ಎಲ್ಲ ಪುಟಗಳು

ಲೇಖಕರು: olnswamy
ವಿಧ: ಬ್ಲಾಗ್ ಬರಹ
March 22, 2007
[Sandor Weoress ಎಂಬ ಕವಿಯ ಒಂದು ಪದ್ಯ. ನಿನ್ನೆ ಓದಿದೆ. ಇಷ್ಟವಾಯಿತು. ಹೀಗೆ ಕನ್ನಡಕ್ಕೆ] ಶಿಲೆಯಲಾದ ಮೂರ್ತಿಯಲ್ಲ ಕೊಳೆಯುವ ಕಾಯವಲ್ಲ, ಕಾಲದಿಂದಾಚೆಗೆ ಬಾಗಿ ನಿಂತ ಇಲ್ಲೇ ಈಗಲೇ ಇರುವ ಕ್ಷಣ, ಕಾಲವು ದುಂದುಮಾಡುವುದನ್ನು ಕಾಪಿಡುವ ಐಸಿರಿಯ ಮುಷ್ಠಿಯಲಿ ಬಿಗಿದಿಟ್ಟುಕೊಳುವ ಅಗಾಧ ಭೂತ ಅಗಾಧ ಭವಿಷ್ಯದ ನಡುವೆ ತೋರುವ ಈ ಕ್ಷಣ, ಹೊಳೆಯೊಳಿಳಿದು ಮೀಯುವ ಹೊತ್ತು ಒಳತೊಡೆಗೆ ಮೀನು ಮುತ್ತಿಟ್ಟಾಗ, ದೇವರು ನಮ್ಮೊಳಗೇ ಇರುವುದು ನಮಗೇ ಗೊತ್ತಾದ ಹಾಗೆ, ಈಗ ನೆನಪು ಆಮೇಲೆ ಅರೆ ನೆನಪು ಕನಸಿನ ಹಾಗೆ…
ಲೇಖಕರು: bvpandurangarao
ವಿಧ: ಬ್ಲಾಗ್ ಬರಹ
March 21, 2007
22.ಮಾರ್ಚ್ ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದಕ್ಕೆ ಸಂಬಂಧ ಪಟ್ಟ ಕೆಲವು ವ್ಯಂಗ್ಯಚಿತ್ರಗಳನ್ನು ಕೆಳಗಿನ ಯು ಆರ್. ಎಲ್ ನ್ನು ಕ್ಲಿಕ್ ಮಾಡಿ ನೋಡಬಹುದು  http://www.youtube.com/watch?v=oL5PDk60ocA ಹಾಗು ಕೆಳಗಿನ ತಾಣದಲ್ಲಿಯೂ ನೋಡಬಹುದು www.paanduwatertoons.blogspot.com www.kannadatoons.blogspot.com  ಪಾಂಡುರಂಗ
ಲೇಖಕರು: bhcsb
ವಿಧ: ಚರ್ಚೆಯ ವಿಷಯ
March 21, 2007
ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? `ವಲ್ಲಿ' ಸಂಸ್ಕೃತ ಪದದ ತತ್ಸಮ ಪದವಿರಬಹುದೆ ಕನ್ನಡದ `ಬಳ್ಳಿ' ಪದಕ್ಕೆ? ಚಂದ್ರಶೇಖರ ಬಿ.ಎಚ್.೨೧/೦೩/೨೦೦೭
ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
March 21, 2007
