ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)

ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)

ಕಥೆ : ಹೀಗೊಂದು ಕನಸು ಕಾಲ ಕೂಡಿ ಬರಬೇಕು (ಬಾಗ ೨)


ಮೊದಲ ಬಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ :   ಬಾಗ೧


ದೇವಾಲಯದ ಹೊರಬಂದು ಎಡಬಾಗದಿಂದ ಪ್ರದಕ್ಷಿಣೆ ಪ್ರಾರಂಬಿಸಿದೆ. ಅರ್ದಬಾಗ ಮುಗಿದಂತೆ ಕಾಣಿಸಿತು, ಕಲ್ಲು ಮಂಟಪಗಳ ಸಾಲು. ಹತ್ತಾರು ನೂರಾರು ಸಾವಿರಾರು ಸಾಲು ಸಾಲು ಕಲ್ಲು ಕಂಬಗಳ ಮಂಟಪಗಳು. ಮೊದಲ ಮಂಟಪದ ಹತ್ತಿರ ಹೋದೆ ಕಲ್ಲು ಕಂಬದ ಮೇಲಿನ ಬಾಗದಲ್ಲಿ ಕಾಣಿಸಿತು ನಿದ್ದೆಯಲ್ಲಿದ್ದ ಮುದಿಕೋತಿ. ನಿಂತು ಕೈಮುಗಿದು,


'ಗಣಪ ಕಳಿಸಿದ್ದಾನೆ ದೇವರ ಸಮೀಪ ಹೋಗುವ ದಾರಿ ತೋರುವೆಯ 'ಎಂದೆ, ಅದು ತನ್ನ ತೂಕಡಿಕೆ ಬಿಟ್ಟು ಕಣ್ಣು ತೆರೆದು ನನ್ನತ್ತ ನೋಡಿ ಮನುಷ್ಯ ಸಹಜ ದ್ವನಿಯಲ್ಲಿ ಮಾತನಾಡಿತು.


'ಹೀಗೆ ಮಂಟಪಗಳ ಸಾಲು ಹಿಡಿದು ಸಾಗು ಮುಂದೆ ಮತ್ತು ಕಪಿಗಳಿವೆ ಅವುಗಳನ್ನು ಕೇಳುತ್ತ ಹೋಗು' ಎಂದಿತು. ನಾನು ಮುಂದೆ ಹೊರಟೆ ಮತ್ತೆ ಆ ಮುದಿಕೋತಿ ಕರೆದು ಎಚ್ಚರಿಸಿತು.


'ನೋಡು ಅವೆಲ್ಲ ರಾಮಾಯಣದ ಯುದ್ದದಲ್ಲಿ ಬಾಗವಹಿಸಿದ ಕಪಿಗಳು ನೀನು ಕೋಪಮಾಡಬೇಡ' ಎಂದಿತು.ಸರಿ ಎಂದು ಹೊರಟು ಮುಂದಿನ ಮಂಟಪ ತಲುಪಿ ಮೇಲೆ ನೋಡಿದೆ ಇನ್ನೊಂದು ಕಪಿ ಮತ್ತೆ ಗಣಪ ಹೇಳಿದನ್ನು ಹೇಳಿದೆ. ನನ್ನತ್ತ ನೋಡಿ ಹಲ್ಲು ಕಿರಿದ ಅದು ಮುಂದಿನ ಮಂಟಪ ತೋರಿತು. ಮತ್ತೆ ಮುಂದೆ ಹೋಗಿ ಮೇಲೆ ನೋಡಿದೆ ಈ ಬಾರಿ ನಾನು ಎನನ್ನಾದರು ಹೇಳುವ ಮುಂಚೆಯೆ "ಮುಂದೆ" ಎನ್ನುತ್ತ ಕೈತೋರಿತು. ಹೀಗೆ ಮಂಟಪದ ನಂತರ ಮಂಟಪ "ಮುಂದೆ" ಎನ್ನುವ ಕಪಿಗಳ ಆಜ್ಞೆಯನ್ನು ಪಾಲಿಸುತ್ತ ಹೋಗುತ್ತ ಹೋಗುತ್ತ ನನ್ನ ವೇಗೆ ಜಾಸ್ತಿಯಾಯಿತು. ಕಿವಿಯಲ್ಲಿ ಒಂದೆ ದ್ವನಿ ಮುಂದೆ...ಮುಂದೆ... ನಿದಾನವಾಗಿ ಓಡಲಾರಂಬಿಸಿದೆ. ಮುಂದೆ ... ಮುಂದೆ .. ಕಲ್ಲು ಮಂಟಪಗಳೆಲ್ಲ ಮುಗಿದವು. ಕಿವಿಯಲ್ಲಿ ಅದೆ ದ್ವನಿ ಮುಂದೆ...ಮುಂದೆ..


