ ಶ್ರೀಮಂತವರ್ಗದ ಹೆಂಗಸರಿಗೆ ಮಕ್ಕಳು ಸಂತೋಷವೂ ಅಲ್ಲ, ಹೆಣ್ತನದ ಹೆಮ್ಮೆಯೂ ಅಲ್ಲ. ಮಕ್ಕಳೆಂದರೆ ಭಯ, ಆತಂಕ, ಕೊನೆಯಿಲ್ಲದ ನರಳಾಟ, ಹಿಂಸೆ. ತಾಯಂದಿರಿಗೆ ಇದು ಚೆನ್ನಾಗಿ ಗೊತ್ತು, ಕೊಂಚ ಮೈರೆತಿದ್ದಾಗ ಕೇಳಿದರೆ ಹಾಗೆ ಹೇಳಿಯೂಬಿಡುತ್ತಾರೆ. ಮಕ್ಕಳಿಗೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 05, 2007
“ಹೀಗೇ ದಿನ ಕಳೆಯುತ್ತಿತ್ತು. ನಾವು ವೈರಿಗಳಾಗಿಬಿಟ್ಟಿದ್ದೆವು. ಭಿನ್ನಾಭಿಪ್ರಾಯದಿಂದ ದ್ವೇಷ ಹುಟ್ಟುವ ಬದಲಾಗಿ ದ್ವೇಷ ಇದ್ದ ಕಾರಣದಿಂದಲೇ ಭಿನ್ನಾಭಿಪ್ರಾಯ ಹುಟ್ಟುತ್ತಿತ್ತು. ಅವಳು ಮಾತಾಡುವ ಮೊದಲೇ ನನ್ನ ಮನಸ್ಸು ವಿರೋಧಿಸುವುದಕ್ಕೆ ರೆಡಿಯಾಗಿರುತ್ತಿತ್ತು. ಅವಳ ಮನಸ್ಸೂ ಅಷ್ಟೆ. “ಮದುವೆಯಾಗಿ ನಾಲ್ಕು ವರ್ಷವಾಗುವಷ್ಟರಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ಇಬ್ಬರೂ ಬಂದುಬಿಟ್ಟಿದ್ದೆವು. ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಬಿಟ್ಟುಬಿಟ್ಟೆವು…