ಎಲ್ಲ ಪುಟಗಳು

ಲೇಖಕರು: sindhu
ವಿಧ: Basic page
April 13, 2007
ಸುಂದರ ಪಾರ್ಕು, ಸುತ್ತೆಲ್ಲ ಮರಗಳುಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ. ಜನಜಾತ್ರೆ, ಇಷ್ಟೊಂದು ಜನ ಇಲ್ಯಾಕೆ ಮೈಯೆಲ್ಲ ಕಿವಿಯಾಗಿ ಕೂತಿದ್ದಾರೆ ಕೇಳೋಣ ಅಂತ ಸುತ್ತ ಬಾಗಿ ನಿಂತ ಮರಗಳು,ನೀರಿಲ್ಲದೆ ಪರದಾಡುವ ಬೆಂಗಳೂರಲ್ಲೂ ನೆಲ ಕಾಣದಷ್ಟು ಹಸಿರಾಗಿ ಮಿರುಗುವ ಹುಲ್ಲು ಹಾಸು, ಅಲ್ಲಲ್ಲಿ ನಗುವ ಹೂಗಳ ಬಿಂಕದಿಂದ ಬಾಗಿರುವ ಗಿಡದ ಗುಚ್ಛಗಳು.. ಸಂಜೆ ಗೂಡಿಗೆ…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
April 13, 2007
ನಾನು ಸಣ್ಣೋನಿರೋವಾಗ ದೆವ್ವಗಳನ್ನ ನೋಡಿದ್ದು ನೆನಪಿದೆ! ನಿಜವಾಗ್ಲೂ. ದೆವ್ವಗಳಿರಬಹುದೆನ್ನುವ ನಂಬಿಕೆಯನ್ನು ಬಲಗೊಳಿಸುವ ಹಲವಾರು ಘಟನೆಗಳಿಗೂ ನಾನು ಸಾಕ್ಷೀ"ಭೂತ"ನಾಗಿದ್ದೇನೆ. ನಿಮ್ಮ ಜೀವನದಲ್ಲೇನಾದ್ರೂ ಈ ತರಹದ ಘಟನೆಗಳು ನಡೆದಿದ್ರೆ ಹೇಳಿ ನೋಡೋಣ! ಆಮೇಲೆ ನಾನೂ ನನ್ನ ಅನುಭವಗಳೊಂದೆರಡನ್ನು ಇಲ್ಲಿ ವಿವರಿಸುವೆ. ದೆವ್ವಗಳಿಲ್ಲವೆನ್ನುವವರೂ "ಅರೆರೆ! ಹೌದಲ್ವಾ!" ಎಂದು ತಮ್ಮ ನಂಬಿಕೆಯ ಮೇಲೆಯೇ ಅಪನಂಬಿಕೆಯನ್ನು ಮೂಡಿಸಿಕೊಳ್ಳದೇ ಇರಲಾರರು. ಹ್ಞೂಂ! ನಿಜವಾಗ್ಲೂ. ಟೈಮು ಸಿಕ್ಕಾಗ ಬರೀತೇನೆ.…
ಲೇಖಕರು: vedumaani
ವಿಧ: ಬ್ಲಾಗ್ ಬರಹ
April 13, 2007
ನಾನು ಕೆಲಸ ಮಾಡುವುದು ಭಾರತೀಯ ವಾಯು ಸೇನೆಯಲ್ಲಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ತಿರುಗಿಕೊಂಡಿರುವವನು. ೯೨ರಿಂದ ೯೬ರವರೆಗೆ ದೆಹಲಿಯಲ್ಲಿ ಇದ್ದೆ. ಉತ್ತರ ಭಾರತ ಶೈಲಿಯ ಊಟ ತಿಂಡಿಗಳಿಂದ ಬೇಸರ ಬಂದಾಗ ನೇರ ತಲಪುವ ಸ್ಥಳ ಮೋತಿ ಬಾಗಿನ ’ದೆಹಲಿ ಕನ್ನಡ ಸಂಘ’. ಗಲ್ಲಾದಲ್ಲಿ ಕುಳಿತಿರುವ ಮಾಲಕರ ಜೊತೆ, ಮಾಣಿಗಳ ಜೊತೆ ಕನ್ನಡ ಮತ್ತು ತುಳುವಿನಲ್ಲಿ ಮಾತನಾಡಿ, ಉಡುಪಿ ಊಟದ ಸವಿಯುಂಡರೆ ಕನ್ನಡದ ನೆಲದ ನೆನೆಪಾಗುತ್ತಿತ್ತು. ಇತ್ತೀಚೆಗೆ ದೆಹಲಿಗೆ ಹೋಗಬೇಕಾಗಿ ಬಂತು, ತುಂಬಾ ಸಮಯದ ನಂತರ. ಸರಿ, ಸಿಕ್ಕಿದ…
ಲೇಖಕರು: krishnamurthy bmsce
ವಿಧ: Basic page
April 13, 2007
ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ ಕದ್ದು ಕದ್ದೆನ್ನ ನೀ ನೋಡಬೇಡ ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ? ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  "ಪ" ಮರೆಯದಿರು ಜೋಪಾನ ಮನ  ಮಂದಿರದಿ ನಿನಗೆ ಸನ್ಮಾನ ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ? ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  " ಲಗ್ಗೆ " ಬಾ ಗೆಳತಿ ಇದುವೆ ನಿನಗೆ ಆಹ್ವಾನ ನೀ ಕೂರಲು ಕಾದಿದೆ ಹೃದಯ ಸಿಂಹಾಸನ ಈ ಗೆಳೆಯ ಇಷ್ಟವಾದ್ರೆ ಬಾ ಅವನ ಮನಸು ಸ್ಪಸ್ಟವಾದ್ರೆ ಬಾ " ಲಗ್ಗೆ " ಬಾ ಚಲುವೆ ಬಾ ಈ ಪ್ರೀತಿ ಅರಮನೆಗೆ ಬಾ ಅಲ್ಲಿದ್ದರೆ…
ಲೇಖಕರು: ASHOKKUMAR
ವಿಧ: Basic page
April 13, 2007
  ಅಟ್ಲಾಂಟಾದ ಮೃಗಾಲಯದಲ್ಲಿ ಸುಮಾತ್ರಾದ ವಾನರಗಳಿಗೆ ವಿಡಿಯೋ ಗೇಂ ಆಡುವ ಸೌಭಾಗ್ಯ ಪ್ರಾಪ್ತವಾದರೆ,ಮೃಗಾಲಯಕ್ಕೆ ಬರುವ ಪ್ರವಾಸಿಗಳಿಗೆ ವಾನರನ ಮಂಗನಾಟದ ದರ್ಶನಭಾಗ್ಯ ಲಭಿಸುತ್ತದೆ! ಸುಮಾತ್ರಾದ ವಾನರ ಜಾತಿ ಒರಂಗುಟಾನ್‌ನ ಕೌಶಲ,ಕಲಿಕೆ ಮತ್ತಿತರ ವಿಷಯಗಳ ಬಗೆಗೆ ಅಭ್ಯಾಸ ಮಾಡುವ ಸಂಶೋಧಕರು ಮಾಡಿರುವ ವ್ಯವಸ್ಥೆಯಿದು.ವಾನರಗಳು ವಾಸವಾಗಿರುವ ಮರದ ಮೇಲೆಯೇ ವಿಡಿಯೋ ತೆರೆಯಿಟ್ಟಿದ್ದಾರೆ. ಇದು ಸ್ಪರ್ಶ ಸಂವೇದಿ ತೆರೆಯಾದ್ದರಿಂದ, ವಾನರಗಳ ಸ್ಪರ್ಶಕ್ಕೆ ದೃಶ್ಯಗಳಲ್ಲಿ ಬದಲಾವಣೆಯಾಗಬಹುದು.…
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 13, 2007
ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ ಕಾದಂಬರಿಕಾರ. ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ. ಇನ್ನು ಇದರಲ್ಲಿನ ಸಂದೇಶಗಳು ಎಷ್ಟು ಬಾಲಿಶ ಮತ್ತು ಕುಟಿಲತೆಯಿಂದ ಕೂಡಿದೆಯೆಂದರೆ ಅದರ ಬಗ್ಗೆ ಯೋಚಿಸುವುದು,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 13, 2007
