ವಿಧ: ಪುಸ್ತಕ ವಿಮರ್ಶೆ
July 15, 2023
ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...
“ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ…
ವಿಧ: ಪುಸ್ತಕ ವಿಮರ್ಶೆ
July 13, 2023
ಅಲೈಕ್ಯ ಮೈತ್ರೇಯಿ ಅವರ ಚೊಚ್ಚಲ ಕಾದಂಬರಿ ಪಿಂಕಿ ‘ವೇ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೪೦ ಪುಟಗಳ ಈ ಕಾದಂಬರಿಯ ಕುರಿತು ಲೇಖಕರಾದ ಅನಂತ ಕುಣಿಗಲ್ ಅವರು ಪುಸ್ತಕದಲ್ಲಿ ತಮ್ಮ ‘ಮೊದಲ ಮಾತನ್ನು ದಾಖಲು ಮಾಡಿದ್ದಾರೆ. ಅವರು ತಮ್ಮ ಮೊದಲ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...
“ನಾನು ಹಿಂದೂ ಅಲ್ಲ ಎಂದರೆ ನೀವು ನಂಬಬೇಕು. ಹೌದು, ನಾನು ಮುಸ್ಲಿಂ ಅಲ್ಲ ಕ್ರೈಸ್ತ, ಜೈನ, ಬೌದ್ಧ ಯಾವುದೂ ಅಲ್ಲ ನಾನು ಮನುಷ್ಯನೆಂದರೆ ನೀವು ನಂಬಲೇಬೇಕು!" ಧರ್ಮ ಎಂದರೇನು ಎಂಬ ಪ್ರಶ್ನೆಗೆ…
ವಿಧ: ಬ್ಲಾಗ್ ಬರಹ
July 12, 2023
ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ ಮಾಡಿದ್ದೇಕೆ ?
ಅದು ಆದದ್ದು ಹೀಗೆ :
೧೯೭೨ ರ ಕಾಲಘಟ್ಟದಲ್ಲಿ ಎರಡು ಬಹುಚರ್ಚಿತ ಮೆಗಾ ಬಡ್ಜೆಟ್ ನಲ್ಲಿ ಮೇರು ಚಿತ್ರ ಕಲಾವಿದರನ್ನು ಆಯ್ದು ನಿರ್ಮಿಸಿದ ಚಿತ್ರಗಳು. ೧. ಪಾಕೀಝ ೨. ಅಮರ್ ಪ್ರೇಮ್, ಆಗಿದ್ದವು.
ಅದೇ ವರ್ಷದಲ್ಲಿ ನಿರ್ಮಾಣವಾದ ಮತ್ತೊಂದು ಚಿತ್ರವೆಂದರೆ, 'ಬೇ ಇಮಾನ್' ಎಂಬ ಚಿತ್ರ. ಸೋಹನ್ ಲಾಲ್ ಕನ್ವರ್ ಎನ್ನುವ ನಿರ್ಮಾಪ ನಿರ್ದೇಶಕರು ಒಂದು ಹಿಂದಿ ಚಿತ್ರವನ್ನು ನಿರ್ಮಿಸಿದರು. ಜನಪ್ರಿಯತೆಯ…
ವಿಧ: ಪುಸ್ತಕ ವಿಮರ್ಶೆ
July 11, 2023
ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ಕಿಚ್ಚಿಲ್ಲದ ಬೇಗೆ, ಏರಿಲ್ಲದ ಧಾವತಿ ಇವು ಬರಿಕಂಗಳಿಗೆ ಕಾಣದ, ಆದರೆ ಒಳಗೇ ಇರಿಯುವ ನೋವು. ಒಳಗೆ ಚುಚ್ಚಿ ಮುರಿದ ಮುಳ್ಳಿನ ನೋವು ಅದು. ಅಕ್ಕನ ವಚನಗಳಲ್ಲಿ ಬರುವ ಈ ಪದಗಳು ಹಲವು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತವೆ. ಭವಗಳಲ್ಲಿ ಏಗಿ ಏಗಿ ದಾಟುವ ಹಾದಿ ಅದು…
ವಿಧ: ಪುಸ್ತಕ ವಿಮರ್ಶೆ
July 08, 2023
ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಇವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ…
“ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ,…
ವಿಧ: ಪುಸ್ತಕ ವಿಮರ್ಶೆ
July 06, 2023
ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ “ಮಥಿಸುವ ಜೀವನಾನುಭವದ ನವನೀತ" ದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಂಡ ಕನಸನ್ನು ಛಲ ಬಿಡದೆ ನನಸು ಮಾಡುವುದೇ ಪಂಚಮವೇದದ ಸಾರ. ಇಲ್ಲಿ ನೋವಿದೆ, ನಲಿವಿದೆ, ಕತ್ತಲೆಯೂ ಇದೆ…
ವಿಧ: ಪುಸ್ತಕ ವಿಮರ್ಶೆ
July 04, 2023
ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ ಸಮಾಜದ, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿ ಬದುಕು ಕಟ್ಟಲು ಯಶೋಮತಿ ಪಟ್ಟ ಕಷ್ಟವನ್ನು ತಮ್ಮ ಬರಹಗಳ ಮೂಲಕ ಹೊರಹಾಕಿದ್ದಾರೆ. ೧೬೮ ಪುಟಗಳ ಈ ಪುಸ್ತಕದಲ್ಲಿ ತಮ್ಮ ಮಾತಿನಲ್ಲಿ ಯಶೋಮತಿ ಬೆಳಗೆರೆ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳನ್ನು…
ವಿಧ: ಬ್ಲಾಗ್ ಬರಹ
July 03, 2023
ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ.
2023ರ ಗುರು ಪೂರ್ಣಿಮೆಯ ಸಮಯ ಹಾಗೂ ದಿನಾಂಕಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ತಿಂಗಳ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಜುಲೈ 3, ಸೋಮವಾರದಂದು ಗುರು ಪೂರ್ಣಿಮಾ ಆಚರಣೆ ಇದೆ. ದೃಕ್ ಪಂಚಾಂಗದ ಪ್ರಕಾರ ಪೂರ್ಣಿಮಾ ತಿಥಿ ಅಥವಾ ಹುಣ್ಣಿಮೆಯ ಅವಧಿಯು ಜುಲೈ 2 ರಂದು ರಾತ್ರಿ 8.20ಕ್ಕೆ ಆರಂಭವಾಗುತ್ತದೆ ಮತ್ತು ಜುಲೈ 3 ರಂದು…
ವಿಧ: ಪುಸ್ತಕ ವಿಮರ್ಶೆ
July 02, 2023
ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ ಪ್ರವೇಶ " ಓದಿಯೇ ತಿಳಿಯಬೇಕು. ನಾವೂ ಆ ಪಾತ್ರವಾಗಿ ಓದುವ ಆನಂದವನ್ನು, ಆಗ ಉಂಟಾಗುವ ಭಾವ ವೈವಿಧ್ಯವನ್ನು ಬಣ್ಣಿಸಲು ಅಸಾಧ್ಯ.
ಓದುಗರೇ ಬನ್ನಿ, ನೀವೆಲ್ಲರೂ ಒಮ್ಮೆ "ರುಮಾ" ಆಗಿ ನನ್ನ ತಳಮಳವನ್ನು ತಿಳಿದುಕೊಳ್ಳಿ. ನಾನು "ರುಮಾ ". ಕಿಷ್ಕಿಂದೆಯ…
ವಿಧ: ಪುಸ್ತಕ ವಿಮರ್ಶೆ
July 01, 2023
‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ...
“ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ…