ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 05, 2007
ಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ತಿಳಿಯದು! ಅವನ ನಂಬಿಕೆಯ ಪ್ರಕಾರ ಆ ಗಿದ ಬಂಗಾರವನ್ನು ಕಬ್ಬಿಣವಾಗಿ ಮಾಡಬಲ್ಲದು. ಅದನ್ನು ಮತ್ತೆ ಮಾಡಲು ಮತ್ತೆ ಅದೇ ಬಂಗಾರದ ಸರಳನ್ನು ಹಿಡಿದು ಎಲ್ಲ ಗಿದಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 05, 2007
ಜೂನ್ ೨೦೦೭ ರ ಮಯೂರ ತೇಜಸ್ವಿ ಸಂಚಿಕೆಯಾಗಿ ಬಂದಿದೆ. ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವೈಯುಕ್ತಿಕ ಜೀವನ ಮತ್ತು ಕೃತಿಗಳ ಕುರಿತು ಲೇಖನಗಳಿವೆ. ( ಅವರ ನಿಧನದ ಮೊದಲು ಅವರ ಕೃತಿಗಳ ಬಗ್ಗೆ ಲೇಖನಗಳು ಪತ್ರಿಕೆಗಳಲ್ಲಿ ಬಂದಿದ್ದವೋ ಇಲ್ಲವೋ ಗೊತ್ತಿಲ್ಲ ) . ( ತೇಜಸ್ವಿ ಕಥನ ಎಂಬ ಪುಸ್ತಕವೊಂದು ತೇಜಸ್ವಿಯವರ ಎಲ್ಲಾ ಸಾಹಿತ್ಯದ ಕುರಿತು ಒಂದು ಪುಸ್ತಕ ಮೊದಲೇ ಬಂದಿದೆ. ನಾನು ಓದಿಲ್ಲ). ಇತ್ತೀಚೆಗೆ ಹುಲಿಯೂರಿನ ಸರಹದ್ದು ಹೆಸರಿನ ಪುಸ್ತಕ ಕೊಂಡಿದ್ದೇನೆ. ತೇಜಸ್ವಿ ನಿಧನದ ವಿಷಯ ಒಂದೇ…
ಲೇಖಕರು: prapancha
ವಿಧ: ಬ್ಲಾಗ್ ಬರಹ
June 05, 2007
ಮತ್ತೊ೦ದು ವಿಶ್ವ ಪರಿಸರ ದಿನಾಚರಣೆ ಬ೦ದಿದೆ. ಎ೦ದಿನ೦ತೆ ಘೊಷಣೆ, ಸಬೆ, ಸಮಾರ೦ಬಗಳು ನಡೆಯುತ್ತವೆ. ರಾಜಕಾರಣಿಗಳು ದೊಡ್ಡ ದೊಡ್ದ ಬಾಷಣಗಳನ್ನ ಮಾಡುತ್ತಾರೆ, ನಾವು ಜನಸಾಮಾನ್ಯರು ಪರಿಸರ ವಿನಾಶಕ್ಕೆ ಆಳುವವರನ್ನ ಮತ್ತು ಇತರರನ್ನ ದೂಶಿಸಿ ಮತ್ತೊ೦ದು ಪರಿಸರ ದಿನಾಚರಣೆಯ ತನಕ ತೆಪ್ಪಗಿರುತ್ತೇವೆ.ಪರಿಸರ ನಾಶದ ಪರಿಣಾಮಗಳು ನಮಗೆಲ್ಲ ತಿಳಿದಿರುವ ವಿಷಯವೇ. ತಾಪಮಾನ ಹೆಚ್ಚಾಗುತ್ತಿದೆ, ಕೆರೆ ಹಳ್ಳ ಕೊಳ್ಳ ನದಿ ಗಳು ಬತ್ತುತ್ತಿವೆ, ನಮ್ಮ ದೇಶದ ಆರ್ಥಿಕ ಮೂಲವಾದ ಕೃಶಿ ಸ೦ಕಷ್ಟದಲ್ಲಿದೆ. ಅಷ್ಟೇ ಏಕೆ…
ಲೇಖಕರು: vinayudupa
ವಿಧ: ಚರ್ಚೆಯ ವಿಷಯ
June 05, 2007
