ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
March 27, 2007
ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ್ದರೂ ಟ್ಯಾಗ್‍ಗಳ ಬಳಕೆ ಮಾಡಬೇಕು. ನೀವಿದನ್ನು ಗಮನಿಸಿದ್ದೀರಾ?ನಿಮ್ಮ ಪ್ರತಿಕ್ರಿಯೆಯಿದೆಯೇ?
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
March 27, 2007
ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ, a,e,i,o,u ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು. ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ. ಒಟ್ಟು ಹತ್ತಾಯ್ತು. ಉಳಿದ ಐ,ಔ,ಅಂ ಮತ್ತು ಅಃ ಗಳನ್ನು ವೆಂಜನಗಳನ್ನು ಬಳಸಿಯೇ ಬರೆಯಬಹುದು. ಅಯ್, ಅವ್, ಅಮ್, ಮತ್ತು ಅಹ. ಇನ್ನೊಂದು important ಹೋಲಿಕೆ ಏನು ಅಂದ್ರೆ, ಕನ್ನಡದಲ್ಲಿ ಕ್ಷ ಮತ್ತು ಜ್ಞ್ ಗಳು ಕೊನೆಯಲ್ಲಿ ಬರುವಂತೆಯೇ,…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 27, 2007
ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು ಗುರುತಿಸಲು ಎಂದು ಕೇಳಿದ್ದರು. ನಿಜವಾಗಿ ಹೇಳಿದರೆ. ಅಷ್ಟೇ ಸಾಲದು. ಹಾಗಾಗಿ, ಈ ಬಾರಿ ಆ ವಿಷಯವನ್ನು ಸ್ವಲ್ಪ ಹೇಳುವೆ. ಏಳು ಸ್ವರವು ಸೇರಿ ಸಂಗೀತವಾಯಿತು ಎಂಬ ಚಿತ್ರಗೀತೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಈ ಏಳು ಸ್ವರಗಳನ್ನು ನಾವು ಷಡ್ಜ, ರಿಷಭ…
ಲೇಖಕರು: anivaasi
ವಿಧ: Basic page
March 27, 2007
ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ…
ಲೇಖಕರು: thewiseant
ವಿಧ: ಬ್ಲಾಗ್ ಬರಹ
March 26, 2007
ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಪರಮಹಂಸ ಯೋಗಾನಂದರು ಒಬ್ಬ ಪ್ರಸಿದ್ದ ಯೋಗಿ. ಇದೊಂದು ಯೋಗಿಗಳ ಬಗ್ಗೆ ಒಬ್ಬ ಯೋಗಿಯೇ ಬರೆದ ಅಪರೂಪದ ಕೃತಿ. ತಾವು ಕಂಡು ಅನುಭವಿಸಿದ ಘಟನೆಗಳನ್ನು…
ಲೇಖಕರು: kavanapriya
ವಿಧ: Basic page
March 26, 2007
ಬೆವರ ಸುರಿಸಿ ಉತ್ತು ಬಿತ್ತು ದವಸ ದಾನ್ಯ ಬೆಳೆದುಇತ್ತವರೇ ತಮಗಿಲ್ಲದಿದ್ದರೂ ನಮಗೆ ನೀಡಿದವರೇ ಸೊಗಸಾಗಿ ಮಾಡಿ ತಿಂದು ಉಂಡು ಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ) ಕಲ್ಲು ಹೊತ್ತು ಕುಳಿ ಕಿತ್ತು ಮನೆ ಕಟ್ಟಿ ಬಣ್ಣ ಹೊಡೆದು ನಮಗೆ ನೆಲೆ ಮಾಡಿದವರೆ ಕೂಲಿ ಪಡೆದು ನಮ್ಮ ಮರೆತು ಹೋದವರೆ ಮನೆ ಬಹಳ ದೊಡ್ಡದೆಂದು ಬಂಧು ಬಳಗ ಬಂದು ನೆಲೆಸಿ ನೆರಳ ಸುಖವ ಪಡುವವರೆ ಯಾರು ನನ್ನವರು ಅಂಗಳದಲೆಲ್ಲ ಕಸ ಕಡ್ಡಿ ಹರಡಿ ಮಣ್ಣು ಮಸಿ ಎಲ್ಲ ಕದಡಿ ಮನೆಯಂಗಳದಲ್ಲಿರುವ ಹೊಗಿಡಗಳ ತುಳಿದು ಹಾಳು ಮಾಡುವ ಮನೆ ಮಕ್ಕಳು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
