ವಿಧ: ಚರ್ಚೆಯ ವಿಷಯ
February 15, 2007
ಈ ವರ್ಷದ ಮುಂಗಡಪತ್ರ ತಿಂಗಳಾಂತ್ಯದಲ್ಲಿ ಸಂಸತ್ ಮುಂದೆ ಮಂಡನೆಯಾಗಲಿದೆ. ಇದರ ಬಗ್ಗೆ ಹೆಚ್ಚಿನವರು ನಿರಾಸಕ್ತಿ ಹೊಂದಿರಬಹುದು. ಕರ ವಿನಾಯಿತಿ ಸಿಗಬಹುದೇ? ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುತ್ತಾರೋ ಇಳಿಸುತ್ತಾರೋ? ಸೇವಾ ತೆರಿಗೆಗಳ ವ್ಯಾಪ್ತಿ ಹೆಚ್ಚಿಸಲಿದ್ದಾರೆಯೇ? ಚಿದಂಬರ ರಹಸ್ಯ ಏನಿರಬಹುದು?
ವಿಧ: ಚರ್ಚೆಯ ವಿಷಯ
February 15, 2007
ಗೋವಾದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವನ್ನು ಭಾರತ ಜಯಿಸಲು ನಾಯಕ ದ್ರಾವಿಡ್ ಅವರ ಅರ್ಧ ಶತಕ ನೆರವಾಯಿತು. ಇದರೊಂದಿಗೆ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಾರಿಸಿದ ರನ್‍ಗಳ ಸಂಖ್ಯೆ ಹತ್ತು ಸಾವಿರ ದಾಟಿತು. ಇದರ ಬಗೆಗೆ vijaytimes ನೀಡಿದ ಶೀರ್ಷಿಕೆ ಆಕರ್ಷಕವಾಗಿತ್ತು;
10,000
BRICKS IN THE
WALL
ವಿಧ: ಬ್ಲಾಗ್ ಬರಹ
February 15, 2007
("ಸಂಪದ" ದಲ್ಲಿ ಓದಿದ ಕವನ ಬರೆಯುವುದು ಹೇಗೆ ಸ್ಪೂರ್ತಿ-ಪವನಜರ ಸಲಹೆ ಶಿರಸಾ ವಹಿಸಿದ್ದೇನೆ)ಫೆಬ್ರವರಿ ಹದಿನಾಲ್ಕರಂದು ಆಚರಿಸಿದರವರು ಪ್ರೇಮಿಗಳ ದಿನಮಕ್ಕಳ ದಿನಾಚರಣೆನವಂಬರ ಹದಿನಾಲ್ಕಕ್ಕೆ ಇತ್ತುಪಾಪೂ ಅವರಿಗೆ ಜೊತೆ!ನಿನ್ನೆ ಫೆಬ್ರವರಿ ಹದಿನಾಲ್ಕು-ಗೆಳೆಯ ಮಾಡಿ ಫೋನು ಕರೆಹೇಳಿದ ಶುಭ ಸಮಾಚಾರಆಗಿದ್ದೀನಿ ಅಪ್ಪ!ಯೋಚನೆ ಹಾದು ಹೋಯಿತುಯಾವಾಗ ಆಚರಿಸಿರಬಹುದು ಆತಪ್ರೇಮಿಗಳ ದಿನ?
