ಎಲ್ಲ ಪುಟಗಳು

ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
April 03, 2007
ನನಗೆ ಚಲನಚಿತ್ರ ನೋಡೋ ಗೀಳು ಅಷ್ಟಾಗಿ ಇಲ್ಲದಿದ್ದರೂ, ಹಾಡುಗಳನ್ನು (ಕನ್ನಡ) ಕೇಳುವ ವಿಪರೀತ ಹುಚ್ಚು ಇದೆ. ಒಂದು ಹಾಡಿನಲ್ಲಿ ನಾನು ಗಮನಿಸುವುದು ಟ್ಯೂನ್ ಮಾತ್ರ. ಸಾಹಿತ್ಯಕ್ಕೆ ನಾನು ಯಾವಾಗಲೂ ಒತ್ತು ಕೊಟ್ಟಿಲ್ಲ. ಟ್ಯೂನೇ ಡಬ್ಬಾ ಇದ್ದರೆ, ಸಾಹಿತ್ಯ ಎಷ್ಟೇ ಚೆನ್ನಾಗಿದ್ದು ಏನುಪಯೋಗ? ಮೊದಲ ಅರ್ಧ ಅಥವಾ ಒಂದು ನಿಮಿಷದಲ್ಲಿ ಹಾಡಿನ ಕಂಪೋಸಿಂಗ್ ಮನಕ್ಕೆ ಹಿಡಿಸಿದರೆ ನಂತರ ಆ ಹಾಡು ಚೆನ್ನಾಗಿರೋ ಸಂಭವಗಳೇ ಹೆಚ್ಚು. ನನಗೆ 'ಫಾಸ್ಟ್ ಬೀಟ್ಸ್' ಇರೋ ಹಾಡುಗಳೇ ಇಷ್ಟ.ಈಗ 'ಈ ಪ್ರೀತಿ ಒಂಥರಾ' ಅನ್ನೋ…
ಲೇಖಕರು: thewiseant
ವಿಧ: ಚರ್ಚೆಯ ವಿಷಯ
April 02, 2007
ಮಾನ್ಯರೆ, ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡಿಸಲು ದಯವಿಟ್ಟು ಅನುಮತಿ ನೀಡಿ. ನನ್ನ ಜವಾಬ್ಧಾರಿಯುತ ನಡವಳಿಕೆಯ ಬಗ್ಗೆ ನಿಮಗೆ ಭರವಸೆ ನೀಡಿತ್ತಿದ್ದೇನೆ. ವಂದನೆಗಳು -thewiseant
ಲೇಖಕರು: prasadhegde
ವಿಧ: Basic page
April 02, 2007
ಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು. ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು…
ಲೇಖಕರು: Anonymous
ವಿಧ: ಬ್ಲಾಗ್ ಬರಹ
April 02, 2007
Our sweetest songs are those that tell of saddest thoughts... - Percy Bysshe Shelley ನೋವಲ್ಲಿ ಹುಟ್ಟುವ ಕವಿತೆಗೆ ಅದೇನು ಶಕ್ತಿ... ಅರಳಿ ನಳನಳಿಸುತ್ತದೆ... ಜಗವ ಘಮಿಸುತ್ತದೆ... ನೋವು ಹೀರುತ್ತದೆ... ಸ೦ಗಾತಿಯಾಗುತ್ತದೆ... ಸಾ೦ತ್ವನವಾಗುತ್ತದೆ... ಮನವ ಬೆಳಗುತ್ತದೆ... ಅಮೃತವಾಗುತ್ತದೆ... ಅಮರವಾಗುತ್ತದೆ... ( ಇದು ಕವಿತೆಯಲ್ಲ :-) )
