ವಿಧ: Basic page
March 28, 2007
ಹುಚ್ಚೆದ್ದು ಕುಣಿವ ಹುಚ್ಚು
ಮನಸಿನ ಬಾವನೆ ಗಳಿಗೆ ನಿನ್ನ
ಹೃದಯದ ಬಾಗಿಲು ಮುಚ್ಚಿರಲಿ
ಅಚ್ಚು ಮೆಚ್ಚಿನ ಶುಚಿತ್ವದ
ಮನಸಿನ ಬಾವನೆಗಳಿಗೆ ನಿನ್ನ
ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ
ಪ್ರಿಯ ಮಿತ್ರರೇ
-ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
ವಿಧ: Basic page
March 28, 2007
*ನನ್ನ ಸ್ವಪ್ನ ಸುಂದರಿ*
ಕಣ್ಮುಚಿದರೆ ಬರುವಳು
ಮನದ ಮನೆಯೊಳಗೆ
ಕುಣಿದು ನಲಿವಳು
ನನ್ನ ಸ್ವಪ್ನ ಸುಂದರಿ
ನನ್ನವಳು
ಚಲುವೆಯರಲ್ಲಿ ಚಲುವೆ
ರಂಬೆ ಅಪ್ಸರೆಯ ನಾಚಿಸುವಳು
ಪರಿಮಳ ತುಂಬಿದ ಪಾರಿಜಾತ
ನನ್ನ ಸ್ವಪ್ನ ಸುಂದರಿ
ನನ್ನವಳು
ಮಾತು ಕನ್ನಡ ಕಸ್ತೂರಿ
ಮಾತಿನಿಂದಲೇ ಮಾಡಿದಳು
ನನ್ನ ಮನಸೂರೆ ವಯ್ಯಾರದ ನೀರೆ
ನನ್ನ ಸ್ವಪ್ನ ಸುಂದರಿ
ನನ್ನವಳು
ಮಂದಹಾಸ ಚೆಲ್ಲಿ
ನನ್ನ ಸ್ವಾಗತಿಸುವಳು
ಹೆಜ್ಜೆ ಮೇಲೆ ಹೆಜ್ಜೆ ಅಂದಿಗೆ ಕಾಲ್ಗೆಜ್ಜೆ
ನೀರಾದವಳೇ
ನನ್ನ ಸ್ವಪ್ನ ಸುಂದರಿ
ನನ್ನವಳು ಕೆನೆ ಹಾಲಕೈಗೆ ನೀಡಿ…
ವಿಧ: Basic page
March 28, 2007
"ಯಾರೀಕೆ" (ನನ್ನ ಕನಸಿನ ಕೋಮಲೆ)
ನೀಲಿ ಬಾನಿನ ನವ ಚಂದ್ರಿಕೆ
ಯಾಕೆ ಬಂದಳೋ ಭೂಮಿಗೆ
ಯಾಕೆ ಕಂಡಳೋ ಕಣ್ಣಿಗೆ
ಮಾತನಾಡಿಸೋ ಮುನ್ನ
ಮನವ ಸೇರಿದಳು (ಚಿನ್ನ) ನನ್ನ
ನೂರು ದೀವಿಗೆ ಬೆಳಕು ಅವಳು
ಉಟ್ಟಿಹ ಸೀರೆಯೊಳಗಿನ ಮಿಣುಕು
ನೂರು ತಾರೆಗೂ ಅಣಕು ಅವಳ ಮೈ ಮಾಟದ ಬೆಡಗು
ಯಾರು ನೋಡದಾ ಚಲುವೆ ಜಾರಿ ಬಂದಳು ಹೊತ್ತು ಒಲವೆ
ನನ್ನ ಮನಸೊಂದು ಪುಷ್ಪಕಾ ವಿಮಾನ
ಅದರಲ್ಲಿ ಅವಳ ಯಾನ
ನನ್ನೆದೆಯು ಮಿಡಿವ ಗಾನ ಅವಳದೆ ಒಲವರಾಗ
ನನಗವಳೇ ದೇವಯಾನಿ ನಾ ಅವಳ ಅಭಿಮಾನಿ
ನನ್ನೆದೆಯ ರತ್ನಸಿಂಹಾಸನದಲ್ಲಿ
ರಾರಾಜಿಸುವ ರಾಣಿ…
ವಿಧ: ಬ್ಲಾಗ್ ಬರಹ
March 28, 2007
ಶ್ರೀರಾಮ ನವಮಿಯ ದಿನದಂದು ಎಲ್ಲೆಲ್ಲೂ ಪಾನಕ-ಕೋಸಂಬರಿ ವಿತರಣೆ ನಡೆಯಿತು. ಈ ಸುದ್ದಿ ದಿನಪತ್ರಿಕೆ, ರೇಡಿಯೋ/ಟಿ.ವಿ. ವಾರ್ತೆ ಇವುಗಳಲ್ಲಿ ಎಲ್ಲ ಬಿತ್ತರಗೊಂಡಿದ್ದೇನೋ ಸರಿ. ಆದರೆ, ಇದೇ ದಿನ ಸಂಜೆಯ ವೇಳೆಗೇ ಪಾನ(ಕ) ಸಮಾರಾಧನೆ ಹೆಚ್ಚೇ ನಡೆಯುತ್ತಿತ್ತು. ಎಂದಿನಂತೆ ಬಾರು-ರೆಸ್ಟೋರಂಟುಗಳ ನಂಟಿನಲ್ಲಿ ಪಾನ ಸಮಾರಾಧನೆ ಅವ್ಯಾಹತವಾಗಿ ನಡೆಯುತ್ತಿತ್ತು. ಅನೇಕ ಹಬ್ಬಗಳ (ಉದಾ: ಶಿವರಾತ್ರಿ, ಕೃಷ್ಣಾಷ್ಟಮಿ, ಇತ್ಯಾದಿ) ಒಂದೆರಡು ದಿನಗಳ ಮುಂಚೆಯೇ ಪತ್ರಿಕೆಗಳಲ್ಲಿ `ಮದ್ಯ-ಮಾಂಸ' ಮಾರಾಟ…
ವಿಧ: Basic page
March 27, 2007
ಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ನನ್ನೊಳಗೆ ಸಂವಾದಿಯಾಗಿ ನಿಲ್ಲಬಲ್ಲವು. ನಾನು ಮತ್ತು ನನ್ನಂಥವರು ಈ ಕಾಲಘಟ್ಟದಲ್ಲಿ ಅದ್ಯಾವುದೋ ಆವರಣದೊಳಕ್ಕೆ ಸಿಲುಕಿ ಗೊಂದಲ ಹಾಗು ಅಗತ್ಯವಾಗಿರಬಹುದಾದ,ಅನಗತ್ಯವಾಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ…
