ವಿಧ: ಪುಸ್ತಕ ವಿಮರ್ಶೆ
June 15, 2023
ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ.
'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ…
ವಿಧ: ಬ್ಲಾಗ್ ಬರಹ
June 14, 2023
ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು.
ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ.
ಇದು ತೆಲುಗಿನ ಪುಸ್ತಕವೊಂದರ ಅನುವಾದ. ಇದು ಕತೆ ಅಥವಾ ಕಾದಂಬರಿ ಏನಲ್ಲ, ಆದರೆ ಇತಿಹಾಸ ದೃಷ್ಟಿಯಿಂದ 'ಚಂದ್ರಗುಪ್ತ ಚಕ್ರವರ್ತಿ'ಯ ಕುರಿತು ಇದೆ. ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಾವು ಓದಿರುತ್ತೇವೆ , ತಿಳಿದಿರುತ್ತೇವೆ. ಆದರೆ ಆ ಸಂಗತಿಗಳ ಮೂಲ ಏನು…
ವಿಧ: ಪುಸ್ತಕ ವಿಮರ್ಶೆ
June 13, 2023
ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ ಪ್ರೇರೇಪಿಸುತ್ತದೆ. ೯೬ ಪುಟಗಳ ಪುಟ್ಟ ಕಥಾ ಸಂಕಲನ. ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡದ ಮತ್ತೊರ್ವ ಖ್ಯಾತ ಕತೆಗಾರ ಎಸ್ ದಿವಾಕರ್ ಇವರು. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಕನ್ನಡದಲ್ಲಿ ಸಣ್ಣಕತೆಗೆ ಪುನಃಶ್ಚೈತನ್ಯವನ್ನು ತಂದುಕೊಡುವ ಹೊಸ…
ವಿಧ: ಪುಸ್ತಕ ವಿಮರ್ಶೆ
June 10, 2023
‘ಸಿನಿ ಲೋಕ ೨೧’ ಪುಸ್ತಕವು ಇಪ್ಪತ್ತೊಂದನೇ ಶತಮಾನದ ಆಯ್ದ ಜಾಗತಿಕ ಶ್ರೇಷ್ಟ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಸಂಕಲನವಾಗಿದೆ. ಎ.ಎನ್.ಪ್ರಸನ್ನ ಈ ಕೃತಿಯ ಲೇಖಕರು. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ಮರೆದ ನುಡಿಗಳು ಹೀಗಿವೆ...
“ಸಿನಿಲೋಕ-21 ಕೃತಿಯು ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತ ಲೇಖನ…
ವಿಧ: ಪುಸ್ತಕ ವಿಮರ್ಶೆ
June 08, 2023
ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ತಾವು ಬರೆದ ಕಥೆಗಳನ್ನು ಒಟ್ಟುಗೂಡಿಸಿ ‘ನಾಟಕೀಯ' ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ೯೮ ಪುಟಗಳ ಪುಟ್ಟ ಪುಸ್ತಕದ ಕಥೆಗಳ ಬಗ್ಗೆ ಕಥೆಗಾರ ಪ್ರೇಮಕುಮಾರ್ ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...
“ಪ್ರಸ್ತುತ ಕರ್ನಾಟಕದ ಸಾಮಾಜಿಕ ಸಂದರ್ಭ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ರೂಢಿಸಿಕೊಂಡು ಬಂದ ಸೌಹಾರ್ದ ಪರಿಸರ ಕ್ರಮೇಣ ಕಣ್ಮರೆಯಾಗುತ್ತಿದೆ. ಇತಿಹಾಸವನ್ನು ವಿಕೃತಗೊಳಿಸಿ ಅಸಹನೆಯ ಬೀಜಗಳನ್ನು ಬಿತ್ತಿ ಫಸಲು ತೆಗೆಯುವ…
ವಿಧ: ಪುಸ್ತಕ ವಿಮರ್ಶೆ
June 06, 2023
