ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 08, 2007
ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 08, 2007
http://68.178.224.54/udayavani/showstory.asp?news=1&contentid=422705&lang=2 ಪಂಡಿತಶ್ರೇಷ್ಠ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಹಲವಾರು ಕೃತಿಗಳನ್ನು ರಚಿಸಿದ್ದು ತಮ್ಮ ಕೊನೆಗಾಲದಲ್ಲಿ. ಆಗ ಅವರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವರ ಬಗೆಗೆ ತಿಳಿದುಕೊಳ್ಳಿ. ಇಂದು ಅವರ ಜನ್ಮದಿನ.
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 08, 2007
[ಸಾವಿರಾರು ಜನರ ಮುಂದೆ ಕೂಗುವ ಹಾಗೆ ಕೊಂಚ ಎತ್ತರದ ದನಿಯಲ್ಲಿ ಓದಿಕೊಳ್ಳಬೇಕು]ಛಳಿಯ ಹಿನ್ನೆಡೆ! ಪಶ್ಚಿಮದಿಂದ ಮೋಡಗಳ ಮುನ್ನಡೆ! ಎರಡು ದಿನದಿಂದ ಸಿಡ್ನಿ ಸುತ್ತಮುತ್ತ ರಾಚುತ್ತಿರುವ ಜಡಿಮಳೆ ಇನ್ನೂ ಮೂರು ನಾಕು ದಿನ ನಿಲ್ಲುವ ಸೂಚನೆಯಿಲ್ಲ! ವಾರವಿಡೀ "ಮೋಡ ಮುಸುಕಿದ ವಾತಾವರಣ"! ಜನಗಳ ಗೊಣಗಾಟ! ಸಿಡ್ನಿಗೆ ನೀರೂಡಿಸುವ ವಾರಗಂಬ ಜಲಾಶಯದ ಮಟ್ಟವೂ ಏರುತ್ತಿರುವು ಸೂಚನೆ! ಉತ್ತರದ ಕ್ವೀನ್ಸ್‌ಲಾಂಡಿನ ದಕ್ಷಿಣದಲ್ಲೂ ಭಾರಿ ಮಳೆ! ಒಳನಾಡಿನಲ್ಲಿ ಈ ವರ್ಷ ಹೀಗೆ ಮಳೆಯಾದರೆ ಬರಗಾಲ ಕೊನೆಗೊಳ್ಳಬಹುದೆಂಬ…
ಲೇಖಕರು: betala
ವಿಧ: ಬ್ಲಾಗ್ ಬರಹ
June 08, 2007
ವಿಶ್ವಾಮಿತ್ರನ ವಯಸ್ಸೆಷ್ಟು ?? ಈ ವಿಶ್ವಾಮಿತ್ರ ಮಹಾಮುನಿ, ಬಹಳ ಹಳಬ, ರಾಮಾಯಣ ನಡೆಯೊಕು ಮುಂಚೆ ಇದ್ದವ. ರಾಮನಿಗೆ ಪಾಠ ಹೇಳಿಕೊಟ್ಟವ !!!. ಹಾಗೆ ಮಹಾಭಾರತದಲ್ಲಿ ಕೂಡ guest appearance... ಈಗೆ ಸಾಗಿ ಮೇನಕೆ ಜೊತೆ ಲವ್  !!!... ಆಮೇಲೆ ಶಕುಂತಲೆ  :) ಈಗೆ ಯುಗಗಳವ್ರೆಗೆ ಜೀವನ ಮಾಡಿದ ಈ ಮಹಾಮುನಿ ವಯಸ್ಸೆಷ್ಟು ?? ಇದರ ಹಿಂದಿನ ರಹಸ್ಯವೇನು ? ನಿಮಗೆ ಎನಾದ್ರು ಗೊತ್ತೇ ? :)  
ಲೇಖಕರು: cmariejoseph
ವಿಧ: Basic page
June 07, 2007
