ಎಲ್ಲ ಪುಟಗಳು

ಲೇಖಕರು: suresh_k
ವಿಧ: Basic page
March 30, 2007
ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವಿದ್ದವರು ಸುಮ್ಮನೆ ಬೆಂಗಳೂರಿನ ಬೀದಿಗಳಿಗೆ ಕಿವಿ ತೆರೆದಿಟ್ಟು ಕುಳಿತುಕೊಳ್ಳಿ. ಚಿತ್ರ ವಿಚಿತ್ರ ಸ್ವರ, ಸದ್ದುಗಳು ಬಂದು ಅಪ್ಪಳಿಸುತ್ತವೆ: ರಾತ್ರಿಯಿಡೀ ಕುಡಿದೂ ಕುಡಿದೂ ತೂರಾಡಿ ಎಗರಾಡಿ ಮಲಗಿದ್ದ ಆಚೆ ಮನೆಯವನು ಬೆಳಿಗ್ಗೆ ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡವನಂತೆ `ಕ್ರ್ಯಾ...' ಎಂದು ಸರಿಪಡಿಸಿಕೊಳ್ಳುತ್ತಾ, ಕಂಡ ಕಂಡಲ್ಲಿ ಉಗಿಯುವ ಸದ್ದನ್ನು ಕೇಳಿಸಿಕೊಂಡರೆ ನಮ್ಮ ಮೈಮೇಲೇ ಉಗಿದುಬಿಟ್ಟನೇನೋ ಎಂಬಷ್ಟು ಜಿಗುಪ್ಸೆಯಾಗಿಬಿಡುತ್ತದೆ. ರಾತ್ರಿ ಜಗಳವಾಡಲು…
ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
March 30, 2007
ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕಡುವಾ ಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ ಹೆಚ್ಚಿಸುತ್ತಲೇ ಇದ್ದಾರೆ. ನಮ್ಮ ಕಾಲೇಜು ಹುಡುಗ ಹುಡುಗಿಯರು ಈ ಸೀರಿಯಲ್‍ಗಳನ್ನು ಬೈಯ್ಯುತ್ತಲೇ ಕದ್ದು ಮುಚ್ಚಿ ತಮ್ಮ ಪ್ರೇಮಿಗಳಿಗಾಗಿ ಉಪವಾಸ ಮಾಡುವುದು, ಕಡುವಾ ಚೌತ್ (ನಂಬಿದರೆ…
ಲೇಖಕರು: ananth_hs
ವಿಧ: Basic page
March 30, 2007
ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿನಲ್ಲಿ ಇರುವ 25 ಜನರಲ್ಲಿ 12 ಜನ ಕನ್ನಡಿಗರು ಮತ್ತು ಉಳಿದವರು ಹೊರ ರಾಜ್ಯದವರು. ಹೊರ ರಾಜ್ಯದ ಜನರಿಗೆ ಕನ್ನಡದ ಒಂದು ಚಲನಚಿತ್ರವನ್ನು ಕನ್ನಡದ ಜನರು ಪ್ರಾಯೋಜಿಸುವುದು ನಮ್ಮ ಯೋಜನೆ. ನಮ್ಮ ಯೋಚನೆಗೆ ಬಂದ ಚಿತ್ರ "ಮುಂಗಾರು ಮಳೆ". ಬೇರೆ ರಾಜ್ಯದ ಗೆಳೆಯರಲ್ಲಿ ಅನೇಕರು…
ಲೇಖಕರು: sindhu
ವಿಧ: Basic page
March 29, 2007
ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು. "ಕಾಳಜಿ ಮಾಡಬೇಡಿ ಸಾಬ್, ಬೇಗ ಬಲುಬೇಗ ಗುಣವಾಗ್ತೀರಿ, ನಿಮ್ಮ ಮೊಮ್ಮಗಳ ಮದುವೆ ಖಂಡಿತ ನೋಡ್ತೀರಿ. ನನ್ನ ಈ ರಾತ್ರಿಯ ದುವಾ ಇದೆ ನಿಮಗೆ" ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ…
ಲೇಖಕರು: krishnamurthy bmsce
ವಿಧ: Basic page
March 29, 2007
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ  ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ  ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ  ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ"  ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ  ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ  ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ"  ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ…
