ಚಲೋ...ಹಾಸನ

ಚಲೋ...ಹಾಸನ

ಚಲೋ..ಮೊದಲ ಭಾಗ ( http://sampada.net/blog/%E0%B2%9A%E0%B2%B2%E0%B3%8B/21-1-2013/39620 )


ಕಾರಿನ ಬಾನೆಟ್ ಮುಚ್ಚಿದ ರಾಮೋಜಿ, "ಕಾರಲ್ಲೇನೂ ಪ್ರಾಬ್ಲೆಂ ಇಲ್ಲ. ಬಹುಷಃ ಕಾರಲ್ಲಿ ಜನ ಜಾಸ್ತಿಯಾಯಿತು. ಏನು ಮಾಡುವುದು?" ಅಂದರು. ಎಲ್ಲರ ದೃಷ್ಟಿ ತನ್ನ ಪಾಡಿಗೆ ಚಿತ್ರಾನ್ನ ತಿನ್ನುತ್ತಿದ್ದ ಗಣೇಶರ ಕಡೆ ಹೊರಳಿತು. "ಗಣೇಶರೆ, ತೂಕ ಜಾಸ್ತಿಯಾದುದರಿಂದ ಕಾರು ಏರು ರಸ್ತೆ ಹತ್ತುತ್ತಿಲ್ಲ. ಆಗಲೇ ತುಂಬಾ ತಡವಾಗಿದೆ. ಇಲ್ಲಿಂದ ೧೫ ನಿಮಿಷಕ್ಕೊಂದು ಬಸ್ ಸಿಗುವುದು. ನೀವು ಇಳಿದು ಬಸ್ಸಲ್ಲಿ ಬಂದರೆ ತುಂಬಾ ಉಪಕಾರವಾಗುವುದು. ಬೇಕಿದ್ದರೆ ಪುಳಿಯೊಗರೆ,ಮೊಸರನ್ನ.. ಎಲ್ಲಾ ನೀವೇ ಇಟ್ಟುಕೊಳ್ಳಿ."ಎಂದರು ಪಾರ್ಥರು. ಪಾರ್ಥರ ಎರಡನೇ ಬಾಣಕ್ಕೂ ಬಗ್ಗಿದ ಗಣೇಶರು, ಕೆಳಗಿಳಿದು ರಸ್ತೆ ಪಕ್ಕದ ಕಟ್ಟೆಯಲ್ಲಿ ತಿನಿಸುಗಳನ್ನು ತಿನ್ನುತ್ತಾ ಬಸ್ಸಿಗಾಗಿ ಕಾಯುತ್ತಿದ್ದರು.


ಎಲ್ಲಾ ತಿಂದು ಮುಗಿಸಿ ಎದುರು ನೋಡುತ್ತಾರೆ..ಕಾರು ಇನ್ನೂ ಅಲ್ಲೇ ಇದೆ. ಎಲ್ಲರೂ ಪ್ರಯತ್ನಿಸಿ ಸುಸ್ತಾಗಿ, ಮೆಕಾನಿಕ್ ಅನ್ನು ಕರೆಸುವ ಮಾತನಾಡುತ್ತಿದ್ದರು. ನಿದಾನಕ್ಕೆ ಕಾರ ಬಳಿ ಹೋದ ಗಣೇಶರು, ಕಾರಲ್ಲಿ ಕುಳಿತು "*‍%% @#$% &%$#@" ಮಂತ್ರ ಪಠಣ ಮಾಡುತ್ತಿದ್ದ ಜನದ ಬಾಯಿ ಮಾತನಾಡದಂತೆ ಮುಚ್ಚಿ ಹಿಡಿದು, ಈಗ ಕಾರು ಸ್ಟಾರ್ಟ್ ಮಾಡಿ ಅಂದರು. ಕಾರು ಏರು ರಸ್ತೆಯಲ್ಲಿ ಆರಾಮ ಸಾಗಿತು! ಎಲ್ಲರಿಗೂ ಆಶ್ಚರ್ಯ! " ತೂಕ ಮಾತಿನಲ್ಲಿರುವುದು ಅಂತ ನಮ್ಮ ಗುಣಶೇಕರ್ ಅವರು ಹೇಳಿದ್ದರಲ್ಲ. ಅದು ನೆನಪಾಗಿ ಪ್ರಯತ್ನಿಸಿದೆ" ಅಂದರು ಗಣೇಶರು.