ವಿಧ: Basic page
March 27, 2007
ನನ್ನ ಬದುಕಿಗೆ
ಹಸಿರಾದವಳು ನೀನು
ನನ್ನ ಉಸಿರಿಗೆ
ಮಲ್ಲೆ ಮಲ್ಲಿಗೆ ಪರಿಮಳ
ಸುರಿದವಳು ನೀನು
ನನ್ನ ಕನಸಿಗೆ ಬಣ್ಣ
ಬಳಿದವಳು ನೀನು
ನನ್ನ ಜಡನಡಿಗೆಗೆ
ಚೈತನ್ಯ ತಂದವಳು
ನೀನು
ನನ್ನ ಜೀವದ ಜೀವಕ್ಕೀಗ
ವಿರಸದ ವಿಷವ ಸುರಿದು
ಹೋಗುವೆಯಾ.....?
ನೀನು ನನ್ನ ಮರೆತು
ಬದುಕಲಿಚ್ಚಿಸುವೆಯಾ...?
-ಕೃಷ್ಣಮೊರ್ತಿ ಅಜ್ಜಹಳ್ಳಿ
ವಿಧ: Basic page
March 27, 2007
ಏನು ಫಲ
ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ
ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ
ಸ್ನಾನ ಪಾನಕೆ ಒದಗುವ ಜಲ ತಾ
ಕಾನನದಲ್ಲಿದ್ದರೇನು ಫಲ
ಗುಟ್ಟು -ಕ್ಷಮಾ ಗುಣ ವಿಲ್ಲದ ಹೆಣ್ಣಲ್ಲಿ
ಸೌಂದರ್ಯ-ಸಿರಿ ತಾನಿದ್ದೇನು ಫಲ
ಸತ್ಯ,ಶ್ರದ್ದೆ ಇಲ್ಲದ ಶರಣನು
ಸಾವಿರ ಜಪವನು ಮಾಡಿದರೇನು ಫಲ
ಮುಕ್ತಿ ಮಾರ್ಗವ ಕೊಡುವಾ ಶ್ರೀಹರಿಯ
ಮನದಲಿ ನೆನೆಯದ ಮನುಜನು ಬದುಕಿದ್ದೇನು ಫಲ
"ಜೀವನ"
ಹೂವ ಹಾಸಿಗೆಯೊ
ಅಲ್ಲ
ಮುಳ್ಳಿನ ಮಂಚವೂ
ಅಲ್ಲ
ಎಲ್ಲ ಸುಖ ದುಖಗಳ
ಅನುಬವಿಸಿದ ಒಳ್ಳೆಯ
ಹೃದಯದಲ್ಲಿ ಅರಳಿದ
ಕೆಂಪು…
ವಿಧ: Basic page
March 27, 2007
ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...
ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡ ಸಾ೦ಸ್ಕೃತಿಕ ಜಗತ್ತಿಗೆ ನಮಗೆ ನೇರ ಕಿ೦ಡಿಯಾಗಿದ್ದುದು ವರ್ಷಕ್ಕೊಮ್ಮೆ ಅಲ್ಲಿ ಬರುತ್ತಿದ್ದ ನೀನಾಸ೦ ತಿರುಗಾಟ…
ವಿಧ: ಬ್ಲಾಗ್ ಬರಹ
March 27, 2007
ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸಂಚಿಕೆ ಅದ್ಹೇಗೋ ನನ್ನ ಮನೆಯಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆಯಿತು.. ಆ ವಿಶೇಷ ಲೇಖನದ ತುಣುಕುಗಳನ್ನಿಲ್ಲಿ ಕೊಡತ್ತಿದ್ದೇನೆ [http://youthtimes.blogspot.com|ಹಿಂದೂಅಮೆರಿಕಾ]ಪೌರ್ವಾತ್ಯರದ್ದು ಧರ್ಮಪ್ರಧಾನವಾದ ಬದುಕು. ಪಾಶ್ಚಾತ್ಯರದ್ದು…
ವಿಧ: ಬ್ಲಾಗ್ ಬರಹ
March 27, 2007
ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು A quick brown fox jumps over the lazy dog. ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲ ಅಕ್ಷರಗಳಿವೆ. ಅಂತಹುದೇ ವಾಕ್ಯ ಕನ್ನಡಕ್ಕೆ ಬೇಡವೇ? ಇಗೋ ಈಗ ಅದೂ ಸಿದ್ಧವಾಗಿದೆ. ಹೆಚ್ಚಿನೆ ಮಾಹಿತಿಗೆ [http://vishvakannada.com/node/359|ಇಲ್ಲಿ ಕ್ಲಿಕ್ಕಿಸಿ].
ಸಿಗೋಣ,
ಪವನಜ