ಈಶ್ವರಚಂದ್ರರು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೋದಿಗ್ಗೆರೆ ಗ್ರ್ರಾಮದಲ್ಲಿ (ಈಗಿನ ದಾವಣಗೆರೆ ಜಿಲ್ಲೆ) ಎಚ್.ಎನ್.ರಾಮರಾವ್ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರರಾಗಿ ೧೪-೭-೧೯೪೬ರಲ್ಲಿ ಜನಿಸಿದರು. ಅವರು ತಮ್ಮ ವಿದ್ಯಾಭ್ಯಾಸವನ್ನು ಹೋದಿಗ್ಗೆರೆ, ಚನ್ನಗಿರಿ, ಸಾಗರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಡೆಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮೊ ಗಳಿಸಿ ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಮೈಸೂರು…
ಲೇಖಕರು: cmariejoseph
ವಿಧ: ಬ್ಲಾಗ್ ಬರಹ
June 07, 2007
ಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನ (ಇಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸ್ಥಾಪಕರಾದ ಸರ್ ಜೇಮ್ಶೇಠ್ಜಿ ಟಾಟಾರವರು ಅದರ ರಾಸಾಯನ ಶಾಸ್ತ್ರ ವಿಭಾಗದ ಹುಟ್ಟಿಗಾಗಿ ವಿಲಿಯಂ ರಾಮ್ಸೆಯನ್ನು ಆಹ್ವಾನಿಸಿದ್ದರು.…
ಲೇಖಕರು: ritershivaram
ವಿಧ: ಚರ್ಚೆಯ ವಿಷಯ
June 07, 2007
ನಾವಿಂದು ಬದುಕುತ್ತಿರುವ ಕಾಲಘಟ್ಟದಲ್ಲಿ ಮಾಹಿತಿಯ ಮಹಾಪೂರವೇ ಹರಿದಿದೆ. ಹೌದು, ಇದು ಮಾಹಿತಿ ಯುಗ.  ಇದೀಗ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಷ್ಟೇ ಅಲ್ಲ; ಈ ಯುಗದ ಪ್ರವರ್ತಕ ಭಾಷೆಯಾಗಿರುವುದೂ ನಮ್ಮೆಲ್ಲರ ಅರಿವಿಗೆ ಬಂದಿದೆ. ಅಷ್ಟೇ, ನಮ್ಮ ಮಾತೃಭಾಷೆಯ ಅಳಿವು ಉಳಿವಿನ ಪ್ರಶ್ನೆಯೆ ನಮ್ಮನ್ನು ಕಾಡಿದೆ.  ಟಿ.ವಿ.,ಸಿನಿಮಾ ಬಂದು ಕಥಾ ಸಾಹಿತ್ಯಕ್ಕೆ ಬೇಡಿಕೆ ಕುಸಿದಿರಬಹುದಾದರೂ ಅದು ಮತ್ತೆ ಕೆಲವೆಡೆಯಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿರುವುದನ್ನೂ ನಾವು ಮನಗಾಣುತ್ತಿದ್ದೇವೆ. ಅದಕ್ಕೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ನಿಮಗೆ ವಿಚಿತ್ರ ಅನ್ನಿಸಬಹುದು. ನನ್ನ ರೂಮಿನಿಂದ ಹೊರಟು, ಪರಿಚಿತವಾದ ರೂಮುಗಳನ್ನೆಲ್ಲ ಹಾದು ಹೋಗುತ್ತಿರುವಾಗ ‘ಏನೂ ಆಗಿಲ್ಲವೋ ಏನೋ’ ಅನ್ನುವ ಭಾವನೆ ಮತ್ತೆ ಹುಟ್ಟಿತು. ಔಷಧಿಗಳ ವಾಸನೆ ಮೂಗು ತುಂಬಿತು. ‘ಇಲ್ಲ, ಕೊಲೆ ಆಗಿದೆ’ ಅಂದುಕೊಂಡೆ. ಪ್ಯಾಸೇಜು ದಾಟಿ ಮಕ್ಕಳ ರೂಮಿನ ಮುಂದೆ ಹೋಗುವಾಗ ಪುಟ್ಟ ಲೀಸಾ ಕಾಣಿಸಿದಳು. ಅವಳಿಗೆ ಭಯ ಆಗಿತ್ತು. ನನ್ನ ಐದೂ ಜನ ಮಕ್ಕಳು ಅಲ್ಲೇ ಇದ್ದಾರೆ, ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಬೆಡ್ ರೂಮಿನ ಹತ್ತಿರ ಬಂದೆ. ನರ್ಸು ಬಾಗಿಲು ತೆರೆದು, ನಾನು ಒಳಗೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ಮೊದಲು ನನ್ನ ಬೂಟು ಕಳಚಿದೆ. ಬರೀ ಕಾಲುಚೀಲ ಉಳಿಸಿಕೊಂಡೆ. ಸೋಫಾ ಹತ್ತಿರ ಹೋದೆ. ಗೋಡೆಯ ಮೇಲೆ ಗನ್ನುಗಳು, ಚಾಕು ಚೂರಿಗಳು ಇದ್ದವು. ವಕ್ರವಾದ ಡಮಾಸ್ಕಸ್ ಕಠಾರಿ ತೆಗೆದುಕೊಂಡೆ. ಯಾವತ್ತೂ ನಾವು ಅದನ್ನು ಬಳಸಿರಲಿಲ್ಲ. ತುಂಬ ಚೂಪಾಗಿತ್ತು. ಒರೆಯಿಂದ ಹೊರಕ್ಕೆ ಎಳೆದೆ. ಚರ್ಮದ ಒರೆ ಸೋಫಾದ ಹಿಂದೆ ಬಿತ್ತು. ‘ಆಮೇಲೆ ಅದನ್ನು ಎತ್ತಿಕೊಳ್ಳಬೇಕು, ಇಲ್ಲದಿದ್ದರೆ ಕಳೆದುಹೋಗುತ್ತದೆ’ ಅಂದುಕೊಂಡದ್ದು ನೆನಪಿದೆ. ಓವರ್ ಕೋಟು ತೆಗೆದೆ. ಕಾಲುಚೀಲದ ಪಾದಗಳನ್ನು ಶಬ್ದವಾಗದ ಹಾಗೆ ಊರುತ್ತಾ ಬಾಗಿಲ ಹತ್ತಿರ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
June 07, 2007
“ಇನ್ನೊಂದು ಸ್ಟೇಷನ್ನು ಆದಮೇಲೆ ಕೊನೆಯ ಸ್ಟೇಷನ್ನು ಬರುತ್ತದೆ ಅನ್ನುವಾಗ ಟಿಕೆಟ್ ಕಲೆಕ್ಟರು ಬಂದ. ನನ್ನ ವಸ್ತುಗಳನ್ನು ಎತ್ತಿಕೊಂಡು ಬಾಗಿಲ ಹತ್ತಿರ ಹೋಗಿ ನಿಂತುಕೊಂಡೆ. ಇನ್ನೇನು ಕ್ಲೈಮ್ಯಾಕ್ಸು ಅನ್ನಿಸಿ ಕಳವಳ ಜಾಸ್ತಿಯಾಯಿತು. ಚಳಿ ಹೆಚ್ಚಾಗಿತ್ತು. ಹಲ್ಲು ಕಟಕಟ ಸದ್ದುಮಾಡುತ್ತಿದ್ದವು. ರೈಲಿಳಿದೆ. ಆಚೆಗೆ ಹೋಗುತ್ತಿರುವ ಜನರ ಗುಂಪಿನ ಜೊತೆ ಸೇರಿ ಯಾಂತ್ರಿಕವಾಗಿ ಹೊರಗೆ ನಡೆದೆ. ಕುದುರೆ ಗಾಡಿ ಹತ್ತಿದೆ. ಹೊರಟೆ. ದಾರಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಜನ ಇದ್ದರು. ಕೆಲವು ಕಟ್ಟಡಗಳ…