ಅಲ್ಲಿಂದ ಹೊರಟ ಕಾರು ನೇರ ಹರಿಹರಪುರ ಶ್ರೀಧರ್ ಅವರ ಮನೆ ಬಾಗಿಲಲ್ಲಿ ನಿಂತಿತು. "ಬಹಳ ದಣಿದಿದ್ದೀರಿ. ಮೊದಲು ಊಟ ಮಾಡೋಣ" ಎಂದು ಎಲ್ಲರನ್ನೂ ಊಟಕ್ಕೆ ಕರಕೊಂಡು ಹೋದರು.


ಊಟ ಮುಗಿಯುತ್ತಿದ್ದಂತೆ ಶ್ರೀಧರ್ ಅವರು "ನೀವೆಲ್ಲಾ ಗೋಪೀನಾಥರೊಂದಿಗೆ ಒಂದು ರೌಂಡು ನೋಡಿ ಬನ್ನಿ. ನನಗೆ ಮತ್ತು ನಾಗರಾಜರಿಗೆ ಬಹಳಷ್ಟು ಕೆಲಸ ಬಾಕಿ ಇದೆ. ಮತ್ತೆ ಸಿಗೋಣ" ಎಂದು ಪಂಚೆ ಎತ್ತಿ ಕಟ್ಟಿ ಹೊರಟರು.


"ಶ್ರೀಧರ್ ಓಡಾಟ ಕಂಡರೆ ಮೀಟಿಂಗ್ ಭರ್ಜರಿ ನಡೆಯಬಹುದು ಅಂತ ಕಾಣುತ್ತದೆ" ಅಂದರು ಸತೀಶ್.


"ನೀವೇ ನೋಡುವಿರಂತೆ" ಅಂದು ಗೋಪೀನಾಥರು ಎಲ್ಲರನ್ನು ಕರಕೊಂಡು ಹೊರಟರು.


ಅಲ್ಲಿಂದ ಸ್ವಲ್ಪ ದೂರದಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತವಾದ ಬಿಲ್ಡಿಂಗ್ ಒಂದು ಕಾಣಿಸಿತು. ಮದುವೆ ಸಮಾರಂಭ ಇರಬಹುದೆಂದು ನೋಡಿದರೆ, "ಸಂಪದ ಸಮ್ಮಿಲನ" ಎಂಬ ದೊಡ್ಡ ಬೋರ್ಡ್ ಕಾಣಿಸಿತು!


"ಇದಕ್ಕೆಲ್ಲಾ ಹಣದ ವ್ಯವಸ್ಥೆಗೆ ಏನು ಮಾಡಿದರು?" ಎಂದು ಜಯಂತ್ ವಿಚಾರಿಸಿದಾಗ, ಗೋಪೀನಾಥರು "ನಮ್ಮ ಶ್ರೀಧರ್,ನಾಗರಾಜರಿಗೆ ಇಂತಹ ಸಮಾರಂಭಗಳನ್ನು ನಡೆಸಿ ಅಭ್ಯಾಸವಿದೆ. ಕನ್ನಡದ ಕೆಲಸ ಎಂದರೆ ಕನ್ನಡಿಗರು ಧಾರಾಳಿಗಳು" ಅಂದರು.


