ಎಲ್ಲ ಪುಟಗಳು

ಲೇಖಕರು: bhcsb
ವಿಧ: ಚರ್ಚೆಯ ವಿಷಯ
April 11, 2007
`ಸಂಪದ.ನೆಟ್' ಮಿತ್ರರೆ, ನಾನು ಒಂದು ಪುಸ್ತಕವನ್ನು ಓದುತ್ತಿರುವಾಗ, ವಾಕ್ಯವೊಂದರಲ್ಲಿ `ಓವಿ' ಯಷ್ಟಾದರೂ ಓದಬೇಕು ಎಂದಿತ್ತು. ನನಗೆ `ಓವಿ' ಪದದ ಅರ್ಥವು `ಒಂದು ಪುಟವೋ ಅಥವಾ ಒಂದು ಅಧ್ಯಾಯವೋ' ಎಂದು ತಿಳಿಯುತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ. ಧನ್ಯವಾದಗಳು ಚಂದ್ರಶೇಖರ ಬಿ.ಎಚ್.೧೧ ಏಪ್ರಿಲ್ ೨೦೦೭, ಭಾಕಾಮಾ ಮಧ್ಯಾಹ್ನ ೧೨.೦೩
ಲೇಖಕರು: olnswamy
ವಿಧ: ಬ್ಲಾಗ್ ಬರಹ
April 11, 2007
ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು. “ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು. “ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆಂಗಸರ ಬಗ್ಗೆ, ಮದುವೆಯ ಬಗ್ಗೆ ಎಂಥ ಹಾರಿಬಲ್ ಒಪಿನಿಯನ್ನು!” ಎಂದಳು ಹೆಂಗಸು. “ಹೌದು. ಯೂರೋಪಿನಲ್ಲಿರುವಂಥ ಮದುವೆಯ ಐಡಿಯಾಗಳು ನಮ್ಮಲ್ಲಿ ಬರುವುದಕ್ಕೆ ಇನ್ನೂ ಬಹಳ ಕಾಲ ಬೇಕು” ಎಂದ ಲಾಯರು. “ಇಂಥಾ ಜನಕ್ಕೆ ಅರ್ಥವಾಗುವುದೇ ಇಲ್ಲ. ಪ್ರೀತಿ ಇಲ್ಲದ ಮದುವೆ ಮದುವೆನೇ ಅಲ್ಲ…
ಲೇಖಕರು: ASHOKKUMAR
ವಿಧ: Basic page
April 11, 2007
ಸಚಿನ್ ಯಾವುದೋ ಪಾರ್ಟಯಲ್ಲಿ ಕೇಕ್ ತುಂಡು ಮಾಡಲಿತ್ತಂತೆ. ಆ ಕೇಕ್ ನಮ್ಮರಾಷ್ಟ್ರಧ್ವಜದ ಬಣ್ಣ ಹೊಂದಿತ್ತು. ಆದರೂ ಸಚಿನ್ ಮಹಾಶಯ ನಿರ್ಯೋಚನೆಯಿಂದ ಕೇಕ್ ತುಂಡು ಮಾಡಿ,ವಿವಾದ ಸೃಷ್ಟಿಗೆ ಕಾರಣರಾದರು. ಇನ್ಫೋಸಿಸ್‍ಗೆ ರಾಷ್ಟ್ರಪತಿ ಭೇಟಿ ವೇಳೆ,ರಾಷ್ಟ್ರಗೀತೆ ಹಾಡದೆ,ವಾದ್ಯಸಂಗೀತದಲ್ಲಿ ನುಡಿಸಿದ್ದಕ್ಕೆ ಕಾರಣ ಕೇಳಿದಾಗ, ನಾರಾಯಣಮೂರ್ತಿಗಳು ಕಂಪೆನಿಯ ವಿದೇಶೀ ಅತಿಥಿಗಳಿಗೆ ಕಿರಿಕಿರಿಯಾಗಬಹುದೆಂಬ ಕಾರಣ ನೀಡಿದರಂತೆ ನಮ್ಮ ಗಣ್ಯರು ಇದೇಕೆ ಹೀಗೆ ವರ್ತಿಸುತ್ತಾರೋ? ತಮ್ಮನ್ನು ಮಾಧ್ಯಮಗಳು ಮತ್ತು…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
April 11, 2007
ಸಕ್ಕದದ ಸಹೋದರಿ ಸರಿಯಾದ ಪದವೇ? ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ,  ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ? ಇನ್ನು ಸಹ+ಉದರಿ = ಸಹೋದರಿ ಬಳಕೆ ಯಾಕೆ?....ಇಲ್ಲಿ ಉದರಿ ಅಂದ್ರೇನು?  :( ಕನ್ನಡದಲ್ಲಿ ಈ ಗಲಿಬಿಲಿಯಿಲ್ಲ :) ಅಣ್ಣ - ಅಕ್ಕ, ತಮ್ಮ -ತಂಗಿ ಎನ್ನುತ್ತೇವೆ.  
