ಭಾಗ - ೧೫ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೨ ಗ್ರೀಕರ ಗುರು ಮನು

ಭಾಗ - ೧೫ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೨ ಗ್ರೀಕರ ಗುರು ಮನು

ಚಿತ್ರ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ ಪ್ರಬಂಧ - ಪಿ.ಎಚ್.ಡಿ. ಥೀಸಿಸಿನಲ್ಲಿರುವ ಕೆಲವು ಆಸಕ್ತಿಕರ ಅಂಶಗಳು)
***
ಪರಿಚ್ಛೇದ ೧.೨ ಗ್ರೀಕರ ಗುರು ಮನು
          ಆಧುನಿಕ ನ್ಯಾಯ ಹಾಗು ಸಾಮಾಜಿಕ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ರೂಪಿಸಿದವರಾರು? 
          ಸ್ವಲ್ಪ ಓದಿಕೊಂಡ ಯಾರಾದರೂ ಈ ಪ್ರಶ್ನೆಯನ್ನು ಕೇಳಿದೊಡನೆ ದಿಢೀರನೆ ಕೊಡುವ ಉತ್ತರ - ಗ್ರೀಕರು ಮತ್ತು ರೋಮನ್ನರು.  
          ಆದರೆ ಸೋಜಿಗದ ಸಂಗತಿ ಏನೆಂದರೆ ಆ ಗ್ರೀಕರಿಗೆ ಮತ್ತು ರೋಮನ್ನರಿಗೆ ಗುರು..... ನಮ್ಮ ಮನು ಮಹರ್ಷಿ!
        ಪಾಶ್ಚಾತ್ಯ ತತ್ತ್ವಶಾಸ್ತ್ರಕ್ಕೆ ಮೂಲಪುರುಷನಾದ ಸಾಕ್ರೆಟಿಸ್, ಪ್ಲೇಟೋ ಮೊದಲಾದವರ ಮೇಲೆ ಮನುವಿನ ಪ್ರಭಾವವು ವಿಶೇಷವಾಗಿದೆ. ಮನುಧರ್ಮಶಾಸ್ತ್ರವು ಈಜಿಪ್ಟ್ ಹಾಗೂ ಕ್ರೀಟ್ (Crete) ಮೂಲಕ ಪ್ರಾಚೀನ ಗ್ರೀಸ್ ದೇಶವನ್ನು ತಲುಪಿತು. ಮನುವನ್ನು ಗ್ರೀಕರು, ಮೆನ್ಸ್ (Mens), ಮೇನ್ಸ್ (Manes), ಮೆನೆಸ್ (Menes) ಎಂದು ವ್ಯವಹರಿಸುತ್ತಿದ್ದರು. ಕ್ರಿ.ಪೂ. ೭ನೇ ಶತಮಾನದಲ್ಲಿ ಸ್ಪಾರ್ಟಾ, ಎಥೆನ್ಸುಗಳಿಂದ ಹೋದ ಲೈಕರ್ಗಸ್ (Lycurgus) ಮತ್ತು ಸೋಲೋನ್ (Solon) ಎಂಬ ಇಬ್ಬರು ಗ್ರೀಕ್ ದೇಶದ ವಿದ್ವಾಂಸರಿಗೆ Mina ಅಥವಾ Manos ಎಂದು ಪ್ರಚಲಿತವಿದ್ದ ಮನುವಿನ ಧರ್ಮಸೂತ್ರಗಳು ಪರಿಚಯವಾದವು. ಅವರು ಸಂಪಾದಿಸಿ ತಂದ ಮನುಧರ್ಮ ಶಾಸ್ತ್ರವನ್ನು ಆಧರಿಸಿ ಗ್ರೀಕರು ಸ್ಥಳೀಯವಾಗಿ ತಮ್ಮ ಸ್ವಂತ ಶಾಸನಗಳನ್ನು ಬರೆಯಲು ಸಾಧ್ಯವಾಯಿತು.  Code of Zaleucus (660 B.C.) ಮತ್ತು Code of Charondas (610 B.C .)  ಹೀಗೆ ರಚಿಸಲ್ಪಟ್ಟಂತಹವುಗಳೇ. ಅದಾದ ಎರಡು ಶತಮಾನಗಳ ತರುವಾಯ Twelve Tables ಎನ್ನುವ ನ್ಯಾಯಸೂತ್ರಗಳನ್ನು ರೋಮನ್ನರು ರಚಿಸಿಕೊಂಡರು. 
