ವಿಧ: ಬ್ಲಾಗ್ ಬರಹ
March 08, 2007
ನಮಸ್ಕಾರ,
ಕನ್ನಡದಲ್ಲಿ ರಹಸ್ಯ ಕಾದಂಬರಿಗಾರರು ಯಾರು ಯಾರು ಅಂಥ ತಿಳಿಸಿ ಹಾಗೆನೆ ಉತ್ತಮ ರಹಸ್ಯ ಕಥೆಗಳ ಕಾದಂಬರಿಗಳನ್ನು ತಿಳಿಸಿ...ನಾನು ಎಂಡಮೂರಿಯವರ ಕೆಲವು ಕಾದಂಬರಿಗಳನ್ನು ಓದಿದ್ದೀನಿ.
೧.ಪ್ರಾರ್ಥನ
೨.ತುಳಸಿ
೩.ತುಳಸಿದಳ
ನಾನು ಗ್ರಂಥಾಲಯದಿಂದ ತಂದು ಓದುವೆ...
ಇತಿ ನಿಮ್ಮ ಸ್ನೀಹಿತ
ವಸಿಷ್ಟ
ವಿಧ: ಬ್ಲಾಗ್ ಬರಹ
March 08, 2007
http://dli.iiit.ac.in ನಲ್ಲಿ ಕನ್ನಡ ಪುಸ್ತಕಗಳ ಪಟ್ಟಿಯನ್ನು ನೋಡುತ್ತಿರುವೆ.
ಅಲ್ಲಿ a ಇಂದ ಆರಂಭವಾಗುವ ಪುಸ್ತಕಗಳನ್ನು ಈವರೆಗೆ ನೋಡಿ ಮುಗಿಸಿದ್ದೇನೆ.
ಪುರುಸೊತ್ತಿನಂತೆ ಓದಲು ಅನೇಕ ಲಿಂಕುಗಳನ್ನು ಉಳಿಸಿಕೊಂಡಿದ್ದೇನೆ.
ಇಲ್ಲಿ ಹೆಸರುಗಳನ್ನು ಇಂಗ್ಲೀಷಿನಲ್ಲಿ ಸರಿಯಾಗಿ ಬರೆದಿಲ್ಲ ; ಇದು ಒಂದು ತೊಂದರೆ .
ಪುಟಗಳೇನೋ ಸಾಕಷ್ಟು ಬೇಗ ಬರುತ್ತವೆ . ನಾನು interface 2 ಬಳಸಿ ಓದುತ್ತೇನೆ. ಪ್ರಾರಂಭ ಪುಟಗಳು ಸಾಮಾನ್ಯವಾಗಿ ಖಾಲಿ ಇರುತ್ತವೆ .
ಸ್ಕ್ಯಾನ್ ಮಾಡಿ ಹಾಕಿರುವದು ಒಂದು ರೀತಿ…
ವಿಧ: ಬ್ಲಾಗ್ ಬರಹ
March 08, 2007
ಸಂಭವಾಮಿ ಕಲಿಯುಗೇ...?
ಒಂದೇ ತಾಯ ಕುಡಿಗಳೆಲ್ಲ ಹಸಿದಹೆಬು್ಬಲಿಯಂತೆ
ನರಮೇಧಕಣಿಯಾಗಿ ನಿಂತಿರುವ ದೃಶ್ಯ !
ಭಾರತ,ಅಮೇರಿಕಾ,ಶೀಲಂಕಾವೆಂದೇನೂ ಇಲ್ಲ
ಕೊಚಿ್ಚ-ಕೊಲ್ಲುವುದೆಂದರೆ ಇವರಿಗದೆಷು್ಟ ಹರ್ಷ ?
ಕೋವಿ,ಬಂದೂಕದ ದಟ್ಟ ಹೊಗೆಯಿಂದ
ಕಪಿ್ಪಟು್ಟ ಗೋಳಿಡುತಿದೆ ನೀಲಾಕಾಶ..
