ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 01, 2007
ಮಿತ್ರರೆ, ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆಲವು ವಿಷಯಗಳ ಮೇಲೆ ಕನ್ನಡದಲ್ಲಿ ಬರೆಯಲು ಇದಕ್ಕಿಂತ ಒಳ್ಳೆಯ ಜಾಗ ಎಲ್ಲಿ ದೊರೆಯುತ್ತದೆ? ಹಾಗಾಗಿ ಬ್ಲಾಗ್ ಮಂಡಲಕ್ಕೆ ನಾನೂ ಅಧಿಕೃತವಾಗಿ ಕಾಲಿಟ್ಟಿದ್ದೇನೆ. ನೀರಿನಲ್ಲಿ ಇಳಿದವನಿಗೆ ಚಳಿಯೇನು? ಮಳೆಯೇನು? ಆಗಿಂದಾಗ್ಗೆ ಬರೆಯಲು ಕಾಲ ಕೂಡಿಬರುತ್ತದೆಂಬ ಆಶಯವಂತೂ ಇದೆ.…
ಲೇಖಕರು: hpn
ವಿಧ: ಚರ್ಚೆಯ ವಿಷಯ
March 01, 2007
ಬಜೆಟ್ ಬಗ್ಗೆ ನೂರಾರು ಚ್ಯಾನಲ್ಲು ನೂರಾರು ವಿಷಯಗಳನ್ನ ನಿಮ್ಮ ತಲೆಗೆ ತುರುಕಿ ತಲೆಕೆಡಿಸಿದ್ದರೆ ಕೆಳಗಿನ ಲಿಂಕ್ ನಿಂದ ನೇರ ಈ ವರ್ಷದ ಬಜೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು. [:http://indiabudget.nic.in/ub2007-08/ubmain.htm]. ಕೆಲವು ಪುಣ್ಯವಂತರಂತೆ ನೀವೂ ಒಂದೇ ಚ್ಯಾನಲ್ಲು ಹೇಳಿದ್ದು ಕೇಳಿಕೊಂಡು ಸಂತೋಷ ಪಟ್ಟಿದ್ದೀರಾದರೆ ಹುಷಾರಾಗಿರಿ. ಅವರ Point of View ನಿಮ್ಮ ಮೇಲೆ ಹೇರಿಕೆಯಾಗಿಬಿಡಬಹುದು. ಚ್ಯಾನಲ್ಲುಗಳು ಪ್ರತಿಕ್ಷಣ ನಿಜಾಂಶ ಬಿತ್ತರಿಸುತ್ತಿರುತ್ತವೆ ಎಂಬುದಿಲ್ಲ. :P
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 28, 2007
ಆ ಕಡೆ - ಈ ಕಡೆ ನಮ್ಮ ನುಡಿಯ ವೈವಿಧ್ಯತೆ ಬಗ್ಗೆ ಯೋಚಿಸುತ್ತಿದ್ದೆ. ಆಗ ನನ್ನ ಅನುಭವಕ್ಕೆ ಬಂದ, ಒಂದೇ ಅರ್ಥ ಕೊಡುವ(ಹೆಚ್ಚು-ಕಡಿಮೆ) ಬೇರೆ ಬೇರೆ ಪ್ರದೇಶಗಳಲ್ಲ್ಲಿ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಿದ್ದೆ.  ಆ ಕಡೆ - ಈ ಕಡೆ ( ಸಾಮಾನ್ಯವಾಗಿ ಉಪಯೋಗಿಸುವ ಪದ)ಆ ಕಡಿ - ಈ ಕಡಿ (ಉತ್ತರ ಕರ್ನಾಟಕದ ಕಡೆ ಬಳಕೆಯಲ್ಲಿದೆ)ಆ ಚೊರಿ - ಈ ಚೊರಿ (ನಂಜನಗೂಡು ತಾಲ್ಲೂಕಿನ ಹಳ್ಳಿಗಳಲ್ಲಿ ಬಳಕೆಯಿದೆ!!)ಆ ತಪು  - ಈ ತಪು (ಚಾಮರಾಜನಗರ ಮತ್ತು ಗುಂಡ್ಲುಪೇಟೆಯ ತಾಲ್ಲೂಕಿನ ಹಳ್ಳಿಗಳಲ್ಲಿ ಬಳಕೆಯಿದೆ!!)…
ಲೇಖಕರು: Gurudatta N S
ವಿಧ: Basic page
February 28, 2007
ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!! ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!! ಪಾಪ ಇರುವುದೊಂದೆ ಹೊದಿಕೆ, ಬಿಳಿಮೋಡದ ಹೊದಿಕೆ...!! ಈ ಬೆಟ್ಟದಿಂದ ಆ ಬೆಟ್ಟಕೆ, ಅದರಿಂದ ಮತ್ತೊಂದಕೆ ಹೀಗೇ ಹೊತ್ತು ಹೊದಿಸಿ ನಡೆಯುತ್ತಾನೆ ಗಾಳಿರಾಯ!!! ಒಂದೇ ಹೊದಿಕೆಯ ಎಲ್ಲರಿಗೂ ಹೊದಿಸುತ್ತಾ ಸಾಗುತ್ತಾನೆ.. ಐಕ್ಯಮತವ ಸಾರುತಾ!!! ಬಿಸಿಲಲಿ ಬಸವಳಿದಾಗ, ಬೆವರೊಳು ತೋಯ್ದು ಹೋದಾಗ... ಅದೇ ಸಮಯದಿ ಈ ಹೊದಿಕೆಯ ನೆಳಲು ಬಂದಾಗ... ಮತ್ತದರ ಜೊತೆಯಲಿ ಬಿಸಿಗಾಳಿ ತೀಡಿದಾಗ...…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 28, 2007
ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts /advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ . ಅಲ್ಲಿ ದಿಕ್ಸೂಚಿಗೆ ಹೋಕಾಯಂತ್ರ ಎಂದಿದ್ದಾರೆ. ಆಗ್ನೇಯ , ವಾಯುವ್ಯ ,ನೈರುತ್ಯ , ಈಶಾನ್ಯ ದಿಕ್ಕುಗಳು ಯಾವುವು ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ . ದಿನ್ನೆ ಅಂದ್ರೆ ನಿಮಗೆ ಗೊತ್ತೇನು ? - ವ್ಯಾಖ್ಯೆ - ಸುತ್ತಲಿನ ನೆಲಕ್ಕಿಂತ ಎತ್ತರವಾದ ಭೂಮಿಗೆ ದಿನ್ನೆ ಎನ್ನುವರು!…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 28, 2007
ಈ ತಾಣವು ಅಮೇರಿಕ ಮತ್ತು ಇನ್ನು ಹಲವು ದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಪಟ್ಟಿಯನ್ನು ಹೊಂದಿದೆ. ಇದರ ಹುಡುಕು( search) ಚೆನ್ನಾಗಿದೆ. ಇಲ್ಲಿ ನಾನು 'kannada' ಕ್ಕೆ ಹುಡುಕಿದಾಗ ನನಗೆ ಸಿಕ್ಕ ಪುಸ್ತಕಗಳು, ಧ್ವನಿಮುದ್ರಿಕೆಗಳು  ಇಲ್ಲಿವೆ. ಇದು ತಕ್ಷಣ ಯಾವುದೇ ಪುಸ್ತಕದ ಹೆಸರು ಮತ್ತು ಅದರ ಲೇಖಕರ ಮಾಹಿತಿ ಪಡೆಯಲು ಸೂಕ್ತವಾಗಿದೆ. ಇಲ್ಲಿ ನಾವು ರಿವ್ಯೂ ಕೂಡ ಬರೆಯಬಹುದು. -ಜೈ ಕರ್ನಾಟಕ -------- WorldCat is the world's largest network of library content…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 28, 2007
ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದಾಗ ಅಲ್ಲಿ ಹೋಗಿ ಓದುವೆ . ಹಾಗೆಯೇ ಆಯಾ ಪುಸ್ತಕಗಳ ಕುರಿತು ಒಂದಿಷ್ಟು - ಅಲ್ಲಿನ ವಿಶೇಷ ಇತ್ಯಾದಿ ಈ ಬ್ಲಾಗ್ ನಲ್ಲಿ ಬರೆಯಬೇಕೆಂದಿದ್ದೇನೆ. ನೋಡೋಣ . ಇಂಥ ಎಷ್ಟೋ ಪ್ರೊಜೆಕ್ಟುಗಳನ್ನು ಶುರುಮಾಡಿ ...... ಬಿಟ್ಟಿದ್ದೇನೆ ! ( ಅಂದ ಹಾಗೆ ನನ್ನ ಹಿಂದಿನ ಪ್ರೊಜೆಕ್ಟು…
ಲೇಖಕರು: ಶ್ರೀನಿಧಿ
ವಿಧ: Basic page
February 28, 2007
ಕೊರೆವ ಚಳಿರಾತ್ರಿಯಲ್ಲೂ ತಾರಸಿಯ ಮೇಲೆ ಬವಳಿಸಿ ಬೇಸಿಗೆಯ ನೆನಪಿಸುತ್ತಾ ಮನಕೆ ತಂಪೆರೆದು ಹುಚ್ಚು ಹಿಡಿಸಿದ ಹುಡುಗಿ ಸಂಗೀತಾ.... ವಿ. ಸೂ: ಕಳೆದ ಚಳಿಗಾಲದಲ್ಲಿ ನನ್ನ ಸಂಗೀತ ಶಿಕ್ಷಣ-ಅನುಭವಗಳ ನೆನಪಿನಲ್ಲಿ ಬರೆದದ್ದು.
ಲೇಖಕರು: droupadhi
ವಿಧ: Basic page
February 28, 2007
ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ ಉರಿಯ ನಡುವೆ ಎರಡು ಹನಿ ಬೀಳಿಸಿ  ಹೋಯಿತು. ನೀ ಬಂದಾಗ ನನಗೆ ಆಗುವ ಹಾಗೆ , ಮಣ್ಣೆಲ್ಲ 'ಘಂ' ಅಂತ ಪುಲಕಗೊಂಡು, ನವಿಲುಗಳು ಬನದಲ್ಲಿ ಕೇಕೆ ಹಾಕಲು ತೊಡಗಿತು.
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 27, 2007
ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದವು ಎಂಬುದನ್ನು. ಒಂದು ದಂತ ಕಥೆಯ ಪ್ರಕಾರ ಆಗಿನ ಕಾಲದ ವಿಜಯನಗರದ ಸಾಮಂತ(?)ದೊರೆ ಪ್ರೌಢದೇವರಾಯನು ಚಾಮರಸ ಮತ್ತು ಕುಮಾರವ್ಯಾಸನಿಗೆ 'ಮಹಾಭಾರತ'ವನ್ನು ಕನ್ನಡದಲ್ಲಿ ಬರೆಯಲು ಹೇಳಿದಾಗ, ಇಬ್ಬರು ತಮ್ಮದೇ…