ಎಲ್ಲ ಪುಟಗಳು

ಲೇಖಕರು: Pradyumna Belavadi
ವಿಧ: ಬ್ಲಾಗ್ ಬರಹ
February 26, 2007
ಗೆಳೆಯರೇ, ಬಹುಶಃ ಬ್ಲಾಗ್ ಅನ್ನೊದು ಒಂದು ಇಲ್ಲದೇ ಇದ್ದಿದ್ದರೆ, ನಾನು ನನ್ನ ಅನಿಸಿಕೆಗಳನ್ನು (ಕನ್ನಡದಲ್ಲಿ) ಬರೆಯುವ ಪ್ರಯತ್ನವನ್ನು ಮಾಡ್ತನೇ ಇರ್ಲಿಲ್ಲ ಅನ್ಸುತ್ತೆ. ಮೊದಲೇ ನನ್ನ ಪರಿಚಯ ಹೇಳಿ ಬಿಡ್ತೇನೆ. ನಾನೊಬ್ಬ ಮೆಕಾನಿಕಲ್ ಇಂಜಿನಿಯರ್. ಅದು ಓದಿದ್ದು. ಆದರೆ ಆದದ್ದು ಸಾಪ್ಟ್ ವೇರ್ ಕಂಸಲ್ಟೆಂಟ್. ನಾ ಹುಟ್ಟಿದ್ದು ಶಿಕಾರಿಪುರದಲ್ಲಿ. ಶಿವಮೊಗ್ಗ ಜಿಲ್ಲೆ. ಬೆಳೆದಿದ್ದು, ಓದಿದ್ದು ಎಲ್ಲ ತುಮಕೂರಿನಲ್ಲಿ. ಬೆಳವಾಡಿ ಅನ್ನೋದು ನಮ್ಮ ತಂದೆಯವರು ಹುಟ್ಟಿ ಬೆಳೆದ ಹಳ್ಳಿ. ಚಿಕ್ಕಮಗಳೂರು…
ವಿಧ: ಬ್ಲಾಗ್ ಬರಹ
February 26, 2007
ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಗೊತ್ತುಮಾಡಿಕೊಂಡು ಮುಂದುವರಿಯಬೇಕು ಅಂತ. ಈ ಕ್ರಮ ಇಂದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ವಿಶ್ಲೇಷಿಸಬೇಕಾದರೆ ಬಹಳ ಪ್ರಸ್ತುತವಾಗಿದೆ. ಹಾಗಾಗಿ ನನ್ನ ಪೂರ್ವಾಗ್ರಹಗಳನ್ನು ಮೊದಲೇ ಹೇಳಿಕೊಂಡು ಮುಂದುವರೆಯುತ್ತೇನೆ. ೧.…
ಲೇಖಕರು: ASHOKKUMAR
ವಿಧ: Basic page
February 25, 2007
ನಿಮ್ಮ ಮನೆಗಳಲ್ಲಿ ಮದುವೆ ನಡೆದಾಗ ಜವಳಿ ಖರೀದಿಸಿದ್ದು ನೆನಪಿಸುವ "ಪ್ರಜಾವಾಣಿ" ಬರಹ ಓದಿ: ಮದುವೆ ಜವಳಿ ಖರೀದಿ
ಲೇಖಕರು: droupadhi
ವಿಧ: Basic page
February 25, 2007
ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ ವರದಾ ನದಿಯ ನೀರು ನೀಲಿ ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ
ಲೇಖಕರು: muralihr
ವಿಧ: ಚರ್ಚೆಯ ವಿಷಯ
February 25, 2007
ಸ೦ಸ್ಕೃತ ನಾಟಕ ಕೆಳಗೆ ಕೊಟ್ಟಿರುವ ಸ೦ಸ್ಕೃತ ನಾಟಕಕಾರರ ಪಟ್ಟಿಯಲ್ಲಿ , ನಾಟಕಕಾರರ ನಾಟಕಗಳ ಹೆಸರನ್ನು ತಿಳಿಸಿ. ೧> ಭಾಸ ೨>ಕಾಳಿದಾಸ ೩>ಶೂದ್ರಕ ೪>ವಿಶಾಖದತ್ತ ೫>ಅಶ್ವಘೋಷ. ೬>ಹರ್ಷವರ್ದನ ೭>ಭವಭೂತಿ ೮>ರಾಜಶೇಖರ.
