ಎಲ್ಲ ಪುಟಗಳು

ಲೇಖಕರು: bhcsb
ವಿಧ: ಬ್ಲಾಗ್ ಬರಹ
April 18, 2007
೬ ಋತುಗಳು ಮತ್ತು ೧೨ ಮಾಸಗಳ ವಿವರ ೧. ವಸಂತ  - ಚೈತ್ರ - ವೈಶಾಖ ೨. ಗ್ರೀಷ್ಮ - ಜ್ಯೇಷ್ಠ - ಆಷಾಢ ೩. ವರ್ಷ - ಶ್ರಾವಣ - ಭಾದ್ರಪದ ೪. ಶರತ್ - ಆಶ್ವಯುಜ - ಕಾರ್ತೀಕ ೫. ಹೇಮಂತ - ಮಾರ್ಗಶಿರ - ಪುಷ್ಯ ೬. ಶಿಶಿರ - ಮಾಘ - ಫಾಲ್ಗುಣ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 18, 2007
( ನಿನ್ನೆ ’ಅಕ್ಷರದಿಂದ ದೂರ’ - ಓಶೋ ವಿಚಾರ ಓದಿದ್ದಿರಿ ; ಇವತ್ತು ಇದನ್ನು ನೋಡಿ) ಮನುಷ್ಯನಿಗೆ ಹೇಗೆ ದೇಹ , ಪ್ರಾಣ, ಮನಸ್ಸು , ಜ್ಞಾನ ಇದೆಯೋ ಹಾಗೆ ನುಡಿಗೂ ಇದೆ. ನದಿ ಪರ್ವತಗಳಿಂದಲೂ ಸಸ್ಯಾದಿ ಸಂಪತ್ತಿನಿಂದಲೂ ಕೂಡಿದ ಭೂಪ್ರದೇಶವು ಅದರ ದೇಹ. ಅಲ್ಲಿಯ ವಿವಿಧ ಪ್ರಾಣಿಗಳು ಅದರ ಪ್ರಾಣ. ಸಾಹಿತ್ಯಕಲಾಕೌಶಲ್ಯವೇ ಅದರ ಮನಸ್ಸು. ನಾಡು ದೇಹವಾದರೆ ಅಲ್ಲಿಯ ನುಡಿಯು ಅದರ ನಾಲಗೆ ಎನ್ನಬಹುದು. ನಾಲಗೆಯು ಮನವನ್ನು ತಿಳಿಸುವಂತೆ ಅಲ್ಲಿಯ ಮಾತು ವಾಙ್ಮಯದ ಸ್ಥಿತಿಗತಿಯನ್ನು ಸೂಚಿಸುಸುವದು. ಮಾತು…
ವಿಧ: ಬ್ಲಾಗ್ ಬರಹ
April 18, 2007
ಸಂಪದ ಓದುಗರು ಈಗಾಗಲೇ ಓದಿರಬಹುದು, ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರ 'ಋಜುವಾತು' ಬಿಡುಗಡೆ ಸಮಾರಂಭದ ಭಾಷಣವನ್ನು ಟೀಕಿಸಿ ಬರೆದ ಲೇಖನವನ್ನು. ವಿಜಯಕರ್ನಾಟಕ ಬರ್ತಾ ಬರ್ತಾ ತೀರಾ ಬೇಜಾವಾಬ್ದಾರಿಯಿಂದ ಲೇಖನಗಳನ್ನು ಪ್ರಕಟಿಸುತ್ತಿದೆ ಎಂಬ ವಾದಕ್ಕೆ ಇಂದಿನ ಲೇಖನ ಮತ್ತೊಂದು ಪುರಾವೆ. ಲೇಖನ ಓದಿದರೆ ಮೊದಲೇ‌ ಅನ್ನಿಸುತ್ತದೆ. ಸರಿಯೋ ತಪ್ಪೋ‌, ಅನಂತಮೂರ್ತಿ 'ಅಂಡ್ ಕೋ' ವನ್ನು ನಿಂದಿಸಲಿಕ್ಕೇ‌ ಹೊರಟ ಲೇಖನ ಇದು ಅಂತ. ಇರಲಿ, ಅದರಲ್ಲಿ ತಪ್ಪೇನಿಲ್ಲ. ನಾನೇನು ಅನಂತಮೂರ್ತಿಯವರ 'ಅಂಡ್…
ಲೇಖಕರು: Khavi
ವಿಧ: ಬ್ಲಾಗ್ ಬರಹ
April 17, 2007
ಕಡ್ಲಿಮಟ್ಟಿಯ ಕಾಶೀಬಾಯಿ!!! "ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲಕ ತಂದಿತ್ತ..." ಇದು ಉ.ಕರ್ನಾಟಕದಲ್ಲಿ ಮನೆಮನೆಗೂ ಗೊತ್ತಿರುವ ಸೊಗಸಾದ ಜಾನಪದ ಹಾಡು. ಇದನ್ನ ನಾನು ಚಿಕ್ಕವನಾಗಿದ್ದಾಗ ಹಾಡತಾ ಇದ್ದೆ. ಆದರೆ ಅದರ ಅರ್ಥ ಮಾತ್ರ ಗೊತ್ತಿರಲಿಲ್ಲ. ಈಗ ನನಗೆ ಇದು ಸಂಪೂರ್ಣವಾಗಿ ಮರೆತು ಹೋಗಿದೆ. ಆದರೆ ಈ ಒಂದು ಸಾಲು ಮಾತ್ರ ನೆನಪಿದೆ. ಇದನ್ನು ನಾನು ಹಾಗೆ ಗುನುಗುತ್ತಿರುವಾಗ ನನ್ನ ಅಮ್ಮ ಈ ಹಾಡಿನ ಹಿಂದಿರುವ ಕಥೆಯನ್ನು ಹೇಳಿದರು. ನೂರೈವತ್ತು ವರ್ಷಗಳ ಹಿಂದೆ ನಡೆದಿದೆ ಅನ್ನಬಹುದಾದ ಒಂದು ಕಥೆ ಅದು…
ಲೇಖಕರು: venkatesh
ವಿಧ: Basic page
April 17, 2007
ಪೇಟೆಂಟ್ ಸಂಖ್ಯೆ : ೧೩೯, ೧೨೧- ಮೇ ೨೦ ರ ೧೮೭೩ ರಂದು ! ಇದೇನಿರಬಹುದು ? ವಿಶ್ವದ ಅತ್ಯಂತ ಹಳೆಯ ಡೆನಿಮ್ ಕಂಪೆನಿ,"ಲೆವಿ ಸ್ಟ್ರಾಸ್" ತನ್ನ ಬ್ರಾಂಡನ್ನು ನೊಂದಾಯಿಸಿದ ಸಂಖ್ಯೆ ಮತ್ತು ಶುಭದಿನ ! 'ಕಾರ್ಪಸ' ಎನ್ನುವುದು ಹತ್ತಿಗೆ ಒಂದು ಪರ್ಯಾಯವಾದ ಹೆಸರು. ಇದು ವಾಸ್ತವವಾಗಿ ಸಂಸ್ಕೃತ ಶಬ್ದ. ನಾವು ಕರೆಯುವ ಅರಳೆ/ಹತ್ತಿಗೆ, ಸುಮಾರು ೩೫ ಹೆಸರುಗಳಿವೆ. ಕಾಟನ್ ಎಂದು ಬಳಸುವ ಪದ ಇಂಗ್ಲೀಷ್ ಅಲ್ಲ. ಅರಬ್ಬೀ ವ್ಯಾಪಾರಗಾರರು ಹತ್ತಿಯನ್ನು ಯೂರೋಪಿನಲ್ಲಿ ಮಾರುವಾಗ ಅವರ ಬಾಷೆಯಲ್ಲಿ 'ಕೌಟೊನ್'…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
April 17, 2007
ಸಂಶೋಧನೆ ಮತ್ತು ಆವಿಷ್ಕಾರ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ. ಆದರೆ ಅವುಗಳ ನಡುವೆ ಸೂಕ್ಷ್ಮ ವ್ಯತ್ಯಾಸ ಇರುವುದು ನಿಮಗೆ ಗೊತ್ತೇ? ಈ ಸಲ ವಿಚಿತ್ರಾನ್ನ ಅಂಕಣದಲ್ಲಿ ಶ್ರೀವತ್ಸ ಜೋಷಿಯವರು ಅದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನಿಮಗೆ ಅದು ಸರಿಯೆನಿಸಿತೇ ಹೇಳುವಿರಾ? ವಿಚಿತ್ರಾನ್ನ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 17, 2007
ಲೇಖಕರ ಮನೆಗೆ ಒಬ್ಬ ಹಳ್ಳಿಯವನು ಬಂದಿರ್ತಾನೆ. ಆಗ ಟೀವಿಯಲ್ಲಿ ಮಹಾಭಾರತದ ಧಾರಾವಾಹಿ ನಡೆದಿರುತ್ತದೆ. ದ್ರೌಪದೀ ವಸ್ತ್ರಾಪಹರಣದ ಪ್ರಸಂಗ . ಹಳ್ಳಿಯವನ ಕಣ್ಣಲ್ಲಿ ನೀರು ಬರುತ್ತದೆ. ( ನಾವು ವಿದ್ಯಾವಂತರಾದ್ದರಿಂದ ಸುಮ್ಮನೆ ನೋಡುತ್ತಿದ್ದೆವು - ಅಂತ ಲೇಖಕರು ಹೇಳುತ್ತಾರೆ ! ) ’ ಪಾಪ , ಆ ಹೆಣ್ಮಗಳಿಗೆ ಎಷ್ಟು ತ್ರಾಸರೀ? ’ . ಅಂದವನು ’ ಅಲ್ಲರೀ , ಅಲ್ಲೆ ಎಷ್ಟೆಲ್ಲಾ ಹಿರೇರು ಇದ್ರಲ್ರಿ? ಭೀಷ್ಮಾ , ದ್ರೋಣ , ಸುಮ್ಮನ ಹ್ಯಾಂಗ ಇದ್ರರೀ ? ದುರ್ಯೋದನಗ ಬೈದು ಬುದ್ದೀ ಹೇಳಬಾರದೇನ್ರಿ ?’…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 17, 2007
