ವಿಧ: ಚರ್ಚೆಯ ವಿಷಯ
April 22, 2007
ಈ ವರ್ಷದ NTR ಪ್ರಶಸ್ತಿಗೆ ಭೈರಪ್ಪನವರನ್ನು ಹೆಸರಿಸಲಾಗಿದೆ. ಇದೇ ಮೇ ೨೮ (NTR ಹುಟ್ಟುಹಬ್ಬ) ರಂದು ಪ್ರಶಸ್ತಿ ಪ್ರದಾನ ಮಡುತ್ತಾರಂತೆ.
ಹೆಚ್ಚಿನ ವಿವರಗಳಿಗೆ ಈ ಲಿಂಕ್ ನೋಡಿ:
[:http://www.hindu.com/2007/04/21/stories/2007042111980400.htm]
ವಿಧ: Basic page
April 22, 2007
ಈಗೀಗ ಮಾಧ್ಯಮಗಳಿಗೆ ಸುದ್ದಿಯ ಕ್ಷಾಮವೇ? ಹೌದು ನನಗೆ ಹಾಗೇ ಅನಿಸುತ್ತದೆ. ಕೆಲವರ ವಯಕ್ತಿಕ ವಿಚಾರಗಳನ್ನು ವಾರಗಟ್ಟಲೆ ಅವರು ಬೇಡ ಬೇಡ ವೆಂದರೂ ಮಾಧ್ಯಮಗಳು ಕಾಡಿ ಬೇಡಿ ಪ್ರಸಾರ ಮಾಡುತ್ತಿರುವದನ್ನು ನೋಡಿದರೆ ಹಾಗೇ ಅನಿಸುತ್ತದೆ. ಉದಾಹರಣೆಗೆ ಐಶ ಮದುವೆ. ಅವರು ಯಾರನ್ನೂ ಕರೆಯದೆ ಮಾಧ್ಯಮಗಳು ದೂರವಿರಲಿ ಎಂದು ಹೇಳಿದರೂ ಕಾಡಿ ಬೇಡಿ ಕೊನೆಗೆ ಅವರ ಸೆಕ್ಯೂರಿಟಿಗಳಿಂದ ನಿಂದನೆಗೊಳಗಾದರೂ ಅದರ ಪ್ರಸಾರದ ಹಿಂದೆ ಬಿದ್ದುರುವ ಜನರನ್ನು ನೋಡಿದರೆ ನನಗೆ ಹಾಗೇ ಎನಿಸುತ್ತದೆ. ಮದುವೆ ಅವರ…
ವಿಧ: ಚರ್ಚೆಯ ವಿಷಯ
April 22, 2007
http://68.178.224.54/udayavani/special.asp?contentid=411488&lang=2
ಪ್ರಿಸಮ್ ಕನ್ನಡ ನಿಘಂಟಿನ ಬ್ರೈಲ್ ಲಿಪಿ ಆವೃತ್ತಿ ಲಭ್ಯವಿದೆ.ಲೇಖನ ಓದಿ.
ವಿಧ: ಬ್ಲಾಗ್ ಬರಹ
April 22, 2007
ಹಿಂದೆಲ್ಲ ಸಂಜೆ ಹೊತ್ತು ಆ ದಿನದ ಕೆಲಸ, ಚಾ ಕಾಫಿ ಮುಗಿದದ್ದೇ ಯಾವತ್ತಿನಂತೆ ಪುಟ್ಟುಭಟ್ಟರ ಅಂಗಡಿ ಮುಂಗಟ್ಟಿನ ಬೆಂಚುಗಳ ಮೇಲೆ ಕೂತು, ನೆಲಗಡಲೆ ತಿನ್ನುತ್ತಲೋ ಪೇಪರು ಓದುತ್ತಲೋ ಇಂದಿರಮ್ಮನ ಆಡಳಿತದಿಂದ ಹಿಡಿದು ಕಲ್ಲರಬೈಲಿನ ಸಂಕಪ್ಪನ ಕೊನೇ ಮಗಳು ಯಾರೊಂದಿಗೋ ಓಡಿಹೋದದ್ದರ ವರೆಗೆ ನಾಲ್ಕಾರು ಮಂದಿ ಹಿರಿಯರು ಸೇರಿ ಅದೂ ಇದೂ ಮಾತನಾಡುವುದಿತ್ತು. ಮಕ್ಕಳಾಗಿದ್ದ ನಮಗೆ ಆಗ ಅದೆಲ್ಲ ಅರ್ಥವಾಗದಿದ್ದರೂ ಈಗ ಅದರಲ್ಲಿದ್ದ ಒಂದು ಸುಖ ಕಾಡುತ್ತದೆ. ನಗರದ ನಡುವೆ ಬದುಕುತ್ತಿರುವವರಿಗೆ ಇಂಥ ಸುಖ ಇಲ್ಲ…
ವಿಧ: ಚರ್ಚೆಯ ವಿಷಯ
April 22, 2007
ಹತ್ತೊಂಭತ್ತನೇ ಶತಮಾನದ ಅಂತ್ಯದಲ್ಲಿ ರಚಿತವಾದ ಪುಸ್ತಕದ ಬಗ್ಗೆಗೆ ಪ್ರಜಾವಾಣಿ ಲೇಖನ ಪ್ರಕಟಿಸಿದೆ. ಕಿಟೆಲ್ ಕರ್ನಾಟಕ ಕಾವ್ಯಮಾಲೆ
ವಿಧ: ಬ್ಲಾಗ್ ಬರಹ
April 22, 2007
ಸಿಡ್ನಿಯ ಹೆಸರಾಂತ ಬೋಂಡೈ ಬೀಚಿನ (bondi beach) ಎದುರಿರುವ ರವೇಸಿಸ್ ಮೂಲೆ. ಸುಮಾರು ತೊಂಬತ್ತಕ್ಕೂ ಮಿಕ್ಕ ಶರತ್ಕಾಲದಂತೇ ಈ ಶರತ್ಕಾಲವೂ, ಸಂಜೆ ಸಮುದ್ರದ ಮೇಲಿಂದ ಬೀಸುತ್ತಿದ್ದ ತಂಪಾದ ಗಾಳಿಗೆ ಮೈಯೊಡ್ಡಿ ನಿಂತಿರುವುದು. ತಾಂತ್ರಿಕ ವಿವರಗಳು ಕೆಳಗೆ ಕೊಟ್ಟಿದ್ದೇನೆ.
Focal length : 18.0mm (35mm equivalent: 27mm)Exposure time: 0.400 s (1/2)Aperture : f/3.5Whitebalance : AutoMetering Mode: matrixExposure : Manual
ವಿಧ: ಚರ್ಚೆಯ ವಿಷಯ
April 21, 2007
ಬಾಬ್ ವೂಲ್ಮರ್ ಕೊಲೆಯಾದ ದಿನ ತಂಗಿದ್ದ ಹೋಟೇಲಿನ ಸಿಸಿಟಿವಿ (ಕ್ಲೋಸ್ ಸರ್ಕ್ಯೂಟ್ ಟೆಲಿವಿಶನ್) ಫುಟೇಜ್ ಮೂಲಕ ಸ್ಕಾಟ್ಲೆಂಡ್ ಯಾರ್ಡ್ ಹಂತಕನಾಗಿರಬಹುದಾದ ಒಬ್ಬನನ್ನು ಗುರುತುಹಿಡಿದಿದೆ ಎಂದು 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆಯಂತೆ. [:http://content-ind.cricinfo.com/woolmer/content/current/story/291759.html|ಹೆಚ್ಚಿನ ಮಾಹಿತಿ ಇಲ್ಲಿದೆ].
