ಎಲ್ಲ ಪುಟಗಳು

ಲೇಖಕರು: hemashree
ವಿಧ: ಬ್ಲಾಗ್ ಬರಹ
April 01, 2007
ಕಳೆದ ಸುಮಾರು ಒಂದು ವರುಷದಲ್ಲಿ ನನ್ನ ಹತ್ತಿರದ ಸ್ನೇಹಿತರ ಪೈಕಿ ಹಲವರು ಮದುವೆ ಮಾಡಿಕೊಂಡರು. ಅದರಲ್ಲಿ ವಿಶೇಷವಾಗಿ ನನಗೆ ಖುಷಿ ಅನ್ನಿಸಿದ ಎರಡು ಮದುವೆಗಳ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ. ಒಂದು ಅಂತರ್ ಜಾತೀಯ ವಿವಾಹವಾದರೆ , ಇನ್ನೊಂದು ಅಂತರ್ ಧರ್ಮೀಯ ವಿವಾಹ . ಒಂದು ಸರಳ ವಿವಾಹ ; ಇನ್ನೊಂದು ವಿಧಿವತ್ತಾಗಿ ನಡೆದ ವಿವಾಹ. ಯಾವುದೇ ಧರ್ಮ - ಜಾತಿಯ ಕಟ್ಟುಪಾಡುಗಳನ್ನು ಅನುಸರಿಸದೆ ಸರಳವಾಗಿ ಹಾರ ಬದಲಾಯಿಸಿಕೊಂಡು ಸತಿ-ಪತಿಯಾದ ಒಂದು ಜೋಡಿ; ಎರಡೂ ಧರ್ಮದ ಕುಟುಂಬ ಸಮೇತ ಆಶೀರ್ವಾದ,…
ಲೇಖಕರು: hpn
ವಿಧ: ಚರ್ಚೆಯ ವಿಷಯ
April 01, 2007
೧೯೭೫ರಲ್ಲಿ ಪ್ರಕಟವಾದ ಬಿ ಜಿ ಎಲ್ ರವರ "ಕಾಲೇಜು ರಂಗ" ಪುಸ್ತಕಕ್ಕೆ ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯಲ್ಲಿ "ಕನ್ನಡದಲ್ಲಿ ಇವರು ಹೆಚ್ಚಾಗಿ ಬರೆದಿಲ್ಲ ಬರೆಯಬೇಕಾದದ್ದು ಬಹಳ ಇದೆ... [...] ... ಇನ್ನು ಮೇಲೆ ಪ್ರಕಟವಾಗಲಿರುವ 'ದೌರ್ಗಂಧಿಕಾಪಹರಣ' ಮತ್ತು 'ನೀನಾರ್ಗೆ' ಎಂಬ ಪುಸ್ತಕಗಳು ಸಸ್ಯಶಾಸ್ತ್ರವನ್ನೇ ಆಧಾರವಾಗಿಟ್ಟುಕೊಂಡವುಗಳು" ಎಂದು ಕುರ್ತಕೋಟಿಯವರು ಬರೆದಿದ್ದಾರೆ. ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ ನಾನು ಓದಿರುವೆ (ಪುಸ್ತಕ ಎರವಲು…
ಲೇಖಕರು: hemashree
ವಿಧ: ಬ್ಲಾಗ್ ಬರಹ
April 01, 2007
ಹೃದಯಕ್ಕೆ ಹತ್ತಾರು ಪ್ರಶ್ನೆಗಳ ಹಾಕಿ ಒಂಟಿಯಾಗಿ ಅಳುವ ತನ್ನನ್ನೇ ತಡಕಾಡಿಕೊಳ್ಳುವ ನಿನ್ನ ಮನಸು - ನನ್ನ ಒಂಟಿತನ - ಯಾಂತ್ರಿಕ ಜೀವನಕ್ಕೆ ಹೊಸ ಚಿಲುಮೆಯಾಗಿ ಬಂದವನು ನೀನು ! ಮರುಭೂಮಿಯಲ್ಲಿ ಜಲ ಸಿಕ್ಕಂತೆನಿಸಿ ಜೀವನ ಉತ್ಸಾಹವನ್ನು ಮತ್ತೆ ಪಡೆಯುತ್ತಿರುವೆ ನಾನು ! ತನಗಾಗಿ ಬದುಕಿ ಇತರರನ್ನೂ ಬದುಕಿಸುವ ನಿನ್ನ ಜೀವನ ಮೌಲ್ಯ ,ಪ್ರತಿಪಾದನೆ . . . ತಾನು ನಂಬುವ ಧ್ಯೇಯಗಳಿಗೆ ಪ್ರಾಮಾಣಿಕನಾಗಿರುವ ನಿಲುವು . . . ನಂಟು - ಆದರ, ಪ್ರೀತಿ - ವಿಶ್ವಾಸಕ್ಕೆ ಅರ್ಥ ಬಂದದ್ದು ನಿನ್ನನ್ನು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 01, 2007
ನಮ್ಮ ಬಹಳ ಹತ್ತಿರವಾಗಿರುವ ಕಾವ್ಯ ಸಂಪ್ರದಾಯವೆಂದರೆ ಗಾದೆಗಳು. ಇಂದಿಗೂ ಗಾದೆ ಹೇಳ್ತಾ ಮಾತಡೋದು ನಮ್ಮಲ್ಲಿ ಹಲವರಲ್ಲಿರುವ ಹವ್ಯಾಸ. ಈ ಮೇಲಿನ ತಲೆಬರಹವೂ ಕೂಡ ಒಂದು ಗಾದೆಯೇ!!!  ಗಾದೆ ಮೇಲೆ ಗಾದೆ. :) ೧) ಅಂಬಲಿ ಕುಡಿಯವ್ನಗೆ ಮೀಸೆ ಹಿಡಿಯೋನೊಬ್ಬ೨) ಮುಂಡೆ ಮಕ್ಕಳು ಮೂಗದಾರ ಇಲ್ದೇ ಇರೋ ಹೋರಿಯಂಗೆ೩) ಎತ್ತು ಈಯಿತು ಅಂದ್ರೆ ಕೋಣ ಕೊಟ್ಟಿಗೆಗೆ ಕಟ್ಟು೪) ಹಾಡ್ತಾ ಹಾಡ್ತಾ ರಾಗ ನರಳ್ತ ನರಳ್ತಾ ರೋಗ೫) ಪಾಪಿ ಸಮುದ್ರಕ್ಕೋದರೂ ಮೊಣ್ಕಾಲುದ್ದ ನೀರು೬) ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ(…
ಲೇಖಕರು: natekar
ವಿಧ: Basic page
March 31, 2007
ಇಂಗ್ಲಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ ಭಾರತ "ಇಂಗ್ಲಿಷ್" ಭಾಷೆಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷದ ಬಳಿ ಬಂದರೂ, "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಕೊರಳನ್ನು ಬಿಗಿಯತೊಡಗಿದೆ. ಇಂಗ್ಲಿಷನ್ನು ನಿರಾಕರಿಸಿದರೆ, ಗ್ರಾಮೀಣ ಮಕ್ಕಳ ಪಾಡಂತೂ ಉದ್ಯೋಗದ ಮಾರುಕಟ್ಟೆಯಲ್ಲಿ ಶೋಚನೀಯವಾಗುವುದು. ನಮ್ಮ ದೇಶದ ಬುದ್ಧಿವಂತ, ಕ್ರಿಯಾತ್ಮಕ ಗ್ರಾಮೀಣ ಪ್ರತಿಭೆಗಳನ್ನು, ನಗರದ "ಎಬಿಸಿಡಿ" ಪ್ರತಿಭೆಗಳು(?) ಅವಕಾಶ ವಂಚಿತರನ್ನಾಗಿಸುತ್ತಿರುವುದು ಸತ್ಯ.…
ಲೇಖಕರು: ಕೊಳ್ಳೇಗಾಲ
ವಿಧ: ಬ್ಲಾಗ್ ಬರಹ
March 31, 2007
ಮೊನ್ನೆ ಮಣಿಪಾಲದಲ್ಲಿ ನಡೆದ ಮುದ್ರಕರ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಎಂ . ವಿ. ಕಾಮತ್‌, ನಾಳಿನ ದಿನಗಳಲ್ಲಿ ಪತ್ರಿಕೆಗಳ ಭವಿಷ್ಯದ ಬಗ್ಗೆ ಮಾತನಾಡುತ್ತ "ಇನ್ನು ಮುಂದೆ ನಾವು ಎಲ್ಲವನ್ನೂ ಕೇಳುತ್ತೇವಷ್ಟೆ, ನೋಡಲಾಗುವುದಿಲ್ಲ," ಎಂದು ಕಳಕಳಿಯನ್ನು ವ್ಯಕ್ತ ಪಡಿಸಿದ್ದಾರೆ (ಡೆಕ್ಕನ್‌ ಹೆರಾಲ್ಡ್‌, ೩೧.೩.೨೦೦೭). ಪತ್ರಿಕೆಗಳೇ ಇಲ್ಲದಿದ್ದ ಪ್ರಪಂಚ ಹೇಗಿದ್ದೀತು? ಬಹುಶಃ, ಬೆಳಗಿನ ಕಾಫಿ ತುಸು ರುಚಿ ಕೆಡಬಹುದು. ನಿತ್ಯ ಸಂಡಾಸಿಗೆ ಪತ್ರಿಕೆ ಹೊತ್ತೊಯ್ಯುವವರಿಗೆ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