ನಮಸ್ಕಾರ,                ಈ ಕೆಳಗಿನ ಪದಗಳನ್ನು ರಾಷ್ಟ್ರಕವಿ ಕುವೆಂಪುರವರ ಒಂದು ಪುಸ್ತಕದಲ್ಲಿ ಓದಿದೆ. ಆದರೆ ಇವುಗಳ ಪದಶ: ಅರ್ಥ ತಿಳಿಯಲಿಲ್ಲ. ದಯವಿಟ್ಟು ತಿಳಿಸಿ."ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು". ಅಂಬುಧಿ ಅಂದ್ರೆ ಸಮುದ್ರ ಇರಬಹುದು. ಆದರೆ ಸಂಯುಕ್ತ ಪದದ ಅರ್ಥ ತಿಳಿಸಿ"ಹೊಸ ಹಸುರಿನ ಹಸಲೆಯನ್ನು ಚುಂಬಿಸುವ ಅಚ್ಚಲರುಗಳಂತೆ"
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 05, 2007
ಗಡದ್ದಾಗಿ ಊಟ ಮುಗಿಸಿ, ಕೈ ತೊಳೆದು ದೀಪದ ಮುಂದೆ ಕೂತೆ. ನಿದ್ದೆ ಬರುಷ್ಟರಲ್ಲಿ ಒಂದು ನೀತಿ ಕತೆ ಬರೀಬೇಕು ಅಂತ ಮನಸ್ಸು ಬಂತು. ಹೇಗಿರಬೇಕಪ್ಪಾಂದರೆ, ಎಂಥವರಿಗೂ ನೀತಿ ಹೇಳೋ ಕತೆ ಆಗಿರಬೇಕು. ಧರ್ಮಿಷ್ಠ ಪಿಕ್‌ಪಾಕಟ್‌ರಿಗೂ, ಕಳ್ಳ ನೀತಿವಂತರಿಗೂ. ಮತ್ತು ಇವೆರಡು ಆಗಿದ್ದೂ ಎರಡಕ್ಕೂ ಸೇರದವರಿಗೂ ಅದು ಸಲ್ಲಬೇಕು. ಹೇಗಿರಬೇಕಪ್ಪಾಂದರೆ, ಚುಚ್ಚಬೇಕು, ಹೊಳೆಸಬೇಕು, ಮಿಡಿಬೇಕು. ಕತೆಯ ಕೊನೆ ಸಾಲು ಮುಗಿಯೋ ಅಷ್ಟರಲ್ಲಿ ಓದಿದವರು ಬದಲಾಗಿ ಬಿಟ್ಟಿರಬೇಕು. ನೀತಿವಂತರು ಕಳ್ಳರಾಗಬೇಕು. ಕಳ್ಳರು…
ಲೇಖಕರು: Abhimani
ವಿಧ: Basic page
June 05, 2007
ಹೀಗೆ ಬದುಕಬೇಕು ಅಂತ ಯಾವತ್ತು,ಏನು ಅಂದುಕೊಂಡಿರಲಿಲ್ಲ.ಗಾಳಿ ಬೀಸಿದ ಕಡೆ ತೂರಿಕೊಂಡು ಬಂದದ್ದು ಆಯ್ತು.ಸಮಾಧಾನ ಏನು ಅಂದ್ರೆ.., ಏನಾದ್ರು... ಆಗಿದ್ದೆಲ್ಲ ಒಳ್ಳೆದಕ್ಕೆ ಆಯ್ತು,ಇದು ಆಗಿದ್ದಕ್ಕೆ ನಾನು ಇವತ್ತು ಹೀಗಿರೋದು, ಅದು ಆಗಿದ್ದಕ್ಕೆ ನಾನು ಪಾಠ ಕಲಿತಿದ್ದು ಅಂತ ಜೀವನದುದ್ದಕ್ಕೂ ಸಮಾಧಾನ ಮಾಡ್ಕೊಂದು ಬಂದಿದ್ದು.ಈಗ ತಾನೆ ಕೂತು ತಲೆ ಕೆಡಿಸ್ಕೊಂಡು ಯೋಚನೆ ಮಾಡಿಲ್ಲ ಅಂದ್ರೆ ಈಗಲೂ ಏನು ಆಗಿಲ್ಲ ..ಎಲ್ಲಾ ಸರಿಯಾಗಿದೆ. ಆದದ್ದೆಲ್ಲ ಒಳ್ಳೆಯದಕ್ಕೆ,ಆಗೋದೆಲ್ಲ ಒಳ್ಳೆಯದಕ್ಕೆ,ಆಗ್ತ ಇರೋದು…
ವಿಧ: ಬ್ಲಾಗ್ ಬರಹ
June 05, 2007
ಮತ್ತೆ ಮತ್ತೆ ನಿನ್ನ ನೆನಪಿನೆಡೆಗೆ ಸಾಗಲು ನನಗೆ ನೋಯಿಸಿರುವೆ ನಿನ್ನ ಎಂಬುದೊಂದೇ ಕಾರಣವೇ, ನೋವಾಯಿತೇ ಮೊದಲು ಬಡಿದುದೆಂದು ಕೇಳಲು ಮತ್ತೆ ಮತ್ತೆ ತೀರದೆಡೆಗೆ ಅಲೆಯು ಬರುವಂತೆ? ಮಿಡಿವ ಶರಧಿಯ ಮನಸು ಅಲೆಯಲ್ಲಿ ತೋರುವುದು, ಆಳವೆಷ್ಟೇ ಇದ್ದರೂ ಅದು ಮೇಲಷ್ಟೇ ತೇಲುವುದು. ಅಲೆಗಳು ಹೊತ್ತು ತರುವುದು ಕಸ, ಕಪ್ಪೆಚಿಪ್ಪು, ಆಳದಲಿ ಮುತ್ತಿನ ರಾಶಿ, ಅದು ಮರೆತು ಹೋದರೆ ತಪ್ಪು. ಉಪಮೆಯಿಲ್ಲದ ಎಲ್ಲ ಗಳಿಗೆಗಳಲಿ ನೆನಪು ಬರುವುದಾದರೆ ಅವುಗಳಲೇನು ದೋಷವಿದೆ? ಮುಂಜಾನೆ, ಮುಸ್ಸಂಜೆಗಳಲ್ಲಿ ಅರಳುವುದಾದರೆ…