ಕಟ್ಟಡದ ಒಳಹೋಗುತ್ತಿದ್ದಂತೆ, ಸ್ವಾಗತ ಹಾಲ್‌ನಲ್ಲಿ ೨-೩ ಕಂಪ್ಯೂಟರ್ ತಜ್ಞರು ಫೈನಲ್ ಟಚ್ ಕೊಡುವುದರಲ್ಲಿ ಮಗ್ನರಾಗಿದ್ದರು. ಅಲ್ಲಿಂದ ಒಳಗೆ ಒಂದೊಂದು ಕೋಣೆಗೆ ಒಂದೊಂದು ಹೆಸರು!


"ಟೆಕ್ ಸಂಪದ" "ಆರೋಗ್ಯ ಸಂಪದ" "ರುಚಿ ಸಂಪದ" "ಸ್ತ್ರೀ ಸಂಪದ" "ಹರಿದಾಸ ಸಂಪದ" "ಹಾಸ್ಯ ಸಂಪದ" "ವೇದ ಸಂಪದ" "ಸಿನೆಮಾ ಸಂಪದ" "ಸಂಗೀತ ಸಂಪದ" "ಕವನ ಸಂಪದ" ......ಅನೇಕ! ಅದಾಗಲೇ ಅನೇಕ ಸಂಪದಿಗರು ಬಂದು ಮಾತುಕತೆ, ಚರ್ಚೆ ನಡೆಸಿದ್ದರು.


ಅದುವರೆಗೆ ಒಟ್ಟಿಗಿದ್ದ ರಾಮೋಜಿ ತಂಡದವರು,ಒಬ್ಬೊಬ್ಬರಾಗಿ ಅವರವರ ಇಷ್ಟದ ಸಂಪದ/ಪರಿಚಿತರ ಬಳಿ ಓಡಿ ಮಾತನಾಡಲು ಶುರುಮಾಡಿದರು.


ಯಾವುದೇ ಮೀಟಿಂಗ್‌ಗೆ ಹೋಗದ, ಯಾರ ಪರಿಚಯವೂ ಇಲ್ಲದ ಗಣೇಶರು ಮಾತ್ರ ಗೋಪೀನಾಥರೊಂದಿಗೆ ಇದ್ದರು. "ಮೇಲೆ ಹಾಲ್‌ನಲ್ಲಿ ನಾಳೆ ಮೀಟಿಂಗ್ ನಡೆಯುವುದು. ನಾಡಿಗ್ ಮತ್ತು ಸಂಪದ ನಿರ್ವಾಹಕ ತಂಡದವರು ನಿನ್ನೆ ಎಲ್ಲಾ ಕೆಲಸ ಮುಗಿಸಿ ಹೋದವರು, ನಾಳೆ ಬೆಳಗ್ಗೆ ಬರುವರು. ಯಾರೊಂದಿಗೂ ಸೇರದ ನಿಮಗೂ ಒಂದು ವಿಭಾಗವಿದೆ" ಎಂದು ಕೊನೆಯಲ್ಲಿದ್ದ ಕೋಣೆ ತೋರಿಸಿದರು ಗೋಪೀನಾಥರು.


ತನಗಾಗಿ ವಿಶೇಷ ವಿಭಾಗ ಎಂದು ಖುಷಿಯಲ್ಲಿ ಹೋಗಿ, ಬೋರ್ಡ್ ನೋಡಿದರೆ....."ಜೊಳ್ಳು ವಿಭಾಗ" ಎಂದಿತ್ತು :(


(ಹೀಗೊಂದು ಕನಸು ಮುಗಿಯಿತು)


 

Rating
No votes yet

Comments

Submitted by partha1059 Fri, 01/25/2013 - 08:02

ಜೊಳ್ಳು! ಅದೇಕೆ ಹಾಗೆ ! ಕಡೆಪಕ್ಷ ಡೊಳ್ಳು (ಹೊಟ್ಟೆ) ಅ0ತಿರಬಹುದಲ್ಲ !

