ಎಲ್ಲ ಪುಟಗಳು

ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
March 24, 2007
ಹೊತ್ತು ಮೂಡುವ ಸಮಯಅರಳಿತೆರಡು ಹೂಗಳುಒಂದು ಕೆಂಪು ಒಂದು ಹಳದಿ ಸೂರ್ಯಗಿದ್ದವು ಎರಡೂ ಬಣ್ಣಹಳದಿ ಹೂಗೆ ಜಗವೆಲ್ಲ ಹಳದಿಕೆಂಪು ಹೂಗೆ ಜಗದಗಲ ಕೆಂಪು ಕೆಂಪು ತನ್ನ ಕಂಪು ಬೀರಿಹಳದಿಯನ್ನ ಮರೆಸಿತುಗದ್ಯ ಪದ್ಯವಾಗಿ ನೋವನೆಲ್ಲ ಮರೆಸಿತು ನೋವು ಸತ್ತ ಮೇಲೆ ಕೆಂಪುಕಣ್ಣು ತೆರೆದು ನೋಡಿತುಅಲ್ಲೆ ಪಕ್ಕ ಹಳದಿ ಬಿದ್ದು ನಲುಗಿತು ಇದೀಗ ಗೊತ್ತು ಮೂಡುವ ಸಮಯಕೆಂಪು ಕಣ್ಣು ತೆರೆಯಿತುಕಂಡಿತದಕೆ ಸುತ್ತ ಸತ್ತ ಹಳದಿ ಹಳದಿ... - ಅಭಯ
ಲೇಖಕರು: vasista2k
ವಿಧ: ಬ್ಲಾಗ್ ಬರಹ
March 24, 2007
ನಮಸ್ಕಾರ, ನಿದ್ದೆಯಿಂದ ನಾನು ಬಹಳ ಅನುಭವಿಸಿದ್ದೇನೆ. ನಿಮೊಂದಿಗೆ ಕೆಲವು ಸನ್ನಿವೇಶಗಳನ್ನು ಹೇಳಬಯಿಸುವೆ.. ಒಂದು : ನಾನು P.U. ಓದುತಿದ್ದಾಗ, ನನ್ನ ಅಕ್ಕಳನ್ನು ಮಂಗಳೂರಿಗೆ ಬಿಟ್ಟು ಉಡುಪಿಗೆ ಹಿಂದಿರುಗುತಿದ್ದೆ.. ಅವಾಗ ನಿದ್ದೆ ತಡಿಯದೆ ಮನಿಪಾಲ್ ಮುಟ್ಟಿದೆ.. ಅವಾಗ ಸಮಯ ರಾತ್ರಿ ೧೦ ಘಂಟೆ... ಅಲ್ಲೆಲ್ಲಾ ೧೦ ಆದ ತಕ್ಶಣ ಮನೆಗೆ right..... ನನಗೆ ಯಾವುದೆ bus ಸಿಗಲಿಲ್ಲ... ನಂತರ ೧ km ನಡೆದು ಬರುತಿದ್ದೆ.. ಒಬ್ಬ ಆಟೋದವನು ೨km ತನಕ ಬಿಟ್ಟ -- ಕಾರಣ ಅದು ಅವನ ಮನೆಗೆ ಹೂಗುವ ದಾರಿ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
March 24, 2007
ಮ್+ಊ ಟೈಪಿಸಿದರೂ ಮೂ ಕಾಣಿಸಿಕೊಳ್ಳುದಕ್ಕೆ ಪರಿಹಾರ ಇಲ್ಲವೇ? ಇಂತಹ ತಪ್ಪುಗಳು ಯುನಿಕೋಡಿನಲ್ಲಿ ಉಳಿದಿವೆಯೆನ್ನಿಸುತ್ತದೆ.ಇದಕ್ಕೆ ಪರಿಹಾರವೇನು?
ಲೇಖಕರು: ASHOKKUMAR
ವಿಧ: Basic page
March 24, 2007
ಅತಿರಥ ಮಹಾರಥರನ್ನು ಒಳಗೊಂಡ ನಮ್ಮ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲೇ ವಸ್ತುಶಃ ಹೊರಬಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಕೊಟ್ಟಿದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಆದರೂ ಭಾರತದ ಸೋಲನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಸಚಿನ್,ಗಾಂಗೂಲಿಯಂತಹ ನಮ್ಮ ಆಟಗಾರರಿಗೆ ಕರ್ಣನ ಹಾಗೆ ಕೊನೆಗಳಿಗೆಯಲ್ಲ್ಲಿ ಕಲಿತದ್ದನ್ನು ಮರೆಯಲಿ ಎಂಬ ಶಾಪ ಇದೆಯೇನೋ ಅನ್ನುವ ಅನುಮಾನ ಬರುತ್ತದೆ.ವಿಶ್ವಕಪ್ ಜ್ವರ ಉತ್ತುಂಗಕ್ಕೇರಿದ್ದರೆ ಹಲವು ಕಂಪೆನಿಗಳು ಕೋಟಿಗಟ್ಟಲೆ ಬಾಚುತ್ತಿದ್ದುವು. ಟಿವಿಯಂತಹ ಉತ್ಪನ್ನಗಳ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 24, 2007
ನಾಕುದಿನದ ಹಿಂದೆ ಆವರಣ ಬಂದು ಸೇರಿತು... ಬೇರೊಂದು ಕಡೆ, ಟಿಪ್ಪಣಿ ಸೇರಿಸಿದ ನಂತರ, ಇಲ್ಲಿಯೂ ಅದನ್ನೇ ಹಾಕೋಣ ಎನ್ನಿಸಿತು. ಮೋಹನ ರಾಗದ ಮೂರನೆ ಭಾಗವನ್ನು ಬರೆಯದೇ ಹೋದದ್ದಕ್ಕೆ ಇದೂ ಒಂದು ಕಾರಣ ತಾನೇ, ಅದಕ್ಕೆ ಇಲ್ಲಿಯೂ ಇರಲಿ ಎಂದುಕೊಂಡೆ :) ಆವರಣ ಬ್ಯಾನ್ ಆಗುವ ಮಾತೆಲ್ಲ ಬಂದಿರುವುದು, ಕಥೆಯಲ್ಲಿ ಲಕ್ಷ್ಮಿ ಬರೆಯುವ ಕಾದಂಬರಿಯನ್ನು ಪೋಲೀಸರು ಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭ ಬಂದಿರುವುದರಿಂದ ಎನಿಸುತ್ತದೆ. ನಿಜ ಹೇಳಬೇಕೆಂದರೆ, ತೀರಾ ಏನನ್ನೂ ಓದದಿದ್ದವರಿಗೆ ಕಥೆ ಆಘಾತಕಾರಿ…
ಲೇಖಕರು: sindhu
ವಿಧ: ಬ್ಲಾಗ್ ಬರಹ
March 23, 2007
ಅಲ್ಲಿ ಚಂದ ಗೋಡೆಯ, ಗಟ್ಟಿ ಮಾಡಿನ ಬೆಚ್ಚನೆ ಮನೆಯಲ್ಲಿ ಒಡೆದ ಕನ್ನಡಿ ಅಶುಭಸೂಚಕ. ಇಲ್ಲಿ ಮೋಟು ಗೋಡೆಯ, ಸೋಗೆ ಮಾಡಿನ, ಅರೆಮನೆಯಲ್ಲಿ, ಗೋಡೆ ತೂತು ಮುಚ್ಚಲೇನೊ ಎಂಬಂತೆ, ಹಚ್ಚಿರುವ ಒಡೆದ ಕನ್ನಡಿಯ ಚೂರಲ್ಲಿ, ಇಣಿಕಿ ನೋಡುತ್ತಿದ್ದಾಳೆ ಪೋರಿ, ಮುಗ್ಧ ಮೊಗದ ಮೇಲೆ ಬೆಳಕಿನ ಮಾಯಾಲೋಕ..! ನನಗಾದ ಅನ್ಯಾಯ, ಅವನಿಗೆ ಅತ್ಯವಶ್ಯಕ ಅನುಕೂಲ... [ ;-) ತಮ್ಮ ಹೇಳುತ್ತಾನೆ, ನೀನೆ ಅವಕಾಶ ಕೊಡದೆ ನಿನಗ್ಯಾರೂ ಅನ್ಯಾಯ ಮಾಡುವುದಿಲ್ಲ.. ] ನನಗೆ ಮೆಚ್ಚಿದ ಮೊಗ್ಗಿನ ದಂಡೆಯ ತಾಯಿ ಬಳ್ಳಿ ಅಳುತ್ತಿರಬಹುದು…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 23, 2007
'ಚಿಂದಿ' ಪದದ ಸರಿಯಾದ ಅರ್ಥ ಹರಕಲು ಬಟ್ಟೆ(ವಸ್ತು) ಅಂತ....ಆದರೆ ಇದನ್ನು ಇಂಗ್ಲಿಷಿನ 'awesome' ಗೆ ಸರಿಸಮಾನವಾಗಿ ಬಳಸ್ತೀವಿ. ಇದು ಕೇವಲ slangಆ ? 
ಲೇಖಕರು: krishnamurthy bmsce
ವಿಧ: Basic page
March 23, 2007
ದಿಟ್ಟೆ ಮನಸು ಏಕೆ ಕೊಟ್ಟೆ ನನ್ನ ಸ್ಥಿತಿ-ಗತಿ ನೋಡಿಷ್ಟೆ ಮುರುಕು ಮನೆ -ಅರಕು ಚಾಪೆ ನನ್ನ ಮನೆಯು ಮುರಿದ ಮನಸ್ಸು ಅರಿದ ಕನಸು ನನ್ನ ಎದೆಯು ಹೊಂಗೆ ನೆರಳು ಎನ್ನ ಸೂರು ಮಾಗಿಯ ಚಳಿಗೆ ನಿನಗೆ-ನಾ-ನನಗೆ ನೀ ಕಂಬಳಿ ಬೇಸಿಗೆಯ ಬಿಸಿಲಿಗೆ ನಿನಗೆ ನನ್ನ ನನಗೆ ನಿನ್ನ ಮೆಲ್ನುಡಿಯ ತಂಗಾಳಿ ಒಲವೇ ನಿನ್ನ ನನ್ನ ಮೈಗೆ ವಸ್ತ್ರ  ನಮ್ಮ ಪ್ರೀತಿ ಆಗಲಿ ಪವಿತ್ರ ನಂಬಿಕೆಯೇ ನಿನಗೆ ನಾ ಕಟ್ಟುವ ತಾಳಿ ಆದರ್ಶವ ಹಂಚೊಣ ಒಂದಾಗಿ ಬಾಳಿ -ಕೃಷ್ಣಮೊರ್ತಿಅಜ್ಜಹಳ್ಲಿ
ಲೇಖಕರು: anivaasi
ವಿಧ: Basic page
March 23, 2007
ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕುಇಲ್ಲದಿರೆ ನೀರಿನೊಲು ತಣ್ಣಗಿದ್ದವನದನುಉರಿಯ ನಾಲಗೆಯಿಂದ ನುಡಿಯಬೇಕು. ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ…
ಲೇಖಕರು: ASHOKKUMAR
ವಿಧ: Basic page
March 22, 2007
ಅಪಘಾತವಾದಾಗ ಏನಾಯಿತು ಎನ್ನುವುದನ್ನು ಪ್ರೇಷಿಸುವ ವ್ಯವಸ್ಥೆ ಜನರಲ್ ಮೋಟರ್ಸ್‌ರವರ ಕಾರುಗಳಲ್ಲಿ ಕಾರು ಅಪಘಾತವಾದಾಗ ಅದರಲ್ಲಿ ಪ್ರಯಾಣಿಸುತ್ತಿರುವರಿಗೆ ಮತ್ತು ಚಾಲಕನಿಗೆ ಹೆಚ್ಚು ಜಖಂ ಆಗದಂತೆ ಮಾಡುವ ವ್ಯವಸ್ಥೆಗಳಿವೆ.ಅಪಘಾತವಾದೊಡನೆ,ಚಾಲಕನು ಸ್ಟಿಯರಿಂಗ್ ವೀಲ್‌ಗೆ ಹೊಡೆದು ಅಪ್ಪಚ್ಚಿಯಾಗದಂತೆ,ಅದರಲ್ಲಿರುವ ಚೀಲ ಗಾಳಿ ತುಂಬಿಸಿಕೊಂಡು ರಕ್ಷಣೆ ಒದಗಿಸುತ್ತದೆ.ಕಾರಿನಲ್ಲಿ ಆನ್‌ಸ್ಟಾರ್‍ ವ್ಯವಸ್ಥೆ ಅಪಘಾತವಾದ ಬಗೆಯನ್ನು,ಯಾವ ಭಾಗಕ್ಕೆ ಜಖಂ ಆಗಿದೆಯೆನ್ನುವ ಮಾಹಿತಿಯನ್ನು ಪ್ರೇಷಿಸುತ್ತದೆ.…