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 11, 2007
ನಾ.ಕಸ್ತೂರಿಯವರ ’ಅನರ್ಥಕೋಶ ಕೋಶ’ದ ಬಗ್ಗೆ ನೀವು ಕೇಳಿರಬಹುದು. ಅವರ ಇನ್ನೊಂದು ಪುಸ್ತಕ ’ಯದ್ವಾ ತದ್ವಾ’ - ನಾ.ಕಸ್ತೂರಿಯವರ ಹಾಸ್ಯ ಲೇಖನಗಳ ಸಂಗ್ರಹ . ನಿಜಕ್ಕೂ ಇಲ್ಲಿಯ ಹಾಸ್ಯ ಬರಹಗಳು ಚೆನ್ನಾಗಿದ್ದು ಸಂತೋಷ ಕೊಡುತ್ತವೆ. ಪುಸ್ತಕವೂ ಸಣ್ಣದು. ಇದು ಇಲ್ಲಿದೆ. ಓದಿ .
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
April 10, 2007
ವಿಚಿತ್ರಾನ್ನ ಸಮಸ್ಯೆವೈದ್ಯ ಬಚಾವಾದದ್ದು ಹೇಗೆ?ಆತ ನೀರನ್ನೇ ತಂದಿದ್ದನೇ? ಕೋಶಾಧಿಕಾರಿ ಮೊದಲು ವೈದ್ಯನ "ವಿಷ" ನೀರನ್ನು ಕುಡಿದು ನಂತರ ತನ್ನ ವಿಷ ಕುಡಿದರೆ,ಅದು ಪ್ರಬಲವಾಗಿದ್ದರೂ ಸಾಯಲೇ ಬೇಕಲ್ಲ? ಅದೇ ವೈದ್ಯ ಕೋಶಾಧಿಕಾರಿ ತಂದ ವಿಷ ಕುಡಿದು,ನಂತರ (ತನ್ನ "ವಿಷ" )ನೀರನ್ನು ಧಾರಾಳ ಕುಡಿದರೆ ಮೊದಲಿನ ವಿಷ ದುರ್ಬಲವಾಗಿ ಬದುಕುಳಿಯಬಹುದು.ಈರ್ವರೂ ನೀರನೇ ವಿಷವೆಂದು ಹಿಡಿದುಕೊಂಡು ಬಂದು, ಕೋಶಾಧಿಕಾರಿ ಹೆದರಿಕೆಯಿಂದಲೇ ಸತ್ತನೇ?
ಲೇಖಕರು: muralihr
ವಿಧ: Basic page
April 10, 2007
ಕಬ್ಬನ್ ಪಾರ್ಕ ಉಳಿಸಿ. ಸ೦ಪದ ಬಳಗದವರಿಗೆಲ್ಲಾ ನಮಸ್ಕಾರ. ವಿಷಯ ೧ : ನೀವು ರಸ್ತೆಯ ಬದಿಯಲ್ಲಿ ಯಾವುದಾದರೂ ಮರವನ್ನು ಕಡಿಯುತ್ತಿದ್ದರೆ ನಿರ್ಲಕ್ಷ್ಯದಿ೦ದ ಮು೦ದೆ ಸಾಗಬೇಡಿ. ಅಲ್ಲಿಯೆ ನಿ೦ತು ಮರವನ್ನು ಕಡಿಯುವುದಕ್ಕೆ ಅನುಮತಿ ಇದೆಯೇ ?? ಇ೦ದು ಪ್ರಶ್ನಿಸಿ. ಇಲ್ಲದಿದ್ದ ಪಕ್ಷದಲ್ಲಿ ಕೃಷ್ಣ ಉಡುಪುಡಿ ಯವರನ್ನು ಸ೦ಪರ್ಕಿಸಿ. ಕೃಷ್ಣ ಉಡುಪುಡಿ Tree Officer ---9880583109. ಇವರ ಜವಬ್ದಾರಿ ಮರವನ್ನು ನೋಡಿ ಕಡಿಯುವುದಕ್ಕೆ ಅನುಮತಿ ಕೊಡುವುದು. ಅನುಮತಿಯಿಲ್ಲದೆ ಕಡಿದವರ ಮೇಲೆ ಮೊಕ್ಕದಮೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 10, 2007
