ವಿಧ: Basic page
March 19, 2007
ಪಾಕಿಸ್ತಾನ ತಂಡದ ಕೋಚ್ [:http://content-ind.cricinfo.com/ci/content/player/22520.html|ಬಾಬ್ ವೂಲ್ಮರ್] ತೀರೇ ಹೋಗ್ಬಿಟ್ರಂತೆ. ನಿನ್ನೆ ಪಾಕಿಸ್ತಾನ ಐರಿಶ್ ತಂಡದ ವಿರುದ್ಧ ಸೋತಿತ್ತು. ವಾಪಸ್ ಮನೆಗೆ ಹೋಗೋದು ಇನ್ನೇನು ೯೯% ಖಚಿತವಾಗಿರುವ ಪಾಕಿಸ್ತಾನಕ್ಕೆ ತಂಡದ ಕೋಚು ಬಾಬ್ ವೂಲ್ಮರ್ ತೀರಿ ಹೋದದ್ದು ಕೂಡಿಕೊಂಡು ಈ ಸಲದ ವಿಶ್ವ ಕಪ್ ಮರೆಯಲಾಗದ ವ್ಯಸನವಾಗದೇ ಇರದು.
ನಿನ್ನೆ ಮ್ಯಾಚ್ ಮುಗಿದ ಬಳಿಕೆ "ಕ್ಷಮೆ ಕೇಳಿ" ಬಾಬ್ ವೂಲ್ಮರ್ "ಈ ಓಡಾಟ, ಕೊನೆ ಕಾಣದ ಹೋಟೆಲ್ ವಾಸ" "…
ವಿಧ: ಚರ್ಚೆಯ ವಿಷಯ
March 19, 2007
ವಿಷಯ:ಸುರೇಖ ಪ್ರದರ್ಶನ-ಮ್ಯಾಕ್ಸ್ ಮುಲ್ಲರ್ ಭವನ
ತಾರೀಖು: ಮಾರ್ಚಿ 18, 2007 - 09:01
ಗೊಯತೆ ಸ೦ಸ್ಠೆ, ಬೆ೦ಗಳೂರು
ಕಲಾವಿದೆ ಸುರೇಖರಿ೦ದ ಸ೦ಸ್ಕೃತಿ-ನಿರ್ಧಿಷ್ಟ ದೃಶ್ಯ ಯೋಜನೆ (ವಿಡಿಯೊ ಮತ್ತು ಫೋಟೋ ಪ್ರತಿಷ್ಠಾಪನಾ ಕಲೆ)
೧೬ರಿ೦ದ ೨೨ನೇ ಮಾರ್ಚಿ, ೨೦೦೭
ಪ್ರತಿದಿನ ಮಧ್ಯಾಹ್ನ ೨ರಿ೦ದ ೭ರವರೆಗೆ
ಉದ್ಘಾಟನೆ: ೧೬ನೇ ಮಾರ್ಚಿ ೨೦೦೭ರ ಸ೦ಜೆ ೬.೩೦ಕ್ಕೆ
'ವಿಮೋಚನಾ'ದ ಡೋನ ಫರ್ನಾ೦ಡಿಸ್‍ರಿ೦ದ "ಮೇಕಿ೦ಗ್ ವಯಲೆನ್ಸ್ ಅನ್‍ಥಿ೦ಕಬಲ್" ('ಹಿ೦ಸೆಯನ್ನು ಕಲ್ಪಿಸಿಕೊಳ್ಳಲಾರದ೦ತಾಗಿಸುವುದು') ವಿಷಯ ಕುರಿತು…
ವಿಧ: ಬ್ಲಾಗ್ ಬರಹ
March 18, 2007
ಭಾರ ಮನಸ್ಸುಗಳ ನಡುವಿನ
ಅಂತರ
ಬಲು ದೂರ ದೂರ
ಒಲವ ಚೆಲ್ಲುವ ಮನವು ಚಿಮ್ಮುವುದು
ನಿರಂತರ
ಕಾರಂಜಿಯ ತರ
ತರುವುದು ಹೃದಯಗಳ
ಹತ್ತಿರ ಹತ್ತಿರ
ವಿಧ: Basic page
March 18, 2007
ಆತ್ಮೀಯ ಸಂಪದಿಗರೆ,
"ಶ್ರೀ ಸರ್ವಜಿತ್ ಸಂವತ್ಸರ"ವು ನಿಮ್ಮ ಬಾಳಿನಲ್ಲಿ ನವಉತ್ಸಾಹ, ಸಂತೋಷ, ಸಮಾಧಾನ ಸಂತೃಪ್ತಿಯನ್ನು ತಂದುಕೊಡಲಿ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೧೯-೦೩-೨೦೦೭ ನೇ ಸೋಮವಾರದ ದಿನ ಆಚರಿಸಲಾಗುವುದು.
ಸೌರಮಾನ ರೀತಿ, ಸೂರ್ಯನು ನಿರಯಣ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲದ ದಿನ, ತಾ. ೧೪-೦೪-೨೦೦೭ ನೇ ಶನಿವಾರವೂ ಯುಗಾದಿಹಬ್ಬವನ್ನು ಆಚರಿಸಬಹುದು.