ವಿಧ: Basic page
April 02, 2007
ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ. ಇತ್ತೀಚೆಗೆ…
ಲೇಖಕರು: venkatesh
ವಿಧ: Basic page
April 02, 2007
ನಾನು ಹೇಳಿದ್ದು, ಇತ್ತೀಚೆಗೆ ಅವರ ವ್ಯಂಗ್ಯ ಚಿತ್ರಾಂಕಣದಲ್ಲಿ ಬರ್ತಿತ್ತಲ್ಲ ; ಆ ಕಾರ್ಟೂನ್ಗಳು, ಮೊದಲಿನ ಮಟ್ಟದ್ದಾಗಿಲ್ಲ ಅಂತ ! ಅಂದ್ರೆ ಅದನ್ನೆಲ್ಲ ಲಕ್ಷ್ಮಣರೇ ಬರೆದಿದ್ದಾರೆ ಅಂದಲ್ಲ ! " ಹುಣಸೆ ಮರಕ್ಕೆ ಮುಪ್ಪು ಪ್ಬಂದರೂ ಅದರ್ ಹುಳೀಗ್ ಬರುತ್ಯೆ ?" ಇಲ್ಲವಲ್ಲ. ಅದೇ ರೀತಿ ಲಕ್ಷ್ಮಣ್ ಗರಡಿಯಲ್ಲಿ ಯಾರ್ನೊ ತಯಾರ್ ಮಾಡ್ತಿದಾರೆ ಅನ್ಸತ್ತೆ. ಆತ ಬರೆದ ರೇಖೆಗಳಂತೂ ಲಕ್ಷ್ಮಣರೇಖೆಗಳಲ್ಲ, ಅನ್ನೊ ಮಾತ್ನ ನಾನು ಹೇಳಿದ್ದು. ನಾನೇನೂ ಲಕ್ಶ್ಮಣ ವ್ಯಂಗ್ಯಚಿತ್ರಗಳಬಗ್ಗೆ…
ಲೇಖಕರು: ಶ್ರೀನಿಧಿ
ವಿಧ: Basic page
April 02, 2007
ಗೂಗಲ್ ನವರು ಏನಾದರೊಂದು ಹೊಸತು ಮಾಡುತ್ತಲೇ ಇರುತ್ತಾರೆ. ಈ ಬಾರಿಯಂತೂ ಬೇರೆ ಯಾರೂ ಯೋಚನೆ ಮಾಡಲಾಗದಂತಹ ತಂತ್ರಜ್ಞಾನ ಹೊರತಂದಿದ್ದಾರೆ. ಬ್ರಾಡ್‍ಬ್ಯಾಂಡ್ ಅತ್ಯಂತ ತುಟ್ಟಿಯಾಗಿರುವ ಈ ಕಾಲದಲ್ಲಿ ಬಿಟ್ಟಿ internet ಕೊಡುವುದು ಆಶ್ಚರ್ಯ. ಅದೂ ಎಲ್ಲರ (ಪಾಶ್ಚಾತ್ಯ) ಮನೆಗಳಲ್ಲಿ ಇರುವ ಸಲಕರಣೆ ಉಪಯೋಗಿಸಿ!! ನಮ್ಮ ಭಾರತೀಯ ರೀತಿಯಲ್ಲಿ ಇದನ್ನು ಹೇಗೆ ಆಳವಡಿಸಬಹುದೋ ನೋಡಬೇಕು. ಬರೀ ಅಮೇರಿಕದಲ್ಲಾದರೆ ಏನು ಫಲ? :D http://www.google.com/tisp/ http://www.google.com/tisp/…
ಲೇಖಕರು: kiran bhat
ವಿಧ: Basic page
April 02, 2007