ಕನ್ನಡ ಭಾಷಾ ಸಂಪದ ಎಂಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ . ೯೦ ಪುಟಗಳ ಪುಟ್ಟ ಪುಸ್ತಕ ಇದು . ಭಾಷೆಗಳು , ದ್ರಾವಿಡ ಭಾಷೆಗಳು , ಕನ್ನಡ ಕುರಿತಾದ ಎಷ್ಟೋ ಸಂಗತಿ ಇಲ್ಲಿದೆ. ನಾನು ಗಮನಿಸಿದ ಕೆಲ ವಿಷಯಗಳು . ದ್ರಾವಿಡರೂ ಹೊರಗಿನಿಂದ ಬಂದವರು! ಕನ್ನಡದಲ್ಲಿ ಭೌಗೋಲಿಕ, ಸಾಮಾಜಿಕ ಎಂದು ಎಪ್ಪತ್ತು ಪ್ರಭೇದಗಳನ್ನು ಗುರುತಿಸಿದ್ದಾರೆ. ಕನ್ನಡದಲ್ಲಿನ ಪ್ರಾಚೀನ ವ್ಯಾಕರಣಗಳು ಮೂರೂವರೆ(!). ಅದರಲ್ಲಿ ಎರಡು ಸಂಸ್ಕೃತದಲ್ಲಿವೆ ( ಕನ್ನಡಕ್ಕೆ ಗೌರವ ತಂದು ಕೊಡಬೇಕೆಂದು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 10, 2007
ಅಂತೂ ಮತ್ತೊಮ್ಮೆ ಮೋಹನದ ಬಗ್ಗೆ ನಾಲ್ಜು ಸಾಲು ಬರೆಯುವ ಹೊತ್ತು ಬಂದೇ ಬಂದಿತು. ಈ ಸಲ ಇನ್ನು ಕೆಲವು ಮೋಹಕ ಚಿತ್ರ ಗೀತೆಗಳನ್ನು ಕೇಳಿ, ಆಮೇಲೆ ಕೆಲವು ಇತರ ಪ್ರಕಾರಗಳನ್ನೂ ನೋಡೋಣ. ನಾನು ಮೊದಲೇ ಹೇಳಿದ ಹಾಗೆ, ಮೋಹನ ಆ ಕಾಲದ ಟಿ.ಜಿ.ಲಿಂಗಪ್ಪ ಅವರಿಂದ ಈ ಕಾಲದ ಗುರುಕಿರಣ್ ತನಕ ಎಲ್ಲರೂ ಕೈಯಾಡಿಸಿರುವ ರಾಗ. ಈಗ ಮೊದಲು ೬೦ರ ದಶಕದಲ್ಲಿ ಬಂದ ಚಿತ್ರ ಗೌರಿಯಿಂದಾಯ್ದ ಗೀತೆ. ಜಿ.ಕೆ.ವೆಂಕಟೇಶ್ ಅವರ ನಿರ್ದೇಶನದಲ್ಲಿ ಕುವೆಂಪು ಅವರ ಒಂದು ಭಾವಗೀತೆ, ಜಾನಕಿಯವರ ಧ್ವನಿಯಲ್ಲಿ ಎಷ್ಟು ಸುಂದರವಾಗಿ…
ಲೇಖಕರು: vijayamma
ವಿಧ: ಬ್ಲಾಗ್ ಬರಹ
April 09, 2007
ಆತ ಬರುವ ಗತ್ತು ನೋಡಿ ಅವ ನಮ್ಮ ಮಗನಲ್ವೆ ಮಲ್ಲಿಗೆ ಕಂಪು ಕಾಲ್ಗೆಜ್ಜೆ ನಾದ ನಿಮ್ಮ ಪ್ರೀತಿಯ ಸೊಸೆಯದಲ್ವೆ? ಆಡುವ ಮಕ್ಕಳ ನಡುವೆ ಕೈಬೀಸಿದಾತ ಪುಟ್ಟನಲ್ವೆ? ಅಳಬೇಡ ಮುದ್ದು ಮುನ್ನ ಇಗೊ ಈಗ ಬಂದೆ ಚಿನ್ನ ಹೇಳ್ರೀ ಮಗನೆಲ್ಲಿ ಬೇರೆ ಹೋದ? ಎಲ್ಲಾ ಇರುವರಿಲ್ಲೇ ಅಲ್ವಾ?