ಮಹಾಭಾರತ

ಮಹಾಭಾರತ

ಸಂಪದದಲ್ಲಿ ನನ್ನ ಮೊದಲನೇ ಬ್ಲಾಗ್ ಪ್ರಯತ್ನ .. ಇದಕ್ಕೆ ಪ್ರೇರಣೆ ನಾನು ಕಳೆದ ವಾರ ಟೀವಿಯಲ್ಲಿ ನೋಡಿದ ಬಿ.ಆರ್ ಚೋಪ್ರಾರವೆರ "ಮಹಾಭಾರತ್" 

ಮಹಾಭಾರತದಲ್ಲಿ ಇಲ್ಲದೇ ಇರುವಂತಹ ಕಥೆಯೇ ಇಲ್ಲವಂತೆ ! ನಾನು ಈವರೆಗೆ ಈ  ಕೃತಿಯನ್ನು ಬೇರೆ ಬೇರೆ ಮಾಧ್ಯಮದ ಮೂಲಕ ನೋಡಿದ್ದೇನೆ/ ಓದಿದ್ದೇನೆ... ಎಷ್ಡು ಸಲ ಓದಿದರೂ /ನೋಡಿದರೂ ಇದು ನನಗೆ ಸಾಕೆನ್ನಿಸುವುದಿಲ್ಲ

ಹ್ಹೆಹೆ .. ಸಂಪದ ನನಗೆ ತಿಳಿಯದಂತೆ ಈ ಎಂಟ್ರಿಯನ್ನು ಸೇವ್ ಮಾಡಿದಂತಿದೆ....ಇರಲಿ..ನಾನು ಬರೆಯಲು ಹೊರಟಿದ್ದು ಬೇರೆ ಏನೋ..

ನಿಮ್ಮಲ್ಲಿ ಯಾರಾದ್ರು ಕುಮಾರವ್ಯಾಸನ ಗದುಗಿನ ಭಾರತ ಓದಿರುವ ಹಾಗಿದ್ದಲ್ಲಿ ಮತ್ತು ಅವನು ರಾಮಾಯಣದ ಬದಲು ತಾನು ಏಕೆ ಮಹಾಭಾರತ ಬರೆಯಲು ನಿರ್ಧರಿಸಿದೆ ಎಂದು ವರ್ಣಿಸಿರುವ ಸಾಲುಗಳು ನೆನಪಿದ್ದಲ್ಲಿ ನನಗೆ ಹೇಳುವಿರಾ ?

ಬರೀ ಒಂದು ಸಾಲು ನೆನಪಿಗೆ ಬರುತ್ತಿದೆ    "....... ತಿಂತಿಣಿವ ...ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ.... "

 ಅಂದ ಹಾಗೆ,ನಾನು ಚೋಪ್ರಾರವೆರ "ಮಹಾಭಾರತ್" ನೋಡಿದ್ದು ಡಿವಿಡಿಯಲ್ಲಿ...

ವಿ.ಸೂ : ನನ್ನ ಮೊದಲನೇ ಬ್ಲಾಗನಲ್ಲಿ ಕನ್ನಡ ತಪ್ಪು ತಪ್ಪಾಗಿ ಕಂಡರೆ      ಕ್ಷಮೆಯಿರಲಿ ...

 

Rating
No votes yet

Comments