ªÀÄPÀ̼ÀÄ ªÀÄvÀÄÛ gÀAUÀ¨sÀƫĠ ºÁUÉ £ÉÆÃrzÀgÉ, ¥ÉæÃPÀëPÀgÀ ªÀÄzsÉå PÀĽvÀÄ £ÁlPÀ D¸Á颸ÀÄwÛzÀÝ PÀ£ÀßqÀzÀ ªÀÄPÀ̼À£ÀÄß gÀAUÀPÉÌ vÀgÀĪÀ PÀÄjvÀÄ ªÉÆzÀ®Ä 0iÉÆÃa¹zÀªÀgÀÄ UÀĩ⠫ÃgÀtÚ£ÀªÀgÉÃ. CzÀ£ÀÄß CªÀgÀÄ PÁ0iÀÄðgÀÆ¥ÀPÀÆÌ vÀ0zÀgÀÄ. CzÀÆ 1925 gÀ°è0iÉÄÃ.      1      ªÀÄPÀ̽UÁV0iÉÄà ¥ÀævÉåÃPÀªÁzÀ £ÁlPÀUÀ¼À£ÀÄß ªÀÄPÀ̽0zÀ¯Éà ¥ÀæzÀ²ð¸À¨ÉÃPÉ£ÀÄߪÀ D¸É «ÃgÀtÚ£ÀªÀjVvÀÄÛ. CzÀPÁÌV ©üêÀÄgÁdÄ CªÀj0zÀ `¸Á«w’æ J…
ಲೇಖಕರು: vijayamma
ವಿಧ: Basic page
April 01, 2007
೩೬-೨೬-೩೬. ಇಂಥಾ fiಗರ್ ಯಾರದ್ದೂಂತಿರಾ? ಬೆಂಗಳೂರಿನ ಹವಮಾನ ಇಲಾಖೆಯದ್ದು."ಗರಿಷ್ಟ-ಕನಿಷ್ಟ"ಉಷ್ಣಾಂಶಗಳು. ಕೊನೆಯ "೩೬" ಎನೂಂದಿರಾ? ಅದು ವಿಮಾನನಿಲ್ದಾಣದ್ದು.ಅವರಿಗೆ ಬೇಕಾದಷ್ಟು ಬಜೆಟ್ ಮಂಜೂರಾದರೆ ಟಿ.ವಿ. ಟವರ್ ಮೇಲಿನ,ಲಾಲ್ ಬಾಗ್ ಒಳಗಿನ ವಿದಾನಸೌಧದ ಒಳಹೊರಗಿನ ಉಷ್ಣಾಂಶಗಳನ್ನು ಪ್ರಕಟಿಸುತ್ತಿದ್ದರೋ ಏನೋ! ಆದರೆ ನಾನೀಗ ಹೇಳಲು ಹೊರಟಿರುವ ಹೀಟ್ ಬಾಡಿಗೂ ಉಷ್ಣಾಂಶದ ಏರಿಳಿತಕ್ಕೂ ಏನೂ ಸಂಬಂಧವಿಲ್ಲಾ.ನೋಡಿ ಡಿಸೆಂಬರನ್ನು ಚಳಿಗಾಲ ಎನ್ನುತ್ತಾರೆ. ಅಲ್ಪ ಸ್ವಲ್ಪ ಚಳಿಯೂ…
ಲೇಖಕರು: radhakrishna anegundi
ವಿಧ: Basic page
April 01, 2007
ಏಕಾಂತವಿದೆ ಗೆಳತಿ ಬದುಕಿನುದ್ದ ಏಕಾಂಕವಿದೆ ಗೆಳತಿ ಜೀವನುದುದ್ದ ನಾನು ಬಣ್ಣ ಹಚ್ಚುತ್ತೇನೆ ನೀನೆ ಪ್ರೇಕ್ಷಕಿ ತೆರೆ ಸರಿಯುತ್ತದೆ ಬಣ್ಣದೊಳಗು ಬೆವರು ಸುರಿಯುತ್ತದೆ ಮಾತು ಹೊರಡುವುದಿಲ್ಲ ನಿನ್ನ ಮುಖದಲ್ಲಿ ನನ್ನ ಮಾತು ಬಣ್ಣ ನನ್ನ ಮುಖದಲ್ಲಿ ತೆರೆ ಮುಚ್ಚುತ್ತದೆ ಬಣ್ಣ ಕಳಚಿಹೋಗುತ್ತದೆ ಒಂದುಗೂಡುತ್ತೇವೆ ಬಣ್ಣ ಕಳಚುವ ಕೋಣೆಯಲ್ಲಿ ವಿಮರ್ಶೆಯಿಲ್ಲದೆ...... ರಾಧಾಕೃಷ್ಣ ಆನೆಗುಂಡಿ