೧. ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು , ಶಾಲೆಗಳಲ್ಲಿ ಕಲಿಸುತ್ತಿಲ್ಲ . ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು. ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ. ನನಗಂತೂ ಅವನ್ನು ಗುರುತಿಸಲು ಕಷ್ಟವಾಗುವದು . ೯೯.೯೯% ಜನಕ್ಕೂ ಹಾಗೆಯೇ ಇದ್ದೀತು. ೨. ನಾನು ಇಂಗ್ಲೀಷು , ದೇವನಾಗರಿ ಲಿಪಿಯ ಬರಹಗಳಿಗಿಂತ ಕನ್ನಡ ಲಿಪಿಯ ಬರಹಗಳನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 13, 2007
ಈ ಪುಸ್ತಕವನ್ನು ನಿನ್ನೆ ಡಿಜಿತಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ. ಪುಸ್ತಕ ಸಣ್ಣದು . ಸಣ್ಣ ಸಣ್ಣ ಪ್ರಬಂಧಗಳಿವೆ. ಅಲ್ಲಿ ಅಕ್ಕಮಹಾದೇವಿಯ ವಚನಗಳು , ಪಂಪನ ಒಂದು ಪದ್ಯ (ವ್ಯಾಸರ ಮಹಾಭಾರತಕ್ಕೆ ಹೋಲಿಸಿ) , ವ್ಯಾಸ , ಕುಮಾರವ್ಯಾಸ ಮತ್ತು ಪಂಪರನ್ನು ತೂಕಕ್ಕೆ ಹಾಕಿದ (??- ಅಂದರೆ ತುಲನಾತ್ಮಕ !! ) ಲೇಖನ, ಕುವೆಂಪು ನಾಟಕದ ಕುರಿತು ಒಂದಿಷ್ಟು ಲೇಖನಗಳಿವೆ. ಅರ್ಥ ಮಾಡಿಕೊಳ್ಳಲು ಸುಲಭ. ಸಾಹಿತ್ಯಾಸಕ್ತರು ಓದಲೇ ಬೇಕಾದ ಪುಸ್ತಕ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 13, 2007
ಅಚ್ಚ ಕನ್ನಡ ಪದಗಳು ಈ ಬಗ್ಗೆ ನನ್ನ ಕೆಲವು ವಿಚಾರಗಳಿವೆ . ೧. ಅಚ್ಚ ಕನ್ನಡ ಪದಕೋಶ ಎಂಬ ಪುಸ್ತಕ ಇದೆಯಂತೆ. ಅದನ್ನು, ಅಂಥ ಪುಸ್ತಕಗಳನ್ನು ಹುಡುಕಿ, ನೋಡೋಣ . ಅಂದರೆ ಮತ್ತೆ ಮತ್ತೆ ’ಅದನ್ನೇ ಕಂಡುಹಿಡಿವ’ ಕೆಲಸ ತಪ್ಪುವದು . ೨. ಶಬ್ದಕೋಶದಿಂದಲೋ , ಹಳೆಗನ್ನಡದಿಂದಲೋ , ದ್ರಾವಿಡಿಯನ್ ಎಟಿಮಾಲಾಜಿಕಲ್ ಡಿಕ್ಷನರಿಯಿಂದಲೋ ಶಬ್ದವನ್ನು ಹುಡುಕುವ ಬದಲು , ನಮ್ಮ ಹಿರಿಯರಿಂದ , ಹಳ್ಳಿಗರಿಂದ ಬಳಕೆಯಲ್ಲಿನ ಶಬ್ದಗಳನ್ನು ಹುಡುಕಿ ತೆಗೆಯುವದು ಒಳ್ಳೆಯದು. ಆಗ ಆ ಶಬ್ದಗಳನ್ನು ಬಳಸಿದ…
ಲೇಖಕರು: krishnamurthy bmsce
ವಿಧ: Basic page
April 13, 2007
ಮಳೆ ಬಂತು ಮುಂಗಾರು ಮಳೆ ಬಂತು ಇಳೆ ನೆನೆದು ಚೈತ್ರ ನಲಿಯಿತು ಬಾನಿಂದ ಮಳೆ ಬಂತು ಭರಣಿ ಮಳೆ ಬಂತು ಧರಣಿಯೊಡಲು ತಣಿಯಿತು "ಪ" ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ" ವರ್ಷದಾದಿಯ ಮೊದಲ ದೀಪಾವಳಿಯಾಯ್ತು ಭರಣಿಯು ಧರಣಿಯ ತಣಿಸಿದಂದು ಸರ್ವಜಿತುವಿನ ಮುಂಗಾರಿನ ಮಳೆಯಾಯ್ತು "ಮಳೆ" ಧರೆಯ ಮರಗಿಡ ಹಸಿರಿನಿಂದ ನಳ ನಳಿಸುತ್ತಿದೆ ಮಾಮರದಿ ಕೋಗಿಲೆ ಇಂಚರದಿ ಕೂಗಿದೆ  ಹೊ(ಓ)ಣಗಿದ್ದ ಬಯಲಲ್ಲಿ…