ವಿಧ: ಬ್ಲಾಗ್ ಬರಹ
April 17, 2007
ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವನು ಜೀವನದೊಂದಿಗೆ ಕೆಲಸ ಮಾಡುತ್ತಿದ್ದಾನೆ. ನೀವು ತಲೆಯನ್ನು ಮಾತ್ರ ಬಳಸಿ ಶಬ್ದಗಳೊಂದಿಗೆ , ವ್ಯರ್ಥ ಶಬ್ದಗಳೊಂದಿಗೆ ಕೆಲಸ ಮಾಡುತ್ತಿರುವಾಗ ದಣಿಯುತ್ತೀರಿ.
ಜೀವನವು ಚೈತನ್ಯದಾಯಕವಾಗಿದೆ . ಅದೇ ನೀವು ತೋಟದಲ್ಲಿ ಕೆಲಸಮಾಡುವಾಗ , ನೀವು…
ವಿಧ: ಬ್ಲಾಗ್ ಬರಹ
April 17, 2007
ಅವರವರ ಭಾವಕ್ಕೆ ಅವರವರ ಭಕ್ತಿಗೆ ಎನ್ನುವುದು ಹಳೆಯ ಮಾತಾಯಿತು. ಈಗ ಏನಿದ್ದರೂ, ಹಳೆಯದನ್ನು ಮರೆತು ಕನ್ನಡಕ್ಕೆ ಏನು ಬೇಕು ಎನ್ನುವುದನ್ನು ನೋಡುವ ಸಮಯ. ಕ್ಷಮಿಸಿ. ಸಮಯ ಎಂಬುದು ಸಂಸ್ಕೃತ ಪದ! ಇದಂತೂ ಉಪಯೋಗಿಸಲೇಬಾರದಲ್ಲ! ಸರಿ. ಹಾಗಾದರೆ ಹೀಗೆ ಹೇಳಲೇ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಕಾಲ. ಅಯ್ಯೋ! ಇದೂ ಉಪಯೋಗಿಸಬಾರದ ಪದ. ಮತ್ತಿನ್ನೇನು ಹೇಳಲಿ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಟೈಮು. ಈಗ ಸರಿಯಾಯಿತು. ಎಷ್ಟೇ ಎಂದರೂ ಕನ್ನಡಕ್ಕೆ ಪ್ರಪಂಚದಲ್ಲೆಲ್ಲ ಸುತ್ತಾಡುವ…
ವಿಧ: ಬ್ಲಾಗ್ ಬರಹ
April 16, 2007
ಬೆಂಗಳೂರಿನಲ್ಲಿ ದಿನನಿತ್ಯದ ಪ್ರಯಾಣದ ತೊಂದರೆಗಳಿಗೆ ಕಾರಣ೧. ಸ್ವಂತ ವಾಹನ ಬಳಕೆ೨. ITPL / Electronic City ಗಳಿಗೆ ಸಾರ್ವಜನಿಕ ಬಸ್ಸುಗಳ ಕೊರತೆ೩. ಸಾರ್ವಜನಿಕ ಬಸ್ಸುಗಳ "ತರ್ಕಹೀನ" ದರ ಹೇರಿಕೆ (robbery by BMTC ಅನ್ನಬಹುದು) ೩,೦೦,೦೦೦ ಸಾಫ್ಟವೇರ್ ಇಂಜಿನಿಯರುಗಳಲ್ಲಿ ಬಹಳಷ್ಟು ಜನ ITPL / Electronic City ಕಡೆ ಹೋಗುವವರು. ಈ ಜಾಗಗಳಲ್ಲಿ ಒಂದು ದೊಡ್ಡ Bus Terminus ಇಲ್ಲ. ನಗರದ ಎಲ್ಲಾ / ಪ್ರಮುಖ ಭಾಗಗಳಿಂದ ಇಲ್ಲಿಗೆ ಬಸ್ಸಿಲ್ಲ. ಇನ್ನು ಮೆಟ್ರೋ ಹಳಿ... ಈ ಕಡೆ ಹರಿದೇ ಬರುವ…
ವಿಧ: Basic page
April 16, 2007
ವಿಜಯಕರ್ನಾಟಕದ ಸುಧೀಂದ್ರ ಹಾಲ್ದೊಡ್ಡೇರಿ ಅವರ ವೈಜ್ಙಾನಿಕ ಬರಹಗಳ ಅಂಕಣ ನೆಟ್‌ನೋಟ ಬ್ಲಾಗ್‌ನಲ್ಲಿ ಲಭ್ಯವಿದೆ. ಇಲ್ಲಿ ಕ್ಲಿಕ್ಕಿಸಿ.