ಪ್ರಾತಃಕಾಲದಲ್ಲಿ ಅಭ್ಯಂಜನದ ನಂತರ, ಹೊಸ ವರ್ಷದ ಪಂಚಾಂಗವನ್ನು ಪರಮಾತ್ಮನ ಬಳಿ…
ವಿಧ: Basic page
March 18, 2007
ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ದೇಶ ಭಾರತದ ವಿರುದ್ಡ ಐದು ವಿಕೆಟ್ ಜಯಗಳಿಸಿ,ದಾಖಲೆ ಮಾಡಿದೆ.ಇದರೊಂದಿಗೆ ನಮ್ಮ ಕ್ರಿಕೆಟ್ ಪ್ರೇಮಿಗಳ "ಕ್ರಿಕೆಟ್ ಜ್ವರ" ಇಳಿದಿರಬಹುದು. ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಬರೆವ ವಿದ್ಯಾರ್ಥಿಗಳಿಗೆ ಇದು ಒಳಿತೇ ಮಾಡಬಹುದು. ಆದರೂ ಭಾರತ ಮೊದಲ ಸುತ್ತಿನಲ್ಲೇ ವಿಫಲವಾಗದಿರುವ ಸಾಧ್ಯತೆಯೇ ಹೆಚ್ಚು.
ವಿಧ: Basic page
March 18, 2007
ಇಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪೆನಿ LG ಗೊತ್ತಲಾ? LG ಅಂದರೆ ಏನು ಎಂದು ನನಗಂತೂ ಗೊತ್ತಿರಲಿಲ್ಲ. ಮೊನ್ನೆ ಅಂಗಡಿಯೊಂದರಲ್ಲಿ LG ಆಂದರೆ life is good ಎಂದು ನೋಡಿದೆ. ಇವರ ಉತ್ಪನ್ನಗಳು ಕೈಕೊಡದೆ ಕೆಲಸ ಮಾಡಿದರೆ LG ಆಗಬಹುದು!
ವಿಧ: ಬ್ಲಾಗ್ ಬರಹ
March 17, 2007
ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬಂಗಾಲವನ್ನು ೩೨ ಓಟಗಳಿಂದ ಸೋಲಿಸಿ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ಈ ವಿಜಯದೊಂದಿಗೆ, ರಣಜಿ ಟ್ರೋಫಿ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಲದ ಕೈಯಲ್ಲಿ ಅನುಭವಿಸಿದ ಸೋಲಿಗೆ ಸ್ವಲ್ಪ ಮಟ್ಟಿಗಾದರೂ ಪ್ರತೀಕಾರ ತೀರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ೩೬ ಓಟಗಳಾಗುವಷ್ಟರಲ್ಲಿ ೫ ಹುದ್ದರಿಗಳನ್ನು ಕಳಕೊಂಡಿತ್ತು. ಆಗ ಜತೆಗೂಡಿದ ನಾಯಕ ಯೆರೆ ಗೌಡ ಮತ್ತು ತಿಲಕ್ ನಾಯ್ಡು ೭೭…
ವಿಧ: Basic page
March 17, 2007
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ…
ವಿಧ: ಬ್ಲಾಗ್ ಬರಹ
March 17, 2007
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ…
ವಿಧ: ಬ್ಲಾಗ್ ಬರಹ
March 17, 2007
ನನ್ನ ಪಾಂಡಿತ್ಯ ಅಷ್ಟಕ್ಕಷ್ಟೇ - ಹೆಚ್ಚು ಹೊಸಗನ್ನಡ ಓದಿದ್ದೇನೆ. ಕನ್ನಡ ವ್ಯಾಕರಣ ಗೊತ್ತಿಲ್ಲ . ಹಳೆಗನ್ನಡ ಓದಿಲ್ಲ . ಸಂಸ್ಕೃತ ಜ್ಞಾನ ಸ್ವಲ್ಪ ಇದೆ.
ಭಾಷೆಯ(ಗಳ) ಕುರಿತು ಸಿಕ್ಕ ಮಾಹಿತಿ ಓದುತ್ತೇನೆ. ಏನಾದರೂ ಮಾಡಬೇಕೆಂಬ ಹಂಬಲ ನನ್ನಲ್ಲಿದೆ. ( ಯಾರಾದರೂ ನನ್ನನ್ನು ಕನ್ನಡಕ್ಕೆ ನೀನು ಏನಪ್ಪಾ ಮಾಡಿದ್ದೀಯಾ ? ಎಂದು ಕೇಳಿದರೆ ? ಆಗ ಹೇಳಲಿಕ್ಕೆ ಬೇಕಲ್ಲ? )
ಸದ್ಯ ಲೀನಕ್ಸ್ ಅನುವಾದ ಮಾಡುತ್ತಿರುವೆ.
ತಾಂತ್ರಿಕ ಶಬ್ದಗಳ ಅನುವಾದ ಹೇಗೆ ? ಮೊದಲು ಅದರ ಅರ್ಥ ತಿಳಿಯಬೇಕು . ( ಅದಕ್ಕಾಗಿ…