March 31, 2007
"ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು ವಾದಿಸಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಕರ್ನಾಟಕದಲ್ಲಿಯೇ ಇದಕ್ಕೆ ಸಂಬಂಧಿಸಿದ ವಿವಾದ ಉಂಟಾಯಿತು. ದಿಗಂಬರ ಪಂಥದ ಜೈನ ಮುನಿಯೊಬ್ಬರ ಬಗ್ಗೆ ಮಂಗಳೂರಿನ ಸಂಪಾದಕರೊಬ್ಬರು ಒಂದು ಪ್ರಶ್ನೆ ಎತ್ತಿದ್ದರು. ಅವರ ತರ್ಕ ಇಷ್ಟೇ. ಬೆತ್ತಲೆ ಪೂಜೆ ಒಂದು ಧಾರ್ಮಿಕ ಕ್ರಿಯೆಯೇ ಆದರೂ…
ಲೇಖಕರು: ASHOKKUMAR
ವಿಧ: Basic page
March 30, 2007
ಇ-ಲೋಕ-16 (30/3/2007) ದೂರದ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಕೇಬಲ್ ಲೈನುಗಳ ಮೂಲಕ ನೀಡುವುದು ತುಂಬಾ ದುಬಾರಿಯಾಗುವುದಿದೆ. ಇನ್ನು ನಿಸ್ತಂತು ಜಾಲದ ಮೂಲಕ ಅಂತರ್ಜಾಲ ನೀಡುವುದು ಸಾಧ್ಯವಾದರೂ ಸೀಮಿತ ಬಳಕೆಗಾಗಿ, ಈ ವ್ಯವಸ್ಥೆಯನ್ನು ಸ್ಥಾಪಿಸಲು ಸರಕಾರ ಅಥವಾ ಖಾಸಗಿಯವರು ಮನ ಮಾಡದಿರಬಹುದು.ಆಫ್ರಿಕಾ,ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಪ್ರಯೋಗಾರ್ಥ ನಡೆಸಲಾಗುತ್ತಿರುವ ಯೋಜನೆಯ ಪ್ರಕಾರ,ಹಳ್ಳಿಗಳಿಗೆ ಬಸ್ ಮೂಲಕ ಅಂತರ್ಜಾಲದ ಮಾಹಿತಿಯನ್ನು ಮುಟ್ಟಿಸುವ ಪ್ರಯತ್ನ ನಡೆದಿದೆ. ಬಸ್…
ಲೇಖಕರು: vikas_negiloni
ವಿಧ: Basic page
March 30, 2007
ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಈ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೇ ಸಾಗಿರುವ ಈ ಕುದುರೆ ಸವಾರ ಕೊನೆಗೊಮ್ಮೆ ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು…
ಲೇಖಕರು: ವೈಭವ
ವಿಧ: Basic page
March 30, 2007
ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್ತಾ ಇದ್ದೀನಿ. ಮೊದಲಿಗೆ, ಇಬ್ಬರ ಪದ್ಯಗಳು ಕಿವಿಗೆ ರಾಚುವಂತೆ ಇವೆ. ಬೇರೆಯವರು ಓದುವುದನ್ನು ಅಥವಾ ನೀವೆ ಓದುತ್ತಿದ್ದರೆ ಕೇಳುವುದಕ್ಕೆ ಹಿತವೆನಿಸಿ ನಿಮ್ಮ ಗಮನವನ್ನು ಸೆಳೆಯುತ್ತದೆ. ಅಂದರೆ ಶ್ರವಣತೆಗೆ ಒತ್ತು ಕೊಡಲಾಗಿದೆ. ಇದೇ ಈ ಇಬ್ಬರ ಪದ್ಯಗಳ ಜೀವಾಳ. ಉದಾ:…