ವಿಧ: ಬ್ಲಾಗ್ ಬರಹ
April 15, 2007
ಒಂದು ಎರಡು
ಸೆಹವಾಗ್ ಬೌಲ್ಡು
3/ನಾಲ್ಕು
ತೆಂಡುಲ್ಕರ್ ಸ್ಕೋರು
ಐದು ಆರು
ಧೋಣಿ ಸಿಕ್ಸರ್!!
ಹೊಡೀಲಿಲ್ಲ ಬೇಜಾರು
ಏಳು ಎಂಟು
ಡ್ರಾವಿಡೂ ಔಟು
ಒಂಬತ್ತು ಹತ್ತು
ಹಿಂದೆ ಬಂದಾಯ್ತು.
ವಿಧ: Basic page
April 15, 2007
`ರಾಷ್ಟ್ರಗೀತೆ' ಕುರಿತ ವಿವಾದಾತ್ಮಕ ಹೇಳಿಕೆಯ ನಂತರ ಇನ್ಫೋಸಿಸ್ ನಾರಾಯಣ ಮೂರ್ತಿ ಬಗ್ಗೆ `ರೇಡಿಯೋ ಒನ್' ಎಫ್ಎಂ ಚಾನೆಲ್ನಲ್ಲಿ ಒಂದು ಜೋಕ್ ಬಿತ್ತರವಾಗುತ್ತಿದೆ. ಯಾರಾದರೂ ಕೇಳಿದ್ದೀರಾ? ಅದು ಹೀಗಿದೆ:
ಇಬ್ಬರ ನಡುವೆ ಲೋಕಾಭಿರಾಮದ ಮಾತುಕತೆಗಳ ನಂತರ ಒಬ್ಬ ಹೇಳುವುದು-
`ನನಗೆ ಕೆಲ್ಸ ಸಿಕ್ಕಿದೆ'
`ಎಲ್ಲಿ?'
`ಇನ್ಫೋಸಿಸ್ನಲ್ಲಿ'
`ಇನ್ಫೋಸಿಸ್ನಲ್ಲಾ? ಅದೂ ನಿನಗೆ? ಹೇಗೋ?'
`ಇಂಟರ್ವ್ಯೂ ಅಟೆಂಡ್ ಮಾಡಿದ್ದೆ. ಒಂದು ಕ್ವಶ್ಚನ್ ಕೇಳಿದ್ರು.'
`ಏನ್ ಕ್ವಶ್ಚನ್ನು?'
`ನಮ್ಮ ದೇಶದ ರಾಷ್ಟ್ರಗೀತೆ…
ವಿಧ: ಬ್ಲಾಗ್ ಬರಹ
April 15, 2007
ವಿದ್ಯುತ್ ದೀಪಗಳಿಲ್ಲದ ಹಿಂದಿನ ಕಾಲದಲ್ಲಿ ಬೆಳಗ್ಗಿನ ಜಾವದಲ್ಲಿ
ಮತ್ತು ಸಂಜೆ ಕತ್ತಲಾಗುವಾಗ ಮನೆಯಲ್ಲಿ ದೇವರ ಮುಂದೆ
ದೀಪ ಹಚ್ಚಲು ಹೇಳುತ್ತಿದ್ದರು. ಈವಾಗ ಬಣ್ಣ ಬಣ್ಣದ ವಿವಿಧ ತರಹದ
ದೀಪಗಳಂತೆ ಕಾಣುವ ವಿದ್ಯುತ್ ದೀಪಗಳು ಇರುವಾಗ,
ಎಣ್ಣೆ ದೀಪ ಹಚ್ಚುವ ಅಗತ್ಯವಿದೆಯೇ?
ವಿದ್ಯುತ್ ದೀಪ ಹಚ್ಚುವುದರಿಂದ-
-ಎಣ್ಣೆಯ ಉಳಿತಾಯವಾಗುವುದು.
- ಗಾಳಿಗೆ ದೀಪ ಆರುವ ಭಯವಿಲ್ಲ.