ಲೇಖಕರು: krishnamurthy bmsce
ವಿಧ: Basic page
March 29, 2007
"ನನಗೊಂದು ಹೆಣ್ಣು ಬೇಕು    ಅವಳು ಈಗಿರಬೇಕು(ಹೀಗಿರಬೇಕು)" ಮನದ ಮೃದಂಗ  ನುಡಿಸಿ  ಎದೆಯಲ್ಲಿ ಪ್ರೇಮರಾಗ ಮಿಡಿವಂತೆ   ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ ಅರಿವಿನ ಅ(ಹ)ರಿಣಿ ಅವಳಾಗಬೇಕು ಜೀವಕ್ಕೆ ಉಸಿರು-ಹಸಿರಾಗ ಬಯಸುವ ಚೈತ್ರ ಚಲುವ ಹೆಣ್ಣಾಗಿರಬೇಕು ಬರಡಾದ ಬದುಕಿಗೆ ಜೀವಕಳೆಯ ತುಂಬಬಲ್ಲ ಹೆಣ್ಣು ಅವಳಾಗಬೇಕು    ಬತ್ತಿದೆದೆಯಲ್ಲಿ ಬರವಸೆಯ ಜಲವ ತುಂಬುವಂತಹ ತರುಣಿ ಅವಳಾಗಬೇಕು ಮನದ ಮೌನ ಮುರಿದು ಜೀವದಲಿ ಹೊಸಕಳೆಯ…
ವಿಧ: ಚರ್ಚೆಯ ವಿಷಯ
March 28, 2007
ಸ್ವಾಮಿ, ಸಂಪದದಲ್ಲಿ ಕೆಲವೊಮ್ಮೆ ಆಗುವ ವಾದ ವಿವಾದಗಳನ್ನು ನೋಡಿದರೆ, ಹೀಗೆ ಅನ್ನಿಸಿದ್ದಿದೆ, ನಾವ್ಯಾಕೆ ನಮ್ಮ ಸಮಾಜ ನಮ್ಮ ಮೂಗಿನ ನೇರಕ್ಕೇ ಇರಬೇಕು ಅಂತ ಆಸೆ ಪಡ್ತೀವಿ? ಅದೂ, ನಮ್ಮ ಮೂಗಿನ ನೇರದಲ್ಲಿ ಏನಿದೆ ಅನ್ನೋದನ್ನೂ ಸರಿಯಾಗಿ ಅರ್ಥೈಸಿಕೊಳ್ಳದೇ.. ಅಂದರೆ, ನಾವುಗಳು ನಮ್ಮನ್ನೇ‌ 'ಸಮಾಜ್ ಕೇ ಟೇಕೇಧಾರ್' ಅಂತ ಘೋಷಿಸಿಕೊಳ್ಳೋದಿಂದಾನೇ ಹೀಗೆ ಹೊಡೆದಾಡಿಕೊಳ್ಳುವುದು, ನಾನು ಹೇಳಿದ್ದೇ‌ಸರಿ, ನಾನು ಹೇಳಿದ್ದೇ‌ಸರಿ ಅಂತ ನನ್ನ ಅನಿಸಿಕೆ ;).. ಈ ಪದವಿಯಿಂದೀಗಲೇ ರಿಸೈನ್ ಮಾಡಿಬಿಡುವ…
ಲೇಖಕರು: hpn
ವಿಧ: ಕಾರ್ಯಕ್ರಮ
March 28, 2007
ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಈನಿಯಡ್   (ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ) ಮತ್ತು ಶ್ರೀಮತಿ ಸುನಂದಾ ಬೆಳಗಾಂವಕರ ಅವರ ಕಜ್ಜಾಯ (ಲಲಿತ ಪ್ರಬಂದಹಗಳು) ೦೧-೪-೨೦೦೭ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ. ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪ (ಅಂಕಿತ ಪುಸ್ತಕ)
ಲೇಖಕರು: krishnamurthy bmsce
ವಿಧ: Basic page
March 28, 2007
ನಿನ್ನ ಕೀರ್ತಿ ಏರಲಿ ದಿಗಂತ ನಿನ್ನ ಸಾದ(ಧ)ನೆಗೆ ನನ್ನ ಹೃದಯಾಭಿನಂದನೆ ಅನಂತಾನಂತ ಸದಾ ಹಸಿರಾಗಿರಲಿ ಪ್ರೀತಿ,ವಾತ್ಸಲ್ಯ,ಅನುಕಂಪ ನಿನ್ನಲ್ಲಿ ಸಿರತ ಬದುಕಲ್ಲಿ ಗೆಲುವು ಸಿಗಲಿ ನಿನಗೆ ಸತತ -ವೆಂ ಕೃ ಬಿ ಎಂ ಎಸ್ ಸಿ ಇ  
ಲೇಖಕರು: krishnamurthy bmsce
ವಿಧ: Basic page
March 28, 2007
ಮಂಜು ಮಾಲಿನಿ ತುಂಬಿರುವೆ ನನ್ನ ಮನವ ನೀ ಕನಸು-ಕನವರಿಕೆಯಲ್ಲು ಕಾಂಬೆ ನೀ ಕಲಕಿದೆ ನನ್ನ ಮನದ ಕೊಳವ ನೀ ಮೊಡಿಸಿದೆ ಮನದಾಸೆ ನೀ ಮೌನದಲ್ಲಿದ್ದು ಮನಕೆ  ನೋವ ತುಂಬಿ ನನ್ನ ಜೀವ ಹಿಂಡುವೆ ಏಕೆ ನೀ ಬಂದು ನನ್ನ ಬಾಳ ಬೆಳಗಿಸು ಇದು ನನ್ನ ಹೃದಯದ ಪ್ರಾರ್ಥನೆ -ವೆಂ ಕೃ  ಬಿ ಎಂ ಎಸ್ ಸಿ ಇ