ಗಣೇಶರೆ ಟೀಕೆಗಳನ್ನ ತು0ಬಾ ಗ0ಭೀರವಾಗಿ ತೆಗೆದುಕೊ0ಡಿದ್ದೀರಿ ! ಅವು ನಮ್ಮ0ತವರ‌ ಆರೋಗ್ಯಕ್ಕೆ ಒಳ್ಳೆಯದಲ್ಲ ! ಗೋಪಿನಾಥರ‌ ಲೇಖನ‌ ಒಮ್ಮೆ ಓದಿ ಹೇಗಿರಬೇಕು ಎ0ದು ತಿಳಿಯುತ್ತದೆ!

Submitted by ಗಣೇಶ Sun, 01/27/2013 - 23:39

In reply to by partha1059

"ಗುಣ" ಇಲ್ಲ ಅನ್ನಲಿ..ಸಹಿಸಬಲ್ಲೆ. ಬುದ್ಧಿ ಇಲ್ಲ ಅನ್ನಲಿ..ಸಹಿಸಬಲ್ಲೆ. ಆದರೆ...ತೂಕವಿಲ್ಲ!! ಆಆಆಆಆ ಈ ಘೋರ ಅಪಮಾನ ಸಹಿಸಲಾರೆ..:)
ನಾನೂ ನಗುತ್ತಿದ್ದರೆ ಆರೋಗ್ಯ ಎಂದು ನಂಬಿದ್ದೆ..ಆಚರಿಸುತ್ತಲೂ ಬಂದಿದ್ದೆ. ಸಿಡುಕು ಮೋರೆ ಯಡ್ಡಿಯ ಆರೋಗ್ಯ ನೋಡಿ.. ಇನ್ನು ಮೇಲೆ ಕನಿಷ್ಠ ಒಬ್ಬರ ಮೇಲಾದರೂ ಸಿಡುಕಬೇಕೆಂದು ತೀರ್ಮಾನಿಸಿದ್ದೇನೆ. :)

Submitted by kavinagaraj Fri, 01/25/2013 - 10:49

ಗಣೇಶರೇ, ಕನಸು ನನಸಾಗಲಿ. ನಿಮ್ಮ ಕನಸಿನಲ್ಲಿ ಕಂಡದ್ದನ್ನು ನಡೆಸೋಣ. ನಿಮ್ಮ ಲೇಖನದಲ್ಲಿ ತಿಳಿಸಿದ ಕೊನೆಯ ವಿಭಾಗ ಅಲ್ಲಿರುವುದಿಲ್ಲ. ಎಲ್ಲಾ ವಿಭಾಗಗಳನ್ನು ಸೇರಿಸುವ ಸಮನ್ವಯ ವಿಭಾಗದ ಮೇಲ್ವಿಚಾರಣೆ ನಿಮ್ಮದೇ! :)

Submitted by hariharapurasridhar Fri, 01/25/2013 - 13:23

In reply to by kavinagaraj

ಗಣೇಶರನ್ನು ಅರ್ಥಮಾಡಿಕೊಳ್ಳಲು ನಾನು ತುಂಬಾ ಬೆಳೆಯ ಬೇಕಿದೆ.ನನಗೆ ಹಾಸ್ಯ ಮಾಡಲೂ ಬರುವುದಿಲ್ಲ. ಹಾಸ್ಯ ಅರ್ಥವೂ ಆಗುವುದಿಲ್ಲ. ಅಂತೂ ಹಾಸನದಲ್ಲಿ ಸಂಪದ ಸಮ್ಮಿಲನ ಮಾಡುವುದಾದರೆ ನಮ್ಮನೆಯಲ್ಲಿ 50-60 ಜನ ಕುಳಿತುಕೊಳ್ಳಬಹುದು. ಸರಳವಾದ ಊಟ ಹಾಕಲು ರಡಿ.

