ಸಂಪದಿಗ ಮಿತ್ರರೇ, ಅಂಕಣ ಓದಿರಿ

ಸಂಪದಿಗ ಮಿತ್ರರೇ, ಅಂಕಣ ಓದಿರಿ

 
  ಪ್ರಿಯ ಸಂಪದಿಗ ಮಿತ್ರರೇ,
  ’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ ಅಂಕಣ ಪ್ರಕಟವಾಗುತ್ತದೆ. ಆಯಾ ವಾರದ ರಾಜಕೀಯ/ಸಾಮಾಜಿಕ ಸುದ್ದಿ/ವಿದ್ಯಮಾನಗಳನ್ನು ಕುರಿತು ವಿಡಂಬನಾತ್ಮಕವಾಗಿ ನಾನು ಬರೆಯುವ ಪೂರ್ಣಪ್ರಮಾಣದ ಲೇಖನಗಳು ಆ ಅಂಕಣದಲ್ಲಿ ಲಭ್ಯ. ನೀವೆಲ್ಲ ಆ ಅಂಕಣವನ್ನು ಓದಬೇಕೆಂಬುದು ನನ್ನ ಬಯಕೆ. udayavani.com ವೆಬ್‌ಸೈಟ್‌ಗೆ ಹೋಗಿ ಇ-ಪೇಪರ್ ಅನ್ನು ಕ್ಲಿಕ್ಕಿಸುವ ಮೂಲಕ ಅಂತರ್ಜಾಲದಲ್ಲೂ ಬೆಂಗಳೂರು ಆವೃತ್ತಿಯಲ್ಲಿ ಅಂಕಣವನ್ನು ಓದಬಹುದು. ಓದಿ ನನ್ನ ಮಿಂಚಂಚೆ h.a.shastry@gmail.com ಇದಕ್ಕೆ ಪ್ರತಿಕ್ರಿಯಿಸಿದರೆ ನಿಮ್ಮ ಪ್ರತಿಕ್ರಿಯೆ ನನಗೆ ಮಾರ್ಗದರ್ಶಿಯಾದೀತು.

Rating
No votes yet

Comments