ಈಗ ದೊಡ್ಡ ಬಯಲಿನಲ್ಲಿ ಓಡುತ್ತಿದ್ದೆ. ವಿಶಾಲವಾದ ಹಸಿರುಬಯಲು ಮೇಲೆ ಅನಂತ ನೀಲಾಕಾಶ. ನನ್ನ ಮುಂದೆ ಸಣ್ಣ ಕಾಲುದಾರಿ ಅದರಲ್ಲಿಯೆ ಓಡುತ್ತಿದ್ದೆ. ಮುಂದೆ .. ಮುಂದೆ .. ಇದ್ದಕ್ಕಿದ್ದಂತೆ ಕಾಲುದಾರಿ ಮುಗಿದು ಹೋಯಿತು. ನಿಂತುಬಿಟ್ಟೆ. ಕಣ್ಣಳತೆಗೆ ಸಿಗದ ವಿಶಾಲ ಹಸಿರುಬಯಲು. ಮೇಲೆ ಶುಭ್ರ ನೀಲಿಯ ಆಕಾಶ. ಮದ್ಯೆ ಏಕಾಂಗಿಯಾಗಿ ನಾನು.


ಇದೇನು ಕಪಿಗಳು ಇದೇನು ಮಾಡಿಬಿಟ್ಟವು. ನನ್ನನ್ನು ಎಲ್ಲಿಗೆ ಕಳಿಸಿದವು. ನಾನು ಜೋರಾಗಿ ಕಿರುಚಿದೆ ಆಕಾಶಕ್ಕೆ ಮುಖಮಾಡಿ "ಮುಂದಿನ ದಾರಿಯೇಕೆ ಕಾಣಿಸುತ್ತಿಲ್ಲ ದೇವರೆಲ್ಲಿ ಕಾಣಿಸುತ್ತಿಲ್ಲ?? ಬರೀ ಶೂನ್ಯವೇಕೆ?"


ನಿದಾನವಾಗಿ ಗುಡುಗಿನಂತ ದ್ವನಿಯೊಂದು ಕೇಳಿಸಿತು ಆಕಾಶದಿಂದ "ನೀನು ನಡೆದುದ್ದೆ ಹಾದಿ ನೀನು ಕಾಣುವ ಶೂನ್ಯವೆ ದೈವ"


ನನ್ನಲ್ಲಿ ಏನೋ ಹತಾಷೆ


'ಹಾಗಾದರೆ ನನಗೆ ದೈವ ಸ್ವರೂಪದ ದರ್ಶನವಿಲ್ಲವೆ? ನಾನು ಕಾಣಲಾರನೆ?'


'ಖಂಡೀತ ಇದೆ ಆದರೆ ಕಾಲ ಕೂಡಿಬರಬೇಕು 'ಎಂದಿತು ಆ ದ್ವನಿ


'ಹಾಗಾದರೆ ನೀನು ಯಾರು?'ಪ್ರಶ್ನಿಸಿದೆ


'ನಿನ್ನ ಗುರು' ಎಂದಿತು ಆ ದ್ವನಿ , ಕಡೆಯದಾಗಿ ಎಂಬಂತೆ ಕೇಳಿದೆ


'ಗುರುವೆಂದರೆ ? ನೀನು ಯಾರು ? '


ಆ ಕಡೆಯಿಂದ ಎಂತದೊ ನಗು ಆಕಾಶವೆಲ್ಲ ಗುಡುಗಿದಂತೆ


'ಇನ್ನು ತಿಳಿಯಲಿಲ್ಲವೆ ಇದು ನಿನ್ನದೆ ಆತ್ಮದ ದ್ವನಿ ನಿನ್ನದೆ ಮನಸಿನ ದ್ವನಿ"


ನಿದಾನವಾಗಿ ಕಣ್ಮುಚ್ಚಿದೆ. ಹೊರಗಿನ ಬಯಲು ಆಕಾಶಗಳೆಲ್ಲ ನನ್ನಲ್ಲಿ ಕರಗುತ್ತ ಹೋಯಿತು.


ಕಿವಿಗಳಲ್ಲಿ ಒಂದೆ ಮೊರೆತ ಕಾಲ ಕೂಡಿಬರಬೇಕು.... ಕಾಲ ಕೂಡಿಬರಬೇಕು.


ನನ್ನ ಮನ ಸ್ಥಬ್ದವಾಯಿತು ದೇಹ ನಿಶ್ಚಲವಾಯಿತು


                                                                                  ಮುಗಿಯಿತು


 


--------------------------------------------------------------------------------------


ಸೂಚನೆ: ಇಲ್ಲಿ ನಾನು ಎಂಬ ಪ್ರಥಮ ಪುರುಷನನ್ನು ಅದ್ವೈತ ಸಿದ್ದಾಂತದ ನಾನು ಎಂಬಂತೆಯೆ ಬಳಸಿದ್ದೇನೆ ಅದಕ್ಕಾಗಿಯೆ ಪ್ರಾರಂಬದಲ್ಲಿ ಶ್ರೀ ಶಂಕರಾಚಾರ್ಯರ ಹೆಸರು ಸೂಚ್ಯವಾಗಿ ಬಳಸಿದ್ದೇನೆ.


 

Comments