ವಿಧ: ಬ್ಲಾಗ್ ಬರಹ
February 15, 2007
ಶಾಲೆಯಲ್ಲಿ ಹಾಡಿದ ಹಾದು ಈಗ ನೆನಪಿನಂಗಳದಲ್ಲಿ ಹಾಗೆ ಕಾಣಿಸಿಕೊಂಡಿತು. ಅದರ ಮೊದಲನೇ ಸಾಲು ಹೀಗಿದೆ - "ನುಡಿದರೆ ಮುತ್ತಿನ ಹಾರದಂತಿರಬೇಕು". ಇದರಲ್ಲಿ ಯಾರಿಗೂ ಅರ್ಥವಾಗದ, ವಿಶ್ಲೇಷಿಸಲಾಗದ, ಗಾಢವಾದ, ನಿಗೂಢವಾದ ಅರ್ಥವೇನೂ ಇಲ್ಲ. ಮುತ್ತಿನ ಹರಳು ನೋಡಲು ಸರಳ ಹಾಗೂ ಸೌಮ್ಯ. ಅಂತೆಯೇ ಕೇಳುವವರಿಗೂ ನಮ್ಮ ಮಾತು, ಅದರ ಪದಗಳು ಇರಬೇಕು ಎಂಬ ಅರ್ಥ ಅದರಲ್ಲಿದೆ.
ನಾವು ಬೆಳೆಸಿದಂತೆ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತವೆ. ಕುವೆಂಪುರವರನ್ನು ಶಬ್ದ ಟಂಕಸಾಲಿಯೆಂದು, ಬೇಂದ್ರೆಯವರನ್ನು ಶಬ್ದ…
ವಿಧ: Basic page
February 14, 2007
[:http://sampada.net/forum/3040|"ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು"] ಲೇಖನವನ್ನು ಈ ಹಿಂದೆ ಬರೆದಿದ್ದೆ.
ಈಗ ಕೆಳಗಿನ ಡಾಕ್ಯುಮೆಂಟರಿ ನೋಡಿ:
ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ನನ್ನದು.
ಕ್ಯಾಮೆರ, ಸಂಕಲನ ಮಾಡುವ ಮೂಲಕ ಜೊತೆಯಾದವರು [:http://www.rlp.in/|ಅಭಯ ಸಿಂಹ].
ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು [:http://sampada.net/comment/reply/3185#comment_form|ದಯವಿಟ್ಟು ಇಲ್ಲಿ ದಾಖಲಿಸಿ].
ಜನಮತ
[:http://sampada.net/poll/3048|ಇದೇ…
ವಿಧ: ಬ್ಲಾಗ್ ಬರಹ
February 14, 2007
ಏನ ಬರೆಯಲಿ? ಇದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ದಿನಗಳೆದಂತೆ ಬರೆಯುವುದರತ್ತ ಮನಸ್ಸು ಹೋಗ್ತಾನೇ ಇಲ್ಲ.
ಯಾಕೋ ಗೊತ್ತಿಲ್ಲ.Inspiration ಇಲ್ವೋ, ಅಥವಾ, ಬರೆಯೋದಕ್ಕೆ ಸಮಯ ಸಾಕಾಗ್ತಾ ಇಲ್ವೋ.
ಉಹುಂ... ಉತ್ತರ ಸಿಗ್ತಾ ಇಲ್ಲ. ಯಾಕೋ ಗೊತ್ತಿಲ್ಲ.
ನನ್ನ ಈ ಪ್ರಲಾಪಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ಕೆಲ ತಿಂಗಳುಗಳು ನನಗೆ ನಿರಾಶಾದಾಯಕವಾಗಿತ್ತು. ಬಹಳ
activity ಇದ್ದೇ ಇತ್ತು. ಜೀವನ ನಿಂತ ನೀರಾಗಲಿಲ್ಲ. ಆದರೆ, ಆದರೆ, ನಾನು ನಾನಾಗಿ ಉಳಿದಿದ್ದೇನಾ?