Submitted by RAMAMOHANA Thu, 01/31/2013 - 13:42

In reply to by hariharapurasridhar

ಈಗಾಗಲೇ ಸಿಕ್ಕಾ ಪಟ್ಟೆ ಬೆಳೆದು `ಕಾಯುತ್ತಿರುವ‌` ಮ0ದಿಗೆ ಅವರ‌ ದರ್ಶನ‌ ದುರ್ಲಬವಾಗಿದೆ. ಇನ್ನು ಅವರನ್ನು ಅರ್ಥ‌ ಮಾಡಿಕೊಳ್ಳಲೋಸುಗ‌ ನೀವೂ ಬೆಳೆದರೆ............ ಹ್ಮು ನೋಡೋಣ‌.... ಏನೇನಾಗುತ್ತೊ
ರಾಮೋ

Submitted by ಗಣೇಶ Sun, 01/27/2013 - 23:44

In reply to by kavinagaraj

>>ಎಲ್ಲಾ ವಿಭಾಗಗಳನ್ನು ಸೇರಿಸುವ ಸಮನ್ವಯ ವಿಭಾಗದ ಮೇಲ್ವಿಚಾರಣೆ ನಿಮ್ಮದೇ! ---ಅದಕ್ಕಿಂತ..ನನಗೆ "ರುಚಿ ಸಂಪದ"ದ ಅಡುಗೆ ರುಚಿ ಮೇಲ್ವಿಚಾರಣೆ ಕೊಟ್ಟರೆ ಸಂತೋಷ:)

Submitted by venkatb83 Sat, 01/26/2013 - 19:20

"ಸ್ತ್ರೀ ಸಂಪದ" ....!

ಸಮಾನತೆ ಪ್ರತಿಪಾದಿಸುತ್ತ ಆ ಒಂದು ವಿಭಾಗವನ್ನು ತೆಗೆದಿರ?
ಗಣೇಶ್ ಅಣ್ಣ-
ಹಿರಿಯರಾದ ಶ್ರೀಯುತ
ಹ.ಪು.ಶ್ರೀ ಅವರು ಮತ್ತು ಕಾಮತ್ ಸಾರ್ ಅವರು ತುಂಬಾ ಸಾರಿ ಅವರವರ ಊರುಗಳಲ್ಲಿ ಸಂಪದ ಸಮ್ಮಿಲನ ನಡೆಸುವ-ಅದರ ತಯಾರಿ-ಊಟೋಪಚಾರದ ಸಂಪೂರ್ಣ ಹೊಣೆ ಹೊರುವ ಬಗ್ಗೆ ಹೇಳಿರುವರು...
ಅದು ಈ ಕ್ಷಣದವರೆಗೆ ಸಾದ್ಯವಾಗದೆ ಇದ್ದರೂ -ನಿಮ್ಮ ಕನಸಲ್ಲಿ ಅದೆಲ್ಲವೂ ಸಾಧ್ಯ ಆಯ್ತು...!
ಆ ಕನಸು ನಿಜವೂ ಆಗಲಿ..ಬೇಗನೆ...!

>>>ನೀವು ಕಾರು ಸ್ಟಾರ್ಟ್ ಮಾಡಿದ ವಿಧಾನವನ್ನು ಬಹು ಮೆಚ್ಚಿಕೊಂಡ ಬೆಂಗಳೂರಿನ ಜನ ಈಗ ತಮ್ಮ ಸ್ಟಾರ್ಟ್ ಆಗದ -ಸ್ಟಾರ್ಟಿಂಗ್ ಟ್ರಬಲ್ (ಟೆರ್ರಿಬಲ್ ) ಕಾರುಗಳನ್ನು ಸ್ಟಾರ್ಟ್ ಮಾಡಲು ನಿಮ್ಮನ್ನು ಸಂಪರ್ಕಿಸಲು ನಿಮ್ಮ ದೂರವಾಣಿ ಸಂಖ್ಯೆಗಾಗಿ ನನ್ನನು ಪೀಡಿಸುತ್ತಿರುವರು ...!!

ಶುಭವಾಗಲಿ..

\|

Submitted by ಗಣೇಶ Sun, 01/27/2013 - 23:50

In reply to by venkatb83

:) ಬೇರೆ ಏನೂ ಬೇಡ. ಕಾರು ಸ್ಟಾರ್ಟ್ ಆಗದಿದ್ದರೆ, "%$#@ &%$#..." ಅವರು ಬರುತ್ತಿದ್ದಾರೆ ಅಂದು ಗಟ್ಟಿಯಾಗಿ ಹೇಳಿ ನೋಡಿ..ಕಾರು 0 to 100 ಎರಡೇ ಸೆಕೆಂಡಿನಲ್ಲಿ..!

Submitted by rasikathe Sun, 01/27/2013 - 09:16

ಚೆನ್ನಾಗಿದೆ ಗಣೇಷ್ ಅವರೆ, ಆದರೆ ನಮ್ಮ‌ ಹೆಸರನ್ನೂ "ಅಶ್ಹ್ಟು ಮುಖ್ಯವಲ್ಲದವರ‌ ವಿಭಾಗ‌" ಅಮ್ತನಾದರೂ ಕರೆದು ಅಲ್ಲಿ ಸೇರಿಸಬಹುದಿತ್ತಲ್ಲ‌ ಅಮ್ತ‌ ಅನ್ನಿಸಿತು. ಆದರೆ ನೆನಪಿಗೆ ಬಮ್ತು ...ಇದು ನಿಮ್ಮ‌ ಕನಸಲ್ವೇ? ಮುಮ್ದಿನ‌ ಸಲ‌ ನೋಡೋಣ‌ ಕನಸಲ್ಲಿ ನಾವೂ ಇರ್ತೇವಾ ಅಮ್ತ‌??????!!!!
ಮೀನಾ

Submitted by Shreekar Sun, 01/27/2013 - 19:55

In reply to by rasikathe

ಹಾಸ್ಯಹೀನತೆ

ಗಣೇಶಣ್ಣಾ,

ಅಂತೂ ಕನಸಲ್ಲಾದರೂ ಸಂಪದ ಸಮ್ಮಿಲನಕ್ಕೆ ಹೋದಿರಲ್ಲ!

ಅರ್ಥವಾಗದ ಹಾಸ್ಯ ಮತ್ತು ಹಾಸ್ಯ ಮಾಡಲುಬಾರದ ಹಾಸ್ಯಹೀನತೆ ಒಂದು ನಿಜವಾಗಿಯೂ ಗಂಭೀರವಾದ ವಿಷಯ.

ಮುಪ್ಪಿನಲ್ಲಿ ಡಿಮೆಂಶಿಯಾ ಕಾಯಿಲೆಗೆ ಗುರಿಯಾಗಬಹುದು!

Submitted by ಗಣೇಶ Mon, 01/28/2013 - 00:28

In reply to by Shreekar

:) :)ರಕ್ತಹೀನತೆಯಂತೆ ಗಂಭೀರ ಖಾಯಿಲೆ! ದಿನಕ್ಕೆರಡು ಬಾಟಲು ಭಲ್ಲೇಜಿ ಹಾಸ್ಯರಸವನ್ನ ರಕ್ತಕ್ಕೆ ಡ್ರಿಪ್ ಹಾಕುವಂತೆ ಡಾ.ಮೀನಾ ಅವರು ಸಲಹೆ ನೀಡಿದರು.:)