ಯಾವ ಕ್ಷಣದಲೂ್ಲ ಧರೆಗಿಳಿಯಬಹುದು
ಗುಂಡು-ಸಿಡಿಗುಂಡುಗಳ ರುಧಿರ ವರ್ಷ ||
ರುಂಡ ಚೆಂಡಾಡುವ ಘೋರ ಮಾರಣಕೆ
ಮುಗ್ದರ,ಮಹಿಳೆಯರ ಬಲಿ ಕೊಟ್ಟವರು..
ಜಾತಿ,ಮತ,ಧಮ೯ದ ವಿಷವರ್ತುಲದೊಳಗೆ
ಮಾನವೀಯತೆಯ…
ವಿಧ: ಬ್ಲಾಗ್ ಬರಹ
March 08, 2007
ಕೆಲವು ಹಾಸ್ಯ ಪ್ರಸಂಗಗಳು ಹೀಗಿವೆ:-
೧) ಬೇಂದ್ರೆಯವರು ಒಂದು ಸಮಾರಂಭದಕ್ಕೆ ಬಂದಿದ್ದರು. ಅದರ ನಿರೂಪಕರು ತಮ್ಮ ನಿರೂಪಣೆಯಲ್ಲಿ ಮತ್ತೆ ಮತ್ತೆ 'ದ.ರಾ.ಬೇಂದ್ರೆ'ಯವರನ್ನು 'ದಾರಾ ಬೇಂದ್ರೆ' ಅಂತ ಸಂಬೋದಿಸುತ್ತಿದ್ದರು... ಕೊನೆಗೆ ಬೇಂದ್ರೆಯವರು "ನಾನು ದಾರಾ ಬೇಂದ್ರೆ ಅಲ್ರೀ ..ಸೂಜಿ ಬೇಂದ್ರೆ" ಅಂತ ಹಾಸ್ಯ ಚಟಾಕಿ ಹಾರಿಸೇ ಬಿಟ್ಟರು.
೨) ಬೇಂದ್ರೆಯವರಿಗೆ ಡಾಕ್ಟರೇಟ್ ಪದವಿ ಘೋಷಣೆಯಾಗಿತ್ತು. ಇದನ್ನು ಕೇಳಿದ ಬೇಂದ್ರೆಯವರು ಹೀಗಂದರು . "ನಂಗೆ ನಾಮಕರಣ ಮಾಡಿದಾಗ್ಲೆ ನಂಗ್ ಡಾಕ್ಟರೇಟ್…
ವಿಧ: ಬ್ಲಾಗ್ ಬರಹ
March 08, 2007
ಎಸ್. ಎಲ್. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿದೆಯಂತೆ. ’ಆವರಣ’ ಎಂಬ ಈ ಕಾದಂಬರಿ ಆಗಲೇ ಮಾರುಕಟ್ಟೆಯಲ್ಲಿ ಒಂದು ಪ್ರತಿಯೂ ಉಳಿಯದಂತೆ ಮಾರಾಟವಾಗಿರುವುದು ತುಂಬಾ ಆಸಕ್ತಿಕರ ವಿಷಯ. ನಾನು ಭೈರಪ್ಪನವರ ಒಂದೂ ಕೃತಿಯನ್ನು ಕೂಡ ಓದಿಲ್ಲ. ’ಆವರಣ’ವನ್ನು ಕೊಂಡು ಓದಬೇಕೆಂದು ತುಂಬಾ ಮನಸ್ಸಿದೆ. ಅಮೆರಿಕದಲ್ಲಿ ಈ ಕನ್ನಡ ಪುಸ್ತಕ ಎಲ್ಲಿ ಕೊಂಡುಕೊಳ್ಳಬಹುದೆಂದು ನಿಮಗೆ ಗೊತ್ತೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ವಿಧ: ಬ್ಲಾಗ್ ಬರಹ
March 08, 2007
ನಮಸ್ಕಾರ,
ನಿಮಗೆ ’ಬಸಳೆ’ ಯ ಪರಿಚಯ ಇದೆಯೆ? ನೀವು ದಕ್ಷಿಣ ಕನ್ನಡದವರಾಗಿದ್ದರೆ, ನಿಮಗೆ ಗೊತ್ತಿರದಿರುವ ಸಾಧ್ಯತೆಯೇ ಇಲ್ಲ. ಬಸಳೆಯೆಂದರೆ, ದಕ್ಷಿಣ ಕನ್ನಡದ (ದ.ಕ) ಒಂದು ಪ್ರಸಿದ್ಢ ಸೊಪ್ಪು ತರಕಾರಿ. ನನ್ನ ಹಿರಿಯ ಸಹೋದ್ಯೋಗಿ ಮಿತ್ರ ರಾಘವೇಂದ್ರ ರಾವ್ ಬೆಂಗಳೂರಿನಲ್ಲಿ ದಕ್ಷಿಣ ಕನ್ನಡಿಗರನ್ನು ಗುರುತು ಹಿಡಿಯಲು ಹಿತ್ತಿಲಿನಲ್ಲಿ ಬಸಳೆಯಿದೆಯೇ ಎಂದು ನೋಡುತ್ತಾರಂತೆ!.
ಒಳ್ಳೆಯ ಜಾತಿಯ ಬಸಳೆ ತುಂಬಾ ಮಾಂಸಲವಾಗಿರುತ್ತವೆ (ಚಿತ್ರದಲ್ಲಿ ತೋರಿಸಿರುವಂತೆ). ಬಸಳೆ ತುಂಬಾ ಅಸಳೆ. ಅಸಳೆಯೆಂದರೆ ದ.…
ವಿಧ: ಬ್ಲಾಗ್ ಬರಹ
March 07, 2007
ಚಿನ್ದಿ !!!ಅನ್ತೂ ಸಂಪದ ಸದಸ್ಯನಾದೆ... ಇನ್ಮೇಲಿಂದ ಕನ್ನಡ ಬ್ಲಾಗಿಂಗ್ ಶುರು :)
ವಿಧ: ಬ್ಲಾಗ್ ಬರಹ
March 07, 2007
ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "…
ವಿಧ: ಚರ್ಚೆಯ ವಿಷಯ
March 07, 2007
ನಮಸ್ಕಾರ,
ನಾ upload ಮಾಡಿರುವ ಚಿತ್ರವನ್ನು ನೋಡಿ ತಪ್ಪನ್ನು ಸರಿ ಮಾಡಬೇಕಾಗಿ ಕೋರುವೆ...
http://sampada.net/image/3377
ನಿಮ್ಮ
ವಸಿಷ್ಟ
ವಿಧ: ಬ್ಲಾಗ್ ಬರಹ
March 07, 2007
ಹೋದವಾರ ಕೆಲಸ ಬಿಟ್ಟುಬಿಟ್ಟೆ. ಈ ವರ್ಷ ಮತ್ತೊಂದು ಚಿತ್ರ ಮಾಡಬೇಕು ಅಂತ ಆಸೆ.ಅದಕ್ಕಾಗಿ ಚಿತ್ರಕತೆಯ ತಯಾರಿ ನಡೆದಿದೆ. ಮೊದಲ ಕರಡಿನ ಕೆಲಸ ಮುಗಿಯಿತು.ಮಾರ್ಚ ಕಡೆಯ ವಾರದ ಹೊತ್ತಿಗೆ ಎರಡನೇ ಕರಡನ್ನು ಮಾಡುವ ಕೆಲಸ ಕೈಗೆತ್ತಿಕೊಳ್ಳಬೇಕು.ಅದನ್ನು ಶೂಟ್ ಮಾಡುವ ಮುನ್ನ ಎನ್ನೆರಡು ಕರಡಾಬಹುದು.ಕೊನೆಯ ಕರಡಂತೂ ಎಡಿಟಿಂಗ್ ಅಲ್ಲವೆ?ಈ ವರ್ಷದ ಉತ್ತರಾರ್ಧದಲ್ಲಿ ಶೂಟ್ ಮಾಡಬೇಕೆಂದು ಹವಣಿಕೆ.ಈ ಮಧ್ಯೆ ಬೆಂಗಳೂರಿಗೆ ತೆರಳಿ ಮುಖಾಮುಖಿಯ ಬಗ್ಗೆ ಒಂದಷ್ಟು ಕೆಲಸ ಮಾಡಬೇಕು. ಈಗಿನ ಕತೆಯ ಬಗ್ಗೆ ಒಂದಷ್ಟು…