ಮನಸ್ಸು ಮರೀಚಿಕೆ !

ಮನಸ್ಸು ಮರೀಚಿಕೆ !

ಹಿಂದಿರುಗಿ ನೋಡಿದೆ

ಮತ್ತೆ ತಿರುಗಿ ನೋಡಿದೆ

ಹಿಂದೆ -ಮುಂದೆ ನೋಡಿದೆ

ಹೌದು ಅವಳೇ ಅದು

 

ಮನಸ್ಸು ಹೇಳಿತ್ತು

ಮತ್ತೆ ಹಿಂದೆ ನೋಡು

ಬುದ್ದಿ ಮೆತ್ತಗೆ ಗದರಿತ್ತು

ದ್ರಾಕ್ಷೆ ಹುಳಿ ,ಮುಂದೆ ನೋಡು

 

ಮನಸ್ಸಿಗೆ ಬುದ್ದಿ ಇಲ್ಲ

ಬುದ್ದಿಗೆ ಮನಸ್ಸಿಲ್ಲ !

ಕಣ್ಣಿಗೆ ಏನು   ಚಿಂತೆ

ಹೊಡೆತ ಕೆನ್ನೆಗೆ ತಾನೇ

 

ಬುದ್ಧಿ-ತಂದೆ , ಮನಸ್ಸು-ಮಗ

ಅವಳೋ ?

ತಂದೆ ಮಾತು  ಮಗನ  ಕಿವುಡು

ಯಾರಿವಳು ?

 

ತಂದೆಗಂದೆ , ಸುಮ್ಮನಿರಬೇಕು

ಕಾಲಿಗಂದೆ ಹಿಂದಕ್ಕಿರಬೇಕು 

ಕಣ್ಣಿಗಂದೆ , ಅವಳ ನೋಡು 

ಯಾರಿವಳು ?

 

ಬುದ್ಧಿ-ತಾಯಿ ,ಮನಸ್ಸು-ಮಗಳು

ಅವನೋ?

ತಾಯಿ ಮಾತು ಮಗಳು ಕೇಳ್ತು

ಯಾರಿವನು, ಬಿಡು ಯಾರಾದರೇನು !

 

ಬಳಿ ಬಂದೆ , ಮುಂದೆ ಹೋದೆ

ಹಿಂದೆ ಬಂದೆ ಅಡ್ಡ ಹೋದೆ

ತುಟಿಗೂ ಕೆಲಸ ಕೊಟ್ಟೆ

'ಮೇಡಂ ಬಸ್ಸಿಗಾ ?'

 

ತಾಯಿ ಹೇಳ್ತು ಮಗಳು ಕೇಳ್ತು 

ಸುಮ್ನಿರು !

ಮತ್ತೆ ಕೇಳಿದೆ

'ಮೇಡಂ ಬಸ್ಸಿದ್ಯಾ ! '

 

ಬಸ್ಸು ಬಂತು ಜನ ಹತ್ತಿದ್ರು

ಹುಡುಗೀನು ಹತ್ತಿದ್ಳು

ಹುಡುಗ ಏನ್ ಕಮ್ಮಿ

ತಾನು ಹತ್ತಿಯಾತು !

 

ಇನ್ನೂ ಕಣ್ಣು ಅವಳ ಮೇಲೆ

ಅವಳ ಮೊಬೈಲ್ ರಿನ್ಗಣಿಸೋ ತಂಕ !

'ರೀ ಹತ್ತ್ ನಿಮ್ಶ , ಬಂದೆ ರೀ !'

ಅಪ್ಪ ಕಿಸಕ್ ಅಂದ !

 

'ರೀ ಒಂದ್ ನಿಮ್ಶ , ಇಳ್ಯೋಕಿದೆ ರೀ '

ಅಪ್ಪ-ಮಗ ಇಲ್ಲ್ಕೊಂಡ್ ಆಯ್ತು!

'ಇಳ್ಯಾಕ್ ಹತ್ತಿರೋ , ಹತ್ತಾಕ್ ಇಳಿತೀರೋ ¨

ಕಂಡಕ್ಟರ್ ರೈಟ್ ಅಂದ .

 


ಮತ್ತೆ ಹಿಂದಿರುಗಿ ನೋಡಿದೆ

ಮತ್ತೆ ತಿರುಗಿ ನೋಡಿದೆ

ಹಿಂದೆ -ಮುಂದೆ ನೋಡಿದೆ

ಹೌದು ಇವಳೇ  ಅದು , ಡೌಟೇ ಬೇಡ !

 

ಬುದ್ದಿಗೆ ಗೊತ್ತು

ಮನಸ್ಸಿಗೆ ತನ್ನ  ಪ್ರಾಯ ಆಗಿಲ್ಲ !

ಬಳಿ ಬಂದೆ , ಮುಂದೆ ಹೋದೆ


'ಮೇಡಂ ಬಸ್ಸಿದ್ಯಾ ! ' . . .


ಪ್ರವೀಣ ಸಾಯ

(
ಇದು ನನ್ನ ಮೊದಲ  ಕವನ ! ನವಿರಾದ ಹಾಸ್ಯ ಅಂತ ನಾವು ತಿಳಿದು ಬರೆದದ್ದು ಕೆಲವೊಮ್ಮೆ ಹಾಸ್ಯಾಸ್ಪದ ಆಗುವ ಸಂಭವಗಳಿರುತ್ತವೆ . ಹಾಗೇನಾದರು ಇದ್ದಲ್ಲಿ ದಯಮಾಡಿ ತಿಳಿಸಿ !  ನಗೆಪಾಟಲಾಗುವ ಮುಂಚೆ ನನ್ನ ಕವನ ಕಾಲ್ ಕೀಳುತ್ತದೆ :) 

)

 
Rating
No votes yet

Comments