ಇಲ್ಲ, ಹಾಗನಿಸೋದಿಲ್ಲ.…
ವಿಧ: Basic page
February 14, 2007
ನಿನ್ನ ಅಪ್ಪುಗೆಯ ಬಿಗುವಲ್ಲಿ
ನಾ ಕರಗಬೇಕೊಮ್ಮೆ ಗೆಳತಿ
-------
ನಿನ್ನ ಮುತ್ತುಗಳ ಮಳೆಯಲ್ಲಿ
ನಾ ತೋಯಬೇಕೊಮ್ಮೆ ಗೆಳತಿ
-------
ನಿನ್ನ ಬಿಸಿಯುಸಿರ ಬೇಗೆಯಲ್ಲಿ
ನಾ ಬೇಯಬೇಕೊಮ್ಮೆ ಗೆಳತಿ
-------
ನಿನ್ನ ನೆನಪುಗಳ ಗುಂಗಲ್ಲಿ
ನಾ ನನ್ನೇ ಮರೆಯಬೇಕೊಮ್ಮೆ ಗೆಳತಿ
-------
ನಿನ್ನ ಕಂಗಳ ಬೆಳಕಲ್ಲಿ
ನಾ ಕುರುಡಾಗಬೇಕೊಮ್ಮೆ ಗೆಳತಿ
-------
ನಿನ್ನ ಗುಂಡಗೆಯ ನಗಾರಿಯಲ್ಲಿ
ನಾ ಕಿವುಡಾಗಬೇಕೊಮ್ಮೆ ಗೆಳತಿ
-------
ನಿನ್ನ ಪಿಸುಮಾತುಗಳ ಮರ್ಮರದೊಳು
ನಾ ಮೂಗನಾಗಬೇಕೊಮ್ಮೆ ಗೆಳತಿ
------…
ವಿಧ: ಬ್ಲಾಗ್ ಬರಹ
February 14, 2007
ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ನಮಗೇಕೆ ಅದರ ಯೋಚನೇಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ.... || ಅರಳುತಿರು ||
http://www.kannadalyrics.com/?q=node/1128
ವಿಧ: ಬ್ಲಾಗ್ ಬರಹ
February 14, 2007
ಸಂಪದ ಕನ್ನಡಿಗ ಪ್ರೇಮಿಗಳಿಗೆ, ಪ್ರೇಮಿಸಿ ವಿವಾಹ ವಾಗಿರುವ ದಂಪತಿಗಳಿಗೆ, ಪ್ರೀತಿಸುತ್ತಿರುವವರಿಗೆ ಆರೈಸುವೆ ಅನುದಿನವೂ ನಿಮ್ಮ ಬದುಕು ಹಾಲು ಜೇನ ಹೊಳೆಯಾಗಿ ಸಂತಸದ ಪರಿಮಳದ ಪುಷ್ಪವು ಸದಾನಿಮ್ಮ ಮನೆಮನದಲ್ಲಿ ಅರಳಿ ನಗುತ್ತಿರಲಿ.-ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
February 14, 2007
"ಇಂದು ಸಂತ ವ್ಯಾಲಂಟೀನನ ದಿವಸ
ಎಲ್ಲ ಕಡ ಶತಸ್ವರದ ಗಿಜಿಗಿಜಿ ಹರುಷ
ನಾನು ಕನ್ನಿಕೆ; ನಿಮ್ಮ ಕಿಟಕಿ ಬಳಿ ಬಂದವಳು;
ನನ್ನ ಕಂಡರೆ ನೀವು ಹರಿಯುವುದು ಸುಖ ವರುಷ!"
ರಾಮಚಂದ್ರದೇವರ ಅದ್ಭುತ ಅನುವಾದದ ಹ್ಯಾಮ್ಲಟ್ ನಾಟಕದಲ್ಲಿ ಒಫೀಲಿಯಾ ಹ್ಯಾಮ್ಲೆಟ್ ಗೆ ಹೇಳುವ ಮಾತುಗಳು. ಆಲಿಂಗನದಲ್ಲಿ, ಚುಂಬನದಲ್ಲಿ, ಒಟ್ಟಿನಲ್ಲಿ ಪ್ರೇಮದ ಅಮಲಿನಲ್ಲಿರುವವರು ಈವತ್ತು ಎಲ್ಲ ಕಡೆಯೂ ಕಂಡಾಗ ನೆನಪಾದ ಸಾಲುಗಳು. ವ್ಯಾಪಾರೀಕರಣದ ದಿನಗಳಲ್ಲೂ ಮುದಕೊಡುವ ವಾತಾವರಣ ಸುತ್ತಮುತ್ತ.