March 26, 2007
ಹೋದ ಭಾನುವಾರ (ಮಾರ್ಚ್ ೧೮) ಸಿಡ್ನಿ ಹಾರ್ಬರ್‍ ಬ್ರಿಡ್ಜ್‌ಗೆ ೭೫ ವರ್ಷ ತುಂಬಿದೆ. ಅದರ ನಿಮಿತ್ತ ಎಲ್ಲರಿಗೂ ಆ ದಿನ ಸೇತುವೆ ಹಾಯಲು ಅವಕಾಶವಿತ್ತು. ಮೊದಲೇ ನೋಂದಾಯಿಸಿಕೊಂಡು ೧೧ ಗಂಟೆಗೆ ನಾವೂ ಹಾಯ್ದೆವು. ಆಸ್ಟ್ರೇಲಿಯಾದಲ್ಲಿ ಒಂದು ಪರಂಪರೆಯಿದೆ. ಯಾವುದೇ ಹೊಸ ಸೇತುವೆಯೋ, ಕಟ್ಟಡವೋ ಕಟ್ಟಿದರೆ ಅದರ ಉದ್ಘಾಟನೆಯ ದಿನ 'ಜನ ಸಾಮಾನ್ಯ'ರಿಗೆ ಅದನ್ನು ಹೊಗುವ, ಸುತ್ತುವ, ಹಾಯುವ ಅವಕಾಶ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ನನಗೆ ಗೊತ್ತಿರುವ ಹಾಗೆ, ಸಿಡ್ನಿಯ ಆನ್‌ಝಾಕ್‌ ಸೇತುವೆ,…
ಲೇಖಕರು: hpn
ವಿಧ: Basic page
March 25, 2007
ಭಾಷಾ ತಜ್ಞರಾದ ಕೆ ವಿ ನಾರಾಯಣರ ಬ್ಲಾಗು [:http://wordworth.sampada.net/|ಈಗ 'ಸಂಪದ' ಓದುಗರಿಗೆ ಲಭ್ಯ]. ಈ ಹೊಸ ಬ್ಲಾಗಿನಲ್ಲಿ ತಮ್ಮ ಸಂಪದ user id ಮತ್ತು ಪಾಸ್ವರ್ಡನ್ನೇ ಬಳಸಿ ಸದಸ್ಯರು ಕಾಮೆಂಟುಗಳನ್ನು ಸೇರಿಸಬಹುದು. ನಾರಾಯಣರೊಂದಿಗೆ ಚರ್ಚಿಸಬಹುದು.
ಲೇಖಕರು: ವಿನಾಯಕ
ವಿಧ: Basic page
March 24, 2007
ನನ್ನ ಮುಡಿಯ ಮಲ್ಲಿಗೆಯಲಿನನ್ನತನವೆ ಅಡಗಿದೆಅಂದದೊಡನೆ ಬೆರೆತ ಗಂಧನನಗು ಅದಕು ತಿಳಿದಿದೆ ಎಲ್ಲೊ ಒಂದು ತೊರೆಯ ಜಲದಸಾಕುವಿಕೆಗೆ ಚಿಗುರಿದೆಭೂಮಿತಾಯ ಅಪ್ಪುಗೆಯಲಿಒಲುಮೆಯೊಡಲಲಡಗಿದೆ ಜಾವದೊಡೆಯ ಒಲವ ಗೆಳೆಯರವಿಯ ಬರವಿಗರಳಿದೆಮಧುರ ಸಮಯ ಮಧುರ ಸ್ಪರ್ಶಮಧುರ ಮಿಲನಕುರುಳಿದೆ ಒಲವ ಪಾಠ ಪ್ರಣಯದೂಟಹರೆಯ ಬಂದ ಮಲ್ಲಿಗೆಬೆಳಕ ಕೊಟ್ಟ ರವಿಗೆರೆದಳುಪರಿಮಳಗಳ ಮೆಲ್ಲಗೆ ಮತ್ತೆ ಬಂದಳೆನ್ನ ಮುಡಿಗೆಎಲ್ಲ ಬಿಟ್ಟ ವಿರಹದಿನನ್ನ ಗಂಧವೆಲ್ಲ ನಿನಗೆಅಂದಳೆನ್ನ ತರಹದಿ ನನ್ನ ಮುಡಿಯ ಮಲ್ಲಿಗೆಯಲಿನನ್ನದೇನೆ ಕಂಪನಒಂದು…
ಲೇಖಕರು: bhcsb
ವಿಧ: ಬ್ಲಾಗ್ ಬರಹ
March 24, 2007
ಶ್ರೀ ರಾಮ ನವಮಿ ದಿನಾಚರಣೆ ಚೈತ್ರ ಶುಕ್ಲ ನವಮಿ ದಿನದಂದು ಶ್ರೀ ರಾಮ ಜನ್ಮದಿನ. ಈ ದಿನವನ್ನು ಭಾರತದ ಎಲ್ಲೆಡೆಯೂ ಆಚರಿಸುತ್ತಾರೆ. ಶ್ರೀರಾಮ ನಾಮ ಸಂಕೀರ್ತನೆಗಳು, ಸಂಗೀತ ಕಾರ್ಯಕ್ರಮಗಳೂ ಸಹ ನಡೆಯುತ್ತವೆ. ಇಂತಹ ಸುದಿನದಲ್ಲಿ ಶ್ರೀ ತ್ಯಾಗರಾಜರ ರಚನೆಯೊಂದು ಇಲ್ಲಿದೆ. ಕೆಳಗಿನ ಕೊಂಡಿಯನ್ನು ಸಂಪರ್ಕಿಸಿ. ಶ್ರೀರಾಮ ಭಜನೆ