ಪ್ರಶ್ನೆ: ಆಗಲೆ ಸುಮಾರು ಒಂದು ತಿಂಗಳು ಕಾಲ ಎಲ್ಲ ಕ್ರಿಕೆಟ್ ಅಸ್ತಿತ್ವ ಇರುವ ದೇಶಗಳ ಸುದ್ದಿಯಲ್ಲಿ ತೇಲಾಡುತ್ತಿರುವ ವೂಲ್ಮರ್…
ವಿಧ: Basic page
April 21, 2007
ಹೆಣ ಕೊಯ್ಯುವುದು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಯ ಮುಖ್ಯ ಭಾಗವೆನ್ನುವುದು ಎಲ್ಲರಿಗೂ ತಿಳಿದ ವಿಷಯ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ಹೆಣವನ್ನು ಪಡೆಯಲು ಕಾಲೇಜುಗಳು ಹರಸಾಹಸ ಮಾಡಬೇಕಾಗುತ್ತದೆ. ನಿರ್ಗತಿಕರ, ದಿಕ್ಕಿಲ್ಲದವರ ಹೆಣಗಳಿಗಾಗಿ ಕಾಯಬೇಕಾಗುತ್ತದೆ. ತಮ್ಮ ಶರೀರವನ್ನು ಇಂತಹ ಕಲಿಕೆಗೆ ದಾನ ಮಾಡುವ ಪ್ರವೃತ್ತಿ ಈಗೀಗ ಕಾಣಬರುತ್ತಿದ್ದರೂ ಅದಿನ್ನೂ ಬೆಳೆಯಬೇಕಾಗಿದೆ.ಹೆಣಗಳೂ ಸಿಕ್ಕರೂ, ಅದಷ್ಟೇ ಕಲಿಕೆಗೆ ಸಾಕಾಗದು. ಉದಾಹರಣೆಗೆ ತುರ್ತು ಸಂದರ್ಭಗಳನ್ನು…
ವಿಧ: ಬ್ಲಾಗ್ ಬರಹ
April 21, 2007
"ಒಂದು ಲೋಟ ಹಾಲು,೨ ಖರ್ಜೂರ,ದಿನಾ ಕೊಡಿಯಮ್ಮ, ಮಗನಿಗೆ ಬೇರೆ ಟಾನಿಕ್ ಬೇಕಾಗಿಯೇ ಇಲ್ಲ" ಎಂದು ಡಾಕ್ಟ್ರು ಹೇಳುವಾಗ,ತಾಯಿ ಮತ್ತು ಮಗನ ಮುಖ ಜಿರಳೆ ತಿಂದ ಹಾಗಾಗಿತ್ತು."ಹಾಲು ನೋಡಿದರೆ ನನ್ನ ಮಗನಿಗೆ ವಾಂತಿ ಬರುತ್ತದೆ, ಎಷ್ಟು ಬೆಲೆಯಾದರೂ ಪರವಾಗಿಲ್ಲ ಒಂದು ಒಳ್ಳೆ ಟಾನಿಕ್ ಬರೆದುಕೊಡಿ ಡಾಕ್ಟ್ರೇ" ಎಂದು ಟಾನಿಕ್ ಬರೆಸಿಕೊಂಡು ಹೋದಳಾಕೆ. ಯಾಕೆ ಈಗಿನ ಮಕ್ಕಳು ಹಾಲನ್ನು ಕಂಡಾಗ ಮುಖ ಹುಳ್ಳಗೆ ಮಾಡುತ್ತಾರೆ.
ಹಾಲು ಒಂದು ಪರಿಪೂರ್ಣ ಆಹಾರ.ದೇಹದ ಸವೆದು ಹೋದ ಅಥವಾ ಹಾಳಾದ ಜೀವಕಣಗಳನ್ನು…
ವಿಧ: ಚರ್ಚೆಯ ವಿಷಯ
April 20, 2007
ಲಿನಕ್ಸ್ ವಿತರಣೆಯಾದ 'ಉಬುಂಟು'ವಿನ ಹೊಸ ಆವೃತ್ತಿ - ೭.೦೪, ಫೀಸ್ಟಿ ಫಾವ್ನ್ ಈಗ ಲಭ್ಯ. ಹೊಸ ಉಬುಂಟು ಎಂದಿನಂತೆ ಹೊಸ ಸವಲತ್ತುಗಳನ್ನು ಹೊತ್ತು ತರುತ್ತಿದೆಯಂತೆ. ಹೆಚ್ಚಿನ ಮಾಹಿತಿ ಹಾಗೂ [:http://lunapark6.com/ubuntu-704-feisty-fawn.html|ಇಂಗ್ಲೀಷಿನಲ್ಲಿ ಒಂದು ರಿವ್ಯೂ ಇಲ್ಲಿದೆ].
ಈ ಹೊಸ ಆವೃತ್ತಿಯನ್ನು [:http://www.ubuntu.com/getubuntu/download|ಉಬುಂಟು ವೆಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು]. ಅಪ್ಗ್ರೇಡ್ ಮಾಡಿಕೊಳ್ಳುತ್ತಿರುವವರಿಗೆ [:http://www.…