ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 20, 2007
(ಈ ವಿಷಯವನ್ನು ಎಲ್ಲಿ ಹಾಕಬೇಕೆಂದು ತಿಳಿಯಲಿಲ್ಲ ಹಾಗಾಗಿ ಬ್ಲಾಗಿನಲ್ಲೇ ಹಾಕಿದ್ದೇನೆ) ಗೆಳೆಯರೆ, ನಿಮಗಿನ್ನು ಗೊತ್ತಿಲ್ಲದಿದ್ದರೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯ ತಾಣಕ್ಕೆ ಭೇಟಿ ಕೊಡಿ. ಇಲ್ಲಿ ಗೂಗಲ್ ಬುಕ್ಸ್ ಮಾದರಿಯಲ್ಲಿ ಬಹಳ ಕನ್ನಡ ಪುಸ್ತಕಗಳಿವೆ .  ಆ ತಾಣಕ್ಕೆ ಹೋದ ಮೇಲೆ ನೀವು ಪುಸ್ತಕ ಓದಲು "interface2(beta)" ಒತ್ತಿ (interface1 ನನಗೆ ಕೆಲಸ ಮಾಡುತ್ತಿಲ್ಲ). ನನಗೆ ಹಲವು ಹಳೆಯ ಕನ್ನಡ ಪುಸ್ತಕಗಳು (ಮನೋಹರ ಗ್ರಂಥ ಮಾಲೆ, ಬೆಂಗಳೂರು ಪ್ರೆಸ್ ಇವರು ಪ್ರಕಾಶಿಸಿರುವ)ಇಲ್ಲಿ…
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
February 19, 2007
ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ. ಇದು ಕನ್ನಡದ ಸೋಲೆ? ನಿಮಗೇನನ್ನಿಸುವದು?
ಲೇಖಕರು: anupkumart
ವಿಧ: ಬ್ಲಾಗ್ ಬರಹ
February 19, 2007
ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ ನೋಡಲಿಕ್ಕೆ ಎರಡು ಕಣ್ಣು ಸಾಲದಮ್ಮ ... ನಮ್ಮ ನಗರದಲ್ಲಿ ಯಾವ ಶಾರದಮ್ಮ ಸ್ವಾಮಿ? ಅದು ಹೆಸರಿನಲ್ಲಿ ಮಾತ್ರ. ಈಗೇನಿದ್ದರೂ ಕುಂಕುಮವಿಲ್ಲದ ಬೋಳು ಹಣೆ, ಬಳೆಯಿಇಲ್ಲದ ಬಡ ಕೈ, ಗೆಜ್ಜೆಯಿಲ್ಲದ ಬರಡು ಕಾಲು; ಇದೆಲ್ಲ ಸಾಲದೇನೋ ಎಂಬಂತೆ ಮೈಗೆ ಸಲ್ಲದ ಬಟ್ಟೆ. ಅಷ್ಟಿಲ್ಲದೆ ನಮ್ಮ ಹಿರಿಯರು "ಅಡುಗೆ ಮಾಡಿ ಕಲಿ... ಉಡುಗೆ ನೋಡಿ ಕಲಿ ... " ಎಂಬ ಗಾದೆ ಕೊಡುತ್ತಿದ್ದರೆ? ನಾವು ತೊಡುವ ಬಟ್ಟೆಯನ್ನು ನೂರಾರು ಜನರು ಗಮನಿಸುತ್ತಿರುತ್ತಾರೆಂಬ, ಇನ್ನೊಬ್ಬರು ಯಾರೋ…
ಲೇಖಕರು: sathishcv
ವಿಧ: ಚರ್ಚೆಯ ವಿಷಯ
February 18, 2007
ಇನ್ನೊಂದು ಕನ್ನಡ ದಿನಾಚರಣೆ ಬಗ್ಗೆ ಇರುವ ಚರ್ಚಾ ವಿಷಯವನ್ನು ಸಮುದಾಯ ಪುಟದಿಂದ ಸಮಾಜ ಪುಟಕ್ಕೆ ಸೇರಿಸಲು ವಿನಂತಿ. ಅದು ಪ್ರಮಾದವಶಾತ್ ಸಮುದಾಯ ಪುಟಕ್ಕೆ ಸೇರಿಕೊಂಡಿದೆ.
