ಈ ಜೀವನ ಇಷ್ಟೇನಾ... ಅಷ್ಟೇನಾ...?

ಈ ಜೀವನ ಇಷ್ಟೇನಾ... ಅಷ್ಟೇನಾ...?

"ಸಖೀ,
ಈ ಜೀವನ
ಇಷ್ಟೇನೇ,
ಈ ಜೀವನ
ಅಷ್ಟೇನೇ,
ಅನ್ನದಿರು
ಸುಮ್ಮನೇ,
ನಿಜವಾಗಿ
ಹೇಳು,
ಈ ಜೀವನ
ನಿನಗಿಷ್ಟಾನಾ?"

"ಇಷ್ಟೇ ಆಗಲೀ,
ಅಷ್ಟೇ ಆಗಲೀ,
ನೀ ಜೊತೆಗಿರಲು,
ನಿಜವಾಗಿಯೂ
ಈ ಜೀವನವೂ
ನನಗಿಷ್ಟಾನೇ,
ನೀ ಹೇಳು
ಈ ಜೀವನ
ನಿನಗಿಷ್ಟಾನಾ?"

"ಈ ಜೀವನ
ನಿನಗಿಷ್ಟ
ಅನ್ನುವ
ನೀನು ನನಗಿಷ್ಟ,
ನನಗಿಷ್ಟಳಾದ
ನೀನು ನನ್ನ
ಜೊತೆಗಿರಲು,
ನಿಜವಾಗಿಯೂ
ಸಖೀ,
ಈ ಜೀವನವೂ
ನನಗಿಷ್ಟಾನೇ!"
****
ಆಸು ಹೆಗ್ಡೆ

Rating
No votes yet

Comments