ವೀರಣ್ಣ ಮಡಿವಾಳರ ಇವರು ಬರೆದ ‘ನಾಗರ ನುಂಗಿದ ನವಿಲುʼ ಸಂಕಲನದಲ್ಲಿ ೫೪ ಕವಿತೆಗಳಿವೆ. ಈ ೧೨೦ ಪುಟಗಳ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಪುರುಷೋತ್ತಮ ಬಿಳಿಮಲೆ ಇವರು. ಇವರ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ವೀರಣ್ಣ ಮಡಿವಾಳರ ಬಹಳ ತೀವ್ರತೆಯಿಂದ ಬರೆಯುತ್ತಿರುವ ಕವಿ. ಅವರಿಗೆ ಬರವಣಿಗೆ ಎಂಬುದು ಬದುಕಲು ಬೇಕಾದ ಒಂದು ಉತ್ಕೃಷ್ಟ ಬದ್ಧತೆ. ಉಸಿರಾಡಲು ಬೇಕಾದ ಗಾಳಿ ಮತ್ತು ಸಂಭ್ರಮಿಸಲು ಬೇಕಾದ ಒಂದು ವಸ್ತು. ಹಾಗಾಗಿ ಎಲ್ಲಿಯೂ ಅವರ ಅಕ್ಷರಗಳು…
ವಿಧ: ಪುಸ್ತಕ ವಿಮರ್ಶೆ
June 03, 2023
ಖ್ಯಾತ ಮರಾಠಿ ಲೇಖಕ ಅಶೋಕ ಪವಾರ್ ಅವರ ಆತ್ಮಕಥನವು ‘ಬಿಡಾರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರವಾಗಿದೆ. ಖ್ಯಾತ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಕನ್ನಡಕ್ಕೆ ತಂದಿದ್ದಾರೆ. ಸುಮಾರು ೨೫೦ ಪುಟಗಳ ಈ ಕಾದಂಬರಿಯ ಆಯ್ದ ಭಾಗ ಮತ್ತು ಅನುವಾದಕರಾದ ಚಂದ್ರಕಾಂತ ಪೋಕಳೆ ಅವರ ಮಾತುಗಳು ಇಲ್ಲಿವೆ...
ಚಂದ್ರಕಾಂತರು ಕಂಡಂತೆ “ಮರಾಠಿಯಲ್ಲಿ ದಲಿತ ಆತ್ಮಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಮರಾಠಿಯ ಹಲವು ಆತ್ಮಕಥೆಗಳು ಕಾದಂಬರಿಯ ಸ್ವರೂಪವನ್ನು ಹೊಂದಿ ರಸವತ್ತಾಗಿ ಓದಿಸಿಕೊಂಡು ಹೋಗುತ್ತವೆ. ಮರಾಠಿ…
ವಿಧ: ಪುಸ್ತಕ ವಿಮರ್ಶೆ
June 01, 2023
ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ ಬವಣೆಗಳನ್ನು ಸವಿವರವಾಗಿ ತಿಳಿಸುವ ಹೊತ್ತಗೆಯೊಂದು ಬಿಡುಗಡೆಯಾಗಿದೆ. ಯಕ್ಷಪ್ರೇಮಿ ಲೇಖಕರಾದ ಸೃಜನ್ ಗಣೇಶ್ ಹೆಗಡೆ ಅವರು ಬರೆದ ‘ಉತ್ಕಟ' ಎಂಬ ೯೮ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಯಕ್ಷಗಾನ, ಕಲಾವಿದರ ಬದುಕು, ಉಳಿದುಕೊಂಡ ಮೂಲ ಸತ್ವ ಬಗ್ಗೆ ಬಹಳ ಸೊಗಸಾದ…
ವಿಧ: ಪುಸ್ತಕ ವಿಮರ್ಶೆ
May 30, 2023
ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ ಶರ್ಮಾ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ವಿಷಯಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದುವಿರಾಗಿ...
“ಮಹಾಭಾರತವನ್ನು ವಿಶ್ವಕೋಶ ಎಂದು ಕರೆಯಬೇಕು. ಅದರಲ್ಲಿ ಅಷ್ಟು ವಿಷಯಗಳು ಆಡಕವಾಗಿವೆ. ವಿಶೇಷವೆಂದರೆ ಅಂದೆಂದೋ ರಚಿತವಾದ ಆ ಕೃತಿ ಇಂದಿಗೂ…
ವಿಧ: ಪುಸ್ತಕ ವಿಮರ್ಶೆ
May 27, 2023
‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ ಕಟ್ಟಿದ ಗೆಜ್ಜೆಯ ಮೂಲಕ ಧೃಡವಾದ ಹೆಜ್ಜೆಯೂರಿ ಬೆಳೆಯುತ್ತಿದ್ದಾರೆ. ಅವರ ಕಾವ್ಯಾಭಿವ್ಯಕ್ತಿ ಮಾಗಿದೆ. ಅವರೊಳಗಿದ್ದ ಚಿತ್ರಕಾರ, ವಿಮರ್ಶಕ ಹೊರಬಂದು ಅವರ ಬರವಣಿಗೆಗೆ ಹೊಸ ಆಯಾಮ ನೀಡುತ್ತಿರುವುದು ವಿಶೇಷ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ…