ಎಲ್ಲ ಪುಟಗಳು

ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
March 07, 2007
ನಾನು ಇನ್ನೇನು ಒಂದು Apple macbook ಖರೀದಿಸುವವನಿದ್ದೇನೆ. ನಿಮ್ಮಲ್ಲಿ ಯಾರಿಗಾದರು macbook ನ ಅನುಭವವಿದ್ದಲ್ಲಿ ನೀವು ಈ  disaster ನ್ನು ತಡೆಯಬಹುದು ನಿಮ್ಮ ಪರ ಅಥವಾ ವಿರೋಧ ಅಭಿಪ್ರಾಯ ತಿಳಿಸಿ ಕೆಲವು ದಿನಗಳ ಬಳಿಕ ನಾನು ನನ್ನ ಅನುಭವಗಳನ್ನು ಬರೆಯುತ್ತೇನೆ.  ವಂದನೆಗಳು,   ವಸಂತ್.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 06, 2007
ಅಂತೂ ಇಂತೂ ಫೈರ್‌ಫಾಕ್ಸ್ /ಮೊಝಿಲ್ಲ ಅನುವಾದ ಮುಗಿದು ಫ್ರೀ ಆದೆ. ಇದರಿಂದ ಆದ ಉಪಲಾಭ ಎಂದರೆ ಫೈರ್‌ಫಾಕ್ಸ್ ನ ಒಳಹೊರಗು ಗೊತ್ತಾಗಿ ,ಅದಕ್ಕೇ ಶಿಫ್ಟ್ ಆಗುತ್ತಿದ್ದೇನೆ. ಅಲ್ಲಿ ಟ್ಯಾಬ್‌ಯುತ ಜಾಲವೀಕ್ಷಣೆ ಇದೆ. ( ಈ ಬಗ್ಗೆ ನೀವೂ ತಿಳಿದುಕೊಳ್ಳಬಹುದು - ಕನ್ನಡದ ಮೂಲಕವೇ . ಅನುವಾದಗಳು ಪರೀಕ್ಷೆಗೊಳಪಟ್ಟು , ಫೈರ್‌ಫಾಕ್ಸ್ ಆವೃತ್ತಿ ಬಿಡುಗಡೆಯಾದಾಗ) ಸಕಾಲಕ್ಕೆ ಡಿಜಿಟಲ್ ಲೈಬ್ರರಿ ಸಿಕ್ಕು ಅಲ್ಲಿನ ಪುಸ್ತಕ ನೋಡುತ್ತಿರುವೆ . ಅಷ್ಟಾವಧಾನಿಯಂತೆ ಅನೇಕ ಟ್ಯಾಬ್‌ಗಳಲ್ಲಿ ಬೇರೆ ಬೇರೆ ಪುಸ್ತಕ…
ಲೇಖಕರು: ನಿರ್ವಹಣೆ
ವಿಧ: Basic page
March 06, 2007
೧೧, ಜೂನ್, ೨೦೦೭ - "ವಿಜಯ ಕರ್ನಾಟಕ - "ಹೀಗೊಂದು ಮುಕ್ತ ಕಾವ್ಯ ಮೀಮಾಂಸೆ", ಹಾಲ್ದೊಡ್ಡೇರಿ ಸುಧೀಂದ್ರ." ೧೬, ಫೆಬ್ರವರಿ, ೨೦೦೭ - "ಕಂಪ್ಯೂಟರಿನಲ್ಲಿ ಕನ್ನಡ, ಯಾಹೂ!" ೨೪, ಜನವರಿ, ೨೦೦೬ - "ಬಿಲ್ ಗೇಟ್ಸ್ ಮತ್ತು ವಿಕ್ರಮಾರ್ಜುನ ವಿಜಯಂ" ೦೮, ಸೆಪ್ಟೆಂಬರ್, ೨೦೦೫ - "ಅಂತರ್ಜಾಲದಲ್ಲಿ ಕನ್ನಡದ ಸಂಪದ" ನೀವೋದಿದ ಲೇಖನವೊಂದರಲ್ಲಿ ಸಂಪದದ ಬಗ್ಗೆ ಚರ್ಚೆಯಾಗಿದ್ದು ಅದು ಇಲ್ಲಿ ಬಿಟ್ಟುಹೋಗಿದ್ದಲ್ಲಿ [:contact|ನಮಗೆ ತಿಳಿಸಿ].