      ಲೈಕರ್ಗಸ್ ಮತ್ತು ಸೋಲೋನ್ ಅವರಿಬ್ಬರೂ ಕೇವಲ ನ್ಯಾಯ ಸಂಹಿತೆಯ ಬದಲಾವಣೆಯನ್ನಷ್ಟೇ ಅಲ್ಲ ಅವರು ಗ್ರೀಕರ ಜೀವನ ವಿಧಾನ ಮತ್ತು ಆಲೋಚನಾ ಪದ್ಧತಿಗಳಲ್ಲೂ ಸಹ ತಾತ್ತ್ವಿಕ ಬದಲಾವಣೆಗಳನ್ನು ತಂದರು. ಗುಣಾಗುಣಗಳನ್ನು ಆಧರಿಸಿ ಮನುಷ್ಯರನ್ನು ನಾಲ್ಕು ವರ್ಗಗಳಾಗಿ ವಿಭಜಿಸುವುದನ್ನು ಗ್ರೀಕರು ಮನುವಿನಿಂದಲೇ ಕಲಿತುಕೊಂಡದ್ದು. ಸರ್ ವಿಲಿಯಂ ರಾಮ್ ಸೇ, ಡಾಕ್ಟರ್ ಇ.ಜೆ. ಉರ್ವಿಕ್ ಎನ್ನುವ ಇಬ್ಬರು ಖ್ಯಾತ ಬ್ರಿಟಿಷ್ ವಿದ್ವಾಂಸರು ಗ್ರೀಕರ ಮೇಲೆ ಮನುವಿನ ಪ್ರಭಾವದ ಕುರಿತಾದ ವಿಶೇಷ ಅಧ್ಯಯನವನ್ನು ಕೈಗೊಂಡಿದ್ದಾರೆ. ಸರ್ ವಿಲಿಯಂ ರಾಮ್ ಸೇ ಅವರು ಚಾರಿತ್ರಿಕ ದೃಷ್ಟಿಯಿಂದ ಹಾಗು ಡಾಕ್ಟರ್ ಉರ್ವಿಕ್ ಅವರು ತಾತ್ತ್ವಿಕ ದೃಷ್ಟಿಯಿಂದ ಸಂಶೋಧನೆಗಳನ್ನು ಮಾಡಿದ್ದಾರೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಈ ಅಂಶದ ಕುರಿತು ಅನೇಕ ವರ್ಷಗಳು ಬೋಧಿಸಿರುವ ಡಾಕ್ಟರ್ ಇ.ಜೆ. ಉರ್ವಿಕ್ - ಗ್ರೀಕಿನ        ತತ್ತ್ವವೇತ್ತನಾದ ಪ್ಲೇಟೋನ ’ರಿಪಬ್ಲಿಕ್’ ಅನ್ನು ಮನುವಿನ ಸಾಮಾಜಿಕ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಾ ತನ್ನ ಸುಪ್ರಸಿದ್ಧ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ - 
       It will need a separate volume to show how the Indian thought may have filtered through Socrates and Plato. In order to understand Plato fully, one must be familiar with the Philosophical and Social thought of Manu. Just as Manu of ancient India instituted the Caste System upon the basis of three principles in individual soul, so Plato divides his State into three Classes representing the three psychic elements. The lowest caste of Producers corresponding to the Vaisya Caste, reflects the element of ignorant desire, epithumia. The next above this, Auxillaries, corresponding to the Kshatriya Class, reflects the passionate element, thumos..... The Guardians corresponds to the Brahmin Caste, represents the Principle of prudent reason, the logistikon. 