- ವಯಸ್ಸಾದವರು ಮತ್ತು ಮಕ್ಕಳು ಕೈ ಸುಟ್ಟುಕೊಳ್ಳುವುದು ತಪ್ಪುವುದು.
- ಎಲ್ಲಾದರು ಹೊರಗೆ ಹೋಗಬೇಕಾದಲ್ಲಿ ಬೆಂಕಿ…
ವಿಧ: ಬ್ಲಾಗ್ ಬರಹ
April 14, 2007
ನಾಳೆಯಿಂದ ೨೦ನೇ ತಾರೀಕಿನವರೆಗೆ ಮುಂಬೈನಲ್ಲಿ ರಾಷ್ಟ್ರೀಯ ಇಪ್ಪತ್-ಇಪ್ಪತ್ ಕ್ರಿಕೆಟ್ ಪಂದ್ಯಾವಳಿ ಆರಂಭ (ನಾಳೆಯಿಂದ ಆರಂಭ ಎಂದು ನಂಬಿದ್ದೇನೆ. ೨ ಸಲ ಮುಂದೂಡಲಾಗಿತ್ತು). ಎಲ್ಲಾ ರಾಜ್ಯ ತಂಡಗಳೂ ಭಾಗವಹಿಸಲಿವೆಯೋ ಅಥವಾ ಕೆಲವು ಬಲಿಷ್ಟ ತಂಡಗಳು ಮಾತ್ರ ಸೆಣಸಾಡಲಿವೆಯೋ ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ.ರಣಜಿ ಟ್ರೋಫಿ ಮತ್ತು ರಣಜಿ ಏಕದಿನ ಟ್ರೋಫಿ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿ ಕೊನೆಗೆ ನೀರಸ ಆಟ ಆಡಿ ನಿರಾಸೆಗೊಳಿಸಿದ ನಮ್ಮವರು ಈ ೨೦-೨೦ ರಲ್ಲಿ ಹೇಗೆ ಆಡುತ್ತಾರೋ ನೋಡಬೇಕು. ಥ್ಯಾಂಕ್…
ವಿಧ: ಚರ್ಚೆಯ ವಿಷಯ
April 14, 2007
ಬೇಂದ್ರೆಯವರ 'ಉಯ್ಯಾಲೆ' ಯಿಂದ ಈ ಪದ್ಯ
ಅಲ್ಲಮ ಪ್ರಭು
ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ
ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ
ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು,
ಶಿಷ್ಯ, ಪ್ರೀತಿಯ ಜಾತಿಗಾರ! ಎಲ್ಲಿರುವೆ ರಸ-
ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು
ತುಕ್ಕರಿಯದಿದ್ದ ಮೈಕವಚ ಕಳೆದಿಡುವಂತೆ
ಕೆಳಗಿರಿಸಿ, ಕದಳಿಯಲ್ಲಡಗಿ ಕಾಣದೆ ಹೋದ,
ಲಿಂಗ ಲೀಲಾವಿಲಾಸದಲಿ ನಟಿಸಿದ ಮೂರ್ತಿ?
ವಚನ ವಿದ್ಯಾನಟಿಯು ಕುಣಿಕುಣಿದಳಂದು, ಮ-
ದ್ದಳೆಯ ಸೊಲ್ಲಿಗೆ ವಿವಿಧ ಭಂಗಿಯಲಿ; ಶೂನ್ಯದಲಿ…
ವಿಧ: ಚರ್ಚೆಯ ವಿಷಯ
April 13, 2007
ವಿಚಿತ್ರಾನ್ನ ಶ್ರೀವತ್ಸ ಜೋಷಿಯವರ ಜನಪ್ರಿಯ ಅಂಕಣ. ಈ ವಾರ ಅವರು ಕ್ಯಾರಟ್ ಕಡೆ ವಕ್ರ ದೃಷ್ಟಿ ಬೀರಿದ್ದಾರೆ. ಅಂತರ್‍ಜಾಲದ ಗಜ್ಜರಿ ಮ್ಯೂಸಿಯಂ ಪ್ರಸ್ತಾಪವೂ ಅಲ್ಲಿದೆ. ಕಣ್ಣಿಗೆ ಹಿತವಾದ, ಮನಸಿಗೂ ತಂಪುಣಿಸುವ ಕ್ಯಾರಟ್ ಸವಿಯಿರಿ: ವಿಚಿತ್ರಾನ್ನ