ಲೇಖಕರು: kirankn
ವಿಧ: ಬ್ಲಾಗ್ ಬರಹ
February 18, 2007
ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತ. ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸುಮಾರು 500-600 ಜನ ಮಾತ್ರ. ಸಂತೋಷದ ವಿಷಯವೆಂದರೆ ಕಾರ್ಯಕ್ರಮವು ಅಂದುಕೊಂಡಹಾಗೆ ಶಾಂತಿಯುತವಾಗಿ ನೆರವೇರಿತು. ಆದರೆ ಬರಿ ಅಷ್ಟೆ ಜನ ಭಾಗವಹಿಸಿದರು ಅಂತ ಬೇಜಾರು ಆಯಿತು. ನಮ್ಮ ಜನರಿಗೆ ತಮ್ಮ ಮನೆಗಳಿಗೆ ಕಾವೇರಿ…
ಲೇಖಕರು: sathishcv
ವಿಧ: ಚರ್ಚೆಯ ವಿಷಯ
February 18, 2007
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ ಆಚರಿಸಿದರೆ ನಮ್ಮಲ್ಲಿ ಕನ್ನಡತನ ಜಾಗೃತಿಗೆ ಸಹಾಯಕರವಾಗುವುದು. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 18, 2007
ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ವಿಕಿಪಿಡಿಯಾದಲ್ಲಿ ನೋಡಿ ... ಚಿತ್ತೋಡಗಡ ರಾಜ ಮಹಾರಾಜರ ನಾಡು, ವೀರಾಗ್ರಣಿಗಳ ತವರೂರು. ಈ ಊರಿನ ಅರ್ಧ ಭಾಗ ಗುಡ್ಡದ ಮೇಲಿರುವ ಕೋಟೆ ಆಕ್ರಮಿಸಿಕೊಂಡಿದೆ. ಈ ಊರಿಗೆ ಆಗಮಿಸಿತ್ತಿದ್ದಂತೆ ಇದೊಂದು ಐತಿಹಾಸಿಕ ಊರೆಂದು ನಿಮ್ಮ ಗಮನಕ್ಕೆ ಬಂದರೆ ಆಶ್ಚರ್ಯವೇನಿಲ್ಲ (ಇದು ಒಂದು ದೃಷ್ಟಿಯಲ್ಲಿ ನಮ್ಮ…
ಲೇಖಕರು: naveenbm
ವಿಧ: ಬ್ಲಾಗ್ ಬರಹ
February 18, 2007
ರಿಮೋಟ್ ಕಂಟ್ರೋಲ್‌ನ ಸಹ ಅನ್ವೇಷಕರಲ್ಲಿ ಒಬ್ಬರಾದ ರಾಬರ್ಟ್ ಅಡ್ಲರ್ ಅವರು ಇಂದು ನಿಧನ ಹೊಂದಿದರಂತೆ. ನಮ್ಮೆಲರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂತಹ ಸಾಧನವನ್ನು ಕಂಡು ಹಿಡಿದ ಅಡ್ಲರ್‍ರಿಗೆ Hats-off. ತನ್ನ ಅನ್ವೇಷಕನಿಕೆ ಸಂತಾಪ ಸೂಚಿಸಲೋ ಎನೋ ಎಂಬಂತೆ ನಿನ್ನೆಯಿಂದ ನಮ್ಮ ಮನೆಯ ರಿಮೋಟ್ ಕಾರ್ಯನಿರ್ವಹಿಸುವುದು ನಿಲ್ಲಿಸಿಬಿಟ್ಟಿದೆ. ಅರ್ಧ ಗಂಘೆಗೊಮ್ಮೆ ಟಿವಿಯಲ್ಲಿ ಬರುವ ಎಲ್ಲ ೧೦೦ ಚಾನೆಲ್‌ಗಳನ್ನು scan ಮಾಡಿ, ಬರುವ ಎಲ್ಲಾ ಕಾರ್ಯಕ್ರಮಗಳ collage ಅನ್ನೇ ಒಂದು…
ಲೇಖಕರು: bcnrathna
ವಿಧ: ಬ್ಲಾಗ್ ಬರಹ
February 17, 2007
ಛೀ ಈ ಮನುµÀå ಏನ¥Àà ಹೇಗೆ¯Áè ವwðಸುvÁÛನೆ ಎಂದು ಬೇರೆಯವರ ಬUÉÎ AiÉÆÃಚಿಸುವಾಗ, ನಾವು ಬೇರೆಯವರೊಡನೆ ಹೇಗೆ¯Áè ಸಹ್ಯವಾಗಿರಬೇಕೆಂದು ಯೋಚಿಸಲೇಬೇಕು. ಇಂಥ ಸಾಧನೆ ಬದುQಗೆ ಅಳವಡಿಸಿಕೊಂಡಾಗಲೇ ಬದುಕು ಸºÀå. ದೇಹ ಮvÀÄÛ ಮನ¸ÀÄì ಎರಡೂ ಆgÉÆÃUÀåವಾಗಿರುvÀÛದೆ. ನಾವು ಧೀಘð ಕಾಲ ಬದುಕುವುದೇ ಗುರಿಯ®è. ಬದುಕಿರುವµÀÄÖ ಸಮಯ ಬೇರೆಯವರಿಗೆ ಉಪಕಾರಿಯ®èದಿzÀÝರೂ ಅಪಕಾರಿಯಾಗದೇ ಬದುಕಿದಾಗ ಆರೋUÀåವಂತ ಸಮಾಜ ನಿªÀiÁðಣವಾಗುvÀÛದೆ.
ಲೇಖಕರು: anant pandit
ವಿಧ: ಚರ್ಚೆಯ ವಿಷಯ
February 17, 2007
ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೋ? ಅಂತು ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯ ಆಗಿದೆ. ಇದಕ್ಕೆ ಪರಿಹಾರ ಕೇಂದ್ರ ಅಂತರ್ ರಾಜ್ಯ ನೀರು ಹಂಚಿಕೆಗೆ ಸಂಬಂಧ ಪಟ್ಟಂತೆ ಕಾನೂನು ರಚಿಸುವದು. ಸೂಕ್ತ ಜಲಮಾಪನ ವ್ಯವಸ್ಥೆ ಕಲ್ಪಿಸುವದು. ಅಲ್ಲಿ ಸಂಬಂಧ ಪಟ್ಟ ರಾಜ್ಯಗಳ ಅಧಿಕಾರಿಗಳನ್ನು ನೇಮಿಸುವದು. ಯಾವುದೇ…