(The message of Plato, E.J. Urvick; pp 28-29)
      ಸಾಕ್ರೆಟಿಸ್, ಪ್ಲೇಟೋಗಳ ಮೂಲಕ ಭಾರತೀಯ ಚಿಂತನೆಯು ಹೇಗೆ ವಿಸ್ತರಿಸಿತು ಎನ್ನುವ ವಿಷಯವನ್ನು ವಿವರಿಸ ಹೊರಟರೆ ಅದೊಂದು ದೊಡ್ಡ ಗ್ರಂಥವಾಗುತ್ತದೆ. ಪ್ಲೇಟೋವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮನುವಿನ ತಾತ್ತ್ವಿಕ, ಸಾಮಾಜಿಕ, ಆಲೋಚನೆಗಳು ನಮಗೆ ತಿಳಿದಿರಬೇಕು. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಮನುವು ವ್ಯಕ್ತಿಗತ ಗುಣಾಗುಣಗಳನ್ನು ಆಧರಿಸಿ ವರ್ಣ ವ್ಯವಸ್ಥೆಯನ್ನು ರೂಪಿಸಿದ ವಿಧಾನದಲ್ಲಿಯೇ ಪ್ಲೇಟೋ ತನ್ನ ರಾಜ್ಯವನ್ನು ಮಾನಸಿಕ ಗುಣಗಳನ್ನು ಆಧರಿಸಿ ಮೂರು ವರ್ಗಗಳಾಗಿ ವಿಭಜಿಸಿದ. ಅತ್ಯಂತ ಕೆಳಸ್ತರದಲ್ಲಿರುವ ಉತ್ಪತ್ತಿದಾರರ (Producers) ವರ್ಗವು ವೈಶ್ಯ ವರ್ಣಕ್ಕೆ ಸಮಾನಂತರವಾಗಿದ್ದು ಅದು ಅಜ್ಞಾನವನ್ನು  (ತಾಮಸಿಕ?) ಬಿಂಬಿಸುವ ಆಸೆಯ ಅಂಶವನ್ನು ಒಳಗೊಂಡಿದೆ. ತದನಂತರ ಸೈನ್ಯಬಲವನ್ನು (Auxillaries) ಪ್ರತಿನಿಧಿಸುವ ಕ್ಷತ್ರಿಯ ವರ್ಗವು ಭಾವೋದ್ರೇಕದ (ರಾಜಸಿಕ?) ಅಂಶವನ್ನು ಒಳಗೊಂಡಿದೆ.  ಮಾರ್ಗದರ್ಶಕರನ್ನು (Guardians) ಪ್ರತಿನಿಧಿಸುವ ವರ್ಗವು ಬ್ರಾಹ್ಮಣ ವರ್ಣಕ್ಕೆ ಸಂವಾದಿಯಾಗಿದ್ದು ಅದು ತರ್ಕಬದ್ಧವಾದ ಅಂಶವನ್ನು (ಸಾತ್ವಿಕ?) ಪ್ರತಿನಿಧಿಸುತ್ತದೆ. 
(ಇ.ಜೆ. ಉರ್ವಿಕ್ ಅವರು ರಚಿಸಿರುವ ಪ್ಲೇಟೋನ ಸಂದೇಶ ಪುಟಗಳು ೨೮-೨೯)
       ಕ್ರಿ.ಪೂ. ೨೦೦೦ ಸುಮಾರಿನಲ್ಲಿ ಡ್ಯಾನೂಬ್ ಜಲಾನಯನ ಪ್ರದೇಶದಿಂದ ಇಟಲಿಗೆ ಮೊಟ್ಟಮೊದಲ ಬಾರಿಗೆ ವಲಸೆ ಹೋದವರು ಆರ್ಯರು. ಕ್ರಿ.ಶ. ಆರನೇ ಶತಮಾನದ ಹೊತ್ತಿಗೆಲ್ಲಾ ಆ ದೇಶವು ಸಂಪೂರ್ಣವಾಗಿ ಆರ್ಯರ ಪ್ರಭಾವಲಯಕ್ಕೆ ಸಿಲುಕಿತು. ಮೆಡಿಟರೇನಿಯನ್ ಸಮುದ್ರದ ಮೇಲೆ ಜಯಿಸಲಸಾಧ್ಯವಾದ ಹಿಡಿತವನ್ನು ಸಾಧಿಸಿದ ರೋಮನ್ನರ ಮೇಲೆ ಅವರ ವಾಣಿಜ್ಯ, ಸಾಂಸ್ಕೃತಿಕ ಸಂಬಂಧಗಳ ಮೂಲಕ ಭಾರತದಂತಹ ಪ್ರಾಚ್ಯ ದೇಶಗಳ ನಾಗರೀಕತೆಗಳ ಪ್ರಭಾವವು ಗಾಢವಾಗಿ ಉಂಟಾಯಿತು. ಪರ್ಷಿಯನ್ ಸೈನಿಕರ ಮೂಲಕ ಇಟಲಿಯನ್ನು ಪ್ರವೇಶಿಸಿದ ’ಮಿತ್ರಾರ್ಚನ’ ಪೂಜಾ ವಿಧಾನದಲ್ಲಿ ವೈವಸ್ವತ ಮನುವಿನ ಪ್ರಸ್ತಾವನೆಯು ಇದೆ. ಗ್ರೀಸ್, ಈಜಿಪ್ಟ್ ದೇಶಗಳ ಮೂಲಕ ಮನುವಿನ ಕುರಿತ ವಿಷಯಗಳು ಇಟಲಿಗೆ ಪರಿಚಯವಾದವು. ಕ್ರಿ.ಶ. ೫೨೭-೫೬೫ರ ಕಾಲಮಾನದಲ್ಲಿ ರೋಮನ್ ಸಾಮ್ರಾಜ್ಯವನ್ನು ಪಾಲಿಸಿದ ಜಸ್ಟೀನಿಯನ್‌ ಚರ್ಕವರ್ತಿ, ರೋಮ್ ದೇಶಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳನ್ನು ಕ್ರಮಬದ್ಧೀಕರಣಗೊಳಿಸುವ ಸಂದರ್ಭದಲ್ಲಿ ಮನುಧರ್ಮಶಾಸ್ತ್ರವು ಬಹಳಷ್ಟು ಪ್ರಯೋಜನಕ್ಕೆ ಬಂದಿತು. ಅದು ಎಷ್ಟು ಉತ್ಕೃಷ್ಟವಾಗಿ ಪ್ರಯೋಜನಕ್ಕೆ ಬಂದಿತು ಎನ್ನುವುದನ್ನು ಜಾಕೋಲಿಯಟ್‌ ಅವರ ಮಾತುಗಳಲ್ಲೇ ಕೇಳಿ - 
      The Hindu laws were codified by Manu more than 3000 years before the Christian Era, copied by the whole antiquity and notably, by Rome, which alone has left us a written law - The Code of Justinian, which has been adopted as the basis of all modern legislation…….
      There are astonishing number of correspondences between Manu and Justinian Digest in regard to different phase of social life such as marriage, paternal authority, adoption, property, the laws of contract, deposit, loan, sale, partnership, donations and testaments. These divisions have passed almost unaltered from the Hindu Law into the Roman Law and the French Law; and the greater part of their particular dispositions are still in vigour. 
 (Bible In India, L.A. Jacolliot, 1868, pp. 34-35) 
     ಕ್ರಿ.ಪೂ. ೩೦೦೦ ವರ್ಷಗಳಷ್ಟು ಹಿಂದಿನ ಮನುವು ಪ್ರತಿಪಾದಿಸಿದ ಹಿಂದೂ ನ್ಯಾಯ ಸಂಹಿತೆಯನ್ನು ಪ್ರಾಚೀನ ಸಮಾಜವು ಅನುಸರಿಸಿತು. "ಜಸ್ಟೀನಿಯನ್ ಕೋಡ್" ಹೆಸರಿನಲ್ಲಿ ರೋಮ್ ದೇಶವು ನಮಗೆ ಕೊಟ್ಟಿರುವ ಲಿಖಿತ ರೂಪದಲ್ಲಿರುವ ನ್ಯಾಯವೇ ಆಧುನಿಕ ಶಾಸನಗಳೆಲ್ಲವುದಕ್ಕೂ ಮೂಲಾಧಾರ. ಸಮಾಜ ಜೀವನಕ್ಕೆ ಸಂಬಂಧಿಸಿದಂತಹ ವಿವಾಹ, ತಂದೆಯ ಮೂಲಕ ಬರುವ ವಾರಸತ್ವದ ಅಧಿಕಾರ, ದತ್ತು ತೆಗೆದುಕೊಳ್ಳುವುದು, ಆಸ್ತಿ, ಒಪ್ಪಂದಗಳು, ಠೇವಣಿ, ಸಾಲ, ವಿಕ್ರಯ, ಭಾಗಸ್ವಾಮಿತ್ವ, ದೇಣಿಗೆಗಳು, ಉಯಿಲು ಪತ್ರಗಳಲ್ಲಿ, ಮನುವಿಗೂ, "ಜಸ್ಟೀನಿಯನ್ ಡೈಜೆಸ್ಟ್"ಗೂ ಆಶ್ಚರ್ಯಕರವಾದ ಎಷ್ಟೋ ಹೋಲಿಕೆಗಳಿವೆ. ಹಿಂದೂ ನ್ಯಾಯ ವ್ಯವಸ್ಥೆಯ ಈ ಸೂತ್ರಗಳು ಯಾವುದೇ ಬದಲಾವಣೆಗಳಿಲ್ಲದೆ ರೋಮಿನ ನ್ಯಾಯದಲ್ಲೂ, ಪ್ರೆಂಚ್ ನ್ಯಾಯದಲ್ಲೂ ಸೇರಿಕೊಂಡಿವೆ ಮತ್ತು ಅದರಲ್ಲಿ ಅಧಿಕ ಭಾಗಗಳು ಇಂದಿಗೂ ಪ್ರಸ್ತುತವಾಗಿದ್ದು ಜಾರಿಯಲ್ಲಿವೆ. 