ಲೇಖಕರು: anivaasi
ವಿಧ: ಬ್ಲಾಗ್ ಬರಹ
March 06, 2007
ಇತ್ತೀಚೆಗೆ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ-೧ ಓದಿದೆ. ತುಂಬಾ ಖುಷಿಪಟ್ಟೆ. ರೈಲಿನಲ್ಲಿ ಓದುತ್ತಾ ಉಕ್ಕಿ ಬರುವ ನಗುವನ್ನು ತಡೆದುಕೊಂಡು ಓದುವುದು ಸುಲಭದ ಕೆಲಸವಲ್ಲ. ತೇಜಸ್ವಿಯವರೇ ಹೇಳಿರುವಂತೆ ಹೊಸ ರೀತಿಯ ನಿರೂಪಣೆಯ ವಿನ್ಯಾಸವೂ ಇಷ್ಟವಾಯಿತು. ಒಂದು ರೀತಿಯಲ್ಲಿ ಅತ್ತಿತ್ತ ಹಾಯುತ್ತಾ ಹೋಗುವ ದನಗಳ ಹಾಗೆ ತುಂಬಾ ಆರ್ಗಾನಿಕ್‌ ಆದ ನಿರೂಪಣೆ ನಮ್ಮನ್ನು ಹಳ್ಳಿ, ಕಾಡು, ಊರುಗಳನ್ನು ಸುತ್ತಿಸುತ್ತಾ ಅಲ್ಲಿಯ ಅತ್ಯಂತ ಮೋಜಿನ ಪ್ರಸಂಗಗಳಲ್ಲಿ ಹತ್ತು ಹಲವಾರು ಪಾತ್ರಗಳ ಕ್ರಿಯೆ ಚಿಂತನೆಗಳ ಮೂಲಕ…
ಲೇಖಕರು: ramvani
ವಿಧ: Basic page
March 06, 2007
ನನ್ನ ಪ್ರೀತಿ ಒಂದು ಕಡಲಿನಂತೆ,ತೋರಿಕೆಗೆ ಪ್ರಶಾಂತ, ಒಳಗೆ ನಿಗೂಡರಹಸ್ಯಗಳನ್ನು ಬಚ್ಚಿಟ್ಟುಕೊಂಡಕಡಲಿನ ಆಳವನು ಅಳೆಯಲಾಗದಂತೆ| ಮನದಲಿ ನಿನ್ನ ಬಿಂಬ ಮೂಡಿ ಬಂದಾಗ, ಸುಪ್ತ ಭಾವನೆಗಳು ಅಲೆ ಬಡಿದಾಗ,ಚಂದಿರನ ಕಂಡ ತೆರೆಗಳು ಏಳುವಂತೆಅಳೆಯಲಾಗದು ಈ ಪ್ರೀತಿಯ ಆಳವನು|| ಹಿಗ್ಗದ ಕುಗ್ಗದು ಈ ಪ್ರೀತಿಯ ಗಾತ್ರ ಅಲೆಗಳಂತೆ ಮೇಲೆರಿ ಮರಳುತಿವೆಬೀಸುವ ಕುಳಿರ್ಗಾಳಿ ಚಿತ್ತವ ಕಲಕಿಕೂಗಿ ಮರಳಿ ಬಾ ಎಂದು ಮೊರೆ ಇಟ್ಟಿದೆ|| ಅದೇ ಸಖ, ನಾ ಹೇಳುವುದುನನ್ನ ಹೃದಯದಲಡಗಿರುವನಿನ್ನ ಪ್ರೀತಿ ಒಂದು ಕಡಲಿನಂತೆಕಡೆದಾಗ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 06, 2007
 ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ…
ಲೇಖಕರು: hamsanandi
ವಿಧ: Basic page
March 06, 2007
 ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ…
ಲೇಖಕರು: anivaasi
ವಿಧ: Basic page
March 06, 2007
"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘನವಾದ ಮಾತು. ಈ ಮಾತಿನಲ್ಲಿ ತುಂಬಾ ಮೌಲಿಕವಾದ ವಿಚಾರಗಳಿವೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿಯನ್ನು ಇದು ನಿರ್ದೇಶಿಸುತ್ತದೆ, ನಿರೂಪಿಸುತ್ತದೆ. ಯಾವುದೋ ಅಮೂರ್ತವಾದ ನೆಲೆಯಲ್ಲಿ ನಮ್ಮ ದೇಶದ ಹಿರಿಮೆಯನ್ನು ನಾವು ಅರಿಯುವಂತೆ, ಕೊಂಡಾಡುವಂತೆ…
ಲೇಖಕರು: hpn
ವಿಧ: Basic page
March 06, 2007
ಕೆಲವು ದಿನಗಳ ಹಿಂದೆ [:http://sampada.net/user/modmani|ಮಂಜುನಾಥ್] "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ [:http://sampada.net/books|ಸಂಪದ ಸದಸ್ಯರ ಪುಸ್ತಕಗಳ ಪುಟ] ಹಾಗೂ ಪಟ್ಟಿ. ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥರ [:http://sampada.net/books/3222/Huckleberry_Finn|ಹಕಲ್ಬೆರಿ ಫಿನ್] ಅನುವಾದ. ಉಳಿದೆಲ್ಲ ಪುಸ್ತಕಗಳ ಪುಟಗಳನ್ನು ಇನ್ನೂ ಒಟ್ಟುಗೂಡಿಸಲಾಗುತ್ತಿದೆ. ಮಂಜುನಾಥರ ಪುಸ್ತಕ ಓದಿ…
ಲೇಖಕರು: rajeshnaik111
ವಿಧ: Basic page
March 06, 2007
ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ. ಗಾಳಿಪಟ ತಯಾರಿಸಲು…