ಲೇಖಕರು: narendra
ವಿಧ: ಬ್ಲಾಗ್ ಬರಹ
June 04, 2007
ಸಾಧಾರಣವಾಗಿ ಕ್ಷತ್ರಿಯರು ನಡೆಸುವ ಆಶ್ವಮೇಧವನ್ನು ಒಬ್ಬ ಬ್ರಾಹ್ಮಣ ಮಠಾಧೀಶರ ಗುಂಗನ್ನಾಗಿ ಚಿತ್ರಿಸಿದ ಅಶೋಕ ಹೆಗಡೆಯವರು ಕೆಳಜಾತಿಯವರು ಮುಖ್ಯವಾಹಿನಿಗೆ ಬರುವಲ್ಲಿ ಎದುರಿಸಿದ ಕಷ್ಟ ಪರಂಪರೆಗಳನ್ನು ಅದರ ಎಲ್ಲ ವೈರುಧ್ಯಗಳೊಂದಿಗೇ ದಾಖಲಿಸಿದ್ದಾರೆ. ಇಲ್ಲಿ ರಾಮಾನಾಯ್ಕನಿಗೆ ನೆರವಾಗಿ ನಿಲ್ಲುವ ಎರಡು ಶಕ್ತಿಗಳಲ್ಲಿ ಒಂದು ರಾಜೀವ ಗಾಯತೊಂಡೆಯಾದರೆ ಇನ್ನೊಂದು ಕ್ರೈಸ್ತ ಮಿಶನರಿ ಎಂಬುದು ಕೂಡ ಮುಖ್ಯವೇ. ಕಾದಂಬರಿಯ ಹಲವು ಆಯಾಮಗಳಲ್ಲಿ ಇದು ಒಂದು ಮಾತ್ರ. ಹೆಚ್ಚಿನೆಲ್ಲ ವಿಮರ್ಶಕರು ಅಶ್ವಮೇಧ…
ಲೇಖಕರು: bhcsb
ವಿಧ: ಚರ್ಚೆಯ ವಿಷಯ
June 04, 2007
ಮಿತ್ರರಿಗೆ, ಸಂಪದದಲ್ಲಿ `ಸದಸ್ಯರು ಬರೆದ' ಅಥವಾ ನಾನೇ ಬರೆದ ಪತ್ರ,ಲೇಖನ ಇವನ್ನು ಸಂಪದಕ್ಕೆ ಕಳಿಸಿದ ಮೇಲೆ ನಾನು ತಪ್ಪು ಬರೆದಿದ್ದೇನೆ ಅಥವಾ ಸಂಬಂಧಪಟ್ಟ ತಾಣಕ್ಕೆ ಉದಾ: ಲೇಖನ ವಿಭಾಗ ಬದಲಾಗಿ ನುಡಿಮುತ್ತುಗಳು ವಿಭಾಗಕ್ಕೆ ಕಳಿಸಿ, ಅದನ್ನು ಅಳಿಸಿ ಲೇಖನ ವಿಭಾಗಕ್ಕೇ ಹಾಕಲು ತಿಳಿಯುತ್ತಿಲ್ಲ. ಅದನ್ನು ಹೇಗೆ ಅಳಿಸುವುದು (ಡಿಲೀಟ್) ಎಂದು ತಿಳಿಸಿದರೆ ಉಪಯೋಗವಾಗುತ್ತದೆ. ಚಂದ್ರಶೇಖರ
ಲೇಖಕರು: bhcsb
ವಿಧ: ಕಾರ್ಯಕ್ರಮ
June 04, 2007
ಮಿತ್ರರೆ, ಜೂನ್ ೫, ವಿಶ್ವ ಪರಿಸರ ದಿನಾಚರಣೆ. ಇದರ ಅಂಗವಾಗಿ, ಭಾರತೀಯ ಸಮಾಜ ಸೇವಾ ಟ್ರಸ್ಟ್ (ರಿ), ಬೆಂಗಳೂರು ಇವರು ಕೆಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: http://www.unep.org/wed/2007/english/Around_the_World/AsiaPacific.asp ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.M S ShivakumarProgramme DirectorBharatiya Samaja Seva Trust ®No. 36/1, 1st Cross Nanjamba Agrahara5th Main…