         ಮೇಲೆ ಹೇಳಿದ ಅಂಶಗಳಿಗೆ ಸಂಬಂಧಿಸಿದಂತೆ ಮನುವು ಹೇಳಿದ ವಿಷಯಗಳಿಗೂ, "ಜಸ್ಟೀನಿಯನ್ ಕೋಡ್"ನಲ್ಲಿ ಹೇಳಿರುವ ನಿಬಂಧನೆಗಳನ್ನೂ ಒಂದನ್ನೊಂದು ಪಕ್ಕಪಕ್ಕದಲ್ಲಿರಿಸಿ ಅವನ್ನು ತುಲನಾತ್ಮಕವಾಗಿ ವಿಮರ್ಶಿಸಿ ಮನುಧರ್ಮಶಾಸ್ತ್ರಕ್ಕೆ "ರೋಮನ್ ಲಾ" ಎಷ್ಟು ಋಣಪಟ್ಟಿದೆ ಎನ್ನುವುದನ್ನು ಜಾಕೋಲಿಯಟ್ ನಿರೂಪಿಸುತ್ತಾನೆ. "ಜಸ್ಟೀನಿಯನ್ ಕೋಡ್" ಅನ್ನು ಆಧರಿಸಿ ತಯಾರಿಸಲಾಗಿದೆಯೆಂದು ಎಲ್ಲರೂ ಭಾವಿಸುವ "ಫ್ರೆಂಚ್ ಸಿವಿಲ್ ಕೋಡ್"  ಜಾಮೀನು (ಹೊಣೆ ಹೊರು/ಖಾತ್ರಿ), ವೇತನ (ಸಂಬಳ), ಭತ್ಯೆ (ಕೂಲಿ), ಕವಲು (ಇಬ್ಬರ ಭಾಗಸ್ವಾಮ್ಯ), ಗುತ್ತಿಗೆ, ಬಾಡಿಗೆ, ಆಸ್ತಿ ಖಾತ್ರಿ (Surity based on Property), ಮೊದಲಾದ ವಿಷಯಗಳಲ್ಲಿ ಹಿಂದೂ ನ್ಯಾಯಶಾಸ್ತ್ರವು ಹೇಳಿದ್ದನ್ನೇ ಯಥಾವತ್ತಾಗಿ ಅನುಸರಿಸಿದೆ ಎನ್ನುವುದನ್ನೂ ಸಹ ಜಾಕೋಲಿಯಟ್ ರುಜುವಾತು ಪಡಿಸುತ್ತಾನೆ. 
ಅಂತಿಮವಾಗಿ ಆಧುನಿಕ ಶಾಸನಗಳಿಗೆ ಮಾತೆಯಾಗಿರುವುದು ಜಸ್ಟೀನಿಯನ್ ಕೋಡ್ ಅಲ್ಲ! ಅದು ನೂರಕ್ಕೆ ನೂರು ಪಾಲು ಮನುಧರ್ಮ ಶಾಸ್ತ್ರವೇ! 
*****
    ಈ ಲೇಖನಕ್ಕೆ ಪೂರಕವಾದ ಹಳೆಯ ಲೇಖನ ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%AE...
*****
     ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೪  ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೧ ಜಗಜ್ಜ್ಯೋತಿ ಮನು ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AA-...
 
ಚಿತ್ರಗಳ ಕೃಪೆ: ಗೂಗಲ್

Rating
No votes yet