ನಾಡಿದ್ದಿನ ನಂತರದ ದಿನಕ್ಕೆ ನೀವು ಏನಂತೀರಿ? ಅದಕ್ಕೊಂದು ಶಬ್ದ ಇದೆಯೇ ? ಅದನ್ನು ಬಳಸುತ್ತಿದ್ದೀರಾ ? ಅಥವಾ ’ ಡೇ ಅಫ್ಟರ್ ’ಡೇ ಅಫ್ಟರ್’ ’ ಅಂತ ಅಂದ್ಬಿಡ್ತೀರೋ ? ಹಾಗೆಯೆ ಮೊನ್ನೆಗೆ ಹಿಂದಿನ ದಿನ ? ವಿಚಾರ ಮಾಡಿ .. ಇಲ್ಲಿ ಕಮೆಂಟ್ ಬರೆದು ತಿಳಿಸಿ . ಅಥವಾ ನಾಡಿದ್ದು ಮತ್ತು ಮೊನ್ನೆ ಶಬ್ದಗಳನ್ನೇ ಕೈಬಿಟ್ಟಿದ್ದರೆ ಅದನ್ನೂ ಸಂಕೋಚಪಡದೆ ತಿಳಿಸಿ !
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 17, 2007
ಸಂಸ್ಕೃತ 'ಮೃಚ್ಛಕಟಿಕ' ನಾಟಕದ ಅನುವಾದಗಳು ಕನ್ನಡದಲ್ಲಿವೆ - ಸಿಕ್ಕರೆ ಓದಿ. ನನಗೆ ಮೆಚ್ಚಿಗೆ ಆಯಿತು. ಅಲ್ಲಿನ ಸ್ವಜನಪಕ್ಷಪಾತ , ರಾಜಕಾರಣದಂಥ ಎಷ್ಟೋ ವಿಷಯಗಳು ಇಂದಿಗೂ ಪ್ರಸ್ತುತ. ಇರಲಿ . ಅಲ್ಲಿನ ಒಂದು ಪ್ರಸಂಗ ಓದಿ . ಚಾರುದತ್ತನನ್ನು ಮರಣಶಿಕ್ಷೆ ವಿಧಿಸಲು ಎಳತಂದಿದ್ದಾರೆ. ಆಗ ಇಬ್ಬರು ಕೊಲೆಗಡುಕರು ಅಲ್ಲಿದ್ದಾರೆ. ಶಿಕ್ಷೆಗೆ ಗುರಿಯಾದವರನ್ನು ಕೊಲ್ಲುವದು ಅವರ ಕೆಲಸ. ಅವರಿಬ್ಬರು ಈ ಕೆಲಸದ ಇಂದಿನ ಸರದಿ ಯಾರದ್ದು ಎಂದು ಸುಮಾರು ಹೊತ್ತು ಜಗಳ ಮಾಡುತ್ತಾರೆ . ಕೊನೆಗೆ ’ಒಬ್ಬ;…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 17, 2007
ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿದ್ದಾರೆ. ಭೀಮ, ಅರ್ಜುನ ,ನಕುಲ , ಸಹದೇವ , ದ್ರೌಪದಿ ಎಲ್ಲರೂ ಧರ್ಮರಾಯನನ್ನು ಅವನಿಂದಲೇ ತಮಗೆ ಈ ದುರ್ಗತಿ ಬಂದಿತು ಎಂದು ಆಕ್ಷೇಪಿಸುತ್ತಿದ್ದಾರೆ. ಆಗ ಅಲ್ಲಿ ಕೃಷ್ಣ ಬರುತ್ತಾನೆ. ಅಗ ಧರ್ಮರಾಯನು ಅವನನ್ನು ಹೀಗೆ ಕೇಳುತ್ತಾನೆ- ’ನಾನು ಮಾಡಿದ ತಪ್ಪಾದರೂ ಏನು ? ಎಲ್ಲರೂ ನನ್ನನ್ನೇ ಏಕೆ ದೂಷಿಸುತ್ತಿದ್ದಾರೆ ? ನಾನು ಧರ್ಮದಂತೆ ಅಲ್ಲವೇ ನಡೆದದ್ದು? ತಾತ ಧೃತರಾಷ್ಟ್ರನು ಜೂಜಿಗೆ ಕರೆದಾಗ ನನು ಬಂದಿದ್ದು ಸರಿಯಲ್ಲವೇ ? ನಾನು ಹಿರಿಯರ ಮಾತು ನಡೆಸಬೇಕೆಲ್ಲವೇ…