ಲೇಖಕರು: muralihr
ವಿಧ: Basic page
February 25, 2007
ಪುನರ್ಜನ್ಮವೆ೦ಬುದು ಅಹ೦ಕಾರದ ಮಾತು - "ಜೆ.ಕೆ. ಯವರ ಅನುದಿನ ಚಿ೦ತನ " ಪುಸ್ತಕದಿ೦ದ. ಕನ್ನಡಕ್ಕೆ "OLN SWAMY" ನೀವು ಮತ್ತೆ ಜನ್ಮ ತಾಳುತ್ತೀರಿ , ಬದುಕುತ್ತೀರಿ ಎ೦ಬ ವಿಶ್ವಾಸವನ್ನು ನಾನು ನೀಡಬೇಕೆ೦ದು ಬಯಸುತ್ತೀರಿ. ಆದರೆ ಇ೦ಥ ಪುನರ್ಜನ್ಮದಲ್ಲಿ ವಿವೇಕವೂ ಇಲ್ಲ, ಆನ೦ದವೂ ಇಲ್ಲ. ಪುನರ್ಜನ್ಮದ ಮೂಲಕ ಅಮರತ್ವವನ್ನು ಬಯಸುವುದು ಮೂಲತ: ಅಹ೦ಕಾರದ ಮಾತು. ಅದು ಅಹ೦ಕಾರ ಮೂಲದ ಮಾತಾದುದರಿ೦ದಲೇ ಸತ್ಯವಲ್ಲ. ಪುನರ್ಜನ್ಮ ತಾಳಿ ಬದುಕು ಮು೦ದುವರೆಸುವ ಬಯಕೆಯು ಬದುಕು ಮತ್ತು ವಿವೇಕಗಳಿಗೆ…
ಲೇಖಕರು: ananth_hs
ವಿಧ: Basic page
February 25, 2007
ಗೂಗಲ್ ಮತ್ತು ಕನ್ನಡಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ ಟೈಪ್ ಮಾಡಬಹುದು. ಇಲ್ಲಿ ನನ್ನದೇ ಆದ ಕೀಲಿಮಣೆ ವಿನ್ಯಾಸವನ್ನು ಬಳಸಿದ್ದು, ಇದು ಕಗಪ ಕೀಲಿಮಣೆಗಿಂತ ಭಿನ್ನವಾಗಿದೆ. ನನ್ನ ಅಂತರ್ಜಾಲ ಪುಟದ ವಿಳಾಸ ಹೀಗಿದೆ:http://karnataka.110mb.com/google.htmlಇದು ಗೂಗಲ್ ಕನ್ನಡಕ್ಕಿಂತ ಭಿನ್ನವೇ? ಹೌದು…
ಲೇಖಕರು: Shyam Kishore
ವಿಧ: ಪುಸ್ತಕ ವಿಮರ್ಶೆ
February 25, 2007
ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು…
ಲೇಖಕರು: Shyam Kishore
ವಿಧ: Basic page
February 25, 2007
ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು)…
ಲೇಖಕರು: droupadhi
ವಿಧ: Basic page
February 24, 2007
ನೀನು ಸಣ್ಣಗಿದ್ದೀಯ ಆದರೂ  ಚನ್ನಾಗಿದ್ದೀಯ ಯಾಕೆ ಸಣ್ಣಗೆ ಕಂಪಿಸುತ್ತೀಯ? ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ ನೀನು 'ಸಹೋದರೀ'ಅಂದೆ ಆದರೂ ನನಗೆ ಖುಷಿಯಾಯಿತು ನೀ ಇನ್ನೆಂದು ಬರುವೆ?