Submitted by ಗಣೇಶ Mon, 01/28/2013 - 00:05

In reply to by rasikathe

ಡಾಕ್ಟ್ರೆ, ಪ್ರತೀ ವಿಭಾಗದಲ್ಲೂ ಹಳಬರು(ಸಂಪದದಲ್ಲಿ ಈಗ ಹೆಚ್ಚಾಗಿ ಕಾಣಿಸದವರು) ಹೊಸಬರನ್ನು ಸೇರಿಸಿ, ಪ್ರತೀ ವಿಭಾಗಕ್ಕೂ ಭೇಟಿ ಮಾಡುವ .......ಧಾರವಾಹಿ ತರಹ ಒಂದು ಹತ್ತು ಎಪಿಸೋಡ್ ಆದರೂ ಮಾಡುವ ಅಂದಾಜಿತ್ತು... ಉದಾ..ಹಾಸ್ಯಸಂಪದದಲ್ಲಿ ಕೋಮಲ್, ಭಲ್ಲೇಜಿ, ಮಂಜಣ್ಣ, ನಗೆಸಾಮ್ರಾಟ್,ನೀವು, ಪಾರ್ಥರು,ಶ್ರೀಧರ್, ಶ್ರೀಕರ್,ಸಪ್ತಗಿರಿ.....; ಎಲ್ಲರ ಡೇಟ್ಸ್ ಪ್ರಾಬ್ಲಂ... ಹಾಗೂ ಹೀಗೂ ಸುತ್ತಿ ಬಿಡುಗಡೆ ಮಾಡಿದೆ.:)

Submitted by spr03bt Sun, 01/27/2013 - 20:32

ಹಾಸನದ ಸಮ್ಮಿಲನಕ್ಕೆ ಬರೀ ಕಾರ್ ಅಲ್ಲ ಒ೦ದು ಬಸ್ ತು೦ಬಾ ಜನ ಹೋದರೆ ಚೆನ್ನ. ಹೇಗೂ ಶ್ರೀಧರರು ೫೦-೬೦ ಜನದ ಊಟಕ್ಕೆ ಗ್ಯಾರ೦ಟಿ ಕೊಟ್ಟಿರುವವರು :)

Submitted by hariharapurasridhar Mon, 01/28/2013 - 14:36

In reply to by spr03bt

100ಜನ ಬಂದ್ರೆ ಕೇವಲ 50-60 ಜನಕ್ಕೆ ಊಟ ಹಾಕಿ ಉಳಿದವರನ್ನು ಹಾಗೆ ಕಳಿಸ್ತೀನಿ ಅಂದುಕೊಂಡ್ರಾ! ನಿಜವಾಗಲೂ ಹರಿಪ್ರಸಾದ್ ಕಷ್ಟಪಟ್ಟು "ಸಂಪದ" ಬೆಳೆಸಿದ್ದಾರೆ. ಅದನ್ನು ಇನ್ನೂ ಉತ್ತಮವಾಗಿಸಲು ನಮ್ಮೆಲ್ಲರ ಚಿಂತನೆ ಗಳನ್ನು ಹಂಚಿಕೊಳ್ಳೋಣ, ಬನ್ನಿ. ಒಂದು ದಿನ ಊಟ ಹಾಕುವುದು ಇವತ್ತಿನ ಕಾಲದಲ್ಲಿ ಯಾರಿಗೂ ಕಷ್ಟವಿಲ್ಲ. ನಮ್ಮ ಬಾಲ್ಯದಲ್ಲಿ ಅಂತಾ ಕಾಲವಿತ್ತು. ಅಂದಿನ-ಇಂದಿನ ನಡುವಿನ ಎಲ್ಲರೂ ಒಮ್ಮೆ ಕುಳಿತು ಮಾತಾಡೋಣ ಬನ್ನಿ.

Submitted by partha1059 Mon, 01/28/2013 - 14:59

ಗಣೇಶರು ಪುನಃ ತಪ್ಪು ತಿಳಿದರು. ಹರಿಹರಪುರ ಶ್ರೀದರ ಹೇಳಿದ್ದು ಹಾಗಲ್ಲ, ನೂರು ಜನರಿಗಾಗುವಷ್ಟು ಅಡುಗೆ ಮಾಡಿಸುವೆ, ೫೦ ರಷ್ಟು ಜನರನ್ನು ಕರೆಯುವೆ ಎಂದು. ಅಂದರೆ ಮಾಡಿರುವದರಲ್ಲಿ ಅರ್ದ ಗಣೇಶಾಯ ಸ್ವಾಹಃ ಉಳಿದಿದ್ದು, ಉಳಿದವರಿಗೆ ಅಂತ. ಪಾಂಡವರ ಏಕಚಕ್ರನಗರದ ಕತೆ