ಅಷ್ಟು ಚೆನ್ನಾಗಿದೆ ಇಷ್ಟು ಚೆನ್ನಾಗಿದೆ ಎಂದೆಲ್ಲಾ ಕೇಳಿ ಕೇಳಿ ಸಾಕಾಗಿ ಇನ್ನು ನೋಡದೇ ಕಳೀದು ಎಂದಂದುಕೊಂಡು ಇಂದು ನಾನು ಮುಂಗಾರು ಮಳೆ ನೋಡೇ ಬಿಟ್ಟೆ. ಮಂಗಳೂರಿನ ಜನ ಕನ್ನಡ ಸಿನೆಮಾ ನೋಡುವುದೇ ಇಲ್ಲ ಎಂದಂದುಕೊಂಡು ನಾನು ಥ್ಯೇಟರಿಗೆ ಹೋದೆ. ನೋಡಿದರೆ ಬಾಲ್ಕನಿ ಫುಲ್! ಈ ಸಿನೆಮಾ ಇದೇ ಥ್ಯೇಟರಿನಲ್ಲಿ ಆಗಲೇ ಕನಿಷ್ಟ ೫ ವಾರದಿಂದ ಓಡುತ್ತಿದೆ. ಕೆಳಗೆ ಕೂತರೆ ಅದೂ ಆಲ್‍ಮೋಸ್ಟ್ ಫುಲ್. ನಾನು ಕೂತ ಕೆಲವು ಸಮಯದಲ್ಲೇ ದೀಪ ಆರಿತು ಸಿನೆಮಾ ಆರಂಭವಾಯಿತು. ಟೈಟಲ್ ಆದ ಮೇಲೆ ತೀರಾ ಸಾದಾರಣ ಎನ್ನುವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 20, 2007
ಇದು ಎಲ್ಲರೂ ಓದಲೇಬೇಕಾದ ಪುಟ್ಟ ಪುಸ್ತಕ ; ಎಲ್ಲ ವಯಸ್ಸಿನ ಓದುಗರಿಗೂ ಮೆಚ್ಚಿಗೆಯಾಗುವ ಪುಸ್ತಕ ಹಿಂದೊಮ್ಮೆ ಈ ಪುಸ್ತಕದ ಕುರಿತು ಬರೆದಿದ್ದೆ. ಕನ್ನಡ ಅನುವಾದ - ಧಾರವಾಡದ ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ . ಕನ್ನಡ ಪ್ಲಾನೆಟ್ಟಿನಲ್ಲಿ ಈ ಬಗ್ಗೆ ಬಂದಿದೆ. ಇಂಗ್ಲೀಷ್ ನಲ್ಲಿ ಇಲ್ಲಿದೆ.
ಲೇಖಕರು: srushti
ವಿಧ: ಬ್ಲಾಗ್ ಬರಹ
March 20, 2007
ನೀ ಬೀರುವ ಕುಡಿನೋಟ,ಅದೇನು ಮಾಡುವುದೋ ಮಾಟ,ಸಾಕು ಮಾಡೇ ನಿನ್ನ ಹುಡುಗಾಟ,ಮನಸು ಆಗಿದೆ ಮಹಾ ಮರ್ಕಟ ಆಲಿಸಿ ನಿನ್ನ ಕೋಗಿಲೆಯ ಕ೦ಠ,ಸವರಿಸಿ ನಿನ್ನ ಕೋಮಲವಾದ ಸೊ೦ಟ,ಆರ೦ಭವಾಯಿತು ನನ್ನ ಚೆಲ್ಲಾಟ,ಮನಸು ಆಗಿದೆ ಮಹಾ ಮರ್ಕಟ ಸೇರಬೇಕೆ೦ದಿದ್ದೆ ನಾನೊ೦ದು ಮಠ,ಆದರೆ ನಿನ್ನೊಲವಿ೦ದ ಹೊಡೆದೆ ನೀನೊ೦ದು ಏಟ,ಆಡಲಾರ೦ಭಿಸಿದವು ನನ್ನಾಸೆಗಳೆಲ್ಲಾ ದೊ೦ಬರಾಟ,ಮನಸು ಆಗಿದೆ ಮಹಾ ಮರ್ಕಟ ನೀ ಮಾಡುವ ಸಣ್ಣ ಸಣ್ಣ ತು೦ಟಾಟ,ನನ್ನ ಮನಸ್ಸಿಗೆ ಆಗುವುದು ಬಹಳ ಇಷ್ಟ,ಆಡಬೇಡ ಜೀವನದ ಜೊತೆ ಜೂಟಾಟ,ಮನಸು ಆಗಿದೆ ಮಹಾ ಮರ್ಕಟ…
ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
March 20, 2007
ನನ್ನ ತಂದೆ ಜಿ.ಎನ್. ಅಶೋಕ ವರ್ಧನ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಮಾಲಿಕ. ಭೈರಪ್ಪನವರ ಆವರಣ ಪುಸ್ತಕ ಬಿಡುಗಡೆಯಾಗಿ ಭಾರೀ ವ್ಯಾಪಾರ ನಡೆಸುತ್ತಿರುವ ಸಮಯದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅವನ್ನು ಈ ಮೂಲಕ ನಿಮ್ಮೆಲ್ಲರ ಓದಿಗಾಗಿ ಸಂಪದಕ್ಕೆ ಸೇರಿಸುತ್ತಿದ್ದೇನೆ. - ಅಭಯ ಸಿಂಹ. ಪ್ರಿಯರೆ ನನಗೆ ಹೊಳೆದ ಕೆಲವು ಈಚಿನ ವಿಚಾರಗಳನ್ನು ಹೀಗೇ ಇನ್ನಷ್ಟು ಮಂದಿಯೊಂದಿಗೆ ಹಂಚಿಕೊಳ್ಳಬೇಕೆಂದು ತುಡಿತ ತೀವ್ರವಾದುದರಿಂದ ಎಂದಿನಂತೆ ಯಾವ ಔಪಚಾರಿಕ ಚೌಕಟ್ಟು, ಅಂತಿಮ ತೀರ್ಮಾನಗಳನ್ನು ಹೇರದೆ…
ಲೇಖಕರು: Gopinath Rao
ವಿಧ: ಕಾರ್ಯಕ್ರಮ
March 19, 2007
ದುಬಾಯಿ ಇಂಡಿಯನ್ ಕಾನ್ಸುಲೇಟ್ ಹಾಲ್ ನಲ್ಲಿ ತಾರೀಕು ೨೩.೦೩.೨೦೦೭ ರಂದು ಸಂಜೆ ಗಂಟೆ ಐದೂವರೆಗೆ ಗಿರೀಶ್ ಕಾರ್ನಾಡರ ನಾಟಕ "ನಾಗಮಂಡಲ" ನಿರ್ದೇಶನ : ಪ್ರಕಾಶ್ ರಾವ್ ಪಯ್ಯಾರ್ ಮುಖ್ಯ ಅತಿಥಿ : ಶ್ರೀಮತಿ ಬಿ ಜಯಶ್ರೀ, (ರಂಗ ಕಲಾವಿದೆ)ಬೆಂಗಳೂರು. ಪ್ರವೇಶ ಉಚಿತ. ಇದು ಧ್ವನಿ ಪ್ರತಿಷ್ಠಾನ, ಶಾರ್ಜಾ ಇವರ ಹೆಮ್ಮೆಯ ಕೊಡುಗೆ.
ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
March 19, 2007
ಒಬ್ಬಾತ ಬ್ಲಾಗ್ ಯಾಕೆ ಬರೀತಾನೆ ಅಂತ ನಾನು ಅನೇಕ ಬಾರಿ ಯೋಚಿಸಿದ್ದೆ. ಉದ್ದುದ್ದದ ಹೆಸರುಗಳಿರುವ ಬ್ಲಾಗ್ ನೆನಪಿಡುವುದೂ ಕಷ್ಟ. ಇನ್ನು ಅಂತರ್ಜಾಲದಲ್ಲಿ ಈಗಾಗಲೇ ಇರುವ ಮಾಹಿತಿಯ ಕೆನೆಯಲ್ಲಿ ಮಾತ್ರ ತೇಲಾಡುತ್ತಿರುವ ನಾವು ಇನ್ನಷ್ಟು ಮಾಹಿತಿಯನ್ನು ಬರೆದು ಅದಕ್ಕೆ ಹಾಕಿ ನಮ್ಮನ್ನು ನಾವೇ ಬಿಚ್ಚಿಕೊಳ್ಳುವುದು ಬೇಕು ಬೇಡದ್ದೆಲ್ಲವನ್ನೂ ಪ್ರಪಂಚಕ್ಕೆ ತಿಳಿಸಿ ಹೇಳುವುದು ಇದರಿಂದ ನಾವೇ ಅಲ್ಲದ ಒಂದು ನಾವು ರೂಪುಗೊಳ್ಳುವುದು ಇತ್ಯಾದಿ ನನಗೆ ಬ್ಲಾಗ್ ಎಂಬ ಕಾನ್ಸೆಪ್ಟ್ ಕೇಳಿದ ದಿನದಿಂದ…
ಲೇಖಕರು: bvpandurangarao
ವಿಧ: ಬ್ಲಾಗ್ ಬರಹ
March 19, 2007
ನಿಮ್ಮೆಲ್ಲರಿಗೂ ಹೊಸ ವರುಷದ ಉಗಾದಿಯ ಶುಭಾಶಯಗಳು ಪಾಂಡುರಂಗ ರಾವ್